ಮೀಸಲಾತಿಗೆ ದಿಟ್ಟ ಹೋರಾಟಗಾರರು ಅಗತ್ಯ: ಗುರುಮೂರ್ತಿ

Team Udayavani, Feb 12, 2021, 3:27 PM IST

Reservation requires bold fighters

ಶಿವಮೊಗ್ಗ: ಮೀಸಲಾತಿ ಹೋರಾಟಗಳು, ಮುಕ್ತ ಅಭಿವ್ಯಕ್ತಿ, ಜನಸಾಮಾನ್ಯರ ಆಹಾರ ಮತ್ತು ವೈಯಕ್ತಿಕ ಆಯ್ಕೆಗಳನ್ನು ನಿಯಂತ್ರಿಸಲು ಹಲವು ಶಕ್ತಿಗಳು ಯತ್ನಿಸುತ್ತಿರುವ ಈ ಕಾಲಮಾನದಲ್ಲಿ ಪ್ರೊ| ಬಿ. ಕೃಷ್ಣಪ್ಪ ಅವರಂತಹ ದಿಟ್ಟ ಹೋರಾಟಗಾರರು- ಹೋರಾಟಗಳ ಅವಶ್ಯಕತೆಯಿದೆ ಎಂದು ರಾಜ್ಯ ದಲಿತ ಸಂಘರ್ಷ ಸಮಿತಿಯ ಶಿವಮೊಗ್ಗ ವಿಭಾಗದ ಸಂಚಾಲಕ ಗುರುಮೂರ್ತಿಅಭಿಪ್ರಾಯಪಟ್ಟರು. ಕುವೆಂಪು ವಿವಿಯ ಪ್ರೊ| ಬಿ.ಕೃಷ್ಣಪ್ಪ ಅಧ್ಯಯನ ಕೇಂದ್ರದ ವತಿಯಿಂದ ವಿವಿಯ ಪ್ರೊ| ಹಿರೇಮಠ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ‘ದಲಿತ ಚಳವಳಿ’ ವಿಚಾರ ಸಂಕಿರಣದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಪ್ರೊ| ಬಿ. ಕೃಷ್ಣಪ್ಪ ಅವರು ಹತ್ತಾರು ಬಗೆಯ ಸಾಮಾಜಿಕ ಹೋರಾಟಗಳನ್ನು ಸಂಘಟಿಸಿದವರು. ದಲಿತ ವ್ಯಕ್ತಿಗಳ ಕೊಲೆ ವಿರುದ್ಧ, ಅತ್ಯಾಚಾರಗಳ ವಿರುದ್ಧ ಪ್ರತಿಭಟನೆ, ಚಂದ್ರಗುತ್ತಿ ಬೆತ್ತಲೆ ಸೇವೆ ರದ್ದು, ಸಿದ್ಲಿಪುರದ ಭೂ ಹೋರಾಟ ಸೇರಿದಂತೆ ಅಸ್ಪೃಶ್ಯತೆ, ಹೆಣ್ಣುಮಕ್ಕಳ ಗೌರವ, ಜಾತಿ ನಿರ್ಮೂಲನೆ, ಸಾರ್ವಜನಿಕ ಸ್ಥಳಗಳ ಪ್ರವೇಶ, ಭೂಸುಧಾರಣೆ ಸೇರಿದಂತೆ ವೈವಿಧ್ಯಮಯ ವಿಷಯಗಳಲ್ಲಿ ಚಳವಳಿಗಳನ್ನು ರೂಪಿಸಿದವರು ಎಂದರು.

ಸಮುದಾಯಗಳ ಮುಂದುವರಿದ ಭಾಗವಾಗಿ ಪ್ರಭುತ್ವಗಳೇ ಇಂದು ದಲಿತರ-ಜನಸಾಮಾನ್ಯರನ್ನು ದಮನಿಸುವ ಕೆಲಸಕ್ಕೆ ಮುಂದಾಗಿವೆ. ಪ್ರೊ| ಭಗವಾನ್‌ರ ವಿಚಾರಗಳನ್ನು ವೈಚಾರಿಕವಾಗಿ ಎದುರಿಸದೇಮಸಿ ಬಳಿದು ಸಂವಿಧಾನಕ್ಕಿಂತ ಧರ್ಮ ಮುಖ್ಯ ಎನ್ನಲಾಗುತ್ತಿದೆ. ದಲಿತ ಅಸ್ಮಿತೆಯ ಮೂಲವಾದ ದಲಿತ ಪದವನ್ನೇ ಸರ್ಕಾರಿ ಪದಕೋಶದಿಂದ ತೆಗೆದು ಹಾಕುವ ಆದೇಶ ಹೊರಡಿಸಲಾಗಿದೆ. ಸರ್ಕಾರವನ್ನು ಟೀಕಿಸಿದಲ್ಲಿ ಪೊಲೀಸ್‌ ಠಾಣೆಗೆ ಕರೆಸಿ  ವ ಚಾರಣೆ ಮಾಡಲಾಗುತ್ತದೆ. ಸಮಾಜಉದ್ಧರಿಸಬೇಕಾದ ಸ್ವಾಮೀಜಿಗಳು ಮೀಸಲಾತಿ ಹೋರಾಟಗಳಿಗೆ ಇಳಿದಿದ್ದಾರೆ.

ಯಾವ ಆಹಾರ ತಿನ್ನಬೇಕು, ಯಾರನ್ನು ಪ್ರೀತಿಸಬೇಕು ಎಂಬುದನ್ನು ಕಾನೂನುಗಳ ಮೂಲಕವೇ ನಿಯಂತ್ರಿಸಲು ಹೊರಟಿರುವಂತಹ ಈ ಆತಂಕಕಾರಿ ದಿನಗಳಲ್ಲಿ ಗಟ್ಟಿಯಾಗಿದನಿಯೆತ್ತಬಲ್ಲಂತಹ ಪ್ರೊ| ಬಿ. ಕೃಷ್ಣಪ್ಪ ಇಂದು ಹೆಚ್ಚು ಅಗತ್ಯವಾಗಿದ್ದರು.

ಇದನ್ನೂ ಓದಿ:ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಸರಳ ಸಂಪನ್ನ

ವಿಶ್ವವಿದ್ಯಾಲಯಗಳಲ್ಲಿರುವ ಪ್ರೊ| ಕೃಷ್ಣಪ್ಪ, ಜಗಜೀವನ್‌ರಾಂ, ಬಸವಣ್ಣ, ಅಂಬೇಡ್ಕರ್‌ ರಂತಹ ಅಧ್ಯಯನ ಪೀಠಗಳು ಕ್ಯಾಂಪಸ್‌ ನಿಂದ ಹೊರಬಂದು ಸಮಾಜದಲ್ಲಿ ಹಲವು ವಿಧದ ಶೋಷಣೆಗಳ ವಿರುದ್ಧ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಕರೆ ಕೊಟ್ಟರು.

ವಿವಿಯ ಕುಲಪತಿ ಪ್ರೊ| ಬಿ. ಪಿ. ವೀರಭದ್ರಪ್ಪ ಮಾತನಾಡಿ, ಪ್ರೊ| ಬಿ. ಕೃಷ್ಣಪ್ಪ ಅವರು ಹರಿಹರ, ಚಿತ್ರದುರ್ಗಗಳಲ್ಲಿ ನಡೆದ ಚಳವಳಿಗಳ ವೇದಿಕೆಯಿಂದಲೇ ದಲಿತರಿಗೆ ದೇವಾಲಯಗಳ ಬದಲಿಗೆ ಸಂಸತ್ತು, ಶಾಸನಸಭೆಗಳಿಗೆ ಪ್ರವೇಶಕ್ಕೆ ಕರೆ ಕೊಟ್ಟಿದ್ದನ್ನು ನಾನು ಸ್ವತಃ ನೋಡಿದ್ದೇನೆ.ಶಿಕ್ಷಿತರಲ್ಲೇ ಹೆಚ್ಚಿನ ಮೌಡ್ಯಆಚರಣೆ, ದುರಾಸೆಯ ಪ್ರವೃತ್ತಿಗಳು,ಅಸಮಾನತೆಯಮನೋಭಾವನೆಗಳು ಇರುವ ಈ ಕಾಲದಲ್ಲಿಕೃಷ್ಣಪ್ಪ ಅವರಂತಹ ಹೋರಾಟಗಾರರ  ಅವಶ್ಯಕತೆಯಿದೆ. ಹೀಗಾಗಿಯೇ ಅವರನ್ನು ನಾವು ಕರ್ನಾಟಕದ ಅಂಬೇಡ್ಕರ್‌ಎಂದು ಹೆಮ್ಮೆಯಿಂದ ಕರೆಯುತ್ತೇವೆ ಎಂದರು. ವಿವಿಯ ಪರೀûಾಂಗ ಕುಲಸಚಿ ಪ್ರೊ| ಪಿ. ಕಣ್ಣನ್‌, ಪ್ರೊ| ಬಿ. ಕೃಷ್ಣಪ್ಪ ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ| ಶಿವಾನಂದ ಕೆಳಗಿನಮನಿ, ಕನ್ನಡ ಭಾರತಿ ವಿಭಾಗದಪ್ರೊ| ಪ್ರಶಾಂತ್‌ನಾಯ್ಕ, ಡೊಮಿನಿಕ್‌ ಇನ್ನಿತರರು ಇದ್ದರು.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Ullala ಮಡ್ಯಾರು: ಕಾರ್ಮಿಕರಿಗೆ ಹಲ್ಲೆ; ಬಂಧನ

Ullala ಮಡ್ಯಾರು: ಕಾರ್ಮಿಕರಿಗೆ ಹಲ್ಲೆ; ಬಂಧನ

Gangolli: 6 ದಿನ ಕಳೆದರೂ ಕಡಲಿಗೆ ಬಿದ್ದ ಮೀನುಗಾರನ ಸುಳಿವು ಇಲ್ಲ

Gangolli: 6 ದಿನ ಕಳೆದರೂ ಕಡಲಿಗೆ ಬಿದ್ದ ಮೀನುಗಾರನ ಸುಳಿವು ಇಲ್ಲ

Srinivasa Hospital: 90 ವರ್ಷದ ಮಹಿಳೆಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ

Srinivasa Hospital: 90 ವರ್ಷದ ಮಹಿಳೆಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ

Mangaluru: ಬ್ಯಾರಿ ಅಭಿವೃದ್ಧಿ ನಿಗಮದ ಸಾಧಕ-ಬಾಧಕ ಚರ್ಚೆ ಅಗತ್ಯ: ಸ್ಪೀಕರ್‌ ಖಾದರ್‌

Mangaluru: ಬ್ಯಾರಿ ಅಭಿವೃದ್ಧಿ ನಿಗಮದ ಸಾಧಕ-ಬಾಧಕ ಚರ್ಚೆ ಅಗತ್ಯ: ಸ್ಪೀಕರ್‌ ಖಾದರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Anandapura: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ; ತಪ್ಪಿದ ಅನಾಹುತ

Na-Desoza-sagara

ಸಾಗರಕ್ಕೆ ಆಗಮಿಸಿದ ಡಾ.ನಾ.ಡಿಸೋಜಾ ಪಾರ್ಥಿವ ಶರೀರ; ಗಣ್ಯರು, ಅಧಿಕಾರಿಗಳಿಂದ ಅಂತಿಮ ದರ್ಶನ

Hosnagara-Bus

Hosanagar: ಪ್ರಪಾತಕ್ಕೆ ಉರುಳಿದ ಬಸ್; ಸಣ್ಣ ಪುಟ್ಟ ಗಾಯಗಳಿಂದ ಪ್ರಯಾಣಿಕರು ಪಾರು

Sarji sweet box case: ಲವ್‌ ಫೈಲ್ಯೂರ್‌ ಆಗಿದ್ದಕ್ಕೆ ಕೃತ್ಯ ಮಾಡಿದ್ದ ಲಾಯರ್!

Sarji sweet box case: ಲವ್‌ ಫೈಲ್ಯೂರ್‌ ಆಗಿದ್ದಕ್ಕೆ ಸೇಡಿಗಾಗಿ ಕೃತ್ಯ ಮಾಡಿದ್ದ ಲಾಯರ್!

ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…

ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Ullala ಮಡ್ಯಾರು: ಕಾರ್ಮಿಕರಿಗೆ ಹಲ್ಲೆ; ಬಂಧನ

Ullala ಮಡ್ಯಾರು: ಕಾರ್ಮಿಕರಿಗೆ ಹಲ್ಲೆ; ಬಂಧನ

Gangolli: 6 ದಿನ ಕಳೆದರೂ ಕಡಲಿಗೆ ಬಿದ್ದ ಮೀನುಗಾರನ ಸುಳಿವು ಇಲ್ಲ

Gangolli: 6 ದಿನ ಕಳೆದರೂ ಕಡಲಿಗೆ ಬಿದ್ದ ಮೀನುಗಾರನ ಸುಳಿವು ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.