ಸಮರ್ಥ ಆಡಳಿತಕ್ಕೆ ಸಂದ ಗೆಲುವು: ಶಾಸಕ ಹಾಲಪ್ಪ
Team Udayavani, Dec 15, 2021, 7:37 PM IST
ಸಾಗರ: ಸೊರಬ ರಸ್ತೆಯನ್ನು ಅಗಲೀಕರಣಗೊಳಿಸುವಮೂಲಕ ಊರನ್ನು ಮಾದರಿಯಾಗಿ ರೂಪಿಸುವ ನಮ್ಮಉದ್ದೇಶಕ್ಕೆ ಕೆಲವರು ಅಡ್ಡಗಾಲು ಹಾಕುತ್ತಿದ್ದಾರೆ. ಚಿನ್ನಿದಾಂಡು ಆಡುವವರು ಇದಕ್ಕೆ ಪರೋಕ್ಷವಾಗಿ ಪ್ರಚೋದನೆ ನೀಡುತ್ತಿದ್ದಾರೆ.
ಚಿನ್ನಿದಾಂಡು ಆಡುವವರು ಹಾಗೆಯೇ ಆಡಿಕೊಂಡು ಇರಲಿ.ನಾವು ಅಭಿವೃದ್ಧಿಯಿಂದ ಹಿಂದೆ ಸರಿಯುವುದು ಬೇಡ ಎಂದುಶಾಸಕ ಎಚ್.ಹಾಲಪ್ಪ ಹರತಾಳು ವ್ಯಂಗ್ಯವಾಗಿ ಮಾಜಿ ಶಾಸಕಗೋಪಾಲಕೃಷ್ಣ ಬೇಳೂರು ಅವರ ಹೆಸರು ಪ್ರಸ್ತಾಪಿಸದೆಟೀಕಿಸಿದರು.ಇಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ಮಂಗಳವಾರಶಿವಮೊಗ್ಗ ವಿಧಾನ ಪರಿಷತ್ ಕ್ಷೇತ್ರದಿಂದ ಡಿ.ಎಸ್.ಅರುಣ್‌ವಿಜೇತರಾದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ವಿಜಯೋತ್ಸವಕಾರ್ಯಕ್ರಮದಲ್ಲಿ ಅವರು ಸಿಹಿ ವಿತರಿಸಿ ಮಾತನಾಡಿದರು.
ಸೊರಬ ರಸ್ತೆ ಅಗಲೀಕರಣಕ್ಕೆ ಸಂಬಂಧಪಟ್ಟಂತೆ ಪಕ್ಷದಪ್ರಮುಖರು ಸ್ಥಳೀಯರ ಮನವೊಲಿಸುವ ಪ್ರಯತ್ನಕ್ಕೆಸಹಕಾರ ನೀಡಬೇಕು. ಶಿವಾಜಿ ರಸ್ತೆ ಮತ್ತು ಮಾರಿಕಾಂಬಾರಸ್ತೆ ಅಭಿವೃದ್ಧಿಗೆ ಒತ್ತಾಯಿಸಿ ಕಾಗೋಡು ತಿಮ್ಮಪ್ಪ ಅವರುಪ್ರತಿಭಟನೆ ಮಾಡಿದ್ದು ಗಮನದಲ್ಲಿದೆ. ನಗರದ ಪ್ರತಿ ವಾಡ್ìನ ರಸ್ತೆಗೆ ತಲಾ 10 ಲಕ್ಷ ರೂ. ತೆಗೆದಿರಿಸಲಾಗಿದೆ ಎಂದರು.ಸಾಗರದ ಗಣಪತಿ ದೇವಸ್ಥಾನ ಅಭಿವೃದ್ಧಿಗೆ 50 ಲಕ್ಷರೂ. ಮಂಜೂರು ಮಾಡಿಸಿದ್ದೇನೆ.
ದೇವಸ್ಥಾನದ ಸುತ್ತಲೂಕಾಂಪೌಂಡ್, ಉದ್ಯಾನವನ, ವಿಮಾನಗೋಪುರ ಸೇರಿದಂತೆವಿವಿಧ ಅಭಿವೃದ್ಧಿ ಕೆಲಸಕ್ಕೆ ಚಿಂತನೆ ನಡೆಸಲಾಗಿದೆ. ಸುಮಾರು2 ಕೋಟಿ ರೂ. ವೆಚ್ಚದಲ್ಲಿ ಗಣಪತಿ ದೇವಸ್ಥಾನ ಸಂಪೂರ್ಣಅಭಿವೃದ್ಧಿಗೆ ಗಮನ ಹರಿಸಲಾಗುತ್ತಿದೆ. ಕಾಶಿಯಲ್ಲಿಪ್ರಧಾನಿ ಮೋದಿ ಅವರು ದಿವ್ಯಕಾಶಿ, ಭವ್ಯಕಾಶಿ ಯೋಜನೆಕೈಗೆತ್ತಿಕೊಂಡಂತೆ ಗಣಪತಿ ಕೆರೆಯನ್ನು ಸಹ ಅಭಿವೃದ್ಧಿಮಾಡುವ ಸಂಕಲ್ಪ ಕೈಗೊಳ್ಳಬೇಕು ಎಂದು ತಿಳಿಸಿದರು.
ಬಿ.ಎಸ್.ಯಡಿಯೂರಪ್ಪ ಅವರ ಮಾರ್ಗದರ್ಶನ,ಮುಖ್ಯಮಂತ್ರಿ ಬೊಮ್ಮಾಯಿ ಅವರ ಸಮರ್ಥ ಆಡಳಿತಹಾಗೂ ವಿಶ್ವವೇ ಮೆಚ್ಚುವ ಮೋದಿ ಅವರ ಆಡಳಿತವೈಖರಿಯಿಂದ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿನಿರೀಕ್ಷೆಯಂತೆ ಅರುಣ್ ಗೆಲುವು ಸಾ ಧಿಸಿದ್ದಾರೆ. ಜಿಲ್ಲೆಯಲ್ಲಿಆರಗ ಜ್ಞಾನೇಂದ್ರ ಮತ್ತು ಕೆ.ಎಸ್. ಈಶ್ವರಪ್ಪ ಅವರ ಪರಿಶ್ರಮಮತ್ತು ಡಿ.ಎಸ್. ಶಂಕರಮೂರ್ತಿ ಅವರ ಮಾರ್ಗದರ್ಶನದಲ್ಲಿಚುನಾವಣೆ ನಡೆಸಲಾಗಿತ್ತು. ಚುನಾವಣೆಯಲ್ಲಿ ಗ್ರಾಮಾಂತರಮತ್ತು ನಗರ ಮಟ್ಟದ ಸಮಿತಿ ಅತ್ಯುತ್ತಮವಾಗಿ ಕೆಲಸ ಮಾಡಿನಮ್ಮ ಅಭ್ಯರ್ಥಿ ಗೆಲುವಿಗೆ ಶ್ರಮಿಸಿದ್ದಾರೆ.
ಶ್ರದ್ಧಾಭಕ್ತಿಯಿಂದ,ಕಾರ್ಯಕರ್ತರ ಪರಿಶ್ರಮದಿಂದ ಚುನಾವಣೆಯಲ್ಲಿಗೆಲುವು ದಾಖಲಿಸಲಾಗಿದೆ. ಪಕ್ಷದ ಕಾರ್ಯಕರ್ತರುಹಿರಿಯರ ಮಾರ್ಗದರ್ಶನ ಪರಿಪಾಲಿಸಬೇಕು ಎಂದರು.ವಿಜಯೋತ್ಸವವನ್ನುದ್ದೇಶಿಸಿ ಗ್ರಾಮಾಂತರ ಘಟಕದ ಅಧ್ಯಕ್ಷಲೋಕನಾಥ ಬಿಳಿಸಿರಿ, ನಗರ ಘಟಕದ ಅಧ್ಯಕ್ಷ ಗಣೇಶಪ್ರಸಾದ್,ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಬಿಜೆಪಿ ರಾಜ್ಯಕಾರ್ಯಕಾರಿಣಿ ಸದಸ್ಯೆ ಶರಾವತಿ ಸಿ. ರಾವ್ ಮಾತನಾಡಿದರು.
ಎಪಿಎಂಸಿ ಅಧ್ಯಕ್ಷ ಚೇತನರಾಜ್ ಕಣ್ಣೂರು, ನಗರಸಭೆಉಪಾಧ್ಯಕ್ಷ ವಿ. ಮಹೇಶ್, ಪ್ರಮುಖರಾದ ಸಂತೋಷ್‌ಶೇಟ್, ಸತೀಶ್ ಕೆ., ದೇವೇಂದ್ರಪ್ಪ, ಮೈತ್ರಿ ಪಾಟೀಲ್,ಪ್ರೇಮ ಕಿರಣ್ ಸಿಂಗ್, ಸವಿತಾ ವಾಸು, ಶ್ರೀನಿವಾಸ್ ಮೇಸ್ತ್ರಿ,ಅರವಿಂದ ರಾಯ್ಕರ್, ಹರೀಶ್ ಮೂಡಳ್ಳಿ, ಪರಶುರಾಮ್,ಪುರುಷೋತ್ತಮ್, ಸತೀಶ್ ಬಾಬು ಇನ್ನಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Shimoga: ಮಲೆನಾಡಿನಲ್ಲಿ ಮುಂದುವರಿದ ಕಾಡಾನೆ ಕಾಟ; ಇಲಾಖೆ ವಿರುದ್ದ ರೈತರ ಆಕ್ರೋಶ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.