ಅಪ್ಪ- ಮಗನಿಂದ ಸ್ವಾರ್ಥ ರಾಜಕಾರಣ
Team Udayavani, Oct 27, 2018, 5:18 PM IST
ಶಿಕಾರಿಪುರ: ಇಲ್ಲಿನ ಶಾಸಕರು ಹಾಗೂ ಅವರ ಪುತ್ರರ ವರ್ತನೆ ಸಂವಿಧಾನದಲ್ಲಿ ಬಂದ್ಯಾ ಭಾವ ಹೋದ್ಯಾ ಭಾವ ಎನ್ನುವಂತಾಗಿದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಟೀಕಿಸಿದರು.
ಶುಕ್ರವಾರ ತಾಲೂಕಿನ ಈಸೂರು ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಕೂಟದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ನಮ್ಮ ಸಂವಿಧಾನದಲ್ಲಿ ಗ್ರಾಪಂನಿಂದ ಲೋಕಸಭೆಯವರೆಗೂ ಮತದಾರರು 5 ವರ್ಷಕ್ಕಾಗಿ ರಾಜಕಾರಣಿಗಳನ್ನು ಆರಿಸಿ ಕಳಿಸುತ್ತಾರೆ. ಆದರೆ ಶಿಕಾರಿಪುರದಲ್ಲಿ ಇಲ್ಲಿನ ಶಾಸಕರು ತಮ್ಮ ಸ್ವಾರ್ಥಕ್ಕಾಗಿ ಅಪ್ಪನಿಗಾಗಿ ಮಗ ಮಗನಿಗಾಗಿ ಅಪ್ಪ ಎಂದು ಆರು ತಿಂಗಳಿಗೊಮ್ಮೆ ಅಧಿ ಕಾರವನ್ನು ಹಂಚಿಕೊಳ್ಳುತ್ತಾ ಸಾರ್ವಜನಿಕರ ಹಣವನ್ನು ಪೋಲು ಮಾಡುತ್ತಿದ್ದಾರೆ. ಸಾರ್ವಜನಿಕರ ಜೊತೆ ಆಟವಾಡುತ್ತಿರುವ ಇಂತಹ ಚುನಾವಣೆಯನ್ನು ಕಂಡು ನನಗೆ ಕಣ್ಣೀರು ಬರುವಂತಾಗಿದೆ ಎಂದರು.
ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ಮಾತನಾಡಿ, ಕುಬಟೂರಿನಿಂದ ಶಿವಮೊಗ್ಗದವರೆಗೂ ನಾನು ಪಾದಯಾತ್ರೆ ಮಾಡಿದ್ದು ಶೋಕಿಗಾಗಿ ಅಲ್ಲ. ತಾಲೂಕಿನ ಸಂಪೂರ್ಣ ನೀರಾವರಿ ಯೋಜನೆ ಮಾಡಲು ಎಂದರು. ಶಿಕಾರಿಪುರದಲ್ಲಿ ಅರಣ್ಯ ಭೂಮಿ ಅರ್ಜಿಗಳು ಬಾಕಿ ಇದ್ದ ಸಮಯದಲ್ಲಿ
ನಾನು ವಿಧಾನಸಭಾ ಅಧ್ಯಕ್ಷನಾಗಿದ್ದೆ. ಆಗ ಪ್ರಾಮಾಣಿಕತೆಯಿಂದ ಹಗಲು ರಾತ್ರಿ ಶ್ರಮಪಟ್ಟು ಎರಡು ವರ್ಷಗಳಿಂದ ಕೊಳೆಯುತ್ತ ಬಿದ್ದಿದ್ದ
4 ಸಾವಿರ ಅರ್ಜಿಗಳನ್ನು ಇಥ್ಯರ್ಥಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸಿದ್ದೇನೆ. ಅದರಿಂದ ಅರ್ಜಿಗಳು ಶೀಘ್ರ ಇತ್ಯರ್ಥವಾಗುವ ಹಂತ ತಲುಪಿವೆ.
ಕಾಗೋಡು ತಿಮ್ಮಪ್ಪ, ಮಾಜಿ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!
Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್ ನಿಂದ ಸುಳ್ಳು ಆರೋಪ: ರಾಘವೇಂದ್ರ
Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.