ರಾಮ ಸೀತೆಯನ್ನು ಕಾಡಿಗಟ್ಟಿದ್ದು ಅಪರಾಧವಲ್ಲವೇ?: ಕಾಗೋಡು
Team Udayavani, Jan 5, 2018, 6:25 AM IST
ಶಿವಮೊಗ್ಗ: ಶ್ರೀರಾಮ ಯಾಕೆ ಬಸುರಿ ಹೆಂಗಸನ್ನು ಕಾಡಿಗೆ ಕಳುಹಿಸಿದ? ಅದು ಅಪರಾಧವಲ್ಲವೇ? ಹೀಗೆ ವಿವಾದಾತ್ಮಕ ಹೇಳಿಕೆ ನೀಡಿದವರು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ.
ದೀಪಕ್ ಹತ್ಯೆ ಕುರಿತು ಗುರುವಾರ ಪ್ರತಿಕ್ರಿಯಿಸಿದ ಅವರು, ಕರಾವಳಿಯಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ವಿಷಾದವಿದೆ. ಇದೀಗ ಯುವಕ ದೀಪಕ್ ರಾವ್ ಎಂಬಾತನ ಹತ್ಯೆ ನಡೆದಿದೆ. ಇಂತಹ ಘಟನೆಗಳು ನಡೆಯಬಾರದು. ಇದಕ್ಕೆ ನಾವೂ ದುಃಖ ಪಡುತ್ತೇವೆ. ಸಂತಾಪ ಸೂಚಿಸುತ್ತೇವೆ ಎಂದರು.
ಮುಂದುವರಿದು, ಈ ರೀತಿ ಘಟನೆಗಳು ನಮ್ಮೂರು, ನಿಮ್ಮೂರಲ್ಲಿ ಆಗೋದಿಲ್ವಾ? ಎಲ್ಲಾ ಕಡೆ ಆಗುತ್ತದೆ. ಆದರೆ, ಕರಾವಳಿ ಭಾಗದಲ್ಲಿ ನಡೆಯುವ ಘಟನೆಗಳಿಗೆ ಬಣ್ಣ ಹಚ್ಚುವ ಕೆಲಸವಾಗುತ್ತಿದೆ. ಇದನ್ನು ಸರ್ಕಾರ ಸಮರ್ಥವಾಗಿ ಎದುರಿಸಲಿದೆ. ಸಮಾಜದಲ್ಲಿ ಏರುಪೇರು ಘಟನೆಗಳಾಗುವುದು ಸಹಜ. ಭಾರತದಲ್ಲಿ ಇರುವಂಥ ಜಾತಿ ವ್ಯವಸ್ಥೆ, ಧಾರ್ಮಿಕ ವ್ಯವಸ್ಥೆ ಯಾವ ರಾಷ್ಟ್ರದಲ್ಲೂ ಇಲ್ಲ. ಹೀಗಾಗಿ ಘರ್ಷಣೆಗಳು ಆಗುತ್ತವೆ. ಆಸ್ತಿಗಾಗಿ ಸಹೋದರರು ಹೊಡೆದಾಡಿ ಸಾಯುತ್ತಾರೆ. ಅದು ಮನುಷ್ಯ ಸಂಸ್ಕೃತಿ, ಭಾರತದ ಸಂಸ್ಕೃತಿ. ಇದನ್ನು ತಪ್ಪಿಸಲು ಆಗಲ್ಲ ಎಂದು ಹೇಳಿದರು. ಸಚಿವ ರಮಾನಾಥ ರೈ ಅವರು ರಾಜೀನಾಮೆ ನೀಡುವಂತೆ ಆಗ್ರಹಿಸುತ್ತಿರುವುದು ಸರಿಯಲ್ಲ. ಸಚಿವರೇನು ಹತ್ಯೆ ನಡೆಸಿದ್ದಾರಾ? ರಾಜೀನಾಮೆಗೆ ಆಗ್ರಹಿಸುತ್ತಿರುವುದರ ಹಿಂದೆ ರಾಜಕೀಯ ಉದ್ದೇಶವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಕ್ಷ ಬಯಸಿದರೆ ಸಾಗರದಿಂದ ಸ್ಪರ್ಧೆ:
ಪಕ್ಷ ಬಯಸಿದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸಾಗರ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಚುನಾವಣೆ ಸಂದರ್ಭದಲ್ಲಿ ಮತ್ತೆ ಸ್ಪರ್ಧಿಸುವುದಿಲ್ಲ ಎಂದಿದ್ದೆ. ಆದರೆ ಈಗ ಟಿಕೆಟ್ ನೀಡುವುದು ಪಕ್ಷದ ತೀರ್ಮಾನಕ್ಕೆ ಬಿಟ್ಟಿದ್ದು ಎಂದು ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.