ಮಳೆ ಚುರುಕು: ರೈತರಲಿ ಹೊಸ ಭರವಸೆ
Team Udayavani, Jul 14, 2017, 11:17 AM IST
ಶೃಂಗೇರಿ: ಕಳೆದ ನಾಲ್ಕು ದಿನಗಳಿಂದ ಕಣ್ಮರೆಯಾಗಿದ್ದ ಪುನರ್ವಸು ಮಳೆ ಇದೀಗ ಅಲ್ಪ ಪ್ರಮಾಣದಲ್ಲಿ ಚುರುಕುಗೊಂಡಿದ್ದು
ರೈತರಲ್ಲಿ ಹೊಸ ಭರವಸೆ ಮೂಡಿಸಿದೆ.
ತಾಲೂಕಿನಲ್ಲಿ ಸಾಮಾನ್ಯ ಮಳೆಯಾಗುತ್ತಿದ್ದು, ಭತ್ತದ ನಾಟಿ ಹೊತ್ತಿಗೆ ಮಳೆಯಾಗುವ ನಿರೀಕ್ಷೆಯಲ್ಲಿ ರೈತರು ಇದ್ದಾರೆ. ಆರಂಭದಲ್ಲಿ ಆಶಾದಾಯಕವಾಗಿ ಆರಂಭವಾದ ಮುಂಗಾರು ಮಳೆ ಕಳೆದ ವರ್ಷ ಕೈಕೊಟ್ಟಿದ್ದು,ಈ ವರ್ಷವೂ ಮತ್ತೆ ಪುನಾರವರ್ತನೆಯಾಗುವ ಭೀತಿ ಎದುರಾಗಿತ್ತು. ಜೂನ್ ತಿಂಗಳಿನಲ್ಲಿ ಸಾಮಾನ್ಯ ಮಳೆಯಾಗಿದ್ದು,ಜುಲೈನಲ್ಲಿ ಸುರಿಯಬೇಕಿದ್ದ ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಬಂದಿಲ್ಲ.
ಆರಿದ್ರಾ ಮಳೆ ಒಂದಷ್ಟು ಸುರಿದು ಮಳೆಗಾಲದ ವಾತಾವರಣ ನಿರ್ಮಿಸಿತು. ತುಂಗಾ ನದಿ ತುಂಬಿ ಹರಿದಿದ್ದು, ಪ್ರವಾಹ
ಭೀತಿ ಸೃಷ್ಠಿಸಿತ್ತು. ಆದರೆ, ಕೇವಲ ಒಂದೆರಡು ದಿನ ಸುರಿದ ಮತ್ತೆ ಕಡಿಮೆಯಾಗಿ ನಂತರ ದಿನದಿಂದ ದಿನಕ್ಕೆ ಕಡಿಮೆಯಾಗಿ ಈಗ
ಬಹುತೇಕ ನಾಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ತಾಲೂಕಿನಲ್ಲಿ ವಾಡಿಕೆ ಮಳೆ 2,864 ಮಿ.ಮೀ. ಆಗಿದ್ದು, ಈ ವರ್ಷ ಕೇವಲ 1,609 ಮಿ.ಮೀ. ಮಳೆಯಾಗಿದೆ. ತಾಲೂಕಿನಲ್ಲಿ ಅಂದಾಜು 2,500 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ.
ಸದ್ಯಕ್ಕೆ ಮಲೆನಾಡಿನಲ್ಲಿ ಕುಡಿಯುವ ನೀರಿಗೆ ತೊಂದರೆಯಿಲ್ಲ. ಮಳೆ ಕ್ಷೀಣಗೊಂಡರೆ ಡಿಸೆಂಬರ್, ಜನವರಿಗೆ ಕುಡಿಯುವ ನೀರಿನ
ಸಮಸ್ಯೆಯಾಗುವುದು ಖಚಿತ. ರಾಜ್ಯದಲ್ಲಿ ಬರಗಾಲವಿದ್ದರೂ, ಮಲೆನಾಡಿಗೆ ಕನಿಷ್ಠ ಮಳೆಯಾಗುವುದು ಈ ವರೆಗಿನ ದಾಖಲೆಯಿಂದ ಲಭ್ಯ ಮಾಹಿತಿ. ಜೂನ್‌ನಲ್ಲಿ ಸುರಿದ ಮಳೆಗೆ ಗ್ರಾಮೀಣ ಪ್ರದೇಶದ ಹಳ್ಳಗಳು ಮತ್ತು ತುಂಗಾ ನದಿಯಲ್ಲಿ ಸದ್ಯಕ್ಕೆ ನೀರಿನ ಹರಿವು
ಉತ್ತಮವಾಗಿ ಇದೆ.
ಬಿತ್ತನೆ: ತಾಲೂಕಿನಲ್ಲಿ ಮುಂಗಾರಿನಲ್ಲಿ ಭತ್ತ ಮಾತ್ರ ಬಿತ್ತನೆ ಮಾಡಿ ನಾಟಿ ಮಾಡಲಾಗುತ್ತಿದೆ. ಭತ್ತ ಬೆಳೆಯುವುದೇ ನಷ್ಟ ಎಂದು ಬಹುತೇಕ ರೈತರು ಭತ್ತದ ನಾಟಿ ಕಾರ್ಯದಿಂದ ವಿಮುಖರಾಗುತ್ತಿದ್ದಾರೆ. ಈ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಅಧಿಕವಾಗುತ್ತಾ ಸಾಗಿದೆ. ಪ್ರಸಕ್ತ ಸಾಲಿನಲ್ಲಿ ಭತ್ತದ ಬಿತ್ತನೆ ಕಸಬಾ ಹೋಬಳಿಯಲ್ಲಿ ಶೇ.50 ರಷ್ಟು ಆಗಿದ್ದು, ನಾಟಿ ಜುಲೈ ಅಂತ್ಯದ ವೇಳೆಗೆ ಆರಂಭಗೊಳ್ಳುವ ನಿರೀಕ್ಷೆ ಇದೆ. ಬಿತ್ತನೆ ಮಾಡಿ 25 ರಿಂದ 30 ದಿನಗಳಲ್ಲಿ ನಾಟಿ ಮಾಡಬೇಕಿದೆ. ಮಲೆನಾಡಿನ ಸಾಂಪ್ರಾದಾಯಿಕ
ತಳಿಗಳಾಗಿದ್ದ ಅಸೂಡಿ, ಕೊಯಮತ್ತೂರು, ಜೋಳಗ, ಜೀರಿಗೆಸಾಲೆ, ರತ್ನಚೌಡಿ, ಗಂಧಸಾಲೆ ಭತ್ತಗಳ ನಾಟಿ ಬಹುತೇಕ
ಕೈಬಿಡಲಾಗಿದೆ. ಬಹುತೇಕ ರೈತರು ಹೈಬ್ರಿàಡ್ ತಳಿಯ ಭತ್ತದ ತಳಿಗಳನ್ನು ಆಯ್ಕೆ ಮಾಡಿಕೊಂಡಿದೆ. ಇದರಲ್ಲಿ ಬಾಂಗ್ಲಾರೈಸ್,
ಐಜೆಟಿ, ಇಂಟಾನ್ ಮುಖ್ಯವಾಗಿದೆ. ಹೈಬ್ರಿಡ್ ತಳಿಗಳು ನಿಗದಿತ ವೇಳೆಗೆ ನಾಟಿ ಮಾಡಬೇಕು. ಬಿತ್ತನೆ ಮಾಡಿದ ಭತ್ತದ ಸಸಿಗಳು ಈಗಾಗಾಲೇ 15-20 ದಿನವಾಗಿದೆ. ಉತ್ತಮ ನೀರಾವರಿ ಗದ್ದೆಗಳು ತೋಟವಾಗಿ ಮಾರ್ಪಡಾಗಿದ್ದು, ಮಳೆಯಾಶ್ರಿತ ಗದ್ದೆಗಳು
ಮಾತ್ರ ಈಗ ಉಳಿದುಕೊಂಡಿವೆ.
ಬಿತ್ತನೆಗೆ ಸಾಕಾಗುವಷ್ಟು ಮಳೆ ಜೂನ್‌ನಲ್ಲಿ ಆಗಿದ್ದರಿಂದ ಬಿತ್ತನೆ ಬಹುತೇಕ ರೈತರು ಕೈಗೊಂಡಿದ್ದಾರೆ. ಈಗ ಬಂದಿರುವ ಮಳೆ
ಮುಂದುವರಿದರೆ ಗದ್ದೆ ಕೆಲಸಗಳಿಗೂ ಸಹಾಯಕವಾಗಲಿದ್ದು, ನಾಟಿ ಕಾರ್ಯಕ್ಕೆ ಅನುಕೂಲವಾಗಲಿದೆ. ಗದ್ದೆ ಕೆಲಸ ಮಾಡುವ ಮಹಿಳಾ ಮತ್ತು ಪುರುಷ ಕಾರ್ಮಿಕರ ಕೊರತೆಯೂ ಎದುರಾಗುತ್ತಿದೆ. ಯಾಂತ್ರೀಕರಣವಾಗುತ್ತಿದ್ದರೂ, ಕಾರ್ಮಿಕರು ಅಗತ್ಯ ಮತ್ತು
ಅನಿವಾರ್ಯ ಆಗಿದೆ.
ಕೆ.ಆರ್.ನಾಗೇಂದ್ರ, ನೇರಳಕುಡಿಗೆ, ಅಡ್ಡಗದ್ದೆ ಗ್ರಾಮ
ಇಲಾಖೆ ಮೂಲಕ ಸಹಾಯಧನದಲ್ಲಿ ಭತ್ತದ ಬಿತ್ತನೆ ಬೀಜ ವಿತರಿಸಲಾಗುತ್ತಿದೆ. ಹೈಬ್ರಿಡ್ ತಳಿಯ ಭತ್ತದ ಬಿತ್ತನೆಗೆ ಇನ್ನೂ ಸಮಯಾವಕಾಶವಿದೆ. ಜುಲೈ ಎರಡನೇ ವಾರದಿಂದ ಮಳೆಯಾದರೂ ನಾಟಿ ಕಾರ್ಯಕ್ಕೆ ಅಡಚಣೆಯಾಗುವುದಿಲ್ಲ. ಹಸಿರೆಲೆ ಗೊಬ್ಬರದ ಬೀಜಗಳನ್ನು ಇಲಾಖೆಯಿಂದ ವಿತರಿಸಲಾಗಿದೆ.
ಬೆಳಂದೂರು ನಾಗರಾಜ್, ಕೃಷಿ ಇಲಾಖೆ ಅನುವುಗಾರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.