ಸಾಮಾಜಿಕ ನ್ಯಾಯದಿಂದ ಸಮಸಮಾಜ: ಕಾಗೋಡು
Team Udayavani, Jun 29, 2020, 5:04 PM IST
ಸಾಗರ: ಕಾಂಗ್ರೆಸ್ ಕಾರ್ಯಕರ್ತರ ತರಬೇತಿ ಶಿಬಿರವನ್ನು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಉದ್ಘಾಟಿಸಿದರು.
ಸಾಗರ: ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಸಾಮಾಜಿಕ ನ್ಯಾಯ ಮತ್ತು ಸಮಾನತೆ ಪರಿಪೂರ್ಣವಾಗಿ ಜಾರಿಗೆ ಬಂದಿಲ್ಲ. ಸಾಮಾಜಿಕ ಪ್ರತ್ಯೇಕತೆ ದೂರವಾದಾಗ ಮಾತ್ರ ಸಮಸಮಾಜ ನಿರ್ಮಾಣವಾಗುತ್ತದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು.
ಜು. 2ರಂದು ಬೆಂಗಳೂರಿನಲ್ಲಿ ನಡೆಯುವ ಡಿ.ಕೆ.ಶಿವಕುಮಾರ್ ಅವರ ಪದಗ್ರಹಣ ಕಾರ್ಯಕ್ರಮದ ಡಿಜಿಟಲ್ ವೀಕ್ಷಣೆ ಕುರಿತು ಕಾರ್ಯಕರ್ತರಿಗೆ ನಗರದ ಗಾಂಧಿ ಮಂದಿರದಲ್ಲಿ ಆಯೋಜಿಸಲಾಗಿದ್ದ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಸಂವಿಧಾನದ ಆಶಯದಂತೆ ಪ್ರತಿಯೊಬ್ಬ ಪ್ರಜೆಗೂ ಮೀಸಲಾತಿ, ಭೂಹೀನರಿಗೆ ಭೂಮಿ ಹಕ್ಕು, ವಸತಿ ಸಿಗುವಂತಾಗಬೇಕು. ಇದು ಅನುಷ್ಠಾನಕ್ಕೆ ಬಂದಾಗ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆ ಸದೃಢಗೊಳ್ಳುತ್ತದೆ ಎಂದು ತಿಳಿಸಿದರು.
ಕೊರೊನಾ ಹಿನ್ನೆಲೆಯಲ್ಲಿ ಎಲ್ಲರೂ ಬೆಂಗಳೂರಿಗೆ ತೆರಳಿ ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ನಾವು ಇರುವಲ್ಲಿಯೇ ಪದಗ್ರಹಣ ಕಾರ್ಯಕ್ರಮವನ್ನು ಮೊಬೈಲ್, ಟಿ.ವಿ. ಮೂಲಕ ಪರೋಕ್ಷವಾಗಿ ವೀಕ್ಷಿಸಲು ಹಾಗೂ ಪಾಲ್ಗೊಳ್ಳಲು ಅವಕಾಶವಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್. ಜಯಂತ್, ನಗರ ಬ್ಲಾಕ್ ಅಧ್ಯಕ್ಷ ಐ.ಎನ್. ಸುರೇಶ್ ಬಾಬು, ಸಾಮಾಜಿಕ ಜಾಲತಾಣದ ವೆಂಕಟೇಶ್ ಮೆಳವರಿಗೆ, ಸಂಜಯ್, ಸದ್ದಾಂ, ಪ್ರಮುಖರಾದ ಮಹಾಬಲ ಕೌತಿ, ರಮೇಶ್ ಮರಸ, ಭರ್ಮಪ್ಪ ಅಂದಾಸುರ, ಪ್ರಶಾಂತ್, ಪ್ರವೀಣ ಬಣಕಾರ್, ಅಬ್ದುಲ್ ಹಮೀದ್, ಕಿರಣ್ ದೊಡ್ಮನಿ ಇನ್ನಿತರರು ಹಾಜರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.