ಪ್ರತ್ಯೇಕ ಧ್ವಜ ಬೆಂಬಲಿಸಿ ಮೆರವಣಿಗೆ
Team Udayavani, Jul 21, 2017, 12:45 PM IST
ಶಿವಮೊಗ್ಗ: ರಾಜ್ಯಕ್ಕೆ ನಾಡ ಧ್ವಜವನ್ನು ಅಧಿಕೃತವಾಗಿ ಘೋಷಣೆ ಮಾಡುವ ಕುರಿತು ರಾಜ್ಯ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ 100 ಮೀಟರ್ ಉದ್ದದ ಧ್ವಜದೊಂದಿಗೆ ಮೆರವಣಿಗೆ ನಡೆಸಲಾಯಿತು.
ರಾಜ್ಯಕ್ಕೆ ಪ್ರತ್ಯೇಕ ನಾಡ ಧ್ವಜ ಘೋಷಣೆ ಮಾಡಲು ರಾಜ್ಯ ಸರ್ಕಾರ ಸಮಿತಿ ರಚಿಸಿರುವುದು ಸ್ವಾಗತಾರ್ಹ. ಕಡ್ಡಾಯವಾಗಿ
ನ. 1 ರಂದು ಸರ್ಕಾರಿ ಕಚೇರಿ ಹಾಗೂ ಸಂಘ ಸಂಸ್ಥೆಗಳ ಮೇಲೆ ನಾಡಧ್ವಜ ಹಾರಿಸಬೇಕು ಎಂದು ಒತ್ತಾಯಿಸಿದರು.ಗೋಪಿ ವೃತ್ತದಿಂದ 100 ಮೀಟರ್ ಉದ್ದದ ಕನ್ನಡ ಭಾವುಟವನ್ನು ಹಿಡಿದುಕೊಂಡು ಜಿಲ್ಲಾಧಿಕಾರಿಗಳ ಕಚೇರಿ ತಲುಪಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಸಂಘಟನೆಯ ಪ್ರಮುಖರಾದ ಆರ್. ಮಂಜು, ಎಸ್. ಮಧು, ಶೈಲೇಶ್ ಕುಮಾರ್,
ಎಸ್. ವೆಂಕಟೇಶ್ ಮತ್ತಿತರರು ಇದ್ದರು.
ಕನ್ನಡ ಬಾವುಟ ಸ್ವಾಭಿಮಾನದ ಸಂಕೇತ
ಭದ್ರಾವತಿ: ಹಿಂದಿ-ಹಿಂದೂ-ಹಿಂದೂಸ್ತಾನದ ಪರಿಕಲ್ಪನೆಯಲ್ಲಿ ಅಖಂಡ ಭಾರತದಲ್ಲಿದ್ದ ನೂರಾರು ಭಾಷೆಗಳನ್ನು ಸರ್ವನಾಶ ಮಾಡಿದ ಮನುವಾದಿ ಶಕ್ತಿಗಳು ಇಂದು ಕನ್ನಡಿಗರ ಭಾವನಾತ್ಮಕ ಬೆಸುಗೆಯ “ಕನ್ನಡ ಬಾವುಟ’ದ ವಿರುದ್ಧ ಕೂಗೆತ್ತುವ ಮೂಲಕ ಕನ್ನಡಿಗರ
ಸ್ವಾಭಿಮಾನವನ್ನು ಕೆಣಕಿರುವುದಕ್ಕೆ ಛಲವಾದಿ ಮಹಾಸಭಾ ತೀವ್ರವಾಗಿ ಖಂಡಿಸುತ್ತದೆ ಎಂದು ಮಹಾಸಭಾ ಅಧ್ಯಕ್ಷ ಸುರೇಶ್ ತಿಳಿಸಿದ್ದಾರೆ. ಕನ್ನಡಗರಿಗೆ ಪ್ರತ್ಯೇಕ ಬಾವುಟದ ಕಲ್ಪನೆಯೂ ಭಾರತದ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗುತ್ತದೆಂದು ಬೊಬ್ಬೆ ಹಾಕುತ್ತಿರುವ ಮನುವಾದಿಗಳು ಈ ಹಿಂದೆ ಭಾಷಾವಾರು ರಾಜ್ಯಗಳಾಗಿ ವಿಂಗಡನೆಗೊಂಡ ರಾಜ್ಯಗಳಲ್ಲಿ ಹಿಂದಿ ಹೇರಿಕೆ ಮಾಡಲು ಮುಂದಾಗಿ ಮುಖಭಂಗ ಅನುಭವಿಸಿದ್ದರು.
ನಮ್ಮ ರಾಜ್ಯವು ಭಾಷಾವಾರು ರಾಜ್ಯಗಳ ವಿಂಗಡಣೆಯಲ್ಲಿ ರಾಜ್ಯವಾಗಿ ಉದಯಗೊಂಡು ಕನ್ನಡ ಭಾಷೆಯನ್ನು ಅಧಿಕೃತ ಭಾಷೆಯಾಗಿ ಸ್ವೀಕರಿಸಿ, ಕೆಂಪು ಮತ್ತು ಹಳದಿ ಬಣ್ಣದ ಬಾವುಟವನ್ನು ಅಂಗೀಕರಿಸಿಕೊಂಡು ಪ್ರತಿ ವರ್ಷ ರಾಜ್ಯೋತ್ಸವ
ಆಚರಿಸಿಕೊಳ್ಳುವ ಮೂಲಕ ಕನ್ನಡಿಗರ ನರನಾಡಿಗಳಲ್ಲೂ ಸ್ವಾಭಿಮಾನದ ಸಂಕೇತವಾಗಿ ಸ್ವೀಕರಿಸಲಾಗಿದೆ.
ಕೇಂದ್ರದಲ್ಲಿ ನಮ್ಮನ್ನಾಳುವ ಎಲ್ಲಾ ಸರ್ಕಾರಗಳು ಅದರಲ್ಲೂ ಬಿಜೆಪಿ ನೇತೃತ್ವದ ಸರ್ಕಾರ ಅಧಿ ಕಾರಕ್ಕೆ ಬಂದಾಗಿನಿಂದಲೂ ಹಿಂದಿ-ಹಿಂದೂ-ಹಿಂದೂಸ್ತಾನದ ಹೇರಿಕೆಯ ಮೂಲಕ ಭಾರತದ ಒಕ್ಕೂಟ ವ್ಯವಸ್ಥೆಗೆ ಪೆಟ್ಟು ಕೊಡುತ್ತಿದೆ. ಬಿಜೆಪಿ ಮುಖಂಡರು
ಕನ್ನಡ ನಾಡು-ನುಡಿಗಿಂತಲೂ ಸಂಘಪರಿವಾರದ ಅಜೆಂಡವೇ ಮುಖ್ಯವೆನ್ನುವಂತೆ ಮಾತನಾಡುವ ಮೂಲಕ ಮಾತೃ ದ್ರೋಹಕ್ಕೆ ಮುಂದಾಗಿದ್ದಾರೆಂದು ಮಹಾಸಭಾ ಆರೋಪಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.