ಮುಕ್ತಿ ವಾಹನವೀಗ ಕೋವಿಡ್ ಜಾಗೃತಿ ರಥ!
Team Udayavani, Apr 11, 2020, 5:56 PM IST
ಸಾಗರ: ಮಾರಿಕಾಂಬಾ ವ್ಯವಸ್ಥಾಪಕ ಸಮಿತಿಯಿಂದ ಮುಕ್ತಿ ವಾಹಿನಿ ಮೂಲಕ ಕೋವಿಡ್ ಜಾಗೃತಿ ಮೂಡಿಸಲಾಗುತ್ತಿದೆ.
ಸಾಗರ: ಶವಗಳನ್ನು ಸಾಗಿಸುವ ನಗರದ ಮಾರಿಕಾಂಬಾ ಸಮಿತಿಯ ಮುಕ್ತಿ ವಾಹನ ಈಗ ಗಂಟೆ ಬಾರಿಸುತ್ತ ನಗರದ ಬೀದಿ ಬೀದಿಗಳಲ್ಲಿ ಸಂಚರಿಸುತ್ತಿದೆ. ಕೋವಿಡ್ ವೈರಸ್ ಹಿನ್ನೆಲೆಯಲ್ಲಿ ಜನಜಾಗೃತಿ ವಹಿಸದಿದ್ದರೆ ಎದುರಾಗಬಹುದಾದ ಪರಿಸ್ಥಿತಿಯನ್ನು ಈ ವಾಹನ ಸಂಕೇತಿಸುತ್ತಿದೆ.
ತಾಲೂಕು ಆಡಳಿತದ ಅನುಮತಿ ಪಡೆದು ಸಾಗರದ ಮಾರಿಕಾಂಬಾ ಸಮಿತಿ ಮುಕ್ತಿ ವಾಹನವನ್ನು ಕೋವಿಡ್ ಜಾಗೃತಿ ಮೂಡಿಸುವ ರಥವನ್ನಾಗಿ ಪರಿವರ್ತಿಸಿದೆ. ಬೆಳಗ್ಗೆ 7ರಿಂದ 12ರ ವರೆಗೆ, ಸಂಜೆ 6ರಿಂದ 8 ಗಂಟೆ ವರೆಗೆ ಈ ವಾಹನ ಓಡಾಡುತ್ತದೆ. ಶವ ಮಲಗಿಸುವ ಪೆಟ್ಟಿಗೆಯ ಹಿಂಭಾಗದಲ್ಲಿ ಕೋಣನ ಎರಡು ಕೊಂಬುಗಳನ್ನು ಅಳವಡಿಸಲಾಗಿದೆ. ಬಣ್ಣದ ಲೈಟ್‌ಗಳಿವೆ.
ಸಮಿತಿಯ ಖಜಾಂಚಿ ನಾಗೇಂದ್ರ ಕುಮಟಾ ರಂಗಕರ್ಮಿಯೂ ಆಗಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಅದ್ಭುತ ವಿವರಣೆಯೊಂದನ್ನು ರೆಕಾರ್ಡಿಂಗ್ ಮಾಡಿಕೊಟ್ಟಿದ್ದಾರೆ. ಬಂಧುಗಳೇ, ಹೊರಗೆ ಬರಬೇಡಿ. ಕೋವಿಡ್ ನಿಮ್ಮನ್ನು ಅಪ್ಪಿಕೊಳ್ಳುತ್ತದೆ. ನಿಮ್ಮ ಸಾವು ಖಚಿತ. ಮುಕ್ತಿ ವಾಹಿನಿಯ ರಥವೇರಬೇಕೇ? ಹೊರಬನ್ನಿ. ಸುಮ್ಮನೇ ತಿರುಗಬೇಡಿ. ನೀವು ಹಾಗೂ ನಿಮ್ಮ ಕುಟುಂಬದ ಬದುಕು ನಿಮ್ಮ ಕೈಯಲ್ಲಿದೆ. ಸರ್ಕಾರ ನಿಮ್ಮ ಜೊತೆಯಲ್ಲಿದೆ. ದಯಮಾಡಿ ಸಹಕರಿಸಿ. ದೇಶವನ್ನು ಕೊರೊನಾ ಮುಕ್ತವನ್ನಾಗಿಸುವಾ ಬನ್ನಿ ಎಂಬ ಜಾಗೃತಿ ವಾಕ್ಯ ಮೈಕ್‌ನಲ್ಲಿ ಮೊಳಗುತ್ತದೆ.
ಮುಕ್ತಿ ವಾಹನ ಹಲವರಿಗೆ ಅಪಶಕುನ ಸೂಚಕ. ಹಾಗಾಗಿ, ಕೆಲವರು ಇದನ್ನು ನೋಡಿ ದೂರದಿಂದಲೇ ಓಡಿದರೆ, ಕೆಲವರು ರಥ ನೋಡಿ ಕೈ ಮುಗಿದು ಸಾಗುತ್ತಿದ್ದಾರೆ. ಮುಕ್ತಿ ವಾಹನ ಜನರಲ್ಲಿ ಭಯ ಮತ್ತು ಭಕ್ತಿ ಎರಡನ್ನೂ ಮೂಡಿಸುತ್ತಿದ್ದು, ಕೋವಿಡ್ ಜಾಗೃತಿ ಮೂಲಕ ಜನರನ್ನು ಎಚ್ಚರಿಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೈಕ್ ನಲ್ಲಿ ಚಲಿಸುತ್ತಿದ್ದ ವೇಳೆ ತುಂಡಾಗಿ ಬಿದ್ದ ಕೊಂಬೆ;ಸವಾರರಿಗೆ ಗಂಭೀರ ಗಾಯ, ಮೂಳೆ ಮುರಿತ
ಶಿವಮೊಗ್ಗದಲ್ಲಿ ಹೆಚ್ಚಾಯ್ತು ಪುಂಡರ ಹಾವಳಿ… ಕಚೋರಿ ವ್ಯಾಪಾರಿಗೆ ಚಾಕು ಇರಿದು ಪರಾರಿ
State Govt ಗೋ ಹಂತಕರಿಗೆ ಬೆಂಬಲ ನೀಡುತ್ತಿದೆ, ಹಿಂದೂಗಳನ್ನು ನಿರ್ಲಕ್ಷಿಸುತ್ತಿದೆ:ಈಶ್ವರಪ್ಪ
Congress: ಪಕ್ಷದ ಶಾಸಕರು ಹೈಕಮಾಂಡ್ ಸೂಚನೆ ಪಾಲಿಸುವ ವಿಶ್ವಾಸವಿದೆ: ಬೇಳೂರು ಗೋಪಾಲಕೃಷ್ಣ
KFD: ಈ ವರ್ಷದ ಮೊದಲ ಪ್ರಕರಣ ಪತ್ತೆ; ಇಬ್ಬರಿಗೆ ಪಾಸಿಟಿವ್
MUST WATCH
ಹೊಸ ಸೇರ್ಪಡೆ
ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್ ಚಿರತೆ ಸೆರೆ ಕಾರ್ಯಾಚರಣೆ ಸ್ಥಗಿತ
Hubballi: ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕಕ್ಕೆ ವಿಧ್ಯುಕ್ತ ಚಾಲನೆ
Chikkaballapura: “ಈಶ’ದಲ್ಲಿ 54 ಅಡಿ ಎತ್ತರದ ತ್ರಿಶೂಲ ಲೋಕಾರ್ಪಣೆ
Chamarajpete: ಕೆಚ್ಚಲು ಕೊಯ್ದ ಕೇಸ್; 3 ಲಕ್ಷ ರೂ.ಮೌಲ್ಯದ 3 ಹಸು ಕೊಡಿಸಿದ ಸಚಿವ ಜಮೀರ್
Udupi: ಗೀತಾರ್ಥ ಚಿಂತನೆ-157: ಸೂಕ್ಷ್ಮ ಜಗತ್ತೂ, ಸ್ಥೂಲ ಜಗತ್ತೂ ಅನಂತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.