ಜವಳಿ ಅಂಗಡಿ ತೆರೆಯಲು ಅವಕಾಶ ನೀಡಿ
Team Udayavani, Apr 30, 2020, 5:28 PM IST
ಸಾಗರ: ಜವಳಿ ಅಂಗಡಿ ತೆರೆಯಲು ಅವಕಾಶ ನೀಡುವಂತೆ ಒತ್ತಾಯಿಸಿ ಜವಳಿ ವರ್ತಕರ ಸಂಘ ಎಸಿ ಕಚೇರಿಯಲ್ಲಿ ಮನವಿ ಸಲ್ಲಿಸಿತು
ಸಾಗರ: ನಗರ ವ್ಯಾಪ್ತಿಯಲ್ಲಿ ಜವಳಿ ಅಂಗಡಿಗಳನ್ನು ತೆರೆಯಲು ಅವಕಾಶ ನೀಡುವಂತೆ ಒತ್ತಾಯಿಸಿ ಬುಧವಾರ ಜವಳಿ ವರ್ತಕರ ಸಂಘದ ವತಿಯಿಂದ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಗಣಪತಿ ಸುಳಗೋಡು, ಜವಳಿ ಅಂಗಡಿಗಳನ್ನು ತೆರೆಯಲು ತಾಲೂಕು ಆಡಳಿತ ಅವಕಾಶ ನೀಡದೆ ಇರುವ ಕ್ರಮ ಖಂಡನೀಯ. ಇತರೆ ವಹಿವಾಟು ನಡೆಸಲು ಅವಕಾಶ ನೀಡಿ ನಮ್ಮನ್ನು ಕಡೆಗಣಿಸಿರುವುದು ಸರಿಯಲ್ಲ. ಗುರುವಾರದಿಂದ ತೆರೆಯಲು ಅವಕಾಶ ನೀಡದೆ ಹೋದಲ್ಲಿ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸುವ ಎಚ್ಚರಿಕೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್.ಜಯಂತ್ ಮಾತನಾಡಿ, ಸರ್ಕಾರ ಗ್ರೀನ್‌ಜೋನ್ ಇರುವ ಕಡೆಗಳಲ್ಲಿ ಅನೇಕ ನಿಯಮ ಸಡಿಲಗೊಳಿಸಿದೆ. ಆದರೆ ಜವಳಿ ವರ್ತಕರಿಗೆ ವ್ಯಾಪಾರ ನಡೆಸಲು ಅವಕಾಶ ನೀಡದ ಕ್ರಮ ಸರಿಯಲ್ಲ. ಲಾಕ್‌ಡೌನ್ ಆದ ನಂತರ ಸುಮಾರು 40 ಕೋಟಿ ಜನರು ನಿರುದ್ಯೋಗಿಗಳಾಗಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಜನರು ದಂಗೆ ಏಳುವ ಸಾಧ್ಯತೆ ಇದೆ ಎಂದರು. ತೀ.ನ. ಶ್ರೀನಿವಾಸ್, ಯು.ಜೆ.ಮಲ್ಲಿಕಾರ್ಜುನ್, ನಾಗರಾಜ ಲಾಳಂಕೆ, ಚಗಲ್ ಲಾಲ್, ಮೋಹನ್, ಅಶೋಕ್ ಇತರರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.