ಪತ್ರಿಕೋದ್ಯಮ ಮಾರಾಟದ ಸರಕಾಗಿದ್ದು ವಿಷಾದನೀಯ
Team Udayavani, Feb 14, 2021, 4:33 PM IST
ತೀರ್ಥಹಳ್ಳಿ: ಸಮಾಜವನ್ನು ತಿದ್ದಬೇಕಾದ ಪತ್ರಿಕೋದ್ಯಮವೇ ಮಾರಾಟದ ಸರಕಾಗಿರುವುದು ವಿಷಾದನೀಯ ಎಂದು ಹಿರಿಯ ಪತ್ರಕರ್ತ ಹಾಗೂ ಮಾಸ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಶರತ್ ಕಲ್ಕೋಡ್ ತಿಳಿಸಿದರು.
ಗಾಯತ್ರಿ ಮಂದಿರದಲ್ಲಿ ನಡೆದ ತೀರ್ಥಹಳ್ಳಿ ಜೇಸಿಐ ನೂತನ ಪದಾ ಧಿಕಾರಿಗಳ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. 1950-60ರ ದಶಕದಲ್ಲಿ ಪತ್ರಿಕೋದ್ಯಮದ ಬಗ್ಗೆ ಜನರಲ್ಲಿ ಅಪಾರ ಕಾಳಜಿ, ಗೌರವಗಳಿದ್ದವು. ಸಮಾಜ ಮುನ್ನಡೆಸುವವರು ದಾರಿ ತಪ್ಪಿದಾಗ ತಿದ್ದುತ್ತಿದ್ದವರೇ ಪತ್ರಕರ್ತರು. ಯಾವುದೇ ಆಸೆ-ಆಮಿಷಗಳಿಗೆ ಒಳಗಾಗದೇ ಪತ್ರಕರ್ತರು ನಿರ್ಭೀತವಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಪತ್ರಿಕೋದ್ಯಮ, ಪತ್ರಕರ್ತರು ನೈತಿಕತೆಯನ್ನು ಮರೆತು ಮಾರಾಟವಾಗುತ್ತಿರುವುದು ಮತ್ತು ಯೆಲ್ಲೋ ಜರ್ನಲಿಸಂ ಬೆಳೆಯುತ್ತಿರುವುದು ಅತ್ಯಂತ ಖೇದಕರ ಎಂದು ವಿಷಾದ ವ್ಯಕ್ತಪಡಿಸಿದರು. ಇಂದು ಸರಕಾರಿ ಸ್ವಾಮ್ಯದ ದೂರದರ್ಶನ ಹೊರತುಪಡಿಸಿ ಖಾಸಗಿ ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗುವ ಸುದ್ದಿಗಳು ನಂಬಲು ಅರ್ಹವೇ ಎಂದು ಪ್ರಶ್ನಿಸುವಂತಾಗಿದೆ. ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಬೇಕಾದ ಮಾಧ್ಯಮಗಳು ಪಕ್ಷಪಾತಿಯಾಗುತ್ತಿರುವುದು ಸರಿಯಲ್ಲ ಎಂದರು.
ಮುಖ್ಯ ಅಥಿತಿಗಳಾಗಿದ್ದ ನರ ಶಸ್ತ್ರಚಿಕಿತ್ಸಾ ತಜ್ಞ ಡಾ| ವಿನೋದ್ ಕುಮಾರ್ ಮಾತನಾಡಿ, ಜೇಸಿಐ ಸಂಸ್ಥೆಯು ಸಮಾಜಮುಖೀ ಕೆಲಸಗಳನ್ನು ಮಾಡುತ್ತಾ ವ್ಯಕ್ತಿತ್ವ ವಿಕಸನಗೊಳಿಸುತ್ತಿರುವುದು ಮಾತ್ರವಲ್ಲದೇ ಸಮಾಜದ ಆಗುಹೋಗುಗಳಿಗೆ ಸ್ಪಂದಿಸುತ್ತಿರುವುದು ಅಭಿನಂದನಾರ್ಹ ಎಂದರು. 2021ರ ಸಾಲಿಗೆ ಅಧ್ಯಕ್ಷರಾಗಿ ನೀಯೋಜಿತರಾದ ತೀರ್ಥಹಳ್ಳಿಯ ಮೊನೋ ಆರ್ಟ್ಸ್ ಇದರ ಮಾಲೀಕರಾದ ಜೇಸಿ ಮನೋಜ್ ಕುಮಾರ್ ಅವರಿಗೆ ನಿರ್ಗಮಿತ ಅಧ್ಯಕ್ಷ ಜೇಸಿ ಶಶಿಧರ್ ಭಟ್ ಅವರು ಅ ಧಿಕಾರ ಹಸ್ತಾಂತರಿಸಿದರು. ಜೇಸಿಐ ವಲಯ 24ರ ಅಧ್ಯಕ್ಷ ಜೇಸಿಐ ಸೆನೆಟರ್ ಪ್ರಶಾಂತ್ ದೊಡ್ಡಮನೆ, ಜೇಸಿಐ ವಲಯ 24ರ ಉಪಾಧ್ಯಕ್ಷ ಜೇಸಿ ಅನುಷ್ ಗೌಡ ಇದ್ದರು.
2020ರ ಸಾಲಿನ ಕಾರ್ಯದರ್ಶಿಗಳಾದ ಜೇಸಿ ರಾಘವೇಂದ್ರ ಮತ್ತು ಜೇಸಿ ಕವಿತಾ ಪ್ರಭಾಕರ್ 2020ನೇ ಸಾಲಿನ ವಾರ್ಷಿಕ ವರದಿಯನ್ನು ವಾಚಿಸಿದರು. ಜೇಸಿ ವಿನುತ ಮುರುಳಿಧರ್, ಜೇಸಿ ರೂಪಾ ನಟರಾಜ್ ಶೇಟ್, ಜೇಸಿ ವಿನಂತಿ ಪೈ, ಜೇಸಿ ಅಶ್ವಿನಿ ಮೇಲಾಡಿ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ನೂತನ ಸದಸ್ಯರನ್ನು ಜೇಸಿಐ ಕಾರ್ಯದರ್ಶಿ ಜೇಸಿ ನಿಖೀಲ್ ಕಾಮತ್ ಸಭೆಗೆ ಪರಿಚಯಿಸಿ ಕಾರ್ಯಕ್ರಮದ ಕೊನೆಯಲ್ಲಿ ವಂದಿಸಿದರು.
2020ನೇ ಸಾಲಿನ ಜೇಸಿರೇಟ್ ಅಧ್ಯಕ್ಷರಾದ ಜೇಸಿ ಸ್ವಪ್ನ ಶಶಿಧರ್ ಭಟ್, 2021ನೇ ಸಾಲಿನ ಜೇಸಿರೇಟ್ ಅಧ್ಯಕ್ಷರಾದ ಜೇಸಿ ಶ್ವೇತಾ ಮನೋಜ್ ಕುಮಾರ್ ಮತ್ತು ಜೇಸಿರೇಟ್ ಕಾರ್ಯದರ್ಶಿ ನಿಧಿ ನಿಖೀಲ್ ಕಾಮತ್, ಜೆಜೆಸಿ ಅಧ್ಯಕ್ಷರಾದ ಪ್ರಥಮ್ ಎನ್. ಆಚಾರ್ಯ ಮತ್ತು ಕಾರ್ಯಕ್ರಮ ನಿರ್ದೇಶಕರಾದ ಜೇಸಿ ಹರೀಶ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ
Tragedy: ಭೀಕರ ಬೈಕ್ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು
Thirthahalli: ಹಣಗೆರೆಕಟ್ಟೆ ದೇವಸ್ಥಾನದ ಹಣ ಏರು ಪೇರು ಆಗಿದ್ದು ನಿಜವೇ?
ಹಿಂದೂ ಅತ್ಯಂತ ಪುರಾತನವಾದ ಧರ್ಮ: ಡಾ.ನಿರ್ಮಲಾ ನಂದನಾಥ ಸ್ವಾಮೀಜಿ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
MUST WATCH
ಹೊಸ ಸೇರ್ಪಡೆ
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.