ಬಿಜೆಪಿಯಲ್ಲಿ ಮರಿ ಪುಡಾರಿಗಳದ್ದೇ ಹಾವಳಿ: ಮಂಜುನಾಥ್ ಗೌಡ
Team Udayavani, May 5, 2022, 2:47 PM IST
ತೀರ್ಥಹಳ್ಳಿ: ಬಿಜೆಪಿ ಸರ್ಕಾರದ ದುರಾಡಳಿತ, ಹಾಗೂ ಈಶ್ವರಪ್ಪನವರ ಕಮಿಷನ್ ವ್ಯವಹಾರವನ್ನು ಖಂಡಿಸಿ ಪಿಎಸ್ಐ ನೇಮಕಾತಿ ವಿಚಾರ, ಗ್ಯಾಸ್ ಬೆಲೆ ಏರಿಕೆ, ಬಗರ್ ಹುಕುಂ ಸೇರಿ ಅನೇಕ ವಿಷಯಗಳನ್ನು ಖಂಡಿಸಿ ಮೇ 10 ರ ಮಂಗಳವಾರ ಶಿವಮೊಗ್ಗದಲ್ಲಿ ಪ್ರತಿಭಟನೆ ನೆಡೆಸುವುದಾಗಿ ಕಾಂಗ್ರೆಸ್ ಮುಖಂಡರಾದ ಆರ್ ಎಂ ಮಂಜುನಾಥ ಗೌಡರು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಮೇ 10 ರಂದು ನಡೆಯುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತೀರ್ಥಹಳ್ಳಿ ತಾಲೂಕಿನಿಂದ 5000 ಕಾರ್ಯಕರ್ತರೊಡನೆ ಬರಲು ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ ಎಂದರು.
ಇನ್ನು ಪಿಎಸ್ಐ ಪರೀಕ್ಷೆ ವಿಚಾರ ಬಹಳ ಚರ್ಚೆಯಾಗುತ್ತಿದೆ ಹಾಗೂ ಬಿಜೆಪಿ ಕಾರ್ಯಕರ್ತರನ್ನು ಹೊರತುಪಡಿಸಿ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಸೇರಿ ಹಲವು ಇಲಾಖೆಗಳಿಂದ ದಬ್ಬಾಳಿಕೆ ನಡೆಸುತ್ತಿದ್ದಾರೆ. ಬಿಜೆಪಿ ಬಿಟ್ಟರೆ ಬೇರೆ ಯಾರು ಸಹ ಮರಳು ಮುಟ್ಟುವ ಹಾಗೆ ಇಲ್ಲ. ಮರಿ ಪುಡಾರಿಗಳ ಹಾವಳಿಯಿಂದ ಇಂತಹ ಪರಿಸ್ಥಿತಿ ಉಂಟಾಗಿದೆ ಎಂದರು.
ಇದನ್ನೂ ಓದಿ:ವಿಶ್ವಮಾನವ, ಪಿತಾಮಹನ ಕಾಲದಲ್ಲೂ ಭ್ರಷ್ಟಾಚಾರ : ಡಿ.ಕೆ.ಶಿವಕುಮಾರ್ ವ್ಯಂಗ್ಯ
ಪಿಎಸ್ಐ ನೇಮಕಾತಿ ವಿಚಾರ ನೋಡಿದರೆ ಕೇಸ್ ಹಳ್ಳ ಹಿಡಿಸುವ ಪ್ರಯತ್ನ ನಡೆಯುತ್ತಿದೆ. ಕಾರಣ ದಿವ್ಯ ಹಾಗರಗಿ ಅವರು ಸಿಕ್ಕಿ ಹಾಕಿಕೊಂಡ ಮೇಲೆ ಬಿಜೆಪಿ ಪಕ್ಷದವರೇ ಅಲ್ಲ ಎನ್ನುತ್ತಾರೆ. ಹೀಗೆ ಬಿಟ್ಟರೆ ಕೇಸ್ ಮುಚ್ಚಿ ಹಾಕಲಾಗುತ್ತದೆ. ಅದನ್ನು ನಾವು ಖಂಡಿತ ಬಿಡುವುದಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಎಷ್ಟೊಂದು ಸಮಸ್ಯೆಗಳು ಇದೆ. ಅದೆಲ್ಲವನ್ನು ಬಿಟ್ಟು ಧರ್ಮ ಸಂಘರ್ಷ ಮಾಡುತ್ತಿದ್ದಾರೆ. ಹಿಜಾಬ್, ಹಲಾಲ್ ಕಟ್, ಜಟ್ಕಾ ಕಟ್, ಒಂದಾದ ಮೇಲೆ ಒಂದು ವಿಷಯವನ್ನು ತೆಗೆಯುತ್ತಿದ್ದಾರೆ. ಇದೆಲ್ಲವೂ ಇಲ್ಲಿಗೆ ನಿಲ್ಲಬೇಕು ಎಂದು ತಿಳಿಸಿದರು.
ಕಿಮ್ಮನೆ ರತ್ನಾಕರ್ ಮಾತನಾಡಿ, ಮೇ 10 ಕ್ಕೆ ಶಿವಮೊಗ್ಗಕ್ಕೆ ಡಿ ಕೆ ಶಿವಕುಮಾರ್ ಬರುತ್ತಾರೆ. ಅಲ್ಲಿಗೆ ನಾವು ಮತ್ತು ನಮ್ಮ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸುತ್ತೇವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಡಾ. ಸುಂದರೇಶ್, ಬೆಟ್ಟ ಮಕ್ಕಿ ಕೃಷ್ಣಮೂರ್ತಿ ಭಟ್, ಪಟ್ಟಣ ಪಂಚಾಯತಿ ಅಧ್ಯಕ್ಷೆ ಶಬನಂ, ಕಟ್ಟೆಹಕ್ಲು ಕಿರಣ್ ಪಟ್ಟಣ ಪಂಚಾಯತ್ ಸದಸ್ಯರಾದ ಸುಶೀಲ ಶೆಟ್ಟಿ, ಕುರುವಳ್ಳಿ ನಾಗರಾಜ್ ಪೂಜಾರಿ, ನವೀನ್ ಕುಮಾರ್, ಯಲ್ಲಪ್ಪ, ಅಂಜು ಸಾಹೇಬ್, ರತ್ನಾಕರ್ ಶೆಟ್ಟಿ, ಮಧುಕರ್ ಕರಿಮನೆ, ವಿಲಿಯಮ್ಸ್ ಸೇರಿ ಹಲವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga: ಕೊಡಚಾದ್ರಿ ಸಮೀಪ ಟಿಟಿ- ಜೀಪ್ ಮುಖಾಮುಖಿ ಡಿಕ್ಕಿ: ಎಂಟು ಜನರಿಗೆ ಗಾಯ
Shimoga: ಮೊಬೈಲ್ ಕೊಡದಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ಕಾಲೇಜು ವಿದ್ಯಾರ್ಥಿನಿ
Holehonnur: ಎರಡು ಪ್ರತ್ಯೇಕ ರಸ್ತೆ ಅಪಘಾತ
Shivamogga: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಓ ಈಶ್ವರಪ್ಪ
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.