ಮಂಗನ ಕಾಯಿಲೆ ಲಸಿಕೆ ಉತ್ಪಾದನೆ ಸ್ಥಗಿತ!

20 ವರ್ಷ ಕಾಲ ಅನುಮತಿ ಇಲ್ಲದೇ ಲಸಿಕೆ ಆತಂಕದಲ್ಲಿ ಮಲೆನಾಡಿನ ಜನತೆ

Team Udayavani, Dec 8, 2022, 2:37 PM IST

2

ಶಿವಮೊಗ್ಗ: ಪಶ್ಚಿಮಘಟ್ಟ, ಅಕ್ಕಪಕ್ಕದ ಜಿಲ್ಲೆ ಜನರ ಜೀವ ಹಿಂಡುವ ಕೆಎಫ್‌ಡಿ (ಕ್ಯಾಸನೂರು ಫಾರೆಸ್ಟ್‌ ಡಿಸೀಸ್‌) ಅಥವಾ ಮಂಗನ ಕಾಯಿಲೆಗೆ ನೀಡುತ್ತಿದ್ದ ಲಸಿಕೆ ಉತ್ಪಾದನೆ ನಿಲ್ಲಿಸಲಾಗಿದ್ದು, ದಾಸ್ತಾನು ಲಭ್ಯವಿಲ್ಲ ಎಂಬ ಸುತ್ತೋಲೆ ಅನೇಕ ಅನುಮಾನಗಳನ್ನು ಹುಟ್ಟು ಹಾಕಿದೆ.

ವಿಚಿತ್ರವೆಂದರೆ, ಲಸಿಕೆಗೆ ನೀಡಲಾಗಿದ್ದ ಅನುಮತಿ ಮೀರಿದ್ದರೂ ಕಳೆದ ಎರಡು ದಶಕಗಳಿಂದಲೂ ನಿರಂತರವಾಗಿ ಲಸಿಕೆ ಪೂರೈಸಲಾಗುತ್ತಿದ್ದುದು ಈಗ ಬೆಳಕಿಗೆ ಬಂದಿದೆ. ಆರಂಭದಲ್ಲಿ ಒಂದು ವರ್ಷಕ್ಕೆ ಮಾತ್ರ ಲಸಿಕೆಗೆ ಅನುಮತಿ ನೀಡಲಾಗಿತ್ತು. ಆದರೆ ಆ ನಂತರ ಯಾವ ಅನುಮತಿಯೂ ಇಲ್ಲದೆ 20 ವರ್ಷ ಲಸಿಕೆಯನ್ನು ಉತ್ಪಾದನೆ ಮಾಡಿ ಪೂರೈಸಲಾಗುತ್ತಿತ್ತು. ಇದೀಗ ದಿಢೀರಾಗಿ ಲಸಿಕೆ ಉತ್ಪಾದನೆಯನ್ನು ಸ್ಥಗಿತಗೊಂಡಿರುವುದು ಮಲೆನಾಡು ಭಾಗದ ಜನರ ಆತಂಕಕ್ಕೆ ಕಾರಣವಾಗಿದೆ.

1957ರಲ್ಲಿ ಮಂಗನ ಕಾಯಿಲೆ ಸೊರಬ ತಾಲೂಕಿನ ಕ್ಯಾಸನೂರಿನಲ್ಲಿ ಕಾಣಿಸಿಕೊಂಡು ಬಳಿಕ ಅಕ್ಕಪಕ್ಕದ ಜಿಲ್ಲೆಗಳಿಗೆ ವ್ಯಾಪಿಸಿತ್ತು. ಕೆಎಫ್‌ಡಿ ವೈರಸ್‌ ತನ್ನ ವ್ಯಾಪ್ತಿ ಹೆಚ್ಚಿಸಿಕೊಳ್ಳುತ್ತಿದ್ದಂತೆಯೇ, ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ವೈರಾಲಜಿ ವಿಭಾಗದ (ಎನ್‌ಐವಿ) ವಿಜ್ಞಾನಿ ಸಿ.ಎನ್‌. ದಂಡಾವತರೆ ಅವರು 1989ರಲ್ಲಿ ಕೆಎಫ್‌ಡಿ ವೈರಸ್‌ನ ನಿಷ್ಕ್ರಿಯ ಭಾಗಗಳನ್ನು ಬಳಸಿ ಲಸಿಕೆ ತಯಾರಿಸಿದ್ದರು. ಇದರ ಮೊದಲ ಡೋಸ್‌ ಪಡೆದವರಿಗೆ ಶೇ.79ರಷ್ಟು ಹಾಗೂ ಎರಡನೇ ಡೋಸ್‌ ಪಡೆದವರಿಗೆ ಶೇ.93.5ರಷ್ಟು ರಕ್ಷಣೆ ಸಿಗುತ್ತಿತ್ತು.

2000ನೇ ಇಸವಿವರೆಗೆ ಮೆಗ್ಗಾನ್‌ ಆಸ್ಪತ್ರೆ ಆವರಣದಲ್ಲೇ ಲಸಿಕೆ ತಯಾರಾಗುತ್ತಿತ್ತು. ಬಳಿಕ ಪಶುಗಳ ಲಸಿಕೆ ತಯಾರಿಸುತ್ತಿದ್ದ ಬೆಂಗಳೂರಿನ ಇನ್‌ಸ್ಟಿಟ್ಯೂಟ್‌ ಆಫ್‌ ಆ್ಯನಿಮಲ್‌ ಹೆಲ್ತ್‌ ಆ್ಯಂಡ್‌ ವೆಟರ್ನರಿ ಬಯೋಲಾಜಿಕಲ್ಸ್‌ (ಐಎಎಚ್‌ವಿಬಿ)ಗೆ ವರ್ಗಾಯಿಸಲಾಯಿತು. ಇದಕ್ಕಾಗಿ ಈ ಸಂಸ್ಥೆ ಸೆಂಟ್ರಲ್‌ ಡ್ರಗ್ಸ್‌ ಸ್ಟಾಡಂರ್ಡ್‌ ಕಂಟ್ರೋಲ್‌ ಆರ್ಗನೈಜೇಷನ್‌ (ಸಿಡಿಎಸ್‌ ಸಿಒ) ವತಿಯಿಂದ ಲಸಿಕೆ ತಯಾರಿಕೆ ಲೈಸೆನ್ಸ್‌ ಕೂಡ ಪಡೆಯಿತು. ಈ ಲೈಸೆನ್ಸ್‌ ಅವಧಿ ಒಂದು ವರ್ಷದ ಅವಧಿಗೆ ಮಾತ್ರ ಇತ್ತು. ನಂತರ ವರ್ಷಗಳಲ್ಲಿ ಒಪ್ಪಿಗೆ ಪಡೆಯಲು ಅರ್ಜಿ ಹಾಕಿದ್ದರೂ ಆ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಉತ್ಪಾದನೆ ಸ್ಥಗಿತಗೊಳಿಸಿ ಎಂಬ ಆದೇಶ ಬರುವವರೆಗೂ ಲಸಿಕೆ ಉತ್ಪಾದನೆ ಮಾಡಬಹುದು ಎಂಬ ಕಾಯಿದೆಯಲ್ಲಿರುವ ದುರ್ಬಲ ಅಂಶವನ್ನೇ ಇಟ್ಟುಕೊಂಡು ಐಎಎಚ್‌ವಿಬಿ 20 ವರ್ಷ ಲಸಿಕೆ ತಯಾರಿಸಿದೆ.

ಲಸಿಕೆ ಸಾಮರ್ಥ್ಯ ಕುಸಿತ: 1957 ರಲ್ಲಿ ಸಂಗ್ರಹಿಸಿದ್ದ ಕೆಎಫ್‌ಡಿ ವೈರಸ್‌ನ ಭಾಗ ಗಳನ್ನು ಬಳಸಿ 1989ರಿಂದ ಲಸಿಕೆ ತಯಾರಿಸಲಾಗುತ್ತಿದೆ. ಇದನ್ನು ಮಾಸ್ಟರ್‌ ಸೀಡ್‌ ಎನ್ನುತ್ತಾರೆ. 2001ರಿಂದ ನಂತರ ನಡೆದ ಪೂಟೆನ್ಸಿ (ಕಾರ್ಯಕ್ಷಮತೆ) ಪರೀಕ್ಷೆ ಗಳಲ್ಲಿ ಲಸಿಕೆ ಸಾಮರ್ಥ್ಯ ಕುಸಿದಿರುವುದು ಅಧ್ಯಯನ ವರದಿಗಳಲ್ಲಿ ಬಹಿರಂಗಗೊಂಡಿದೆ. 2005-2010, 2011- 12ರಲ್ಲಿ ನಡೆದ ಅಧ್ಯಯನ ವರದಿಗಳು ಇದೇ ಅಂಶ ಹೊರಹಾಕಿವೆ. ಎರಡು ಡೋಸ್‌ ಪಡೆದವರಲ್ಲಿ ಶೇ.94 ರಷ್ಟು ರಕ್ಷಣಾ ಸಾಮರ್ಥ್ಯ ನೀಡುವ ಬದಲಿಗೆ ಶೇ.62.4ರಷ್ಟು ಮಾತ್ರ ರಕ್ಷಣೆ ನೀಡುತ್ತಿದ್ದವು. ಆದರೂ ಜನರಿಗೆ ಈ ಲಸಿಕೆ ಮುಂದುವರೆಸಲಾಗಿತ್ತು.

ಪರೀಕ್ಷೆ ನಡೆಯಲಿಲ್ಲ: ಎನ್‌ಐವಿ ಪುಣೆ ವಿಜ್ಞಾನಿ ಸಿ.ಎನ್‌.ದಂಡಾವತರೆ ಅವರಿಂದ ಫಾರ್ಮುಲಾ ಪಡೆದ ಬಳಿಕ ಎಐಎಚ್‌ವಿಬಿ ಲಸಿಕೆ ತಯಾರಿಕೆ ಆರಂಭಿಸಿತ್ತು. 2000ರಲ್ಲಿ ಒಂದು ವರ್ಷದ ಅವಧಿಗೆ ಅದು ಲೈಸೆನ್ಸ್‌ ಪಡೆದಿತ್ತು. ನಂತರ ಅದು ಮೂರು ಬಾರಿ ಅನುಮತಿ ಕೇಳಿ ಅರ್ಜಿ ಸಲ್ಲಿಸಿದೆ. ಆದರೆ ಒಮ್ಮೆಯೂ ಈ ಅವಧಿ ಯಲ್ಲಿ ಅದು ಸೆಂಟ್ರಲ್‌ ಡ್ರಗ್‌ ಲ್ಯಾಬೋರೇಟರಿ (ಸಿಡಿ ಎಲ್‌) ಲಸಿಕೆ ಕ್ಷಮತೆ, ಸಾಮರ್ಥ್ಯ (ಪೂಟೆನ್ಸಿ) ಪರೀಕ್ಷೆ ನಡೆಸಲಿಲ್ಲ. ಜತೆಗೆ ಸೆಂಟ್ರಲ್‌ ಡ್ರಗ್ಸ್‌ ಸ್ಟಾಂಡರ್ಡ್‌ ಕಂಟ್ರೋಲ್‌ ಆರ್ಗನೈಜೇಷನ್‌ (ಸಿಡಿಎಸ್‌ಸಿಒ) ಕೂಡ ಭೇಟಿ ಕೊಟ್ಟು ಪರಿಶೀಲನೆ ನಡೆಸಲಿಲ್ಲ. ಇದು ಕೂಡ ಲಸಿಕೆ ಸಾಮರ್ಥ್ಯ ಹಾದಿ ತಪ್ಪಲು ಕಾರಣಗಳಾಗಿವೆ. ಲಸಿಕೆ ಕ್ಷಮತೆ ಪರಿಶೀಲನೆಗೆ ಒಳಪಡಿಸುವುದು ಲೈಸೆನ್ಸ್‌ ಪಡೆದ ಸಂಸ್ಥೆ ಜವಾಬ್ದಾರಿ ಕೂಡ ಹೌದು ಎಂದು ಕೆಲ ಅಧಿಕಾರಿಗಳು ತಿಳಿಸುತ್ತಾರೆ.

ಸಿಡಿಎಲ್‌ನಲ್ಲಿ ಅಧಿಕಾರಿಗಳು: ಲಸಿಕೆ ಬಗ್ಗೆ ಮಾಹಿತಿ ಹೊರಬರುತ್ತಿದ್ದಂತೆ ಅಧಿಕಾರಿಗಳು ಎಚ್ಚೆತ್ತಿದ್ದು ಐಎಎಚ್‌ವಿಬಿ ಅಧಿಕಾರಿಗಳು ಹಿಮಾಚಲ ಪ್ರದೇಶ ದಲ್ಲಿರುವ ಸಿಡಿ ಎಲ್‌ಗೆ ಭೇಟಿ ನೀಡಿ ಲಸಿಕೆಯನ್ನು ಪೊಟೆನ್ಸಿ (ಸಾಮರ್ಥ್ಯ) ಪರೀಕ್ಷೆಗೆ ಒಳಪಡಿಸಿದ್ದಾರೆ. ಅಲ್ಲಿಂದ ವರದಿ ಬರುವವರೆಗೂ ಲಸಿಕೆ ವಿತರಣೆ ನಡೆಯುವುದಿಲ್ಲ.

ಸಿಡಿಎಲ್‌ಗೆ ಗೊತ್ತೆ ಇಲ್ಲ: ಭಾರತದಲ್ಲಿ ಯಾವುದೇ ವ್ಯಾಕ್ಸಿನ್‌ಗಳು ತಯಾರಾಗಿ ಮಾರಾಟಕ್ಕೆ ಲೈಸೆನ್ಸ್‌ ಪಡೆದ ಮೇಲೆ ಅದನ್ನು ಸೆಂಟ್ರಲ್‌ ಡ್ರಗ್‌ ಲ್ಯಾಬೋರೇಟರಿ ಯಲ್ಲಿ ಪರೀಕ್ಷೆಗೆ ಒಳಪಡಿಸಿ ಅನುಮತಿ ಪಡೆಯಬೇಕು. ಅಲ್ಲಿ ಅದು ತೇರ್ಗಡೆ ಆಗದಿದ್ದರೆ ಬಳಸುವಂತಿಲ್ಲ. 2001ರಿಂದ ಇಲ್ಲಿವರೆಗೆ ಕೆಎಫ್‌ಡಿ ಲಸಿಕೆ ಪರೀಕ್ಷೆಗೆ ಒಳಪಡಿಸಿಲ್ಲ. ಈ ಬಗ್ಗೆ ಆರ್‌ಟಿಐ ದಾಖಲೆ ದೃಢಪಡಿಸಿದೆ.

ಲೈಸೆನ್ಸ್‌ ಕಿತಾಪತಿ 2000ರಲ್ಲಿ ಒಂದು ವರ್ಷದ ಅವಧಿಗೆ ಅನುಮತಿ ಪಡೆದಿದ್ದ ಐಎಎಚ್‌ವಿಬಿ ಮಧ್ಯದಲ್ಲಿ ಆಗಾಗ್ಗೆ ಅನುಮತಿಗೆ ಅರ್ಜಿ ಸಲ್ಲಿಸಿತ್ತು. ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. 2017ರಲ್ಲಿ ಮತ್ತೆ ಅರ್ಜಿ ಸಲ್ಲಿಸಿತ್ತು. ಅನುಮತಿ ನೀಡಿದ ಪಟ್ಟಿಯಲ್ಲಿ ಕೆಎಫ್‌ಡಿ ಲಸಿಕೆಯನ್ನು ಅದು ಕೈಬಿಟ್ಟಿತ್ತು. ಇದು ಪೂರ್ವಾನ್ವಯ ಆಗುವಂತೆ ಅನುಮತಿ ರದ್ದಾಗಿತ್ತು. ಈಗ 2022ರಲ್ಲಿ ಲಸಿಕೆ ಉತ್ಪಾದನೆಯನ್ನು ಈ ಸಂಸ್ಥೆ ಕೈಬಿಟ್ಟಿದೆ.

ಕೊನೆ ಬ್ಯಾಚ್‌ನ ಲಸಿಕೆ 50 ಸಾವಿರ ವಯಲ್ಸ್‌ ಇದೆ. ಅದನ್ನು ಪೊಟೆನ್ಸಿ ಟೆಸ್ಟ್‌ಗೆ ತಮ್ಮ ತಂಡ ಸಿಡಿಎಲ್‌ಗೆ ಹೋಗಿದೆ. ಅಲ್ಲಿಂದ ವರದಿ ಬಂದ ಕೂಡಲೇ ಲಸಿಕೆ ವಿತರಣೆ ಮಾಡಲಿದ್ದೇವೆ. ಲಸಿಕೆ ಸಾಮರ್ಥ್ಯ ಕುಸಿದಿದೆ ಎಂಬುದನ್ನು ನಾವು ಹೇಳಲು ಸಾಧ್ಯವಿಲ್ಲ. ಅದನ್ನು ಸಿಡಿಎಲ್‌ನವರೇ ಹೇಳಬೇಕು. ● ಡಿ.ರಂದೀಪ್‌, ಆರೋಗ್ಯ ಇಲಾಖೆ ಆಯುಕ್ತರು

-●ಶರತ್‌ ಭದ್ರಾವತಿ

ಟಾಪ್ ನ್ಯೂಸ್

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Bheema-Naik

KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ

MM-Singh-ACC-Pm

Accidental Prime Minister: ದ ಮೇಕಿಂಗ್‌ ಆ್ಯಂಡ್‌ ಅನ್‌ಮೇಕಿಂಗ್‌ ಆಫ್ ಡಾ.ಸಿಂಗ್‌

New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್‌; ಕುಟುಂಬದ 4 ಫೌಂಡೇಶನ್‌ ಆಸ್ತಿ ಹಂಚಿಕೆ

New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್‌; ಕುಟುಂಬದ 4 ಫೌಂಡೇಶನ್‌ ಆಸ್ತಿ ಹಂಚಿಕೆ

MM-Singh–Bush

Tribute Dr.Singh: ಡಾ.ಸಿಂಗ್‌ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ

Supreme Court: ಕ್ರೆಡಿಟ್‌ ಕಾರ್ಡ್‌ ಬಾಕಿ ಮೇಲೆ 30% ಬಡ್ಡಿಗೆ ಸುಪ್ರೀಂ ಅಸ್ತು!

Supreme Court: ಕ್ರೆಡಿಟ್‌ ಕಾರ್ಡ್‌ ಬಾಕಿ ಮೇಲೆ 30% ಬಡ್ಡಿಗೆ ಸುಪ್ರೀಂ ಅಸ್ತು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shimoga: ಕೊಡಚಾದ್ರಿ ಸಮೀಪ ಟಿಟಿ- ಜೀಪ್‌ ಮುಖಾಮುಖಿ ಡಿಕ್ಕಿ: ಎಂಟು ಜನರಿಗೆ ಗಾಯ

Shimoga: ಕೊಡಚಾದ್ರಿ ಸಮೀಪ ಟಿಟಿ- ಜೀಪ್‌ ಮುಖಾಮುಖಿ ಡಿಕ್ಕಿ: ಎಂಟು ಜನರಿಗೆ ಗಾಯ

Shimoga: ಮೊಬೈಲ್‌ ಕೊಡದಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ಕಾಲೇಜು ವಿದ್ಯಾರ್ಥಿನಿ

Shimoga: ಮೊಬೈಲ್‌ ಕೊಡದಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ಕಾಲೇಜು ವಿದ್ಯಾರ್ಥಿನಿ

13-

Holehonnur: ಎರಡು ಪ್ರತ್ಯೇಕ ರಸ್ತೆ ಅಪಘಾತ

Shivamogga: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಓ ಈಶ್ವರಪ್ಪ

Shivamogga: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಓ ಈಶ್ವರಪ್ಪ

ಆಯನೂರು ಮಂಜುನಾಥ್

Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Bheema-Naik

KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ

MM-Singh-ACC-Pm

Accidental Prime Minister: ದ ಮೇಕಿಂಗ್‌ ಆ್ಯಂಡ್‌ ಅನ್‌ಮೇಕಿಂಗ್‌ ಆಫ್ ಡಾ.ಸಿಂಗ್‌

5

Mangaluru: ವಿಚ್ಛೇದಿತ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ವಶಕ್ಕೆ;‌ ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.