ಅಡಕೆಯಿಂದ ಸ್ಯಾನಿಟೈಸರ್: ಮಲೆನಾಡ ಯುವಕನ ಸಾಧನೆ
Team Udayavani, Jun 21, 2020, 9:16 AM IST
ಶಿವಮೊಗ್ಗ: ಲಾಕ್‌ಡೌನ್ ಹೊತ್ತಲ್ಲೂ ಹಣ ಮಾಡಿದ್ದು ಸ್ಯಾನಿಟೈಸರ್ ಕಂಪನಿಗಳು ಮಾತ್ರ. ಕೋಟಿ ಕೋಟಿ ಲಾಭ ಗಳಿಸಿರುವುದನ್ನು ಕಂಡ ಮಲೆನಾಡಿನಸಂಶೋಧಕ, ಅಡಕೆಗೆ ಬಹು ಆಯಾಮದ ಮಾರುಕಟ್ಟೆ ಕಲ್ಪಿಸಿರುವ ಯುವಕರೊಬ್ಬರು ಅಡಕೆ ಸ್ಯಾನಿಟೈಸರ್ ಕಂಡುಹಿಡಿದು ಈಗ ಯಶಸ್ವಿಯಾಗಿದ್ದಾರೆ. ಅಷ್ಟೇ ಅಲ್ಲ ಕಂಪನಿ ಶುರು ಮಾಡಲು ಇಚ್ಛೆವುಳ್ಳವರಿಗೆ ಫಾರ್ಮುಲಾ ಕೊಡಲೂ ಸಿದ್ಧರಿದ್ದಾರೆ.
ಮಲೆನಾಡಿನ ಮುಕ್ಕಾಲು ಭಾಗ ಅಡಕೆಯೇ ಆವರಿಸಿದೆ. ವರ್ಷದಿಂದ ವರ್ಷಕ್ಕೆ ಭತ್ತ ಬೆಳೆಯುತ್ತಿದ್ದ ಪ್ರದೇಶಗಳಲ್ಲಿ ಅಡಕೆ ಮರ ಕಾಣುತ್ತಿವೆ. ಗುಟ್ಕಾಗೆ ಮಾತ್ರ ಸೀಮಿತವಾಗಿದ್ದ ಅಡಕೆಗೆ ಹೊಸ ರೂಪ ಕೊಟ್ಟವರು ಮಲೆನಾಡಿನ ಯುವಕ ನಿವೇದನ್ ನೆಂಪೆ. ಅಡಕೆ ಟೀ ಮೂಲಕ ಪ್ರಸಿದ್ಧರಾಗಿ ಅದನ್ನು ಮಾರುಕಟ್ಟೆಗೆ ತಂದು ಯಶಸ್ಸು ಕಾಣುತ್ತಿದ್ದಾರೆ. ಜತೆಗೆ ಕಾರಿನಲ್ಲಿ ಬಳಸುವ ಪರ್ಫ್ಯೂಮ್ ಕೂಡ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ. ಹಲವು ಸಂಶೋಧನೆಗಳಿಂದ ಅಡಕೆಯಲ್ಲಿರುವ ವಿಶೇಷ ಅಂಶಗಳನ್ನು ತಿಳಿದುಕೊಂಡಿರುವ ಅವರು ಈಗ ಸ್ಯಾನಿಟೈಸರ್ ಕೂಡ ತಯಾರು ಮಾಡಿದ್ದಾರೆ.
ಏನಿದು ಸ್ಯಾನಿಟೈಸರ್?: ಅಡಕೆಯಲ್ಲಿ ಸ್ಯಾನಿಟೈಸರ್ ಮಾಡಬಹುದು ಎಂದು ತಿಳಿದಿದ್ದೆ ಲಾಕ್‌ಡೌನ್ ಸಮಯದಲ್ಲಿ. ತಮ್ಮ ಸ್ನೇಹಿತರ ಜತೆ ಚರ್ಚೆ ಮಾಡುವಾಗ ಬಹುರಾಷ್ಟ್ರೀಯ ಕಂಪನಿಗಳು ಸ್ಯಾನಿಟೈಸರ್ ಮಾರಾಟದಿಂದ ಕೋಟಿ ಕೋಟಿ ಸಂಪಾದನೆ ಮಾಡುತ್ತಿರುವುದು ತಿಳಿದು, ಕೆಲಸವಿಲ್ಲದೇ ಬೆಂಗಳೂರು ಬಿಟ್ಟು ಬಂದು ಮನೆಯಲ್ಲಿರುವ ಯುವಕರಿಗೆ ಅನುಕೂಲವಾಗಲೆಂದು ಸಂಶೋಧನೆಗೆ ಮುಂದಾದರು. ಅದು ಈಗ ಸ್ಯಾನಿಟೈಸರ್ ರೂಪ ಪಡೆದಿದೆ. ಅಡಕೆಯಲ್ಲಿ ಆ್ಯಂಟಿ ಮೈಕ್ರೋಬಿಯಲ್ ಪ್ರಾಪರ್ಟಿ ಇದ್ದು ಅದರ ಜತೆಗೆ ಆಲ್ಕೋಹಾಲ್, ಟ್ಯಾನ್ ಬಳಸಿ ಸ್ಯಾನಿಟೈಸರ್ ಸಿದ್ಧಪಡಿಸಲಾಗಿದೆ.ಆ್ಯಂಟಿ ಮೈಕ್ರೋಬಯಲ್ ಪ್ರಾಪರ್ಟಿಯು ಕೀಟಾಣುಗಳ ವಿರುದ್ಧ ಹೋರಾಡುತ್ತದೆ. ಜತೆಗೆ ಸುಗಂಧ ಭರಿತ ಪರಿಮಳಕ್ಕೆ ಆರೆಂಜ್ ಆಯಿಲ್ ಬಳಸುತ್ತಾರೆ. ಮಾರುಕಟ್ಟೆಯಲ್ಲಿ 1 ಲೀಟರ್ ಸ್ಯಾನಿಟೈಸರ್‌ಗೆ 400ರಿಂದ 500 ರೂ. ಇದೆ. ಅದಕ್ಕಿಂತ ಕಡಿಮೆ ದರಕ್ಕೆ ಸ್ಯಾನಿಟೈಸರ್ ಒದಗಿಸುವ ಉದ್ದೇಶದಲ್ಲಿ ನಿವೇದನ್ ಸಿದ್ಧರಿದ್ದಾರೆ. ಮಾರುಕಟ್ಟೆಯಲ್ಲಿ ಕೆಮಿಕಲ್ ಮಿಶ್ರಿತ ಸ್ಯಾನಿಟೈಸರ್ ಗಳೇ ಹೆಚ್ಚಾಗಿವೆ. ಇದು ಪಕ್ಕಾ ಹರ್ಬಲ್ ಪ್ರಾಡಕ್ಟ್ ಎನ್ನುತ್ತಾರೆ ನಿವೇದನ್ ನೆಂಪೆ
ಫಾರಿನ್ ಕಂಪನಿಗಳು ಕೋಟಿ ಕೋಟಿ ಸಂಪಾದನೆ ಮಾಡುತ್ತಿವೆ. ಆತ್ಮನಿರ್ಭರ್, ಸ್ವಾವಲಂಬಿ ಭಾರತ ಎಂಬ ದೊಡ್ಡ ಮಾತು ಹೇಳುತ್ತೇವೆ. ಆದರೆ ಅನುಷ್ಠಾನಕ್ಕೆ ತರುವುದಿಲ್ಲ. ಕಡಿಮೆ ವೆಚ್ಚದಲ್ಲಿ ಅಡಕೆ ಸ್ಯಾನಿಟೈಸರ್ ಉತ್ಪಾದನೆ ಮಾಡಬಹುದು. ಲಾಕ್‌ಡೌನ್ ನಂತರ ಸಾವಿರಾರು ಯುವಕರು ಕೆಲಸವಿಲ್ಲದೇ ಮನೆ ಸೇರಿದ್ದಾರೆ. ಯಾರಾದರೂ ಮುಂದೆ ಬಂದಲ್ಲಿ ಅವರಿಗೆ ಈ –ಫಾರ್ಮುಲಾ ಜತೆಗೆ ಸಹಕಾರ ನೀಡಲಾಗುವುದು. ನಿವೇದನ್ ನೆಂಪೆ, ಯುವ ಸಂಶೋಧಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hosanagar: ನಾಪತ್ತೆಯಾದ 78 ದಿನದ ಬಳಿಕ ವ್ಯಕ್ತಿಯ ಮೃತದೇಹ ಪತ್ತೆ, ತನಿಖೆಗೆ ಪತ್ನಿಯ ಆಗ್ರಹ
Ripponpet ಬೀದಿ ನಾಯಿ ಕೊಂದು ಆಟೋಗೆ ಕಟ್ಟಿಕೊಂಡು ಎಳೆದೊಯ್ದ ಕ್ರೂರಿ
Shimoga: ಬೀದಿ ನಾಯಿಯನ್ನು ಕ್ರೂರವಾಗಿ ಕೊಂದು ಆಟೋದಲ್ಲಿ ಎಳೆದೊಯ್ದ ವ್ಯಕ್ತಿ
ಅಡಿಕೆ ಬೆಳೆಗಾರರು ಆತಂಕವಿಲ್ಲದೆ ಕೃಷಿಯಲ್ಲಿ ತೊಡಗಿಕೊಳ್ಳಿ: ಶಿವರಾಜ್ ಸಿಂಗ್ ಚೌಹಾಣ್
Sagara: ಜ. 22ರಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಡಾಕ್ಟರೇಟ್ ಪ್ರದಾನ