Sagara: ತಾಯಿ ಮಗು ಆಸ್ಪತ್ರೆಯ ಪ್ರಸೂತಿ ತಜ್ಞರ ಅಮಾನತುಗೊಳಿಸುವಂತೆ ಆಗ್ರಹ


Team Udayavani, Oct 3, 2024, 5:12 PM IST

Sagara: ತಾಯಿಮಗು ಆಸ್ಪತ್ರೆಯ ಪ್ರಸೂತಿ ತಜ್ಞರ ಅಮಾನತು; ಸುಧೀಂದ್ರ ಆಗ್ರಹ

ಸಾಗರ: ಶಸ್ತ್ರಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ನಾಲ್ಕು ತಿಂಗಳ ಬಾಣಂತಿಗೆ ಕಪಾಳಮೋಕ್ಷ ಮಾಡಿ, ಮಹಿಳೆ ಅನಾರೋಗ್ಯಕ್ಕೆ ಒಳಗಾಗುವಂತೆ ಮಾಡಿರುವ ತಾಯಿಮಗು ಆಸ್ಪತ್ರೆಯ ಪ್ರಸೂತಿ ತಜ್ಞ ಡಾ. ನಾಗೇಂದ್ರಪ್ಪ ಅವರನ್ನು ತಕ್ಷಣ ಅಮಾನತುಗೊಳಿಸುವಂತೆ ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಸಹ ಸಂಚಾಲಕ ಕೆ.ಎಚ್.ಸುಧೀಂದ್ರ ಒತ್ತಾಯಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆ ಮೇಲೆ ಹಲ್ಲೆ ನಡೆಸಿದ ವೈದ್ಯ ಕರ್ತವ್ಯಕ್ಕೆ ರಜೆ ಹಾಕಿ ನಾಪತ್ತೆಯಾಗಿದ್ದಾರೆ. ಕನಿಷ್ಠ ಮಹಿಳೆ ಬಳಿ ಕ್ಷಮೆಯನ್ನು ಕೋರದೆ ನಾಪತ್ತೆಯಾಗಿರುವವರು ಕರ್ತವ್ಯಕ್ಕೆ ಹಾಜರಾದರೆ ಪ್ರತಿಭಟನೆ ನಡೆಸಲಾಗುತ್ತದೆ. ಶಾಸಕರು ತಕ್ಷಣ ಡಾ. ನಾಗೇಂದ್ರಪ್ಪ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.

ನಗರ ಠಾಣೆಗೆ ದೂರು ನೀಡಲು ಹೋದರೆ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ಮೀನಾಮೇಷ ಎಣಿಸುತ್ತಿರುವುದು ಅನೇಕ ಅನುಮಾನಕ್ಕೆ ಕಾರಣವಾಗಿದೆ. ಪೊಲೀಸರು ಯಾವುದೋ ಒತ್ತಡಕ್ಕೆ ಸಿಲುಕಿದ್ದಾರೆ ಎನ್ನುವ ಚರ್ಚೆ ನಡೆಯುತ್ತಿದೆ. ತಕ್ಷಣ ಪೊಲೀಸರು ಎಫ್‌ಐಆರ್ ದಾಖಲಿಸಿಕೊಳ್ಳಬೇಕು. ಇಲ್ಲವಾದಲ್ಲಿ ಉಪವಿಭಾಗಾಧಿಕಾರಿಗಳ ಕಚೇರಿ, ತಾಯಿಮಗು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ. ಸಾಗರಕ್ಕೆ ಇಂತಹ ವೈದ್ಯರ ಅಗತ್ಯವಿಲ್ಲ ಎಂದರು.

ಹಲ್ಲೆಗೊಳಗಾದ ಮಹಿಳೆಯ ಪತಿ ಲೋಕೇಶ್ ಮಾತನಾಡಿ, ಅ. 1ಕ್ಕೆ ನನ್ನ ಪತ್ನಿಯನ್ನು ಶಸ್ತ್ರಚಿಕಿತ್ಸೆಗೆಂದು ತಾಯಿಮಗು ಆಸ್ಪತ್ರೆಗೆ ಸೇರಿಸಲಾಗಿತ್ತು. ಶಸ್ತ್ರಚಿಕಿತ್ಸೆಗೆ ಡಾ. ನಾಗೇಂದ್ರಪ್ಪ ಮೂರು ಸಾವಿರ ರೂ. ಪಡೆದಿದ್ದಾರೆ. ಆಪರೇಶನ್ ಮಾಡಿ ವೀಲ್‌ಚೇರ್‌ನಲ್ಲಿ ನನ್ನ ಪತ್ನಿಯನ್ನು ವಾರ್ಡ್‌ಗೆ ಕಳಿಸಲಾಯಿತು. ಸಾಕಷ್ಟು ಸಮಯದ ನಂತರ ಆಕೆಗೆ ಪ್ರಜ್ಞೆ ಬಂದಾಗ ಡಾ. ನಾಗೇಂದ್ರಪ್ಪ ಕೆನ್ನೆಗೆ ಬಲವಾಗಿ ಹೊಡೆದಿರುವುದನ್ನು ತಿಳಿಸಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿದರೆ ವೈದ್ಯರು ಹಾರಿಕೆ ಉತ್ತರ ನೀಡುತ್ತಾರೆ. ನನ್ನ ಪತ್ನಿ ನಾಲ್ಕು ತಿಂಗಳ ಬಾಣಂತಿಯಾಗಿದ್ದು, ಚಿಕ್ಕ ಮಗು ಇದೆ. ಬಾಣಂತಿ ಮೇಲೆ ಏಕೆ ಕೈಮಾಡಿದ್ದಾರೆ ಎನ್ನುವುದು ಅರ್ಥವಾಗುತ್ತಿಲ್ಲ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಪ್ರಕರಣ ದಾಖಲು ಮಾಡದೆ ನಮ್ಮನ್ನು ಸತಾಯಿಸುತ್ತಿದ್ದಾರೆ. ನನ್ನ ಪತ್ನಿಗೆ ಆಗಿರುವ ತೊಂದರೆ ಬೇರೆ ಯಾರಿಗೂ ಬರಬಾರದು. ವೈದ್ಯರ ವಿರುದ್ಧ ಸಾಕಷ್ಟು ದೂರುಗಳಿದ್ದು ತಕ್ಷಣ ಅವರನ್ನು ಅಮಾನತು ಮಾಡಿ ಎಂದು ಒತ್ತಾಯಿಸಿದರು.

ಮೊಗವೀರ ಮಹಾಜನ ಸಂಘದ ಅಧ್ಯಕ್ಷ ನಾಗರಾಜ ಬಿಲಗುಂಜಿ, ಹರೀಶ್ ಮಾತನಾಡಿದರು. ಗೋಷ್ಠಿಯಲ್ಲಿ ರಾಘವೇಂದ್ರ ಕಾಮತ್ ಹಾಜರಿದ್ದರು.

ಟಾಪ್ ನ್ಯೂಸ್

1-redddi

Ballari;13 ವರ್ಷದ ಬಳಿಕ ಜನಾರ್ದನ ರೆಡ್ಡಿ ಗ್ರ್ಯಾಂಡ್ ಎಂಟ್ರಿ: ಅಭಿಮಾನಿಗಳ ಸಂಭ್ರಮಾಚರಣೆ

Sagara: ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಅಗತ್ಯ ನ್ಯಾಯ; ಮಧು ಬಂಗಾರಪ್ಪ ಭರವಸೆ

Sagara: ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಅಗತ್ಯ ನ್ಯಾಯ ಒದಗಿಸಲು ಬದ್ಧ; ಮಧು ಬಂಗಾರಪ್ಪ

Udupi: ಉಚ್ಚಿಲ ದಸರಾ 2024ಕ್ಕೆ ವಿದ್ಯುಕ್ತ ಚಾಲನೆ

Udupi: ಉಚ್ಚಿಲ ದಸರಾ 2024ಕ್ಕೆ ವಿದ್ಯುಕ್ತ ಚಾಲನೆ

balachandra

Corruption;ರಾಜೀನಾಮೆ ಕೊಡಬೇಕೆಂಬ ಬೇಡಿಕೆಗಳಿಗೆ ಈಗ ಬೆಲೆ ಕಡಿಮೆ: ಬಾಲಚಂದ್ರ ಜಾರಕಿಹೊಳಿ

Mahindra Thar ROXX: 60 ನಿಮಿಷಗಳಲ್ಲಿ 1,76,218 ಮಹೀಂದ್ರಾ ಥಾರ್‌ ರೊಕ್ಸ್‌ ಬುಕ್ಕಿಂಗ್!

Mahindra Thar ROXX: 60 ನಿಮಿಷಗಳಲ್ಲಿ 1,76,218 ಮಹೀಂದ್ರಾ ಥಾರ್‌ ರೊಕ್ಸ್‌ ಬುಕ್ಕಿಂಗ್!

1-dde

Mysore Dasara ವೇದಿಕೆಯಲ್ಲಿ ರಾಜಕೀಯ..; ಸಿದ್ದರಾಮಯ್ಯ ವಿರುದ್ಧ ಬಿಜೆಪಿ ತೀವ್ರ ಆಕ್ರೋಶ

121

Border 2: ಸನ್ನಿ ಡಿಯೋಲ್‌ ʼಬಾರ್ಡರ್-2‌ʼಗೆ ʼಫೌಜಿʼಯಾಗಿ ಬಂದ ಸುನಿಲ್‌ ಶೆಟ್ಟಿ ಪುತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sagara: ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಅಗತ್ಯ ನ್ಯಾಯ; ಮಧು ಬಂಗಾರಪ್ಪ ಭರವಸೆ

Sagara: ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಅಗತ್ಯ ನ್ಯಾಯ ಒದಗಿಸಲು ಬದ್ಧ; ಮಧು ಬಂಗಾರಪ್ಪ

Holehonnuru: ನದಿಯಲ್ಲಿ ಮುಳುಗಿ ಯುವಕ ನೀರುಪಾಲು

Holehonnuru: ನದಿಯಲ್ಲಿ ಮುಳುಗಿ ಯುವಕ ನೀರುಪಾಲು

ಹೊಳೆಹೊನ್ನೂರು: ವಿದ್ಯುತ್ ತಂತಿ ತಗುಲಿ ಯುವಕ ಮೃತ್ಯು

ಹೊಳೆಹೊನ್ನೂರು: ವಿದ್ಯುತ್ ತಂತಿ ತಗುಲಿ ಯುವಕ ಮೃತ್ಯು

High-Court

High Court: ರಾಷ್ಟ್ರದ ಹಿತಾಸಕ್ತಿ ಎದುರು ವ್ಯಕ್ತಿ ಸ್ವಾತಂತ್ರ್ಯಕ್ಕಿಲ್ಲ ಮನ್ನಣೆ

10

Anandapura ಬಳಿ ಕಾರು-ಬಸ್ಸು ಮುಖಾಮುಖಿ ಡಿಕ್ಕಿ; ತಪ್ಪಿದ ಅನಾಹುತ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Mangaluru: ಕಿಶೋರ್‌ ಕುಮಾರ್‌, ರಾಜು ಪೂಜಾರಿ ನಾಮಪತ್ರ ಸಲ್ಲಿಕೆ

Legislative Council By-election: ಕಿಶೋರ್‌ ಕುಮಾರ್‌, ರಾಜು ಪೂಜಾರಿ ನಾಮಪತ್ರ ಸಲ್ಲಿಕೆ

gold

Dharwad: ಖಾಸಗಿ ಬಸ್‌ನಲ್ಲಿ 77 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಜಪ್ತಿ

1

Gangolli: ನಿಂದನೆ, ಜೀವ ಬೆದರಿಕೆ: ದೂರು

Zebra Movie:  ಡಾಲಿ ‘ಜೀಬ್ರಾ’ಗೆ ಶಿವಣ್ಣ ಸಾಥ್‌

Zebra Movie: ಡಾಲಿ ‘ಜೀಬ್ರಾ’ಗೆ ಶಿವಣ್ಣ ಸಾಥ್‌

1-redddi

Ballari;13 ವರ್ಷದ ಬಳಿಕ ಜನಾರ್ದನ ರೆಡ್ಡಿ ಗ್ರ್ಯಾಂಡ್ ಎಂಟ್ರಿ: ಅಭಿಮಾನಿಗಳ ಸಂಭ್ರಮಾಚರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.