ಮೆಕ್ಕೆ ಜೋಳ ಖರೀದಿಗೆ ಅವಕಾಶ
Team Udayavani, May 17, 2020, 4:37 PM IST
ಸಾಂದರ್ಭಿಕ ಚಿತ್ರ
ಶಿಕಾರಿಪುರ: ಸಂಡ ಪಶು ಆಹಾರ ಘಟಕ ಮೆಕ್ಕೆಜೋಳ ಖರೀದಿ ಕುರಿತು ಅಧಿಕಾರಿಗಳ ಜೊತೆ ಸಂಸದ ಬಿ.ವೈ. ರಾಘವೇಂದ್ರ ಚರ್ಚಿಸಿದ್ದು, ಕೆಎಂಎಫ್ ಇಡೀ ರಾಜ್ಯದಲ್ಲಿ ಒಟ್ಟು 5 ಘಟಕಗಳು ಕಾರ್ಯ ನಿರ್ವಹಿಸುತ್ತೀವೆ. ಇದರಲ್ಲಿ ಜಿಲ್ಲೆಯ ಶಿಕಾರಿಪುರ ಸಂಡ ಕೂಡ ಒಂದಾಗಿದೆ ಎಂದರು.
ರಾಜ್ಯದಲ್ಲಿ ಮೆಕ್ಕೆಜೋಳ ಖರೀದಿ ಕೆಎಂಎಫ್ ನಿಂದ 9 ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಲಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರ ಸೇರಿ ಕ್ವಿಂಟಲ್ ಗೆ ಒಟ್ಟು,1750 ರೂ ಬೆಂಬಲ ಬೆಲೆ ಘೋಷಣೆ ಮಾಡಿದೆ. ಸೊಸೈಟಿಗಳ ಮೂಲಕ ರೈತರಿಗೆ ಮಾಹಿತಿ ನೀಡಿ ಇಂದಿನಿಂದ ಅಧಿಕೃತವಾಗಿ ಖರೀದಿ ಆರಂಭವಾಗಿದೆ. ಸಣ್ಣ ಅತೀ ಸಣ್ಣ ರೈತ ಶಿವಮೊಗ್ಗ ದಾವಣಗೆರೆ, ಚಿತ್ರದುರ್ಗ, ಮೂರು ಜಿಲ್ಲೆಯ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಖರೀದಿ ಕೇಂದ್ರ ತೆರೆಯಲಾಗಿದೆ. ಕೃಷಿ ಇಲಾಖೆಯ ವೆಬ್‌ಸೈಟ್ ಮೂಲಕ ರೈತನ ಜಮೀನಿನ ಎಲ್ಲ ದಾಖಲೆಗಳು ಸಿಗುತ್ತದೆ. ಈಗಾಗಲೇ ಶಿವಮೊಗ್ಗ ಜಿಲ್ಲೆಯಲ್ಲಿ ಬೆಳೆಗಳನ್ನು 5105 ಹೇಕ್ಟೆರ್ ಭೂಮಿಯಲ್ಲಿ 2ಕ್ಕೂ ಹೆಚ್ಚು ಮೆಟ್ರಿಕ್ ಟನ್ ಜೋಳ ಬೆಳೆದಿದ್ದಾರೆ. 2,75,500 ಮೆಕ್ಕೆಜೋಳ ಇರಬಹುದು ಎಂದು ಅಂದಾಜಿಸಲಾಗಿದ್ದು, ಅದರಲ್ಲಿ ಅರ್ಧ ಮಾತ್ರ ಮಾರಕಟ್ಟೆಗೆ ಸಿಗಬಹುದು. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಎಂಎಫ್ ಶಿವಮೊಗ್ಗ ಎಲ್ಲ ಕೇಂದ್ರಗಳಲ್ಲಿ 8000 ಮೆಟ್ರಿಕ್ ಟನ್ ಖರೀದಿಗೆ ಅನೂಕೂಲ ಮಾಡಿಕೊಟ್ಟಿದ್ದಾರೆ ಅವರಿಗೆ ಅಭಿನಂದನೆ ತಿಳಿಸಿದ್ದರು.
ಅತೀ ಸಣ್ಣ ಸಣ್ಣ ರೈತರಿಗೆ ಅನುಕೂಲ ವಾಗುವಂತೆ ಈ ವ್ಯವಸ್ಥೆ ಮಾಡಲಾಗಿದೆ. ಅಧಿ ಕೃತವಾಗಿ ಇಂದಿನಿಂದ ಖರೀದಿ ಆರಂಭವಾಗಿದೆ. ತಹಶೀಲ್ದಾರ್ ಕೃಷಿ ನಿರ್ದೇಶಕರು, ಅಧಿಕಾರಿಗಳು ರೈತರು ಗೊಂದಲ ಪಡುವ ಅಗತ್ಯವಿಲ್ಲ ಎಂದರು. ಕೆಎಂಎಫ್ ನೋಡಲ್ ಅಧಿಕಾರಿ ಹೇಮಶೇಖರ್, ಕೆಎಂಎಫ್ ವ್ಯವಸ್ಥಾಪಕ ಶಿವಾನಂದ, ಗುರುಮೂರ್ತಿ, ಸಿದ್ದಲಿಂಗಪ್ಪ, ಟಿ.ಎಸ್ ಮೋಹನ್, ಸುಕೇಂದ್ರಪ್ಪ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Shimoga: ಮಲೆನಾಡಿನಲ್ಲಿ ಮುಂದುವರಿದ ಕಾಡಾನೆ ಕಾಟ; ಇಲಾಖೆ ವಿರುದ್ದ ರೈತರ ಆಕ್ರೋಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.