ಶಿವಮೊಗ್ಗ ಪಾಲಿಕೆ: ನೂತನ ಮೇಯರ್, ಉಪ ಮೇಯರ್ ಆಯ್ಕೆ
Team Udayavani, Oct 28, 2022, 4:42 PM IST
![ಶಿವಮೊಗ್ಗ ಪಾಲಿಕೆ: ನೂತನ ಮೇಯರ್, ಉಪ ಮೇಯರ್ ಆಯ್ಕೆ](https://www.udayavani.com/wp-content/uploads/2022/10/shi-620x342.jpg)
![ಶಿವಮೊಗ್ಗ ಪಾಲಿಕೆ: ನೂತನ ಮೇಯರ್, ಉಪ ಮೇಯರ್ ಆಯ್ಕೆ](https://www.udayavani.com/wp-content/uploads/2022/10/shi-620x342.jpg)
ಶಿವಮೊಗ್ಗ: ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಶಿವಕುಮಾರ್, ಉಪ ಮೇಯರ್ ಆಗಿ ಲಕ್ಷ್ಮಿಶಂಕರ ನಾಯ್ಕ್ ಅವರು ಆಯ್ಕೆಯಾಗಿದ್ದಾರೆ.
ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಚುನಾವಣೆ ನಡೆಸಲಾಯಿತು. ಮೇಯರ್ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು. ಬಿಜೆಪಿಯಿಂದ ಗುರುಪುರ – ಪುರಲೆ ವಾರ್ಡ್ ಪಾಲಿಕೆ ಸದಸ್ಯ ಶಿವಕುಮಾರ್ ಮತ್ತು ಕಾಂಗ್ರೆಸ್ ಪಕ್ಷದಿಂದ ಮಲವಗೊಪ್ಪದ ವಾರ್ಡ್ ಪಾಲಿಕೆ ಸದಸ್ಯ ಆರ್.ಸಿ.ನಾಯ್ಕ್ ಸ್ಪರ್ಧೆ ಮಾಡಿದ್ದರು.
ಚುನಾವಣೆಯಲ್ಲಿ ಬಿಜೆಪಿಯ ಶಿವಕುಮಾರ್ ಅವರಿಗೆ 26 ಮತಗಳು ಲಭಿಸಿವೆ. ಜೆಡಿಎಸ್ –ಕಾಂಗ್ರೆಸ್ ಒಮ್ಮತದ ಅಭ್ಯರ್ಥಿ ಆರ್.ಸಿ.ನಾಯ್ಕ್ ಅವರಿಗೆ 11 ಮತಗಳು ಸಿಕ್ಕಿವೆ.
ಇದನ್ನೂ ಓದಿ:ಬಿಜೆಪಿ ಸರಕಾರದಿಂದ ಕಾಸಿಗಾಗಿ ಪೋಸ್ಟಿಂಗ್: ಕುಮಾರಸ್ವಾಮಿ ಆರೋಪ
ಇನ್ನು, ಉಪ ಮೇಯರ್ ಸ್ಥಾನ ಬಿಸಿಎಂ (ಎ) ವರ್ಗದ ಮಹಿಳೆಗೆ ಮೀಸಲಾಗಿತ್ತು. ಬಿಜೆಪಿಯಿಂದ ನ್ಯೂ ಮಂಡ್ಲಿ ವಾರ್ಡ್ ಸದಸ್ಯೆ ಲಕ್ಷ್ಮಿಶಂಕರ ನಾಯ್ಕ್ ಮತ್ತು ಕಾಂಗ್ರೆಸ್ ಪಕ್ಷದಿಂದ ಹೊಸಮನೆ ವಾರ್ಡ್ ಸದಸ್ಯೆ ರೇಖಾ ರಂಗನಾಥ್ ಅವರು ಸ್ಪರ್ಧೆ ಮಾಡಿದ್ದರು.
ಅಂತಿಮವಾಗಿ ಲಕ್ಷ್ಮಿ ಶಂಕರನಾಯ್ಕ್ ಅವರಿಗೆ 26 ಮತಗಳು ಲಭಿಸಿವೆ. ರೇಖಾ ರಂಗನಾಥ್ ಅವರಿಗೆ 11 ಮತಗಳು ಒಲಿದಿವೆ. ಪ್ರಾದೇಶಿಕ ಆಯುಕ್ತ ಆದಿತ್ಯ ಆಮ್ಲನ್ ಬಿಸ್ವಾಸ್ ಅವರು ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![10-Thirthahalli](https://www.udayavani.com/wp-content/uploads/2025/02/10-Thirthahalli-150x90.jpg)
![10-Thirthahalli](https://www.udayavani.com/wp-content/uploads/2025/02/10-Thirthahalli-150x90.jpg)
Thirthahalli: ಖಾಸಗಿ ಬಾರ್ ಕ್ಯಾಶಿಯರ್ ಬೈಕ್ ಅಪಘಾತದಲ್ಲಿ ನಿಧನ!
![9-shivamogga](https://www.udayavani.com/wp-content/uploads/2025/02/9-shivamogga-150x90.jpg)
![9-shivamogga](https://www.udayavani.com/wp-content/uploads/2025/02/9-shivamogga-150x90.jpg)
Shivamogga: ಹೆರಿಗೆ ಬಳಿಕ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಯಲ್ಲಿ ಬಾಣಂತಿ ಸಾವು
![6-thirthahalli](https://www.udayavani.com/wp-content/uploads/2025/02/6-thirthahalli-150x90.jpg)
![6-thirthahalli](https://www.udayavani.com/wp-content/uploads/2025/02/6-thirthahalli-150x90.jpg)
Kuppalli: ಅದ್ದೂರಿ ಮಂತ್ರ ಮಾಂಗಲ್ಯ; ಕುವೆಂಪು ಪ್ರತಿಷ್ಠಾನ ಸಮಕಾರ್ಯದರ್ಶಿ ರಾಜೀನಾಮೆ ?
![Shimoga: ಅಧಿಕಾರಿ ವಿರುದ್ದ ದರ್ಪ ತೋರಿದ ಶಾಸಕರ ಪುತ್ರನ ವಿರುದ್ದ ನಿಖಿಲ್ ಗರಂ](https://www.udayavani.com/wp-content/uploads/2025/02/nikhil-150x84.jpg)
![Shimoga: ಅಧಿಕಾರಿ ವಿರುದ್ದ ದರ್ಪ ತೋರಿದ ಶಾಸಕರ ಪುತ್ರನ ವಿರುದ್ದ ನಿಖಿಲ್ ಗರಂ](https://www.udayavani.com/wp-content/uploads/2025/02/nikhil-150x84.jpg)
Shimoga: ಅಧಿಕಾರಿ ವಿರುದ್ದ ದರ್ಪ ತೋರಿದ ಶಾಸಕರ ಪುತ್ರನ ವಿರುದ್ದ ನಿಖಿಲ್ ಗರಂ
![ಈಡಿಗರು ಸತ್ತಿಲ್ಲ, ಮಹಿಳಾ ಅಧಿಕಾರಿ ಹೆದರಬೇಕಿಲ್ಲ: ಪ್ರಣವಾನಂದ ಶ್ರೀ](https://www.udayavani.com/wp-content/uploads/2025/02/Pranavananda-Swamiji-150x91.jpg)
![ಈಡಿಗರು ಸತ್ತಿಲ್ಲ, ಮಹಿಳಾ ಅಧಿಕಾರಿ ಹೆದರಬೇಕಿಲ್ಲ: ಪ್ರಣವಾನಂದ ಶ್ರೀ](https://www.udayavani.com/wp-content/uploads/2025/02/Pranavananda-Swamiji-150x91.jpg)
ಈಡಿಗರು ಸತ್ತಿಲ್ಲ, ಮಹಿಳಾ ಅಧಿಕಾರಿ ಹೆದರಬೇಕಿಲ್ಲ: ಪ್ರಣವಾನಂದ ಶ್ರೀ