ಅರಳಗೋಡಲ್ಲಿ ಸದ್ಯಕ್ಕಿಲ್ಲ ಕೆಎಫ್‌ಡಿ ಆತಂಕ

ಕಳೆದ ವರ್ಷ ಕಾಯಿಲೆ ಭೀತಿಯಲ್ಲಿ ಊರಿಗೆ ಊರೇ ತೊರೆದಿದ್ದ ಅರಳಗೋಡು ಭಾಗದ ಕೆಲ ನಾಗರಿಕರು

Team Udayavani, Jan 13, 2020, 3:48 PM IST

13-Jnauary-21

ಸಾಗರ: ಕಳೆದ ವರ್ಷ ಈ ಅವಧಿಯಲ್ಲಿ ಮಂಗನ ಕಾಯಿಲೆಯಿಂದ ತತ್ತರಿಸಿದ್ದ ತಾಲೂಕಿನ ಅರಳಗೋಡು ಭಾಗದಲ್ಲಿ ಈ ವರ್ಷ ಈವರೆಗೆ ಅಂತಹ ಪ್ರಕರಣಗಳು ಕಂಡು ಬಂದಿಲ್ಲದಿರುವುದರಿಂದ ಅಲ್ಲಿನ ಜನ ನಿಟ್ಟುಸಿರು ಬಿಡುತ್ತಿದ್ದಾರೆ.

ಕಳೆದ ವರ್ಷ ಮಂಗನ ಸಾವು, ಉಣುಗುಗಳ ಭಯದಿಂದ ಅಳಗೋಡು ಮೊದಲಾದೆಡೆ ಊರಿಗೆ ಊರೇ ಮನೆಗೆ ಬೀಗ ಹಾಕಿ ಬೇರೆಡೆಗೆ ವಲಸೆ ಹೋಗಿದ್ದ ಘಟನೆಗಳು ನಡೆದಿದ್ದವು. ಈ ವರ್ಷ ಶಂಕಿತ ಕೆಎಫ್‌ಡಿ ಜ್ವರ ಈವರೆಗೆ ಕಾಣಿಸಿಕೊಂಡಿಲ್ಲ, ಮಂಗಗಳು ಸಾವನ್ನಪ್ಪುತ್ತಿರುವುದು ಕಂಡುಬಂದಿಲ್ಲ ಎಂದು ಅಳಗೋಡಿನ ರಾಜೇಶ್‌ ಸಮಾಧಾನ ವ್ಯಕ್ತಪಡಿಸುತ್ತಾರೆ.

ಅಲ್ಲಿ ಅಂತಿಮ ಹಂತದಲ್ಲಿ ಅಡಕೆ ಕೊಯ್ಲಿನ ಕೆಲಸ ನಡೆದಿದ್ದು, ಗದ್ದೆಯಿಂದ ಭತ್ತ ಕೊಯ್ಲಾಗಿ ಮನೆ ಸೇರಿದೆ. ಈ ನಡುವೆ ಕಾನೂರಿನ ಭರತ್‌ರಲ್ಲಿ ಕಾಣಿಸಿದ
ಮಂಗನ ಕಾಯಿಲೆ ಹಾಗೂ ಹೂವಮ್ಮ ಸಾವಿನ ಪ್ರಕರಣದ ನಂತರ ಈ ಭಾಗದಲ್ಲಿ ಮೂರನೇ ಸುತ್ತಿನ ಲಸಿಕೆ ಹಾಕುವುದಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಲಸಿಕೆ ಹಾಕಿಸಿಕೊಳ್ಳುವಲ್ಲಿ ತೀವ್ರವಾದ ಪ್ರತಿರೋಧವಿರುವ ಮರಾಠಿಕೇರಿಯ ಮನೆಮನೆಗೆ ತೆರಳಿ ಲಸಿಕೆ ಹಾಕುವ ಕೆಲಸವನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಮಾಡುತ್ತಿದ್ದಾರೆ. ಮತ್ತೂಮ್ಮೆ ಮಂಗನ ಕಾಯಿಲೆಯ ಭಯ ಮೂಡುವಂತಾಗಿರುವುದು ಕೂಡ ಜನ ಲಸಿಕೆ ಹಾಕಿಕೊಳ್ಳುವಲ್ಲಿ ಪ್ರತಿರೋಧ ತೋರುವುದನ್ನು ಕಡಿಮೆ ಮಾಡಿದೆ ಎಂದು ಆಶಾ ಕಾರ್ಯಕರ್ತೆಯೋರ್ವರು ತಿಳಿಸಿದರು.

ಭಾನುವಾರ ತಾಲೂಕು ಆರೋಗ್ಯಾಧಿಕಾರಿ ಡಾ| ಮುನಿ ವೆಂಕಟರಾಜು, ಮೃತ ಹೂವಮ್ಮ ಅವರ ಶೀಗೇಹಳ್ಳಿಯ ಮನೆಗೆ ಭೇಟಿ ಮಾಡಿ ಪರಿಶೀಲನೆ ನಡೆಸಿದರು. ಬರುವ 17ರಂದು ಈ ಭಾಗದ ಮಾರಲಗೋಡು ಎಂಬಲ್ಲಿ ಲಸಿಕಾ ಶಿಬಿರ ನಡೆಸಲಾಗುವುದು. ಈ ಒಂದು ಘಟನೆಯ ಹೊರತಾಗಿ ಎಲ್ಲೂ ಆತಂಕದ ಪರಿಸ್ಥಿತಿ ಇಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ. ಈ ನಡುವೆ ಸಾಗರದ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಕೆಎಫ್‌ಡಿ ಸೋಂಕು ದೃಢಪಟ್ಟು, ಗುಣಮುಖನಾಗುತ್ತಿರುವ ಕಾನೂರಿನ ಭರತ್‌ ಅವರ ತಂದೆ ತಿಮ್ಮಪ್ಪ ಅವರಲ್ಲೂ ಜ್ವರ ಕಾಣಿಸಿಕೊಂಡಿದೆ. ಅವರ ರಕ್ತವನ್ನು ಶಿವಮೊಗ್ಗದ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದ್ದು ಸೋಮವಾರ ವರದಿ ಲಭಿಸುವ ಸಾಧ್ಯತೆಗಳಿವೆ. ಸಾಗರದ ಆಸ್ಪತ್ರೆಯಲ್ಲಿ ಶಂಕಿತ ಕೆಎಫ್‌ಡಿ ಜ್ವರದಿಂದ ದಾಖಲಾಗಿದ್ದ ಅರಳಗೋಡು ಪಿಎಚ್‌ಸಿಯ ಹಾಳ್ತೋಟದ ಕೋಮರಾಜು ಅವರಲ್ಲಿ ಕೆಎಫ್‌ಡಿ ವೈರಸ್‌ ಇಲ್ಲ ಎಂದು ಲ್ಯಾಬ್‌ ವರದಿಗಳು ದೃಢಪಡಿಸಿವೆ.

ಕೆರೆ ಹಬ್ಬದ ಸಂಭ್ರಮದಲ್ಲಿ ಪಕ್ಕಕ್ಕೆ ಸರಿದ ಮಂಗನ ಕಾಯಿಲೆಯ ವಿಚಾರ: ಈ ವರ್ಷದಲ್ಲಿ ಮಂಗನ ಕಾಯಿಲೆಗೆ ಮೊದಲ ಬಲಿಯಾಗಿ ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಚದರವಳ್ಳಿ ಸಮೀಪದ ಶೀಗೇಮಕ್ಕಿಯ ಹೂವಮ್ಮ ಶನಿವಾರ ಮಧ್ಯಾಹ್ನ 12-30ರ ಸಮಯದಲ್ಲಿಯೇ ಮಣಿಪಾಲ್‌ನಲ್ಲಿ ಸಾವನ್ನಪ್ಪಿದ್ದರೂ ನಗರದಲ್ಲಿ ಶಾಸಕ ಎಚ್‌. ಹಾಲಪ್ಪ ನೇತೃತ್ವದಲ್ಲಿ ನಡೆದಿದ್ದ ಕೆರೆ ಹಬ್ಬದ ಸಂಭ್ರಮಕ್ಕೆ ಮುಕ್ಕು ಬರಬಾರದು ಎಂಬ ಕಾರಣಕ್ಕಾಗಿಯೇ ಸಾವಿನ ಸುದ್ದಿಯನ್ನು ಪ್ರಚಾರ ಮಾಡಲಿಲ್ಲವೇ ಎಂಬ ಅನುಮಾನ ಸಾಗರದ ಹಲವರನ್ನುಕಾಡುವಂತಾಗಿದೆ.

ಶನಿವಾರ ಮಧ್ಯಾಹ್ನ ತಾಲೂಕಿನಾದ್ಯಂತ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ಶಾಸಕ ಹಾಲಪ್ಪ ಅಲ್ಲದೆ ಸಂಸದ ಬಿ.ವೈ. ರಾಘವೇಂದ್ರ ಕೂಡ ಪಾಲ್ಗೊಂಡಿದ್ದರು. ಎಡಜಿಗಳೇಮನೆ ಗ್ರಾಪಂನ ಕರ್ಕಿಕೊಪ್ಪದಲ್ಲಿ, ನಗರದ
ಸಂಜಯ್‌ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ, ಗಾಂಧಿಮೈದಾನದ ನಾದವಿಂಶತಿ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡಿದ್ದರು. ಅವರ ಮಾತುಗಳ ಯಾವುದೇ
ಸಂದರ್ಭದಲ್ಲಿ ತಾಲೂಕಿನ ಈ ದುರಂತದ ವಿಚಾರ ಪ್ರಸ್ತಾಪಗೊಳ್ಳಲಿಲ್ಲ. ಬಿಜೆಪಿ ಕಾರ್ಯಕರ್ತರು ಹೆಚ್ಚು ಸಕ್ರಿಯವಾಗಿ ಕಾರ್ಯ ನಿರ್ವಹಿಸುವ ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಸುದ್ದಿಗೆ ಜಾಗ ಸಿಕ್ಕಲೇ ಇಲ್ಲ. ಶಾಸಕ ಹಾಲಪ್ಪ ಅವರು ಮುತುವರ್ಜಿಯಿಂದ ಆಯೋಜಿಸಿರುವ ಕೆರೆ ಹಬ್ಬದ ಸಂದರ್ಭದಲ್ಲಿ ಇಂತಹ ಸೂತಕದ ಸುದ್ದಿ ಸಂಭ್ರಮಕ್ಕೆ ಮುಕ್ಕು ತರಬಹುದು ಎಂಬ ಆತಂಕ ಕಾಡಿದ್ದರಿಂದಲೇ ಅದನ್ನು ನಾಜೂಕಾಗಿ ನಿರ್ವಹಿಸಲಾಯಿತು ಎಂಬ ವಿಶ್ಲೇಷಣೆ ಕೇಳಿಬಂದಿದೆ.

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಜಗದೀಶ್ ಬಿಡುಗಡೆ

Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್

sagara

Sagara: ಕಾಡಾನೆಗಳ ಹಾವಳಿ; ಲಕ್ಷಾಂತರ ರೂ. ಬೆಳೆ ನಷ್ಟ

19-thirthahalli

Thirthahalli: ನದಿಗೆ ಹಾರಿ ಕಾಲೇಜು ವಿದ್ಯಾರ್ಥಿ ಮೃತ್ಯು

1-edd

Shimoga: ಕಾಲೇಜಿನಲ್ಲಿ ಕುಸಿದು ಬಿದ್ದು 17 ವರ್ಷದ ವಿದ್ಯಾರ್ಥಿನಿ ಮೃ*ತ್ಯು

9

Shivamogga: ಅಯೋಧ್ಯೆ ರೀತಿ ವ‌ಕ್ಫ್ ಹಗರಣಕ್ಕೂ ನ್ಯಾಯ ಸಿಕ್ಕೇ ಸಿಗುತ್ತದೆ; ಈಶ್ವರಪ್ಪ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Fake-Gold

Mangaluru: ನಕಲಿ ಚಿನ್ನ ಅಡವಿಟ್ಟು ವಂಚನೆ; 7ನೇ ಸಲ ಬಂದಾಗ ಸಿಕ್ಕಿಬಿದ್ದ ಮಹಿಳೆ!

Suside-Boy

PaduBidri: ಬಸ್‌ ಢಿಕ್ಕಿ: ಪಾದಚಾರಿ ಸಾವು

Kallabatti

Bantwala: ಪಂಜಿಕಲ್ಲು: ಅಕ್ರಮ ಕಳ್ಳಬಟ್ಟಿ ಅಡ್ಡೆಗೆ ದಾಳಿ

money

Mangaluru: ಹಣ ದ್ವಿಗುಣ ಆಮಿಷ: 3.70 ಲ.ರೂ. ವಂಚನೆ

Arrest

Mangaluru: ಹೊಸ ವರ್ಷ ಪಾರ್ಟಿಗೆ ಡ್ರಗ್ಸ್‌: ಮೂವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.