ಸಾಗರ: ಎಂಡಿಎಫ್ ಹಲ್ಲೆ ಪ್ರಕರಣ; ಕೊನೆಗೂ ಎಫ್‌ಐಆರ್ ದಾಖಲು
Team Udayavani, Jul 15, 2022, 6:49 PM IST
ಸಾಗರ: ಕಳೆದ ಮೂರು ತಿಂಗಳಿನಿಂದ ಹಗ್ಗ ಜಗ್ಗಾಟಕ್ಕೆ ಕಾರಣವಾಗಿದ್ದ ನಗರದ ಪ್ರತಿಷ್ಠಿತ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಸರ್ವ ಸದಸ್ಯರ ಸಭೆಯಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಗರ ಗ್ರಾಮಾಂತರ ಠಾಣೆಯಲ್ಲಿ ಒಟ್ಟು 19 ಜನರ ವಿರುದ್ಧ ಎಂಡಿಎಫ್‌ನ ಮಾಜಿ ಉಪಾಧ್ಯಕ್ಷ ಶ್ರೀಪಾದಹೆಗಡೆ ನಿಸರಾಣಿ ದೂರಿಗೆ ಸಂಬಂಧಿಸಿ ಎಫ್‌ಐಆರ್ ಗುರುವಾರ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸದಾಗಿ ದೂರು ಪಡೆಯಲಾಗಿದೆ.
ದೂರಿನಲ್ಲಿ ಮೂಡಳ್ಳಿ ಹರೀಶ್, ಅರುಣ್ ಕುಗ್ವೆ, ಗಣೇಶ್ ಕುಗ್ವೆ, ಬಿಜೆಪಿ ನಗರ ಅಧ್ಯಕ್ಷ ಗಣೇಶ್ ಪ್ರಸಾದ್, ಮಾಜಿ ತಾಪಂ ಸದಸ್ಯ ದೇವೇಂದ್ರಪ್ಪ ಯಲಕುಂದ್ಲಿ, ಹಾಲಪ್ಪ ಅವರ ಕುಟುಂಬದ ರವಿ ಬಸರಾಣಿ, ವಿನೋದ್‌ರಾಜ್, ಅರುಣ ಸೂರನಗದ್ದೆ, ಸಂತೋಷ ಅಣಲೆಕೊಪ್ಪ, ಸಿರಿವಂತೆ ಗುರು, ಅಮರ ಚಿಪ್ಳಿ, ಕತ್ತಿರಾಜು, ಜಯಂತ ಸೂರನಗದ್ದೆ, ಲೋಹಿತ್ ಪುರದಾಳು, ಮಹೇಶ್ ಮೊಗವೀರ, ಸೂರನಗದ್ದೆ ರವಿ, ಮಂಜ, ಗಿರೀಶ್‌ಗೌಡ ಗುಳೇಹಳ್ಳಿ, ಪ್ರಶಾಂತ ಮುಡುಬ, ವಿನಯ ಪೂಜಾರಿ, ಪರಶು ಗೋಪಾಲಗೌಡ ನಗರ, ಸೂರನಗದ್ದೆ ಶಶಿ, ಜಯಂತ ಸೂರನಗದ್ದೆ, ಪ್ರಶಾಂತ, ಜಂಬಾನಿ ಸಂತೋಷ ಎಂಬುವವರು ಹೆಸರಿಸಿ, ಹಲ್ಲೆ ಮಾಡಿ, ಜೀವ ಭಯ ತಂದೊಡ್ಡಿದ್ದಾರೆ ಎಂದು ಆರೋಪಿಸಿದ್ದಾರೆ.
ಮಾರ್ಚ್ 17 ರಂದು ಎಲ್‌ಬಿ ಮತ್ತು ಎಸ್‌ಬಿಎಸ್ ಕಾಲೇಜು ಆವರಣದಲ್ಲಿನ ದೇವರಾಜ ಅರಸು ಸಭಾಂಗಣದಲ್ಲಿ ನಡೆದ ಎಂಡಿಎಫ್ ಸರ್ವಸದಸ್ಯರ ಸಭೆಯಲ್ಲಿ ಸದಸ್ಯರಲ್ಲದವರು ಏಕಾಏಕಿ ಶಾಸಕರ ಚಿತಾವಣೆಯಿಂದ ನುಗ್ಗಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಗೌಡರು, ನನಗೆ ಹಾಗೂ ನನ್ನ ಪತ್ನಿಗೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thirthahalli: ಅದ್ಧೂರಿಯಾಗಿ ನಡೆದ ಎಳ್ಳಮಾವಾಸ್ಯೆ ರಥೋತ್ಸವ
ತೀರ್ಥಹಳ್ಳಿಯಲ್ಲಿ ವೈಭವದ ಜಾತ್ರೆ; ಬುರ್ಖಾ ಧರಿಸಿದ್ದ ಅನಾಮಧೇಯ ವ್ಯಕ್ತಿ ಪತ್ತೆ !
Anandapur: ತೋಟಕ್ಕೆ ಕಾಡಾನೆ ಹಾವಳಿ… ಅಧಿಕಾರಿಗಳ ನಿರ್ಲಕ್ಷಕ್ಕೆ ಗ್ರಾಮಸ್ಥರ ಆಕ್ರೋಶ
Anandapura: ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು
Shimoga: ರಿಪ್ಪನ್ ಪೇಟೆ ಸಮೀಪ ಹಿಟ್ ಅಂಡ್ ರನ್; ಬೈಕ್ ಸವಾರ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mysuru: ಇನ್ಫೋಸಿಸ್ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್ ಫ್ರಂ ಹೋಂ
Professional Life: ಚಿತ್ರರಂಗಕ್ಕೆ ನಟ ದರ್ಶನ್ ಮರುಪ್ರವೇಶ!
Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ
Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ
Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್.ಷಡಾಕ್ಷರಿ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.