ಜಿಲ್ಲೆಯಲ್ಲಿ 31ಮಂದಿಗೆ ಕೋವಿಡ್ ದೃಢ
Team Udayavani, Jul 5, 2020, 12:25 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಶಿವಮೊಗ್ಗ: ಜಿಲ್ಲೆಯಲ್ಲಿ ಶನಿವಾರ 31 ಕೋವಿಡ್ -19 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಇದು ಈವರೆಗಿನ ಅಧಿಕ ಪ್ರಕರಣಗಳಾಗಿವೆ. ಜಿಲ್ಲೆಯಲ್ಲಿ ಈವರೆಗೆ 253 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. 117 ಮಂದಿ ಗುಣಮುಖರಾಗಿದ್ದು, 132 ಸಕ್ರಿಯ ಪ್ರಕರಣಗಳಿವೆ.
ನಾಲ್ಕು ಮಂದಿ ಮರಣ ಹೊಂದಿದ್ದಾರೆ. ಶನಿವಾರ 14 ಕೋವಿಡ್-19 ಶಿವಮೊಗ್ಗ ನಗರದಲ್ಲೇ ಪತ್ತೆಯಾಗಿವೆ. ನಗರದ ರವಿವರ್ಮ ಬೀದಿಯಲ್ಲಿಯೇ 7 ಪಾಸಿಟಿವ್ ಕೇಸುಗಳು ದೃಢಪಟ್ಟಿವೆ. ಪಿ-16647 ನಂ.ನ ಸೋಂಕಿತನಿಂದ ರವಿವರ್ಮ ಬೀದಿಯ 7 ಜನರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಪಿ-14387 ನಂ. ನ ಸೊಂಕಿತ ಸೊರಬದ ಎಲೆಕ್ಟ್ರಿಕ್ ಕಂಟ್ರ್ಯಾಕ್ಟರ್‌ನಿಂದ 12 ಜನರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಸೊರಬದಲ್ಲಿ ಆತಂಕ ಮನೆ ಮಾಡಿದೆ.
ಶಿವಮೊಗ್ಗ-14, ಶಿಕಾರಿಪುರ -5, ಭದ್ರಾವತಿ -2, ಸಾಗರ-2, ಹೊಸನಗರ – 2, ಸೊರಬದಲ್ಲಿ – 11 ಕೇಸುಗಳು ಸೇರಿ 31 ಪ್ರಕರಣಗಳು ಪತ್ತೆಯಾಗಿವೆ. ಪಿ-19757 ನಂ. ನಿಂದ ಪಿ-19787 ರವರೆಗಿನ ಸೋಂಕಿತರಿಗೆ ಮೆಗ್ಗಾನ್ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದಿನೇ ದಿನೇ ಕೊರೊನಾ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಬೆಳಗ್ಗೆ 10 ರಿಂದ ಸಂಜೆ 6 ಗಂಟೆ ವರೆಗೆ ಮಾತ್ರ ವ್ಯಾಪಾರ-ವಹಿವಾಟು ನಡೆಸಲು ಅನುಮತಿ ನೀಡಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
Hunsur: ಬಸ್ ಡಿಕ್ಕಿಯಾಗಿ ಪಾದಾಚಾರಿ ಸಾವು
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.