ಶಿವಮೊಗ್ಗ ಮನೆ ತೆರವು ವಿರೋಧಿಸಿ ಪ್ರತಿಭಟನೆ
Team Udayavani, Oct 11, 2020, 8:06 PM IST
ಶಿವಮೊಗ್ಗ: ಮನೆಗಳ ತೆರವು ವಿರೋ ಧಿಸಿ ಇಲ್ಲಿನ ಇಮಾಂಬಡಾ ನಿವಾಸಿಗಳು ಪ್ರತಿಭಟನೆ ನಡೆಸಿದರು. ಶನಿವಾರ ಪಾಲಿಕೆಯಿಂದ ಮನೆಗಳ ತೆರವು ಕಾರ್ಯಾಚರಣೆ ಕೈಗೊಳ್ಳಲು ಮುಂದಾದಾಗ ನಿವಾಸಿಗಳು ಪ್ರತಿರೋಧ ವ್ಯಕ್ತಪಡಿಸಿದರಲ್ಲದೆ ಧರಣಿ ನಡೆಸಿದರು.
ಪಾಲಿಕೆ ವಿಪಕ್ಷ ನಾಯಕ ಎಚ್.ಸಿ.ಯೋಗೀಶ್ ಮತ್ತು ಸದಸ್ಯರಾದ ನಾಗರಾಜ್ ಕಂಕಾರಿ ಹಾಗೂ ಕೆ.ರಂಗನಾಥ್ ಪ್ರತಿಭಟನೆಗೆ ಸಾಥ್ ನೀಡಿದರು. ಪ್ರತಿ ಬಾರಿ ಮಳೆಗಾಲದಲ್ಲೂ ಇಮಾಂಬಡಾದಲ್ಲಿರುವ ಸುಮಾರು 27ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗುತ್ತದೆ. ಪ್ರತಿ ಬಾರಿ ಪ್ರವಾಹ ಬಂದಾಗ ಇಲ್ಲಿನ ನಿವಾಸಿಗಳಿಗೆ ಸಂಕಷ್ಟಎದುರಾಗುತ್ತದೆ. ಹೀಗಾಗಿ ಮಹಾನಗರಪಾಲಿಕೆಇವರಿಗೆ ಬೇರೆ ಕಡೆ ಜಾಗ ನೀಡಿ ಮನೆಗಳನ್ನು ತೆರವುಗೊಳಿಸಲು ಮುಂದಾಗಿದೆ. ಆದರೆ ಬೇರೆಡೆ ನೀಡಲಾದ ಸ್ಥಳದಲ್ಲಿ ಯಾವುದೇ ಸೌಕರ್ಯವಿಲ್ಲ ಹೀಗಾಗಿ ಮನೆ ತೆರವುಗೊಳಿಸಬಾರದು ಎಂದು ನಿವಾಸಿಗಳು ಒತ್ತಾಯಿಸಿದರು.
ಪಾಲಿಕೆ ಗುರುತಿಸಿರುವ ಹಾಯ್‌ಹೊಳೆಯ ಜಾಗದಲ್ಲಿ ಮೂಲ ಸೌಕರ್ಯ ಒದಗಿಸುವಂತೆ ಹಾಗೂ ಮನೆಗಳನ್ನು ತೆರವುಗೊಳಿಸದಂತೆ ಇಲ್ಲಿನ ಕೆಲವರು ನ್ಯಾಯಾಲಯದ ಮೊರೆಹೋಗಿದ್ದರು. ನ್ಯಾಯಾಲಯ ತಡೆಯಾಜ್ಞೆ ನೀಡಿದ್ದರೂ ಪಾಲಿಕೆ ಅಧಿಕಾರಿಗಳು ತೆರವುಗೊಳಿಸುತ್ತಿರುವುದಕ್ಕೆ ಅಲ್ಲಿನ ನಿವಾಸಿಗಳು ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರಲ್ಲದೇ ಸ್ಥಳದಲ್ಲಿಯೇ ಧರಣಿಕುಳಿತರು. ಯಾವುದೇ ಕಾರಣಕ್ಕೂ ಮನೆ ತೆರವುಗೊಳಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತರು.
ಪಾಲಿಕೆ ವಿಪಕ್ಷ ನಾಯಕ ಎಚ್.ಸಿ.ಯೋಗೀಶ್ ಮಾತನಾಡಿ, ಇಮಾಂಬಡಾದಲ್ಲಿ ಸಮಸ್ಯೆ ಇದ್ದೇ ಇದೆ. ಇಲ್ಲಿನ ನಿವಾಸಿಗಳಿಗೆ ಬೇರೆ ಕಡೆ ಜಾಗ ನೀಡಲಾಗಿದೆ. ಆದರೆ ಅಲ್ಲಿ ಮೂಲ ಸೌಕರ್ಯ ಇಲ್ಲ. ಮೊದಲು ಸೌಕರ್ಯಗಳನ್ನು ಕಲ್ಪಿಸಲಿ.
ಅಲ್ಲದೇ ಅಲ್ಲಿ ಕೆಲವು ಖಾಸಗಿಯವರು ಇದು ತಮ್ಮ ಜಾಗವೆಂದು ಹೇಳಿಕೊಳ್ಳುತ್ತಿದ್ದಾರೆ. ಹಾಗಾಗಿ ಪಾಲಿಕೆಯವರು ಎಲ್ಲಸಮಸ್ಯೆಗಳನ್ನು ಬಗೆಹರಿಸಿ ಆಮೇಲೆ ನಿವಾಸಿಗಳನ್ನು ಸ್ಥಳಾಂತರಗೊಳಿಸಲಿ ಎಂದು ಹೇಳಿದರು.
ಇಮಾಂಬಡಾದ ನಿವಾಸಿಗಳ ಸ್ಥಳಾಂತರ ಅನಿವಾರ್ಯ. ಇಲ್ಲಿನ ನಿವಾಸಿಗಳಿಗೆ ಈಗಾಗಲೇ ಬೇರೆ ಕಡೆ ಜಾಗ ಗುರುತಿಸಲಾಗಿದೆ. ಅಲ್ಲಿ ಎಲ್ಲ ರೀತಿಯ ಮೂಲಭೂತ ಸೌಲಭ್ಯ ಒದಗಿಸಲಾಗಿದೆ. ಆದರೂ ಇವರು ಹೋಗುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಪ್ರತಿ ಬಾರಿ ಪ್ರವಾಹ ಉಂಟಾದಾಗಲೂ ಇಲ್ಲಿನ ನಿವಾಸಿಗಳು ಪರಿಹಾರ ಪಡೆಯುತ್ತಾರೆಯೇ ಹೊರತು ಹೊಸ ಜಾಗಕ್ಕೆ ಹೋಗಲು ಒಪ್ಪುವುದಿಲ್ಲ. ಹೀಗಾದರೆ ಸಮಸ್ಯೆ ಬಗೆಹರಿಯುವುದಾದರೂ ಹೇಗೆ? ಹಾಯ್‌ಹೊಳೆ ಜಾಗದಲ್ಲಿ ಎಲ್ಲರಿಗೂ ನಿವೇಶನ ನೀಡಲಾಗಿದೆ. ಮನೆ ಕಟ್ಟಿಕೊಳ್ಳಲೆಂದೇ ಪ್ರತಿಯೊಬ್ಬರಿಗೂ 1.25 ಲಕ್ಷ ಹಣ ಪಾವತಿಸಲಾಗಿದೆ. ಆದರೂ ಕೂಡ ನಿವಾಸಿಗಳು ಹೊಸ ಜಾಗಕ್ಕೆ ತೆರಳುತ್ತಿಲ್ಲ. ಈಗಾಗಲೇ ಅವರಿಗೆಮನೆ ಖಾಲಿ ಮಾಡುವಂತೆ ತಿಳಿಸಿ 1 ವರ್ಷದ ಕಾಲಾವಕಾಶ ನೀಡಲಾಗಿದೆ. ಇವರು ಅಲ್ಲಿಗೆ ತೆರಳಿದ ಕೂಡಲೇ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಿಕೊಡಲಾಗುವುದು. ಸದ್ಯ ಅನಿವಾರ್ಯವಾಗಿ ಇಲ್ಲಿನ ಮನೆಗಳನ್ನು ತೆರವುಗೊಳಿಸಬೇಕಾಗಿದೆ. ಇಲ್ಲದಿದ್ದರೆ ಈ ಸಮಸ್ಯೆ ಜೀವಂತವಾಗಿ ಉಳಿಯುತ್ತದೆ ಮತ್ತು ಅಭಿವೃದ್ಧಿ ಕೆಲಸಗಳಿಗೆ ತೊಂದರೆಯಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
40 percent commission ಸುಳ್ಳು ಸಾಬೀತು : ಕಾಂಗ್ರೆಸಿಗರಿಗೆ ತಾಕೀತು ಮಾಡಿದ ಯಡಿಯೂರಪ್ಪ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Shimoga; ಪೆಟ್ರೋಲ್ ಹಾಕುವಾಗ ಹೊತ್ತಿ ಉರಿದ ಓಮಿನಿ
Covid ವೇಳೆ ಜೀವ ಉಳಿಸುವ ಕೆಲಸ ಮಾಡಿದ್ದೇವೆ: ಬಿಎಸ್‌ವೈ
Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.