ನಿಲ್ಲದ ಕೋವಿಡ್ ಕೇಕೆ
ಜಿಲ್ಲೆಯಲ್ಲಿ ಮತ್ತೆ ಆರು ಮಂದಿಗೆ ಸೋಂಕು |ಸೋಂಕಿಂತರ ಸಂಖ್ಯೆ 89
Team Udayavani, Jun 13, 2020, 1:23 PM IST
ಶಿವಮೊಗ್ಗ: ಜಿಲ್ಲೆಯಲ್ಲಿ ಶುಕ್ರವಾರ 6 ಮಂದಿಗೆ ಕೋವಿಡ್ ವೈರಸ್ ಕಾಣಿಸಿಕೊಂಡಿದ್ದು, ಒಟ್ಟು ಸೋಂಕಿತರ ಸಂಖ್ಯೆ 89ಕ್ಕೆ ಏರಿಕೆಯಾಗಿದೆ. ಹಾಗೆಯೇ, 43 ಜನ ಗುಣಮುಖರಾಗಿ ಹೋಂ ಕ್ವಾರಂಟೈನ್‌ನಲ್ಲಿ ಇದ್ದಾರೆ. 46 ಸಕ್ರಿಯ ಪ್ರಕರಣಗಳಿವೆ.
ಶುಕ್ರವಾರ ಪತ್ತೆಯಾದ 6 ಪ್ರಕರಣಗಳಲ್ಲಿ ಇಬ್ಬರು ಮಹಾರಾಷ್ಟ್ರದಿಂದ ವಾಪಸಾದವರಾಗಿದ್ದು, ಮೂವರಿಗೆ ಪಿ 2830 ಸಂಪರ್ಕದಿಂದ ಬಂದಿದೆ. ಬೆಂಗಳೂರಿನಿಂದ ಪಾದರಾಯನಪುರ ಡ್ನೂಟಿಯಲ್ಲಿದ್ದ ಕೆಎಸ್‌ಆರ್‌ಪಿ ಪೇದೆಗಳು ಈಚೆಗೆ ಜಿಲ್ಲೆಗೆ ಮರಳಿದ್ದರು. ಅವರಲ್ಲಿ 7 ಮಂದಿಗೆ ಪಾಸಿಟಿವ್ ಬಂದಿತ್ತು. ಇದರಲ್ಲಿ ಪಿ 2830 ಸಂಪರ್ಕದಲ್ಲಿದ್ದ ಮೂವರಿಗೆ ಕೋವಿಡ್ ದೃಢಪಟ್ಟಿದೆ.
12 ಮಂದಿ ಬಿಡುಗಡೆ: ಒಂದೆಡೆ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಇತ್ತ ಗುಣಮುಖರಾಗಿ ಮನೆಗೆ ತೆರಳುತ್ತಿರುವ ಪ್ರಮಾಣವೂ ಹೆಚ್ಚಳವಾಗಿದೆ. ಶುಕ್ರವಾರ ಒಟ್ಟು 12 ಮಂದಿ ಗುಣಮುಖರಾಗಿದ್ದಾರೆ. ಪಿ 1499, ಪಿ 1501, ಪಿ 1503, ಪಿ 2852, ಪಿ 2853, ಪಿ 3854, ಪಿ 2855, ಪಿ3194, ಪಿ 3304, ಪಿ 3305, ಪಿ 3306, ಪಿ 3308 ಗುಣಮುಖರಾದವರು.
ವೈದ್ಯೆಗೆ ಕೋವಿಡ್: ಇನ್ನೂ ಜಿಲ್ಪಾಸ್ಪತ್ರೆಯಲ್ಲಿ ಕೋವಿಡ್-19 ಚಿಕಿತ್ಸೆ ನೀಡುತ್ತಿರುವ ಹೊರಗುತ್ತಿಗೆ ಟ್ರೈನಿ ವೈದ್ಯೆಗೂ ಸೋಂಕು ಹರಡಿದೆ. ಅಷ್ಟೆಲ್ಲ ಮುಂಜಾಗ್ರತಾ ಕ್ರಮ ಕೈಗೊಂಡರೂ ಸೋಂಕು ಹರಡಿರುವುದು ವೈದ್ಯರಲ್ಲಿ ಆತಂಕ ಮನೆ ಮಾಡಿದೆ. ರಕ್ಷಕರಿಗೇ ರಕ್ಷಣೆ ಇಲ್ಲದಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
40 percent commission ಸುಳ್ಳು ಸಾಬೀತು : ಕಾಂಗ್ರೆಸಿಗರಿಗೆ ತಾಕೀತು ಮಾಡಿದ ಯಡಿಯೂರಪ್ಪ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Shimoga; ಪೆಟ್ರೋಲ್ ಹಾಕುವಾಗ ಹೊತ್ತಿ ಉರಿದ ಓಮಿನಿ
Covid ವೇಳೆ ಜೀವ ಉಳಿಸುವ ಕೆಲಸ ಮಾಡಿದ್ದೇವೆ: ಬಿಎಸ್‌ವೈ
Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.