ಕ್ರಿಕೆಟ್ ಕ್ರೀಡಾಂಗಣದ ಸಮಸ್ಯೆಗೆ ಶಾಶ್ವತ ಪರಿಹಾರ
ಮಳೆ ನೀರು ಹೊರಹಾಕಲು ಹೊಸ ವ್ಯವಸ್ಥೆ ರಣಜಿ ಪಂದ್ಯದ ನಂತರ ಕಾಮಗಾರಿ ಆರಂಭ
Team Udayavani, Jan 27, 2020, 1:17 PM IST
ಶಿವಮೊಗ್ಗ: ಇಂಗ್ಲೆಂಡ್‌ನ ಲಾರ್ಡ್ಸ್ ಮೈದಾನದ ಮಾದರಿಯಲ್ಲಿ ನಿರ್ಮಾಣವಾಗಿರುವ ನವುಲೆಯ ಕ್ರೀಡಾಂಗಣ ಮಳೆ ಬಂದರೆ ಮಾತ್ರ ಕೆರೆಯಂತೆ ಗೋಚರಿಸುತ್ತದೆ. ಈ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಕೆಎಸ್ ಸಿಎ ತೀರ್ಮಾನಿಸಿದ್ದು, ಫೆಬ್ರವರಿಯಲ್ಲಿ ನಡೆಯುವ ರಣಜಿ ಪಂದ್ಯದ ನಂತರ ಕಾಮಗಾರಿ ಆರಂಭವಾಗಲಿದೆ.
ಈ ಮೈದಾನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ಆಡಲು ಯೋಗ್ಯವಾಗಿದೆ. ಈಗಾಗಲೇ ರಣಜಿ, ಅಂಡರ್ 19, ಅಂಡರ್ 21, ವಲಯ ಮಟ್ಟದ ಪಂದ್ಯಗಳು ನಡೆಯುತ್ತಿವೆ. ಆದರೆ ಮಳೆಗಾಲದಲ್ಲಿ ನೀರು ತುಂಬಿ ಕೆರೆಯಂತಾಗುವ ಪರಿಣಾಮ ಅಂತಾರಾಷ್ಟ್ರೀಯ ಮಟ್ಟದ ಪಂದ್ಯ ಆಯೋಜನೆಗೆ ಹಿನ್ನಡೆಯಾಗಿದೆ.
ಕ್ರೀಡಾಂಗಣ ನಿರ್ಮಾಣವಾಗಿ ನಾಲ್ಕು ವರ್ಷವಾಗಿದ್ದು ಎರಡು ಬಾರಿ ಮಳೆಗೆ ಮುಳುಗಿದೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಶಿವಮೊಗ್ಗ ಕೆಎಸ್‌ಸಿಎ ಸಿದ್ಧತೆ ಮಾಡಿಕೊಂಡಿದೆ.
ನೀರು ಹೊರ ಹಾಕಲು ವ್ಯವಸ್ಥೆ: ಮಳೆ ನೀರು ಹೊರ ಹೋಗಲು ಪ್ರಸ್ತುತ ಆರು ಇಂಚು ಅಗಲದ ಪೈಪ್‌ಗ್ಳಿವೆ. ಆದರೆ ಮಳೆ ಅಬ್ಬರ ಜೋರಾದರೆ ಮೂರು ಅಡಿ, 3.5 ಅಡಿ ನೀರು ನಿಲ್ಲುತ್ತದೆ. ಮೈದಾನದಲ್ಲಿ ತುಂಬಿಕೊಳ್ಳುವ ನೀರು ಹೊರ ಹೋಗುವ ಪೈಪ್‌ಲೈನ್ ಪ್ರಮಾಣ ಕಡಿಮೆ ಇರುವುದರಿಂದ ಮೈದಾನ ಕೆರೆಯಂತೆ ಕಾಣುತ್ತದೆ. ಇದಕ್ಕೆ ಪರಿಹಾರವಾಗಿ ದೊಡ್ಡ ಪೈಪ್‌ಗ್ಳನ್ನು ಅಳವಡಿಸಲು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಪರಿಹಾರ ಸೂಚಿಸಿದ್ದಾರೆ.
ರಣಜಿಗೆ ಸಿದ್ಧತೆ: ಫೆ.4ರಿಂದ 7ರವರೆಗೆ ಕರ್ನಾಟಕ ಹಾಗೂ ಮಧ್ಯಪ್ರದೇಶ ತಂಡಗಳ ನಡುವೆ ನಡೆಯಲಿರುವ ರಣಜಿ ಪಂದ್ಯಕ್ಕೆ ಕ್ರೀಡಾಂಗಣ ಸಜ್ಜಾಗುತ್ತಿದೆ. ಸಿದ್ಧತೆ ಕುರಿತು ಪರಿಶೀಲನೆ ನಡೆಸಲು ಬಿಸಿಸಿಐನ ಕ್ಯುರೇಟರ್ ಸುಜನ್ ಮುಖರ್ಜಿ ಆಗಮಿಸುತ್ತಿದ್ದಾರೆ. ಈಗಾಗಲೇ ಆಧುನಿಕ ಯಂತ್ರಗಳೊಂದಿಗೆ ಪಿಚ್ ಹಾಗೂ ಹೊರ ಆವರಣಕ್ಕೆ ಹೊಸ ರೂಪ ನೀಡುವ ಜತೆಗೆ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಸೈಡ್ ಸ್ಕ್ರೀನ್, ಕ್ಯಾಮೆರಾ ಸ್ಟ್ಯಾಂಡ್, ಸ್ಕೋರ್ ಬೋರ್ಡ್ ಅಳವಡಿಸಲಾಗುತ್ತಿದ್ದು, ಪೆವಿಲಿಯನ್, ಡ್ರೆಸಿಂಗ್ ರೂಂ ಸಿದ್ಧಗೊಂಡಿವೆ.
ಪೇಕ್ಷಕರಿಗೆ ಆಸನಗಳ ವ್ಯವಸ್ಥೆ ಕಲ್ಪಿಸುವ ಕಾರ್ಯವೂ ಭರದಿಂದ ಸಾಗಿದೆ. ನಾಲ್ಕು ದಿನ ನಡೆಯಲಿರುವ ಪಂದ್ಯಕ್ಕೆ ಎರಡು ತಂಡದ ಆಟಗಾರರು, ಕೋಚ್‌ಗಳು ಆಗಮಿಸುತ್ತಿದ್ದು ಇವರೆಲ್ಲರೂ ತಂಗಲು ರಾಯಲ್ ಆರ್ಕೆಡ್ ಹೊಟೇಲ್‌ನಲ್ಲಿ ವ್ಯವಸ್ಥೆ ಮಾಡಲಾಗಿದೆ.
ಮೈದಾನದಲ್ಲಿ ನೀರು ನಿಲ್ಲುವ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸಲಾಗಿದೆ. ರಣಜಿ ಪಂದ್ಯ ಮುಗಿದ ನಂತರ ಕಾಮಗಾರಿ ಆರಂಭಿಸಲಾಗುವುದು. ಪಂದ್ಯಕ್ಕೆ ಎಲ್ಲ ಸಿದ್ಧತೆ ಪೂರ್ಣಗೊಂಡಿದೆ. ಹಾಗೆಯೇ ಈ ವರ್ಷ ಇಂಡಿಯಾ “ಎ’ ತಂಡದ ಪಂದ್ಯಗಳನ್ನು ಶಿವಮೊಗ್ಗದಲ್ಲಿ ಆಯೋಜಿಸಲು ಬಿಸಿಸಿಐಗೆ ಮನವಿ ಮಾಡಲಾಗಿದೆ. ಪಂದ್ಯ ಹಾಗೂ ಆಟಗಾರರಿಗೆ ಬೇಕಾದ ಸೌಕರ್ಯಕ್ಕೆ ಕೊರತೆ ಇಲ್ಲ. ಅಂತಾರಾಷ್ಟ್ರೀಯ ಪಂದ್ಯಗಳು ಮೆಟ್ರೋಪಾಲಿಟನ್ ಸಿಟಿಗೆ ಸೀಮಿತವಾಗಿದೆ. ಅದನ್ನು ಶಿವಮೊಗ್ಗಕ್ಕೆ ತರುವ ಎಲ್ಲ ಪ್ರಯತ್ನ ಮಾಡಲಾಗುವುದು. ವಿಮಾನ ನಿಲ್ದಾಣ ಪೂರ್ಣಗೊಂಡರೆ ಆ ಕನಸು ಈಡೇರಲಿದೆ.
ಡಿ.ಎಸ್. ಅರುಣ್,
ವಲಯ ಸಂಚಾಲಕ, ಕೆಎಸ್‌ಸಿಎ
ಅಂತಾರಾಷ್ಟ್ರೀಯ ಪಂದ್ಯದ ಕನಸು ನನಸು ?
ಪಿಚ್ ಅಂತಾರಾಷ್ಟ್ರೀಯ ಗುಣಮಟ್ಟ ಹೊಂದಿದ್ದರೂ ಸಾಕಷ್ಟು ಸೌಕರ್ಯಗಳ ಕೊರತೆಯಿದೆ. ಸಾಗರ ರಸ್ತೆಯಲ್ಲಿ ಸ್ಟಾರ್ ಹೊಟೇಲ್ ನಿರ್ಮಾಣ ಒಂದೆರಡು ತಿಂಗಳಲ್ಲಿ ಪೂರ್ಣಗೊಳ್ಳುವ ಭರವಸೆ ಇದ್ದು, ಅಂತಾರಾಷ್ಟ್ರೀಯ ಆಟಗಾರರ ವಾಸ್ತವ್ಯಕ್ಕೆ ಅನುಕೂಲವಾಗಲಿದೆ. ಅದೇ ರೀತಿ ವಿಮಾನ ನಿಲ್ದಾಣ ಕಾಮಗಾರಿ 2021 ಮಾರ್ಚ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದ್ದು ಅಂತಾರಾಷ್ಟ್ರೀಯ ಪಂದ್ಯದ ಕನಸು ನನಸಾಗಲಿದೆ.
ಶರತ್ ಭದ್ರಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Hosanagara: ರಸ್ತೆ ಅಪಘಾತದಲ್ಲಿ ಪತಿ ಮೃತಪಟ್ಟ ಸುದ್ದಿ ಕೇಳಿ ಆತ್ಮಹತ್ಯೆಗೆ ಶರಣಾದ ಪತ್ನಿ
Thirthahalli: ಅದ್ಧೂರಿಯಾಗಿ ನಡೆದ ಎಳ್ಳಮಾವಾಸ್ಯೆ ರಥೋತ್ಸವ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.