ಶಿವಮೊಗ್ಗ ಸ್ಮಾರ್ಟ್‌ಸಿಟಿ ಯೋಜನಾ ನೋಟ

ಹಸಿರು ನಗರೀಕರಣದ ಮೂಲಕ ಶಿವಮೊಗ್ಗವನ್ನು ಪರಿಸರ ಪ್ರವಾಸೋದ್ಯಮ ತಾಣವಾಗಿ ಪರಿವರ್ತಿಸುವುದು

Team Udayavani, Aug 15, 2022, 12:40 PM IST

ಶಿವಮೊಗ್ಗ ಸ್ಮಾರ್ಟ್‌ಸಿಟಿ ಯೋಜನಾ ನೋಟ

ಶಿವಮೊಗ್ಗ ಸ್ಮಾರ್ಟ್‌ಸಿಟಿ ಲಿಮಿಟೆಡ್‌ ಒಂದು ವಿಶೇಷ ಉದ್ದೇಶಿತ ಸಂಸ್ಥೆಯಾಗಿ (SVP) ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಮಾನ ಅನುದಾನಬಳಸಿಕೊಂಡು (ತಲಾ ರೂ. 500.00 ಕೋಟಿಗಳಂತೆ, 5 ವರ್ಷಗಳ ಅವಧಿಗಾಗಿ) ಶಿವಮೊಗ್ಗ ನಗರದ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳನ್ನು ರಚಿಸಲು ಮತ್ತು ಕಾರ್ಯಗತಗೊಳಿಸಲು ಸ್ಥಾಪಿತವಾಗಿದೆ. ಇದರ ಉದ್ದೇಶಿತ ಗುರಿಯಾದ ಹಸಿರು ನಗರೀಕರಣ ಮೂಲಕ ಶಿವಮೊಗ್ಗವನ್ನು ಪರಿಸರ ಪ್ರವಾಸೋದ್ಯಮ ತಾಣವಾಗಿ ಪರಿವರ್ತಿಸುವುದು’ ಎಂಬುದನ್ನು ಆಧಾರವಾಗಿರಿಸಿ ಕೊಂಡು, ತನ್ನ ಉದ್ದೇಶಿತ ಅಭಿವೃದ್ಧಿ(ಎಬಿಡಿ) ಪ್ರದೇಶದಲ್ಲಿ (ನಗರದ ಪ್ರಮುಖ ವಾಣಿಜ್ಯ ವಲಯದ 6.0 ಚದರ ಕಿಮೀ ಪ್ರದೇಶದಲ್ಲಿ) ಮುಖ್ಯವಾಗಿ 522.11 ಕೋಟಿ ರೂ. ವೆಚ್ಚದಲ್ಲಿ 110 ಕಿಮೀ ಉದ್ದದ 8 ಸ್ಮಾರ್ಟ್‌ ರಸ್ತೆಗಳಲ್ಲಿ ಅಂಡರ್‌ ಗ್ರೌಂಡ್‌ ಮಾರ್ಗದಲ್ಲಿ ಹೆಚ್‌ಟಿ/ಎಲ್‌ಟಿ ವಿದ್ಯುತ್‌ ಸಂಪರ್ಕ, ನೀರು ಸರಬರಾಜು ಪೈಪ್‌ಲೈನ್‌ಗಳು, OFC ಲೈನ್‌ಗಳ ಅಳವಡಿಕೆ ಯೋಜನೆ ಮೂಲಕ ವಿವಿಧ ಸೇವಾ ಪೂರೈಕೆದಾರರು ಪದೇ ಪದೇ ರಸ್ತೆ ಅಗೆತವನ್ನು ಕಡಿಮೆ ಮಾಡುವುದು ಒಳಗೊಂಡಂತೆ ಸುಸಜ್ಜಿತ ರಸ್ತೆಯಾಗಿ ಮಾರ್ಪಡಿಸುವಲ್ಲಿ ಕಾರ್ಯನಿರತವಾಗಿದೆ. ಈ ಸ್ಮಾರ್ಟ್‌ ರಸ್ತೆಗಳು ಸಮರ್ಪಿತ ಯುಟಿಲಿಟಿ ಕಾರಿಡಾರ್‌ಗಳನ್ನು ಹೊಂದಿದ್ದು, ಬೈಸಿಕಲ್‌ ಸವಾರರಿಗೆಂದೇ ಮೀಸಲಾದ ಸುಮಾರು 34 ಕಿ.ಮೀ ಪ್ರತ್ಯೇಕ ಸೈಕಲ್‌ ಟ್ರ್ಯಾಕ್ ಮತ್ತು ಒಟ್ಟಾರೆಯಾಗಿ 120 ಕಿ.ಮೀ.ನಷ್ಟು ಸೈಕಲ್‌ ಸವಾರಿಗೆ ಯೋಗ್ಯ ಮತ್ತು ಪಾದಚಾರಿ ಮೀಸಲು ಮಾರ್ಗ ಹೊಂದಿರುತ್ತದೆ. ಇದರಿಂದಾಗಿ ಪ್ರಮುಖ ವಾಣಿಜ್ಯ ಪ್ರದೇಶದಲ್ಲಿನ ವಾಹನ ದಟ್ಟಣೆ ಸುಧಾರಿಸಲು ಮತ್ತು ಟ್ರಾಫಿಕ್‌ ಹರಿವಿನ ಪರಿಸ್ಥಿತಿ ಸುಧಾರಿಸಲು ಸಾಧ್ಯವಾಗುತ್ತದೆ. ಮೋಟಾರು ರಹಿತ ಸಾರಿಗೆ ಮತ್ತು ಸುಸ್ಥಿರ ಸಾರಿಗೆ ವಿಧಾನಗಳನ್ನು ಉತ್ತೇಜಿಸುವ ಮೂಲಕ ಟ್ರಾಫಿಕ್‌ ಹರಿವಿನ ಪರಿಸ್ಥಿತಿಗಳನ್ನು ಸುಧಾರಿಸಲು ಸ್ಮಾರ್ಟ್‌ಸಿಟಿಯಿಂದ ಅಭಿವೃದ್ಧಿಪಡಿಸುತ್ತಿರುವ ಒಟ್ಟಾರೆ 120 ಕಿ.ಮೀ. ರಸ್ತೆಯನ್ನು ಸೈಕಲ್‌ ಸವಾರರಿಗೂ ಯೋಗ್ಯವಾದ ರಸ್ತೆಗಳನ್ನಾಗಿ ಮಾರ್ಪಡಿಸಲಾಗುತ್ತಿದೆ. ನಗರದಲ್ಲಿ 30 ಡಾಕಿಂಗ್‌ ಸ್ಟೇಷನ್‌ಗಳಲ್ಲಿ 300 ಬೈಸಿಕಲ್‌ಗ‌ಳನ್ನು ನಾಗರಿಕರಿಗೆ ಬಾಡಿಗೆ ಆಧಾರದ ಮೇಲೆ ಸಾರ್ವಜನಿಕ ವಾಹನ ಹಂಚಿಕೆ ವ್ಯವಸ್ಥೆಯನ್ನು ಹೊಸದಾಗಿ ಪರಿಚಯಿಸಲಾಗುತ್ತಿದೆ. ಲಭ್ಯ ಮಾಡಲಾಗುತ್ತದೆ ಹಾಗೂ ಈ ಎಲ್ಲಾ ರಸ್ತೆಗಳು ಪ್ರತ್ಯೇಕ ಪಾದಚಾರಿ ಮೀಸಲಾತಿ ಮಾರ್ಗ ಹೊಂದಿರುತ್ತದೆ.

ಶಿವಮೊಗ್ಗ ಸ್ಮಾರ್ಟ್‌ ಸಿಟಿಯು ಪಾರಂಪರಿಕ ಕಟ್ಟಡಗಳ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದೆ. ಅದರಂತೆ ಈ ಯೋಜನೆಯಡಿಯಲ್ಲಿ ಐತಿಹಾಸಿಕ ಕಟ್ಟಡಗಳಾದ ಸರ್ಕಾರಿ ಮೈನ್‌ ಮಿಡಲ್‌ ಸ್ಕೂಲ್‌(GMMS), ಸಿಟಿ ಕಾರ್ಪೊರೇಷನ್‌ ಕಟ್ಟಡ ಮತ್ತು ನಗರದ ಐತಿಹಾಸಿಕ ಹಿನ್ನೆಲೆ ಹೊಂದಿರುವ ಶಿವಪ್ಪ ನಾಯಕ ಅರಮನೆ ಕಟ್ಟಡವನ್ನು ಪುನರ್‌ಸ್ಥಾಪನೆ ಮತ್ತು
ಮರುಬಳಕೆಗೆ ಯೋಗ್ಯವಾಗಿಸಲು 20.00 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ.

ಆಧುನಿಕ ಮಾಹಿತಿ ಮತ್ತು ತಂತ್ರಜ್ಞಾನ ಬಳಸಿಕೊಂಡು ನಗರದ 45 ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್‌ ಶಿಕ್ಷಣ ಯೋಜನೆ ಅನುಷ್ಠಾನ, ಸಿಸಿ ಟಿವಿ ಮುಖಾಂತರ ಕಣ್ಗಾವಲು ವ್ಯವಸ್ಥೆ, 14 ಟ್ರಾಫಿಕ್‌ ಜಂಕ್ಷನ್‌ಗಳಲ್ಲಿ ಆಧುನಿಕ ತಂತ್ರಜ್ಞಾನ ಆಧಾರಿತ ಸಂಚಾರ ನಿರ್ವಹಣಾ ವ್ಯವಸ್ಥೆ, ಆಧುನಿಕ ತಂತ್ರಜ್ಞಾನ ಆಧಾರಿತ ಘನ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ, ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ 65.40 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಇದರೊಂದಿಗೆ 100 ಸ್ಮಾರ್ಟ್‌ ಬಸ್‌ ಶೆಲ್ಟರ್‌ಗಳು, ಬಹು ಹಂತದ ಕಾರ್‌ ನಿಲುಗಡೆ ತಾಣ, ಬೀದಿ ಬದಿ ವ್ಯಾಪಾರಿಗಳಿಗಾಗಿ ಖಾಸಗಿ ಬಸ್‌ ನಿಲ್ದಾಣ ಹತ್ತಿರ ಕಟ್ಟಡ ನಿರ್ಮಾಣ, ಖಾಸಗಿ ಬಸ್‌ ನಿಲ್ದಾಣ ಅಭಿವೃದ್ಧಿ, ಜಂಕ್ಷನ್‌ ಸುಧಾರಣೆಗಳು ಸೇರಿದಂತೆ ಹಲವು ಭೌತಿಕ ಮೂಲಸೌಲಭ್ಯಗಳ ಯೋಜನೆಗಳ ಸುಧಾರಣೆ ಜತೆಗೆ ಚಲನಶೀಲತೆಯ ಅಂಶಗಳನ್ನು ಸುಧಾರಿಸುವ ಮೂಲಕ ಅವುಗಳ ಸಮರ್ಪಕ ಅನುಷ್ಠಾನಕ್ಕಾಗಿ 101.67 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ.

ನಗರದ 120ಕ್ಕೂ ಅಧಿ ಕ ಬಳಕೆ ಇಲ್ಲದೇ ದುಸ್ಥಿಯಲ್ಲಿದ್ದ ಕನ್ಸರ್‌ವೆನ್ಸಿಗಳನ್ನು 21.01 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿಪಡಿಸಿ ಈ ಪ್ರದೇಶವನ್ನು ಕಸ ಮುಕ್ತವಾಗಿಸಲು ಮತ್ತು ನೆರೆಹೊರೆಗಳಿಗೆ ಮಾಲಿನ್ಯ ರಹಿತ ವಾತಾವರಣದ ಸ್ಥಳವನ್ನಾಗಿ ಮಾಡಲು ಇವುಗಳನ್ನು ವಾಹನ ಪಾರ್ಕಿಂಗ್‌, ಫುಡ್‌ ಕೋರ್ಟ್‌ಗಳು, ವ್ಯಾಪಾರ ವಲಯಗಳು, ಮಕ್ಕಳ ಆಟದ ಪ್ರದೇಶಗಳು ಇತ್ಯಾದಿ ಉಪಯುಕ್ತ ಸಾರ್ವಜನಿಕ ಬಳಕೆಗಾಗಿ ಮತ್ತು ನೆರೆಹೊರೆಯವರಿಗೆ ಉತ್ತಮ ಉಸಿರಾಟದ ವಾಯು ಲಭ್ಯತೆ ತಾಣವಾಗಿ ಅಭಿವೃದ್ಧಿ ಪಡಿಸಲಾಗಿದೆ.

ತುಂಗಾ ನದಿ ಎಡದಂಡೆ ಯೋಜನೆ ಶಿವಮೊಗ್ಗ ಸ್ಮಾರ್ಟ್‌ಸಿಟಿ ಲಿಮಿಟೆಡ್‌ನ‌ ಪ್ರಮುಖ ಯೋಜನೆಗಳಲ್ಲೊಂದಾಗಿದೆ. 2.8 ಕಿಮೀ ವಿಸ್ತಾರದಲ್ಲಿರುವ 15.1 ಎಕರೆ ಭೂ ಪ್ರದೇಶದಲ್ಲಿ 130.00 ಕೋಟಿ ರೂ. (ನದಿಗೆ ಅಡ್ಡಲಾಗಿ ಸಣ್ಣ ಅಣೆಕಟ್ಟೆ ನಿರ್ಮಾಣ ಸೇರಿ) ವೆಚ್ಚದಲ್ಲಿ ವಿವಿಧೋದ್ದೇಶ ಕಾಮಗಾರಿಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ಯೋಜನಾ ಪ್ರದೇಶದಲ್ಲಿ ನಿರಂತರ ಸೈಕ್ಲಿಂಗ್‌ ಟ್ರ್ಯಾಕ್ ಮತ್ತು ವಾಕಿಂಗ್‌ ಪಥಗಳು, ಭಾರತದ ನದಿಗಳು ಮತ್ತು ಅವುಗಳ ಗುಣಲಕ್ಷಣಗಳ ಬಗ್ಗೆ ತಿಳಿಸುವ ಮಾಹಿತಿ ಕೇಂದ್ರ, ಕಲಾ ಪ್ರದರ್ಶನ ವೇದಿಕೆಗಳು, ಕ್ರೀಡಾ ಸಂಕೀರ್ಣ, ಇನ್ನಿತರೆ ಸಾರ್ವಜನಿಕ ಉಪಯುಕ್ತ ಚಟುವಟಿಕೆಗಳ ಕೇಂದ್ರವನ್ನಾಗಿ ನಿರ್ಮಿಸಲು ಯೋಜನೆ ರೂಪಿಸಲಾಗಿದೆ.

ಇಂಧನ ಸಂರಕ್ಷಣೆ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಮೂಲಕ 20000 ಕ್ಕೂ ಹೆಚ್ಚು ಸಾಂಪ್ರದಾಯಿಕ ಬೀದಿ ದೀಪಗಳನ್ನು ಎಲ್‌ಇಡಿ ದೀಪಗಳಾಗಿ ಬದಲಾಯಿಸುವ‌ ಗುರಿಯಾಗಿಸಿಕೊಂಡು ಬೀದಿ ದೀಪಗಳಿಗಾಗಿ ವ್ಯಯವಾಗುವುದರಲ್ಲಿ ಸುಮಾರು ಶೇ.48 ವಿದ್ಯುತ್‌ ಉಳಿಸುವ ನಿರೀಕ್ಷೆಯಿದೆ. ಸ್ಮಾರ್ಟ್‌ಸಿಟಿ ಯೋಜನೆಯ ಗ್ರೀನ್‌ ಅರ್ಬನೈಸೇಷನ್‌ ಕಾಮಗಾರಿಯಡಿಯಲ್ಲಿ ನಗರದ 19 ವಿವಿಧ ಬಡಾವಣೆಗಳಲ್ಲಿ ಅಂದಾಜು 8630 ವಿವಿಧ ಬಗೆಯ ಹಣ್ಣು, ಹೂವಿನ ಗಿಡಗಳು, ಬಿಲ್ವಪತ್ರೆ, ಹಲಸು, ನೇರಳೆ, ವಾಟೆ, ಬೆಟ್ಟದನೆಲ್ಲಿ, ಹುಣಸೆ, ಹೊಂಗೆ, ಅರಳಿ, ಸಂಪಿಗೆ, ಮಾವು, ಬೇವು, ಬಿದಿರು, ಹೊಳೆಮತ್ತಿ ಇತ್ಯಾದಿ ಸಸಿಗಳು, ಔಷಧೀಯ ಗುಣಗಳುಳ್ಳ ಸಸಿಗಳನ್ನು ನೆಡುವ ಮೂಲಕ ಹಸುರೀಕರಣಕ್ಕೆ ಪುಷ್ಟಿ ನೀಡುವ ಕಾರ್ಯ ಅನುಷ್ಠಾನದ ಹಂತದಲ್ಲಿದೆ. ನಗರದ ವಿವಿಧ ಬಡಾವಣೆಗಳಲ್ಲಿ ಶಿವಮೊಗ್ಗ ಸ್ಮಾರ್ಟ್‌ಸಿಟಿ ವತಿಯಿಂದ 17 ಪಾರ್ಕ್‌ಗಳನ್ನು 15.27 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಅವುಗಳಲ್ಲಿ 14 ಪಾರ್ಕ್‌ಗಳನ್ನು ಅಭಿವೃದ್ಧಿ ಪಡಿಸಿ ಸಾರ್ವಜನಿಕ ಉಪಯೋಗಕ್ಕೆ ಲಭ್ಯ ಮಾಡಲಾಗಿದೆ. ಈ ಎಲ್ಲಾ ಯೋಜನೆಗಳ ಮೂಲಕ ಅಂದಾಜು 45 ಎಕರೆ ಪ್ರದೇಶದಲ್ಲಿ ಹಸಿರೀಕರಣ ಮಾಡುವುದರ ಜತೆಗೆ ಅತಿಕ್ರಮಣದಿಂದ ಅಮೂಲ್ಯವಾದ ಮಹಾನಗರ ಪಾಲಿಕೆಯ ಪ್ರದೇಶವನ್ನು ರಕ್ಷಿಸಿದಂತಾಗಿದೆ.

ಸ್ಮಾರ್ಟ್‌ಸಿಟಿ ಮಿಷನ್‌ ಅನುದಾನದಲ್ಲಿ ಶಿವಮೊಗ್ಗ ಸ್ಮಾರ್ಟ್‌ಸಿಟಿ ವತಿಯಿಂದ 966.00 ಕೋಟಿ ರೂ. ಯೋಜನಾ ಮೊತ್ತದ 70 ಕಾಮಗಾರಿಗಳನ್ನು ಕೈಗೆತ್ತಿಕೊಂಡು, ಅದರಲ್ಲಿ 409.00 ಕೋಟಿ ರೂ. ವೆಚ್ಚದಲ್ಲಿ 47 ಕಾಮಗಾರಿಗಳು ಪೂರ್ಣಗೊಂಡಿದೆ. ಉಳಿದ 23 ಕಾಮಗಾರಿಗಳನ್ನು ಜೂನ್‌ 2023 ರೊಳಗೆ ಹಂತ ಹಂತವಾಗಿ ಪೂರ್ಣಗೊಳಿಸುವ ಕಾರ್ಯಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.

31 ಜುಲೈ 2022ರ ಅಂತ್ಯಕ್ಕೆ ಶಿವಮೊಗ್ಗ ಸ್ಮಾರ್ಟ್‌ಸಿಟಿ ಯೋಜನೆ ಅನುಷ್ಠಾನದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ 08 ನೇ ಸ್ಥಾನದಲ್ಲಿದೆ ಮತ್ತು ತನ್ನ ಸ್ಥಾನ ಹೆಚ್ಚಿಸಲು ನಿರಂತರವಾಗಿ ಶ್ರಮಿಸುತ್ತಿದೆ. ಶಿವಮೊಗ್ಗ ಸ್ಮಾರ್ಟ್‌ಸಿಟಿ ಯೋಜನೆ ಅನುಷ್ಠಾನದಲ್ಲಿ ಅಂದಾಜು ಶೇ.78 ಭೌತಿಕ ಪ್ರಗತಿ ಸಾಧಿಸಿದೆ. ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರ ದಿಂದ ಲಭ್ಯವಾದ 789.16 ಕೋಟಿ ರೂ.ಗಳ ಪೈಕಿ 720.00 ಕೋಟಿ ರೂ ಗಳನ್ನು ಕಾಮಗಾರಿಗಳಿಗಾಗಿ ವೆಚ್ಚ ಮಾಡಲಾಗಿದೆ.

ಭಾರತ ಸರ್ಕಾರದ ಸ್ಮಾರ್ಟ್‌ಸಿಟಿ ಮಿಷನ್‌ ಅಡಿಯಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗಳಷ್ಟೆ ಅಲ್ಲದೆ ನಗರದ ಜನರ ಜೀವನಮಟ್ಟ ಮತ್ತು ಕಾರ್ಯಕ್ಷಮತೆಯನ್ನು ಉನ್ನತೀಕರಿಸುವಲ್ಲಿ ಉತ್ತೇಜನ ನೀಡುವ ಈಸ್‌ ಆಫ್‌ ಲಿವಿಂಗ್‌ ಇಂಡೆಕ್ಸ್‌, ಸೈಕಲ್‌ 4 ಚೇಂಜ್‌ ಚಾಲೇಂಜ್‌, ಟ್ರಾನ್ಸ್‌ಪೊàರ್ಟ್‌ 4 ಆಲ್‌ ಚಾಲೇಂಜ್‌, ಈಟ್‌ ಸ್ಮಾರ್ಟ್‌ ಸಿಟೀಸ್‌ ಚಾಲೇಂಜ್‌ ಇತ್ಯಾದಿ ಕಾರ್ಯಕ್ರಮಗಳಲ್ಲಿ ಶಿವಮೊಗ್ಗ ಸ್ಮಾರ್ಟ್‌ಸಿಟಿ ಲಿಮಿಟೆಡ್‌ ಸಕ್ರಿಯವಾಗಿ ಭಾಗವಹಿಸುತ್ತಿದೆ. ಇದಲ್ಲದೆ ಅರ್ಹ ಯುವ ಸಮುದಾಯಕ್ಕೆ ಕೌಶಲ್ಯಾಭಿವೃದ್ಧಿ ಮತ್ತು ತರಬೇತಿ ಒದಗಿಸುವ ದೃಷ್ಟಿಯಿಂದ, ನಗರ ಕಲಿಕೆಯ ಇಂಟರ್ನ್ಶಿಪ್‌ ಕಾರ್ಯಕ್ರಮದ (ಖಖೀಔಐಕ) ಮೂಲಕ ಈವರೆಗೆ 42 ಅರ್ಹ ಯುವ ಸಮುದಾಯಕ್ಕೆ ಸ್ಮಾರ್ಟ್‌ಸಿಟಿ ಯೋಜನಾ ಕಾಮಗಾರಿಗಳ ಅನುಷ್ಠಾನದ ಅನುಭವ ನೀಡಿದೆ. ಪ್ರಸ್ತುತ 24 ಯುವಕ ಮತ್ತು ಯುವತಿಯರು ಇಂಟರ್ನ್ಶಿಪ್‌ ತರಬೇತಿ ಪಡೆಯುತ್ತಿದ್ದಾರೆ.

ಶಿವಮೊಗ್ಗ ಸ್ಮಾರ್ಟ್‌ ಸಿಟಿ ಲಿಮಿಟೆಡ್‌
ನೋಂದಾಯಿತ ಕಛೇರಿ : 1ನೇ ಮಹಡಿ, ಪಾಲಿಕೆ ಕಟ್ಟಡ ಬ್ಲಾಕ್‌, ಎಸ್‌.ಎನ್‌. ಮಾರ್ಕೆಟ್‌, ನೆಹರು ರಸ್ತೆ, ಶಿವಮೊಗ್ಗ – 577201.

ಟಾಪ್ ನ್ಯೂಸ್

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

1-horoscope

Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ

Media powerhouse: ರಿಲಯನ್ಸ್‌- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ

Media powerhouse: ರಿಲಯನ್ಸ್‌- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ

Yadiyurappa (2)

B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Yadiyurappa (2)

B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ

1-siddu

BJP ಸರಕಾರ ಕಾಲದ ಕೋವಿಡ್‌, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ

doctor 2

Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್‌ ಕೇರ್‌ ವಿಭಾಗ ಆರಂಭ

Beer

Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್‌

bjp-congress

BJP ಆಮಿಷ ನಿಜ: ಸಿಎಂ, ಡಿಸಿಎಂ ಹೇಳಿಕೆಗೆ ದನಿಗೂಡಿಸಿದ ಸಚಿವರು, ಶಾಸಕರು

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

1-horoscope

Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.