ಕಾಂಗ್ರೆಸ್ ಬಲವರ್ಧನೆಗೆ ಸಿಗಂದೂರು ವಿವಾದ ಬಳಕೆ
Team Udayavani, Nov 12, 2020, 5:55 PM IST
ಸಾಗರ: ಚುನಾವಣೆಗಳಲ್ಲಿ ಸೋಲುಂಡಿರುವ ಜಿಲ್ಲೆಯ ಬಹುಪಾಲು ಕಾಂಗ್ರೆಸ್ ನಾಯಕರುಸಿಗಂದೂರು ದೇವಸ್ಥಾನ ವಿವಾದವನ್ನು ತಮ್ಮ ಪಕ್ಷದ ಬಲವರ್ಧನಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ಎಪಿಎಂಸಿ ಅಧ್ಯಕ್ಷ ಹಾಗೂ ಈಡಿಗ ಸಮುದಾಯದ ಪ್ರಮುಖ ಚೇತನರಾಜ್ ಕಣ್ಣೂರು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಿಮ್ಮನೆ ರತ್ನಾಕರ್, ಮಧು ಬಂಗಾರಪ್ಪ, ಶಾರದಾ ಪೂರ್ಯಾನಾಯ್ಕ, ಗೋಪಾಲಕೃಷ್ಣ ಬೇಳೂರುಹಿಂದುಳಿದವರನ್ನು ತುಳಿಯುತ್ತಿದ್ದಾರೆ ಎಂದುಬಿಂಬಿಸಿಕೊಳ್ಳುವ ಮೂಲಕ ಪಕ್ಷ ಸಂಘಟನೆಗೆಬಳಸಿಕೊಳ್ಳುತ್ತಿರುವುದು ಖಂಡನೀಯ ಎಂದರು.
ಇತ್ತೀಚೆಗೆ ಶಾಸಕ ಹಾಲಪ್ಪ ಅವರು ಜಿಲ್ಲೆಯ ಈಡಿಗ ಜನಾಂಗದ ಪ್ರಮುಖ ನಾಯಕರಾಗಿ ಬೆಳೆಯುತ್ತಿರುವುದನ್ನು ನೋಡಿಸಹಿಸಿಕೊಳ್ಳಲು ಸಾಧ್ಯವಾಗದ ಕೆಲವರು ಅವರ ಮೇಲೆ ಸಿಗಂದೂರು ವಿಷಯ ಇರಿಸಿಕೊಂಡು ಟೀಕಿಸುವ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಕ್ಷೇತ್ರದ ಅಭಿವೃದ್ಧಿಗೆ 400 ಕೋಟಿ ರೂ.ಅನುದಾನ ತಂದಿರುವುದು, ಹಲವು ದಶಕಗಳ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ಕೊಡಿಸುವ ನಿಟ್ಟಿನಲ್ಲಿ ಅವಿರತ ಪ್ರಯತ್ನ ನಡೆಸುತ್ತಿರುವುದು ಕೆಲವು ಕಾಂಗ್ರೆಸ್ ಜನಪ್ರತಿನಿಧಿಗಳ ಹೊಟ್ಟೆಕಿಚ್ಚಿಗೆ ಕಾರಣವಾಗಿದೆ. ಶಾಸಕರನ್ನು ಗುರಿಯಾಗಿಸಿ ಈಡಿಗರಿಗೆ ತಪ್ಪು ಮಾಹಿತಿ ಕೊಡುವ ಪ್ರಯತ್ನ ನಡೆದಿದೆ ಎಂದು ದೂರಿದರು.
ಜಿಪಂ ಸದಸ್ಯ ರಾಜಶೇಖರ ಗಾಳಿಪುರ ಮಾತನಾಡಿ, ಬಿಜೆಪಿಯ ನಾಯಕರೆಲ್ಲರೂ ಸಿಗಂದೂರು ದೇವಿಯ ಆರಾಧಕರು. ಈ ವಿವಾದ ಭುಗಿಲೇಳಲು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಮುಜರಾಯಿಗೆ ಸೇರಿಸುವ ಹೇಳಿಕೆಯೇ ಕಾರಣವಾಗಿದೆ. ಹಾಲಪ್ಪನವರು ಮುಖ್ಯಮಂತ್ರಿಗಳ ಬಳಿ ಯಾವುದೇ ಕಾರಣಕ್ಕೂ ಸಿಗಂದೂರುದೇವಸ್ಥಾನವನ್ನು ಮುಜರಾಯಿಗೆ ಸೇರಬಾರದು ಎಂದು ನೇರವಾಗಿ ಹೇಳಿದ್ದಾರೆ. ಪ್ರಸ್ತುತ ಸಿಗಂದೂರು ದೇವಸ್ಥಾನಕ್ಕೆ ನೇಮಕಮಾಡಿರುವ ಸಲಹಾ ಸಮಿತಿ ರಚನೆಯಲ್ಲಿ ಶಾಸಕರ ಪಾತ್ರವಿಲ್ಲ ಎಂದು ಪ್ರತಿಪಾದಿಸಿದರು.
ಗೋಷ್ಠಿಯಲ್ಲಿ ತಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಸುವರ್ಣ ಟೀಕಪ್ಪ, ಸದಸ್ಯ ದೇವೇಂದ್ರಪ್ಪ ಯಲಕುಂದ್ಲಿ, ಬಿಜೆಪಿ ಯುವ ಮೋರ್ಚಾ ಗ್ರಾಮಾಂತರ ಘಟಕದ ಅಧ್ಯಕ್ಷ ಅರುಣ ಕುಗ್ವೆ, ಪ್ರಮುಖರಾದ ಅರುಣಸೂರನಗದ್ದೆ, ಹರೀಶ್ ಮೂಡಳ್ಳಿ, ಆನಂದ ಮೇಸ್ತ್ರಿ ಹಾಜರಿದ್ದರು.
ಬಹುತೇಕ ಸಿಗಂದೂರು ಹೋರಾಟದಲ್ಲಿ ಪಾಲ್ಗೊಂಡಿರುವವರ ಆರೋಪ ಹರತಾಳು ಹಾಲಪ್ಪ, ಬಿ.ವೈ.ರಾಘವೇಂದ್ರ ಹಾಗೂ ಕೆ.ಎಸ್.ಗುರುಮೂರ್ತಿ ಅವರ ಮೇಲೆ ಇದೆ. ಸಭೆಯಲ್ಲಿ ಸಿಗಂದೂರು ವಿವಾದ ಕುರಿತು ದಾಖಲೆಗಳ ಮೂಲಕ ಸಿಗಂದೂರು ದೇವಸ್ಥಾನಕ್ಕೆ ಸಲಹಾ ಸಮಿತಿ ರಚಿಸುವಲ್ಲಿ ಬಿಜೆಪಿ ಪಾತ್ರ ಇಲ್ಲ. ಬಿಜೆಪಿ ಧಾರ್ಮಿಕ ಕ್ಷೇತ್ರದಲ್ಲಿ ಯಾವುದೇ ಹಸ್ತಕ್ಷೇಪ ಮಾಡಿಲ್ಲ. ದೇವಸ್ಥಾನವಿಷಯಕ್ಕೆ ಸಂಬಂಧಪಟ್ಟಂತೆ ಆಯಾಕಾಲಘಟ್ಟದಲ್ಲಿ ಸಾಗರ ಕ್ಷೇತ್ರದ ಜನ ಪ್ರತಿನಿಧಿಗಳು ನಿರ್ವಹಿಸಿದ ರೀತಿ ಕುರಿತು ದಾಖಲೆ ಬಿಡುಗಡೆ ಮಾಡಲಾಗುವುದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್!
Parade: ಗಣರಾಜ್ಯೋತ್ಸವಕ್ಕೆ 15 ಸ್ತಬ್ಧಚಿತ್ರ ಆಯ್ಕೆ: ಮತ್ತೆ ದೆಹಲಿಗೆ ಕೊಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.