ಶಾಲಾರಂಭದ ಸಂಭ್ರಮ
Team Udayavani, Jan 2, 2021, 4:39 PM IST
ಶಿವಮೊಗ್ಗ: ಬರೋಬ್ಬರಿ 9 ತಿಂಗಳ ನಂತರ ರಾಜ್ಯದಲ್ಲಿ ಶಾಲೆಗಳು ಶುಕ್ರವಾರದಿಂದಆರಂಭವಾಗಿದ್ದು, ನಗರದ ಬಹುತೇಕ ಶಾಲಾ- ಕಾಲೇಜುಗಳಿಗೆ ಮಕ್ಕಳು ಆಗಮಿಸಿದ್ದರು.ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯು ತರಗತಿಗಳು ಶುರುವಾಗಿದ್ದು, ವಿದ್ಯಾರ್ಥಿಗಳ ಸಂಖ್ಯೆ ವಿರಳವಾಗಿತ್ತು. ಶಾಲೆಗೆ ಪೋಷಕರಅನುಮತಿ ಪತ್ರದೊಂದಿಗೆ ಆಗಮಿಸಿದ್ದ ವಿದ್ಯಾರ್ಥಿಗಳ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಸ್ಯಾನಿಟೈಸರ್ ನೀಡಿ ಮಾಸ್ಕ್ ಧರಿಸಿದ್ದನ್ನು ಖಚಿತಪಡಿಸಿಕೊಂಡು ತರಗತಿಗಳಿಗೆ ಕಳುಹಿಸಲಾಯಿತು.
ಶಾಲೆಗೆ ಬಂದ ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಗಿತ್ತು.ಬಹುದಿನಗಳ ನಂತರ ಶಾಲೆಗೆ ಆಗಮಿಸಿದಮಕ್ಕಳನ್ನು ಶಾಲೆಯ ಶಿಕ್ಷಕರು, ಸಿಬ್ಬಂದಿ, ಆಡಳಿತಮಂಡಳಿ ಸಿಬ್ಬಂದಿ ಬರಮಾಡಿಕೊಂಡರು. ಕೋವಿಡ್ ಮಾರ್ಗಸೂಚಿಗಳೊಂದಿಗೆ ನಿಯಮಾನುಸಾರ ವಿದ್ಯಾರ್ಥಿಗಳ ತಂಡ ರಚಿಸಿ ತರಗತಿ ನಡೆಸಲಾಯಿತು. ಬಹುತೇಕವಿದ್ಯಾರ್ಥಿಗಳು ಉತ್ಸಾಹದಿಂದ ಶಾಲೆಗೆ ಆಗಮಿಸಿದ್ದರು. 6 ರಿಂದ 9ನೇ ತರಗತಿ ಮಕ್ಕಳಿಗೆ ಶಾಲೆ ಆವರಣದಲ್ಲಿ ವಿದ್ಯಾಗಮ ತರಗತಿಗಳು ನಡೆದವು.
ಮೊದಲನೇ ದಿನವೇ ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಸಂಖ್ಯೆಗಿಂತ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಹಾಜರಾಗಿರುವ ಸಂಖ್ಯೆ ಹೆಚ್ಚಿದೆ. ಎಸ್‌ಎಸ್‌ಎಲ್‌ಸಿಯಲ್ಲಿಶಾಲೆಗೆ ಹಾಜರಾಗಬೇಕಿದ್ದವರ ಸಂಖ್ಯೆ 23,683ವಿದ್ಯಾರ್ಥಿಗಳಲ್ಲಿ 15 393 (ಶೇ.65 ರಷ್ಟು ) ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ನಿಧಾನವಾಗಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯೂ ಇದೆ. ವಿದ್ಯಾರ್ಥಿಗಳಲ್ಲಿಶಾಲೆಗೆ ಹೋಗುವವರ ಉತ್ಸಾಹ ಹೆಚ್ಚು ಇದ್ದರೂ ಕೆಲವು ತಾಂತ್ರಿಕ ಕಾರಣಗಳು, ಬಸ್ ಸಂಚಾರದ ವಿರಳತೆ ವಿದ್ಯಾರ್ಥಿಗಳನ್ನು ಮೊದಲನೇ ದಿನದ ಹಾಜರಾತಿಗೆ ಕೊಂಚ ಅಡ್ಡಿಯಾಯಿತು.
ಆದರೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಹಾಜರಾತಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಹಾಜರಾತಿಗಿಂತ ಕಡಿಮೆ ಇತ್ತು. ಮೊದಲದಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಹಾಜರಾತಿ ಶೇ.41 ರಷ್ಟು ಇತ್ತು. 16,863 ವಿದ್ಯಾರ್ಥಿಗಳಲ್ಲಿ ಮೊದಲ ದಿನ 6960 ವಿದ್ಯಾರ್ಥಿಗಳು ಮಾತ್ರ ಹಾಜರಾಗಿದ್ದರು. ಸರ್ಕಾರಿ ಕಾಲೇಜಿನಲ್ಲಿ3150 ವಿದ್ಯಾರ್ಥಿಗಳು ಹಾಜರಾದರೆ ಅನುದಾನಿತ ಕಾಲೇಜಿನಲ್ಲಿ 1164, ಅನುದಾನ ರಹಿತ ಕಾಲೇಜಿನಲ್ಲಿ 2646 ವಿದ್ಯಾರ್ಥಿಗಳು ಹಾಜರಾಗಿದ್ದರು.
ಕಲ್ಲಹಳ್ಳಿಯ ಪ್ರಿಯದರ್ಶಿನಿ ಆಂಗ್ಲಮಾಧ್ಯಮ ಶಾಲೆ ಸೇರಿದಂತೆ ಎಲ್ಲ ಶಾಲಾಕಾಲೇಜುಗಳಲ್ಲಿ ಸರ್ಕಾರದ ನಿಯಮಗಳನ್ನು ಪಾಲಿಸಿ ತರಗತಿ ನಡೆಸಲಾಯಿತು. ಮಕ್ಕಳೆಲ್ಲರೂಅತಿ ಸಂಭ್ರಮದಿಂದ ಶಾಲೆಗೆ ಆಗಮಿಸಿದರು. ಮಾಸ್ಕ್ ಧರಿಸುವುದು ಸೇರಿದಂತೆ ತಮ್ಮ ಪೋಷಕರ ಒಪ್ಪಿಗೆ ಪತ್ರದೊಂದಿಗೆ ಶಾಲೆಗೆಹಾಜರಾದರು. ಶಾಲೆಯ ಉಪಾಧ್ಯಾಯರು ಮತ್ತು ಸಿಬ್ಬಂದಿ ಮಕ್ಕಳನ್ನು ಅತ್ಯಂತಪ್ರೀತಿಯಿಂದ ಸ್ವಾಗತಿಸಿದರು. ಶಾಲೆಯಲ್ಲಿಹಬ್ಬದ ವಾತಾವರಣವಿತ್ತು ಮತ್ತು ಸರ್ಕಾರದ ನಿಯಮದ ಎಚ್ಚರಿಕೆಯೂ ಇತ್ತು.
ಸರ್ಕಾರ ಶಾಲೆಗಳನ್ನು ಆರಂಭ ಮಾಡಿರುವುದು ಸ್ವಾಗತಾರ್ಹ. ಕೋವಿಡ್ ಹಿನ್ನೆಲೆಯಲ್ಲಿ ಹಲವುತಿಂಗಳು ಶಾಲೆಗಳನ್ನು ಮುಚ್ಚಲಾಗಿತ್ತು. ಈಗ ಮತ್ತೆ ಆರಂಭವಾಗಿವೆ. ಸರ್ಕಾರಕಟ್ಟುನಿಟ್ಟಿನ ಸೂಚನೆ ನೀಡಿದೆ. ನಮ್ಮಶಾಲೆಯಲ್ಲಿ ಇದನ್ನು ಕಟ್ಟುನಿಟ್ಟಾಗಿಪಾಲಿಸಲಾಗುವುದು. ಎಲ್ಲವಿದ್ಯಾರ್ಥಿಗಳನ್ನು ವೈಯಕ್ತಿಕವಾಗಿಗಮನಿಸಲಾಗುವುದು. ಅಂತರಕಾಪಾಡುವುದು, ಮಾಸ್ಕ್ ಧರಿಸುವುದುಮತ್ತು ಶಿಕ್ಷಕರು ಸೇರಿದಂತೆ ತರಗತಿಗೆಹಾಜರಾಗುವ ಮಕ್ಕಳನ್ನು ಕೊರೊನಾಟೆಸ್ಟ್‌ಗೆ ಒಳಪಡಿಸಲಾಗುವುದು. –ಎನ್.ರಮೇಶ್, ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆ ಕಾರ್ಯದರ್ಶಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ
Shimoga: ತ್ಯಾವರೆಕೊಪ್ಪ ಧಾಮದಲ್ಲಿ ಮೃತಪಟ್ಟ ಹೆಣ್ಣು ಹುಲಿ ಅಂಜನಿ
Shimoga; ಮನೆಯಂಗಳದಿಂದ ನಾಯಿ ಹೊತ್ತೊಯ್ದ ಚಿರತೆ; ಸಿಸಿಕ್ಯಾಮರಾದಲ್ಲಿ ದೃಶ್ಯ ಸೆರೆ
Anandapura: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ; ತಪ್ಪಿದ ಅನಾಹುತ
ಸಾಗರಕ್ಕೆ ಆಗಮಿಸಿದ ಡಾ.ನಾ.ಡಿಸೋಜಾ ಪಾರ್ಥಿವ ಶರೀರ; ಗಣ್ಯರು, ಅಧಿಕಾರಿಗಳಿಂದ ಅಂತಿಮ ದರ್ಶನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.