ಅರಣ್ಯಾಧಿಕಾರಿಗಳ ದೌರ್ಜನ್ಯದ ವಿರುದ್ಧ ರೊಚ್ಚಿಗೆದ್ದ ಶಾಲಾ ವಿದ್ಯಾರ್ಥಿಗಳು
Team Udayavani, Dec 31, 2021, 6:12 PM IST
ತೀರ್ಥಹಳ್ಳಿ: ಮಂಡಗದ್ದೆ ಅರಣ್ಯಾಧಿಕಾರಿಗಳಿಗೆ ಅರಣ್ಯ ಇಲಾಖೆಯ ಸರ್ಕಾರಿ ಜಾಗ ಹೆಕ್ಟೇರ್ ಹೆಕ್ಟೇರ್ ಪ್ರದೇಶ ಬಲಾಢ್ಯರ ಪಾಲಾಗುತ್ತಿದ್ದು, ಅದರ ಬಗ್ಗೆ ಗಮನ ಹರಿಸದೆ ಸರ್ಕಾರಿ ಕಾಲೇಜಿನ ಜಾಗವನ್ನುವಶಪಡಿಸಿಕೊಳ್ಳಲು ಮುಂದಾಗಿರುವುದು ಖಂಡನೀಯ ಎಂದು ಅಶೋಕ್ ಮೂರ್ತಿ ತಿಳಿಸಿದರು.
ಮಂಡಗದ್ದೆ ಅರಣ್ಯ ವ್ಯಾಪ್ತಿಯಲ್ಲಿ ಅತ್ಯಂತ ಹೆಚ್ಚು ಮರ ಕಳ್ಳತನ ,ಅಕ್ರಮ ಟಿಂಬರ್ ಸಾಗಾಟ ನಡೆಯುತ್ತಿದೆ ಇದನ್ನು ರಕ್ಷಿಸಿ ಕಾಡನ್ನು ಉಳಿಸಿ ಸಂರಕ್ಷಿಸುವುದು ಬಿಟ್ಟು ಸರ್ಕಾರಿ ಶಾಲೆಯೊಂದು ಅನೇಕ ವರ್ಷಗಳಿಂದ ಕಾಯ್ದಿರಿಸಿದ ಸರ್ವೆ ನಂ 40 ರಲ್ಲಿರುವ ಹತ್ತು ಎಕರೆ ಪ್ರದೇಶ ಇದೀಗ ಇವರ ಕಣ್ಣಿಗೆ ಬಿದ್ದಿದೆ, ಇತ್ತೀಚೆಗೆ ಈ ಶಾಲೆಯ ಜಾಗ ನಮ್ಮದೆಂದು ಅರಣ್ಯ ಇಲಾಖೆ ಅಧಿಕಾರಿಗಳು ಖ್ಯಾತೆ ತೆಗೆದಿದ್ದು ಈ ಪ್ರದೇಶವನ್ನು ತಮ್ಮ ಸ್ವಾಧೀನಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದರು, ಶಾಲೆಯ ಕಮಿಟಿಯವರು ಎಷ್ಟೇ ಹೇಳಿದರೂ ಕೇಳದ ಅರಣ್ಯಾಧಿಕಾರಿಗಳ ದರ್ಪದ ವಿರುದ್ಧ ಸ್ಥಳೀಯರು ಧಿಕ್ಕಾರ ಕೂಗುತ್ತಾ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ದೂರವಾಣಿಯಲ್ಲಿ ಅರಣ್ಯಾಧಿಕಾರಿಗಳನ್ನು ತರಾಟೆ ತೆಗೆದುಕೊಂಡರು. ಅರಣ್ಯ ಇಲಾಖೆ ಅಧಿಕಾರಿಗಳು ಇನ್ನು ಮುಂದೆ ಶಾಲೆಯ ಜಾಗಕ್ಕೆ ಯಾವುದೇ ಅತಿಕ್ರಮಣ ಪ್ರವೇಶ ಮಾಡುವುದಿಲ್ಲ ಎಂಬುದಾಗಿ ಪೊಲೀಸ್ ಇಲಾಖೆ ಮತ್ತು ಸ್ಥಳೀಯರು ಹಾಗೂ ಶಾಲೆಯ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಹೇಳಿಕೆ ನೀಡಿದ ನಂತರದಲ್ಲಿ ಪ್ರತಿಭಟನೆಯನ್ನು ಹಿಂಪಡೆದುಕೊಳ್ಳಲಾಯಿತು.
ಪ್ರತಿಭಟನೆ ವೇಳೆ ರಾಷ್ಟ್ರೀಯ ಹೆದ್ದಾರಿ 169 ತೀರ್ಥಹಳ್ಳಿ ಶಿವಮೊಗ್ಗ ರಸ್ತೆ ತಡೆದ ಪರಿಣಾಮ ಸುಮಾರು 2ಗಂಟೆಗೂ ಹೆಚ್ಚು ಕಾಲ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದ್ದು, ಕಿಲೋ ಮೀಟರ್ ಉದ್ದದವರೆಗೆ ವಾಹನಗಳು ಜಾಮ್ ಆಗಿತ್ತು.
ಆರ್ ಎಫ್ ಒ ವಿರುದ್ಧ ಸಾರ್ವಜನಿಕರ ಭುಗಿಲೆದ್ದ ಆಕ್ರೋಶ
ಪ್ರತಿಭಟನೆಯಲ್ಲಿ ಸ್ಥಳೀಯ ಆರ್ ಎಫ್ ಒ ವಿರುದ್ಧ ಅಶೋಕ್ ಮೂರ್ತಿ ಸೇರಿದಂತೆ ಇತರ ಬಿಜೆಪಿ ನಾಯಕರುಗಳು ಆಕ್ರೋಶ ಭರಿತರಾಗಿ ಮಾತನಾಡಿದ್ದು, ಅರಣ್ಯ ಇಲಾಖೆಯ ಮರ್ಯಾದೆಯನ್ನು ತೆಗೆಯುವುದಕ್ಕೆ ಈ ಅಧಿಕಾರಿ ಇದ್ದಾರೆ. ಮಂಡಗದ್ದೆ ಪ್ರದೇಶದಲ್ಲಿ ಸಾಕಷ್ಟು ಅರಣ್ಯ ಇಲಾಖೆ ಜಾಗ ಒತ್ತುವರಿಯಾಗಿ ಮರ ಕಳ್ಳತನ ನಡೆಯುತ್ತಿದೆ ಇದಕ್ಕೆ ಅಧಿಕಾರಿಯ ಪರೋಕ್ಷ ಬೆಂಬಲ ಇದ್ದು ಅಕ್ರಮದಾರರ ಜತೆ ಶಾಮೀಲಾಗಿದ್ದಾರೆ ಎಂಬ ಆರೋಪವನ್ನು ಮಾಡಿದ್ದು, ಆರ್ ಎಫ್ ಒ ಈ ಅಧಿಕಾರಿಯನ್ನು ಈ ಭಾಗದಿಂದ ವರ್ಗಾವಣೆ ಮಾಡುವಂತೆ ಗೃಹ ಸಚಿವರಿಗೆ ಮತ್ತು ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಪ್ರತಿಭಟನೆಯಲ್ಲಿ ಒತ್ತಾಯಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid ವೇಳೆ ಜೀವ ಉಳಿಸುವ ಕೆಲಸ ಮಾಡಿದ್ದೇವೆ: ಬಿಎಸ್‌ವೈ
Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು
Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!
Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್ ನಿಂದ ಸುಳ್ಳು ಆರೋಪ: ರಾಘವೇಂದ್ರ
Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.