ಸಾವೇಹಕ್ಲು ಭರ್ತಿ: ಗಮನ ಸೆಳೆದ ಓವರ್ ಫ್ಲೋ
Team Udayavani, Jul 14, 2022, 10:10 AM IST
ಹೊಸನಗರ: ತಾಲೂಕಿನ ನಗರ ಹೋಬಳಿಯಲ್ಲಿರುವ ಚಕ್ರಾ ಸಾವೇಹಕ್ಲು ಅವಳಿ ಡ್ಯಾಂಗಳಲ್ಲೊಂದಾದ ಸಾವೇಹಕ್ಲು ಜಲಾಶಯ ಭರ್ತಿಯಾಗಿದೆ.
ಲಿಂಗನಮಕ್ಕಿ ಸ್ಟೋರೇಜ್ ಡ್ಯಾಂ ಆದ ಸಾವೇಹಕ್ಲು ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಓವರ್ ಫ್ಲೋ ಕಂಡು ಬಂದಿದೆ. 582 ಮೀ ಗರೀಷ್ಠ ಮಟ್ಟದ ಜಲಾಶಯ ಇದಾಗಿದ್ದು 10 ದಿನಗಳ ಹಿಂದೆ ಮಳೆ ಇಲ್ಲದೇ ಬಿಕೋ ಎನ್ನುವಂತಿತ್ತು. ಇದೀಗ ವ್ಯಾಪಕ ಮಳೆಯಾಗುತ್ತಿದ್ದು ಜಲಾಶಯ ಭರ್ತಿಯಾಗಿದೆ.
ಇದನ್ನೂ ಓದಿ:ಶ್ರೇಷ್ಠ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಕೇರಳ ,ಅಹ್ಮದಾಬಾದ್‌ಗೆ ಸ್ಥಾನ
ಅವಧಿಗೆ ಮುನ್ನ ಭದ್ರಾ ಡ್ಯಾಂ ಭರ್ತಿ: ಜಲಾಶಯದ ಇತಿಹಾಸದಲ್ಲೇ ಮೊದಲ ಬಾರಿಗೆ ಜು.15ರೊಳಗೆ ಭರ್ತಿ ಆಗಿರುವುದು ಅಚ್ಚುಕಟ್ಟು ರೈತರ ಮೊಗದಲ್ಲಿ ಸಂತಸ ಮೂಡಿಸಿದೆ. ಭದ್ರಾವತಿ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಹಾವೇರಿ, ಗದಗ ಜಿಲ್ಲೆಗಳ ಜೀವನಾಡಿ ಆಗಿರುವ ಭದ್ರಾ ಜಲಾಶಯ ನಿರೀಕ್ಷೆ ಮೀರಿ ಅವಧಿಗೆ ಮುನ್ನವೇ ಭರ್ತಿಯಾಗಿದೆ.
ರಾಜ್ಯದ ನಾಲ್ಕನೇ ಅತಿದೊಡ್ಡ ಜಲಾಶಯ ಭದ್ರಾ ಜಲಾಶಯವು ಭರ್ತಿಯಾದ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ 12 ಗಂಟೆಗೆ ಕ್ರಸ್ಟ್ ಗೇಟ್ ಗಳನ್ನು ತೆರೆದು ನದಿಗೆ ಹೆಚ್ಚುವರಿ ನೀರು ಹರಿಸಲಾಗುತ್ತದೆ.
186 ಅಡಿ ಪೂರ್ಣಮಟ್ಟದ ಡ್ಯಾಮ್ ನಲ್ಲಿ ಈಗ ನೀರಿನ ಮಟ್ಟ 183.50 ಅಡಿಗೆ ತಲುಪಿದೆ. ಒಳ ಹರಿವು 43 ಸಾವಿರ ಕ್ಯೂಸೆಕ್ ಇರುವುದರಿಂದ ಭರ್ತಿಗೆ ಇನ್ನೂ ಎರಡೂವರೆ ಅಡಿ ಬಾಕಿ ಇರುವಂತೆ ಗೇಟ್ ಗಳನ್ನು ತರೆದು ನದಿಗೆ ನೀರು ಹರಿಸಲು ನಿರ್ಧರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Infectious Disease: ರಾಜ್ಯಕ್ಕೂ ಬೇಕಿದೆ “ವಿಷಾಣು ಯುದ್ಧ ಅಭ್ಯಾಸ್”
Sagara: ಭೀಕರ ಅಪಘಾತ… ರಿಕ್ಷಾ ಚಾಲಕ ಸೇರಿ ಇಬ್ಬರು ಮೃತ್ಯು, ಮೂವರಿಗೆ ಗಾಯ
Anandapura: ಬಟ್ಟೆ ತೊಳೆಯಲು ಹೋದ ಮಹಿಳೆ ಕೆರೆಗೆ ಬಿದ್ದು ಮೃತ್ಯು
Hosanagara: ಬಿಸಿ ಟೀ ಮೈ ಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದ ಎರಡು ವರ್ಷದ ಮಗು ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.