ಸಾಗರ: ಇನ್ನಿಬ್ಬರಿಗೆ ಕೋವಿಡ್ ಸೋಂಕು
Team Udayavani, Jul 28, 2020, 12:57 PM IST
ಸಾಗರ: ತಾಲೂಕಿನ ಗ್ರಾಮಾಂತರ ಹಾಗೂ ನಗರದಲ್ಲಿ ತಲಾ ಒಬ್ಬರಿಗೆ ಸೋಮವಾರ ಕೋವಿಡ್- 19 ವೈರಸ್ ಸೋಂಕು ದೃಢಪಟ್ಟಿದ್ದು ಒಟ್ಟು 59 ಜನರಿಗೆ ಸೋಂಕು ತಗುಲಿದಂತಾಗಿದೆ.
ಇಲ್ಲಿನ ಎಸ್.ಎನ್. ನಗರದ 40 ವರ್ಷದ ಪುರುಷನಿಗೆ ಪಾಸಿಟಿವ್ ಬಂದಿದೆ. ವಿದ್ಯುತ್ ವೈರಿಂಗ್ ಮಾಡುವ ಈತ ಹೊರಗಡೆ ಪ್ರವಾಸ ಮಾಡಿದ ಯಾವುದೇ ಇತಿಹಾಸವಿಲ್ಲ. ಇದೇ ರೀತಿ ತಾಲೂಕಿನ ಕಾರ್ಗಲ್‌ನ 60 ವರ್ಷದ ಪುರುಷನಲ್ಲೂ ರೋಗ ಕಾಣಿಸಿದೆ. ಪ್ರವಾಸ ಇತಿಹಾಸ ಹೊಂದಿಲ್ಲದ ಈ ಅಂಗಡಿ ಮಾಲೀಕರ ಮಗಳು, ಸೊಸೆ ಬೆಂಗಳೂರಿನಿಂದ ಬಂದು ಕೆಲ ಕಾಲ ಇದ್ದು ತೆರಳಿರುವ ಹಿನ್ನೆಲೆಯಲ್ಲಿ ಅಥವಾ ಅಂಗಡಿ ವ್ಯಾಪಾರದ ಕಾರಣ ಸೋಂಕು ತಗುಲಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಇಬ್ಬರಲ್ಲೂ ರೋಗ ಲಕ್ಷಣಗಳಿರುವ ಹಿನ್ನೆಲೆಯಲ್ಲಿ ಶಿವಮೊಗ್ಗಕ್ಕೆ ರವಾನಿಸಲಾಗಿದೆ.
ಸೋಮವಾರ ಮೂರು ಆಂಟಿಜೆನ್ ರ್ಯಾಪಿಡ್ ಕಿಟ್ ಟೆಸ್ಟ್‌ಗಳನ್ನು ತಾಲೂಕು ಆರೋಗ್ಯ ಇಲಾಖೆ ನಡೆಸಿದ್ದು ಮೂರೂ ಪ್ರಕರಣಗಳಲ್ಲಿ ನೆಗೆಟಿವ್ ಬಂದಿದೆ. ಆದರೆ ರೋಗ ಲಕ್ಷಣಗಳು ಇರುವ ಹಿನ್ನೆಲೆಯಲ್ಲಿ ಈ ಮೂವರ ಗಂಟಲು ದ್ರವದ ಸ್ಯಾಂಪಲ್ ಸೇರಿದಂತೆ ಒಟ್ಟು 21 ಸ್ಯಾಂಪಲ್ ಗಳನ್ನು ಶಿವಮೊಗ್ಗದ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ತಾಲೂಕಿನ ಓರ್ವ ವ್ಯಕ್ತಿ ಸೋಮವಾರ ಗುಣಮುಖರಾಗಿ ಮನೆಗೆ ಮರಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga: ತ್ಯಾವರೆಕೊಪ್ಪ ಧಾಮದಲ್ಲಿ ಮೃತಪಟ್ಟ ಹೆಣ್ಣು ಹುಲಿ ಅಂಜನಿ
Shimoga; ಮನೆಯಂಗಳದಿಂದ ನಾಯಿ ಹೊತ್ತೊಯ್ದ ಚಿರತೆ; ಸಿಸಿಕ್ಯಾಮರಾದಲ್ಲಿ ದೃಶ್ಯ ಸೆರೆ
Anandapura: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ; ತಪ್ಪಿದ ಅನಾಹುತ
ಸಾಗರಕ್ಕೆ ಆಗಮಿಸಿದ ಡಾ.ನಾ.ಡಿಸೋಜಾ ಪಾರ್ಥಿವ ಶರೀರ; ಗಣ್ಯರು, ಅಧಿಕಾರಿಗಳಿಂದ ಅಂತಿಮ ದರ್ಶನ
Hosanagar: ಪ್ರಪಾತಕ್ಕೆ ಉರುಳಿದ ಬಸ್; ಸಣ್ಣ ಪುಟ್ಟ ಗಾಯಗಳಿಂದ ಪ್ರಯಾಣಿಕರು ಪಾರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.