ಸಾಗರದಲ್ಲಿ 9 ಕೆಎಫ್‌ಡಿ ಕೇಸ್ ನೆಗೆಟಿವ್
ತೀರ್ಥಹಳ್ಳಿ 13-ಸಿದ್ದಾಪುರ 7-ಸೊರಬ ಹಾಗೂ ಚಿಕ್ಕಮಗಳೂರು ಜಿಲ್ಲೆ ಕೊಪ್ಪದಲ್ಲಿ ತಲಾ ಒಂದು ನೆಗೆಟಿವ್
Team Udayavani, Apr 11, 2020, 1:32 PM IST
ಸಾಗರ: ಮಾರಲಗೋಡಿನಲ್ಲಿ ತುಮರಿ ಗ್ರಾಪಂ ಅಧ್ಯಕ್ಷ ಜಿ.ಟಿ.ಸತ್ಯನಾರಾಯಣ ಕರೂರು ಆರೋಗ್ಯ ಇಲಾಖೆ ಹಾಗೂ ಗ್ರಾಮಸ್ಥರ ಸಭೆ ನಡೆಸಿದರು.
ಸಾಗರ: ತಾಲೂಕಿನ ಒಂಭತ್ತು ಪ್ರಕರಣಗಳಲ್ಲಿ ಮಂಗನ ಕಾಯಿಲೆಯ ವೈರಸ್ ಪತ್ತೆಯಾಗಿಲ್ಲ ಎಂಬ ಮಾಹಿತಿ ದೊರೆತಿದೆ. ಕಾರ್ಗಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ನಾಲ್ಕು, ತುಮರಿಯ 2 ಹಾಗೂ ಆವಿನಹಳ್ಳಿ, ಬ್ಯಾಕೋಡು, ಅರಳಗೋಡು ಪಿಎಚ್‌ಸಿ ವ್ಯಾಪ್ತಿಯ ತಲಾ ಒಂದು ಪ್ರಕರಣಗಳಲ್ಲಿ ರಕ್ತವನ್ನು ಪರೀಕ್ಷೆಗಾಗಿ ವಿಡಿಎಲ್‌ಗೆ ಕಳುಹಿಸಲಾಗಿತ್ತು. ಈ ಮಧ್ಯೆ ಮೂರು ದಿನಗಳಲ್ಲಿ ಎರಡು ಕೆಎಫ್‌ಡಿ ಪಾಸಿಟಿವ್ ಕಾಣಿಸಿದ ತುಮರಿ ಗ್ರಾಪಂ ವ್ಯಾಪ್ತಿಯ ಮಾರಲಗೋಡಿನಲ್ಲಿ ತುಮರಿ ಗ್ರಾಪಂ ಅಧ್ಯಕ್ಷ ಜಿ.ಟಿ.ಸತ್ಯನಾರಾಯಣ ಕರೂರು ಆರೋಗ್ಯ ಇಲಾಖೆ ಜೊತೆ ಗ್ರಾಮಸ್ಥರೊಂದಿಗೆ ಗುರುವಾರ ಪರಿಶೀಲನಾ ಸಭೆ ನಡೆಸಿದರು.
ಅರಣ್ಯ ಇಲಾಖೆಯ ಫಾರೆಸ್ಟರ್ ರಾಘವೇಂದ್ರ, ಗಾರ್ಡ್ ರಾಜೇಶ್ವರಪ್ಪ, ಎಪಿಎಂಸಿ ಸದಸ್ಯರಾದ ಓಂಕಾರ್ ಜೈನ್, ಸದಸ್ಯರಾದ ಲೋಕಣ್ಣ, ಸುಮಿತ್ರಾ, ಜಡಿ ಕೃಪಾ, ಆರೋಗ್ಯ ಕಾರ್ಯಕರ್ತೆ ರಾಜೇಶ್ವರಿ, ಆಶಾ ಕಾರ್ಯಕರ್ತೆ ಚಂದ್ರಕಲಾ ಮತ್ತು ರುಕ್ಮಿಣಿ, ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ಕಮಲಮ್ಮ ಹಾಗೂ ಮಂಗನ ಕಾಯಿಲೆಯಿಂದ ಗುಣಮುಖರಾಗುತ್ತಿರುವ ತುಮರಿ ಸೊಸೈಟಿ ನಿರ್ದೇಶಕ ಮಂಜಪ್ಪ ಹೆಸಿಗೆ ಅನುಭವಗಳನ್ನು ಹಂಚಿಕೊಂಡರು.
ಕಾಡಿನ ಜತೆ ಇರುವ ಸಂಬಂಧ ಕಡಿದುಕೊಳ್ಳದಿದ್ದರೆ, ಮುನ್ನೆಚ್ಚರಿಕೆ ಇಡದೇ ಇದ್ದರೆ ಮಂಗನ ಕಾಯಿಲೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ದರಕು, ಕಟ್ಟಿಗೆ, ಮಾವಿನಕಾಯಿ, ವಾಟೆಕಾಯಿ ಹುಡುಕಲು ಸ್ಥಗಿತಗೊಳಿಸುವುದು ಅನಿವಾರ್ಯ. ಸತ್ತ ಮಂಗ ತಿನ್ನುತ್ತಿರುವ ನಾಯಿಗಳ ಬಗ್ಗೆ ಎಚ್ಚರ ಮತ್ತು ನಿಯಂತ್ರಣ ಕೂಡ ಮುಖ್ಯವಾಗುತ್ತದೆ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡಲಾಯಿತು. ಉಳಿದೆಡೆ ಪಾಸಿಟಿವ್: ವಿಡಿಎಲ್ ವರದಿಯನ್ವಯ ತಾಲೂಕಿನ ಪಕ್ಕದ ಸಿದ್ದಾಪುರದಲ್ಲಿ ನಾಲ್ಕು ಹಾಗೂ ತೀರ್ಥಹಳ್ಳಿಯ ಒಂದು ಪ್ರಕರಣದಲ್ಲಿ ಮಂಗನ ಕಾಯಿಲೆ ದೃಢಪಟ್ಟಿದೆ. ವಿಡಿಎಲ್ ಒಟ್ಟು 36 ರಕ್ತದ ಸ್ಯಾಂಪಲ್ ಪರಿಶೀಲಿಸಿದ್ದು, ಸಾಗರದ 9 ಪ್ರಕರಣಗಳನ್ನು ಹೊರತುಪಡಿಸಿ ತೀರ್ಥಹಳ್ಳಿಯ 13, ಸಿದ್ದಾಪುರದ 7, ಸೊರಬ ಹಾಗೂ ಚಿಕ್ಕಮಂಗಳೂರು ಜಿಲ್ಲೆ ಕೊಪ್ಪದ ತಲಾ ಒಂದು ಪ್ರಕರಣಗಳಲ್ಲಿ ಕೆಎಫ್‌ಡಿ ವೈರಸ್ ನೆಗೆಟಿವ್ ಬಂದಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೈಕ್ ನಲ್ಲಿ ಚಲಿಸುತ್ತಿದ್ದ ವೇಳೆ ತುಂಡಾಗಿ ಬಿದ್ದ ಕೊಂಬೆ;ಸವಾರರಿಗೆ ಗಂಭೀರ ಗಾಯ, ಮೂಳೆ ಮುರಿತ
ಶಿವಮೊಗ್ಗದಲ್ಲಿ ಹೆಚ್ಚಾಯ್ತು ಪುಂಡರ ಹಾವಳಿ… ಕಚೋರಿ ವ್ಯಾಪಾರಿಗೆ ಚಾಕು ಇರಿದು ಪರಾರಿ
State Govt ಗೋ ಹಂತಕರಿಗೆ ಬೆಂಬಲ ನೀಡುತ್ತಿದೆ, ಹಿಂದೂಗಳನ್ನು ನಿರ್ಲಕ್ಷಿಸುತ್ತಿದೆ:ಈಶ್ವರಪ್ಪ
Congress: ಪಕ್ಷದ ಶಾಸಕರು ಹೈಕಮಾಂಡ್ ಸೂಚನೆ ಪಾಲಿಸುವ ವಿಶ್ವಾಸವಿದೆ: ಬೇಳೂರು ಗೋಪಾಲಕೃಷ್ಣ
KFD: ಈ ವರ್ಷದ ಮೊದಲ ಪ್ರಕರಣ ಪತ್ತೆ; ಇಬ್ಬರಿಗೆ ಪಾಸಿಟಿವ್
MUST WATCH
ಹೊಸ ಸೇರ್ಪಡೆ
ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್ ಚಿರತೆ ಸೆರೆ ಕಾರ್ಯಾಚರಣೆ ಸ್ಥಗಿತ
Hubballi: ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕಕ್ಕೆ ವಿಧ್ಯುಕ್ತ ಚಾಲನೆ
Chikkaballapura: “ಈಶ’ದಲ್ಲಿ 54 ಅಡಿ ಎತ್ತರದ ತ್ರಿಶೂಲ ಲೋಕಾರ್ಪಣೆ
Chamarajpete: ಕೆಚ್ಚಲು ಕೊಯ್ದ ಕೇಸ್; 3 ಲಕ್ಷ ರೂ.ಮೌಲ್ಯದ 3 ಹಸು ಕೊಡಿಸಿದ ಸಚಿವ ಜಮೀರ್
Udupi: ಗೀತಾರ್ಥ ಚಿಂತನೆ-157: ಸೂಕ್ಷ್ಮ ಜಗತ್ತೂ, ಸ್ಥೂಲ ಜಗತ್ತೂ ಅನಂತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.