ಆಗುಂಬೆ ಘಾಟಿ ಈ ಬಾರಿಯೂ ಬಂದ್‌?

ರಸ್ತೆ ನಿರ್ವಹಣೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯ |ಮಳೆಗಾಲದಲ್ಲಿ ಘಾಟಿಯಲ್ಲಿ ಗುಡ್ಡ ಕುಸಿಯುವ ಆತಂಕ

Team Udayavani, Jun 3, 2020, 3:35 PM IST

03-June-12

ಸಾಂದರ್ಭಿಕ ಚಿತ್ರ

ಶಿವಮೊಗ್ಗ: ಮಧ್ಯ ಕರ್ನಾಟಕ ಮತ್ತು ಕರಾವಳಿಯನ್ನು ಬೆಸೆಯುವ ಪ್ರಮುಖ ರಸ್ತೆಯಾಗಿರುವ ಆಗುಂಬೆ ರಸ್ತೆ ಈ ಬಾರಿಯ ಮಳೆಗಾಲದಲ್ಲಿ ಬಂದ್‌ ಆಗುವುದು ನಿಚ್ಚಳವಾಗಿದೆ. ಮಳೆಗಾಲ ಆರಂಭವಾಗಿದ್ದರೂ ಈ ವರೆಗೆ ಆಗುಂಬೆ ಘಾಟಿ ರಸ್ತೆಯನ್ನು ನಿರ್ವಹಣೆ ಮಾಡುವ ಗೋಜಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿಲ್ಲ. ಗುಡ್ಡದಲ್ಲಿರುವ ಚರಂಡಿಗಳು ಕಸತುಂಬಿ ಬ್ಲಾಕ್‌ ಆಗಿದ್ದು ಕುಸಿಯುವ ಆತಂಕ ತಂದೊಡ್ಡಿದೆ.

2018 ರಲ್ಲಿ ಗುಡ್ಡ ಕುಸಿತದಿಂದಾಗಿ ಹಲವು ತಿಂಗಳು ಸಂಚಾರ ಬಂದ್‌ ಆಗಿತ್ತು. 2019ರಲ್ಲೂ ವಿಪರೀತ ಮಳೆ ಹಾಗೂ ದುರಸ್ತಿ ಕಾರಣಕ್ಕೆ ರಸ್ತೆ ಬಂದ್‌ ಮಾಡಲಾಗಿತ್ತು. ಕಳೆದ ಬಾರಿ ದಾಖಲೆ ಪ್ರಮಾಣದಲ್ಲಿ ಮಳೆ ಸುರಿದಿದ್ದರಿಂದ ಅನೇಕ ಅನಾಹುತಗಳೇ ಸಂಭವಿಸಿದ್ದವು. ಆದರೂ ಈ ಬಾರಿ ಮಳೆಗಾಲ ಆರಂಭಗೊಳ್ಳುವ ಮುನ್ನ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿಲ್ಲ.

ಕುಸಿತಕ್ಕೆ ಕಾರಣ: ಆಗುಂಬೆ ಘಾಟಿ ರಸ್ತೆಯ ಮೇಲ್ಭಾಗದಲ್ಲಿ ಹಿಲ್‌ ಸ್ಲೋಪ್‌, ರಸ್ತೆಯ ಕೆಳಗೆ ವ್ಯಾಲಿ ಸ್ಲೋಪ್‌ ಇದ್ದು, ಮಳೆ ನೀರು ರಸ್ತೆ ಬದಿ ನಿರ್ಮಾಣ ಮಾಡಿರುವ ಚರಂಡಿಯಲ್ಲಿ ಹರಿಯುತ್ತದೆ. ಹೂಳು ತುಂಬಿ ಚರಂಡಿ ಮುಚ್ಚಿಕೊಂಡಿದ್ದರೆ ಗುಡ್ಡದಿಂದ ಹರಿಯುವ ನೀರು ರಸ್ತೆ ಮೇಲೆ ಹರಿದು ರಸ್ತೆಗೆ ಹಾನಿ ಮಾಡುವುದಲ್ಲದೆ ಗಾರ್ಡ್‌ ವಾಲ್‌ ಪಕ್ಕ ಹರಿಯಲು ಪ್ರಾರಂಭಿಸುತ್ತದೆ. ಈ ಗಾರ್ಡ್‌ ವಾಲ್‌ ಪಕ್ಕ ಟೆಲಿಫೋನ್‌, ಇತರೆ ಕೇಬಲ್‌ಗ‌ಳನ್ನು ಹಾಕಲಾಗಿದ್ದು, ಈ ಜಾಗದ ಮಣ್ಣು ಸಡಿಲವಾಗಿದೆ. ನೀರು ಗಾರ್ಡ್‌ ವಾಲ್‌ ಪಕ್ಕ ರಭಸವಾಗಿ ಹರಿಯಲಾರಂಭಿಸಿದರೆ ಸಬ್‌ ಬೇಸ್‌, ಸಬ್‌ ಗ್ರೇಡ್‌ಗೆ (ರಸ್ತೆಯ ಅಡಿಪಾಯ) ಇಳಿದು ಗುಡ್ಡ ಕುಸಿಯುವ ಆತಂಕ ಇದೆ. ಘಾಟಿ ರಸ್ತೆಯ ಹಲವೆಡೆ ಚರಂಡಿಗಳು ಬ್ಲಾಕ್‌ ಆಗಿವೆ. ಮರಗಳು ಉರುಳಿದ್ದು ಈವರೆಗೂ ತೆರವು ಮಾಡಿಲ್ಲ. ಗುಡ್ಡದ ಒಂದು ತೆರವಿನಲ್ಲಿ ಒಂದು ಕಡೆ ಕುಸಿತವಾಗಿದ್ದು ಅದನ್ನು ಈವರೆಗೂ ಶಾಶ್ವತ ದುರಸ್ತಿ ಮಾಡದೆ ಮರಳು ಚೀಲಗಳನ್ನು ಇಟ್ಟು ಕೈ ತೊಳೆದುಕೊಳ್ಳಲಾಗಿದೆ.

ಶಿವಮೊಗ್ಗದಿಂದ ಉಡುಪಿಗೆ ಹೋಗುವವರು ಆಗುಂಬೆ ಘಾಟಿ ಅಥವಾ ಹುಲಿಕಲ್‌ ಘಾಟಿ ರಸ್ತೆ ಬಳಸುತ್ತಾರೆ. ಮಳೆಗಾಲದಲ್ಲಿ ಈ ಎರಡು ರಸ್ತೆಗಳೂ ಬಂದ್‌ ಆಗಿರುವ ಅನೇಕ ಉದಾಹರಣೆಗಳಿವೆ. ಅತ್ತ ಉಡುಪಿಯಿಂದ ಶಿವಮೊಗ್ಗ, ಶೃಂಗೇರಿ, ಕೊಪ್ಪಕ್ಕೆ ಹೋಗುವವರು ಆಗುಂಬೆ ಮೂಲಕವೇ ಬರಬೇಕು. ವೈದ್ಯಕೀಯ ಸೇವೆಗೆ ಹೆಸರುವಾಗಿಯಾಗಿರುವ ಮಣಿಪಾಲಕ್ಕೆ ಮಧ್ಯ ಕರ್ನಾಟಕದಿಂದ ಹೋಗುವ ಸಾವಿರಾರು ಜನ ಇದೇ ಮಾರ್ಗವನ್ನು ಅವಲಂಬಿಸಿದ್ದಾರೆ. ಕೋವಿಡ್ ಲಾಕ್‌ಡೌನ್‌ ಕಾರಣ ಎರಡು ತಿಂಗಳ ಕಾಲ ಆಸ್ಪತ್ರೆಗೆ ತೆರಳಲಾಗದೆ ವನವಾಸ ಪಡುತ್ತಿದ್ದ ರೋಗಿಗಳಿಗೆ ಈಗ ಮತ್ತೆ ಅಡ್ಡಿಯುಂಟಾಗುವ ಸಾಧ್ಯತೆ ಇದೆ. ರಸ್ತೆ ದುರಸ್ತಿ ಮಾಡದಿದ್ದರೆ ಅನಾಹುತಕ್ಕೆ ಅವಕಾಶ ಮಾಡಿಕೊಟ್ಟಂತೆಯೇ ಸರಿ ಎಂಬುದು ಜನರ ಅಭಿಪ್ರಾಯವಾಗಿದೆ.

ಸರಕಾರದ ಅನುದಾನ ತಡವಾದರೆ ಟಾಸ್ಕ್ ಫೋರ್ಸ್ ಮೂಲಕ ಸಣ್ಣಪುಟ್ಟ ದುರಸ್ತಿ ಕಾಮಗಾರಿಗೆ ಹಣ ಮೀಸಲಿಡಲಾಗುತ್ತಿತ್ತು. ಆಗುಂಬೆ ಘಾಟಿ ನಿರ್ವಹಣಾ ಕಾಮಗಾರಿಗೆ ಸದ್ಯದ ಮಟ್ಟಿಗೆ 50 ಸಾವಿರ ವೆಚ್ಚವಾಗಬಹುದು. ರಸ್ತೆ ಕುಸಿದರೆ 5 ಕೋಟಿ ಕೂಡ ಆಗಬಹುದು. ಮುಂಜಾಗ್ರತೆಯಿಂದ ರಸ್ತೆ ದುರಸ್ತಿ ಮಾಡಬೇಕು. ಸೋಮವಾರ ಈ ಬಗ್ಗೆ ಗಮನಿಸಿ ಇಲಾಖೆ ಗಮನಕ್ಕೆ ತಂದಿದ್ದೇನೆ.
ಬಾಲಕೃಷ್ಣ ಶ್ರೀನಿವಾಸ್‌,
ನಿವೃತ್ತ ಎಂಜಿನಿಯರ್‌, ಪಿಡಬ್ಲ್ಯೂಡಿ

ಆಗುಂಬೆ ಘಾಟಿ ರಸ್ತೆ ಸಂಚಾರಕ್ಕೆ ನಿರ್ವಹಣೆ ಹಾಗೂ ದುರಸ್ತಿ ಕಾರ್ಯ ನಡೆಯುತ್ತಿದೆ. ಆ ಬಗ್ಗೆ ನಿರಂತರ ನಿಗಾ ವಹಿಸಲಾಗಿದೆ.
ಶಿವಕುಮಾರ್‌ ಕೆ.ಬಿ.,
ಜಿಲ್ಲಾಧಿಕಾರಿ, ಶಿವಮೊಗ್ಗ

ಶರತ್‌ ಭದ್ರಾವತಿ

ಟಾಪ್ ನ್ಯೂಸ್

10

ODI: ಶ್ರೀಲಂಕಾ ಬ್ಯಾಟಿಂಗ್‌ ಕುಸಿತ ನ್ಯೂಜಿಲ್ಯಾಂಡ್‌ಗೆ ಸುಲಭ ಜಯ

Yathanaa

BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್‌

7

‌RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್‌ ಕುಮಾರ್

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

1-wewq

Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ

BYv-SMG

ಕಾಂಗ್ರೆಸ್‌ನಲ್ಲಿ ಸಿದ್ದು ವರ್ಸಸ್‌ ಯುದ್ಧ: ಬಿ.ವೈ.ವಿಜಯೇಂದ್ರ ಟೀಕೆ

SMG-Meggan

Shivamogga: ಮೆಗ್ಗಾನ್‌ ಆಸ್ಪತ್ರೆಯಲ್ಲಿ ಬಾಣಂತಿ ಸಾವು

1-sdasad

Shivamogga: ಭದ್ರಾ ಜಲಾಶಯದ ಎಡದಂಡೆ ನಾಲೆಗೆ ಇಂದಿನಿಂದಲೇ ನೀರು

6=anadpura

Anandapura: ಅಪರಿಚಿತ ವ್ಯಕ್ತಿಯ ಶವ ಪತ್ತೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

10

ODI: ಶ್ರೀಲಂಕಾ ಬ್ಯಾಟಿಂಗ್‌ ಕುಸಿತ ನ್ಯೂಜಿಲ್ಯಾಂಡ್‌ಗೆ ಸುಲಭ ಜಯ

Yathanaa

BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್‌

de

Kundapura: ಗುಲ್ವಾಡಿ; ಗಾಯಾಳು ಸಾವು

7

‌RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್‌ ಕುಮಾರ್

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.