ಶತಮಾನದ ಸೇತುವೆಗೆ ಆಧುನಿಕ ಸ್ಪರ್ಶ
1.50 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕುಂದಾಪುರದ ಕಂಪನಿಗೆ ಕಾಮಗಾರಿ ಟೆಂಡರ್
Team Udayavani, Mar 21, 2020, 3:40 PM IST
ಶಿವಮೊಗ್ಗ: ಅಧಿಕಾರಿಗಳ ನಿರ್ಲಕ್ಷ್ಯದಿಂದ ತನ್ನ ಅಂದ ಕಳೆದುಕೊಂಡು ದುಸ್ಥಿತಿಯಲ್ಲಿರುವ ಶಿವಮೊಗ್ಗ ನಗರದ ಶತಮಾನದ ಸೇತುವೆ ಈಗ ಆಧುನಿಕ ಸ್ಪರ್ಶ ಪಡೆದುಕೊಳ್ಳುತ್ತಿದೆ.
ಶತಮಾನಗಳಿಂದ ಜನರಿಗೆ ಸೇವೆ ನೀಡುತ್ತಿರುವ ಈ ಸೇತುವೆ ಈಚೆಗೆ ಸುರಿದ ಮಳೆಗೆ ನಲುಗುತ್ತಿದ್ದು, ಲೋಕೋಪಯೋಗಿ ಇಲಾಖೆ ಸೇತುವೆ ಇನ್ನಷ್ಟು ವರ್ಷ ಬಾಳಿಕೆ ಬರುವಂತೆ ಮಾಡಲು ಯೋಜನೆ ರೂಪಿಸಿದೆ. 1.50 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದೆ.
ಬ್ರಿಟಿಷರ ಕಾಲದಲ್ಲಿ ನಿರ್ಮಿಸಿರುವ ಈ ಸೇತುವೆಗೆ 150 ವರ್ಷ ತುಂಬುತ್ತಾ ಬಂದಿದೆ. ನಿತ್ಯ ನೂರಾರು ವಾಹನ ಸಂಚರಿಸಿವೆ. ಆದರೆ, ಗುಣಮಟ್ಟದ ಆಯಸ್ಸು ಮಾತ್ರ ಮಿಸುಕಾಡಿಲ್ಲ. ಸೈಜುಗಲ್ಲು, ಸುಣ್ಣದ ಕಲ್ಲು, ಬೆಲ್ಲ, ಮರಳು ಇತ್ಯಾದಿ ಮೆಟೀರಿಯಲ್ ಬಳಸಿ ಕಟ್ಟಿದ ಈ ಸೇತುವೆ 1878ರಲ್ಲಿ ನಿರ್ಮಾಣಗೊಂಡಿದೆ.
53.38 ಮೀಟರ್ ಎತ್ತರ, 761.25 ಅಡಿ ಉದ್ದ, 26.65 ಮೀಟರ್ ಅಗಲ ವಿಸ್ತೀರ್ಣ ಹೊಂದಿರುವ ಈ ಸೇತುವೆ ಒಟ್ಟು 15 ಪಿಲ್ಲರ್‌ಗಳ ಮೇಲೆ ನಿಂತಿದೆ. ಜತೆಗೆ 15 ಕಮಾನುಗಳಿವೆ. ಪ್ರತಿಯೊಂದು ಕಮಾನು 53.13 ಅಡಿ ಅಗಲವಿದೆ. ಕೆಂಪು ಇಟ್ಟಿಗೆ ಹಾಗೂ ಗಾರೆಯಿಂದ ಇದನ್ನು ನಿರ್ಮಿಸಲಾಗಿದೆ. 150 ವರ್ಷ ಕಳೆದರೂ ಇದು ಇಂದಿಗೂ ಗಟ್ಟಿ ಮುಟ್ಟಾಗಿದೆ. ಈ ಬಾರಿ ಸುರಿದ ಭಾರಿ ಮಳೆಗೆ ತುಂಗಾ ನದಿ ಮೈದುಂಬಿ ಹರಿಯಿತು.
ಸಂದರ್ಭದಲ್ಲಿ ಸೇತುವೆ ಹಾಗೂ ರಸ್ತೆ ನಡುವೆ ಬಿರುಕು ಕಾಣಿಸಿಕೊಂಡಿದ್ದ ಪರಿಣಾಮ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು.
ಜಾಕೆಟ್, ಮೈಕ್ರೋ ಕಾಂಕ್ರೀಟ್: ಸೇತುವೆಯ ಆಧಾರ ಸ್ತಂಭದ ಗಾರೆಯು ಕೆಲವು ಕಡೆ ಉದುರಿಹೋಗಿದ್ದು ಇಟ್ಟಿಗೆ ಕಾಣುತ್ತಿದೆ. ಮತ್ತೆ ನೀರು ಹೆಚ್ಚಾದರೆ ಈ ಇಟ್ಟಿಗೆಗಳು ಕರಗಿ ಪಿಲ್ಲರ್ ಗಳಿಗೆ ಆತಂಕ ತರುವ ಸಾಧ್ಯತೆ ಇದೆ. ಹೀಗಾಗಿ ಪಿಲ್ಲರ್‌ಗಳನ್ನು ರಕ್ಷಿಸಲು ಜಾಕೆಟ್ ಅಳವಡಿಸಲು ಇಲಾಖೆ ಮುಂದಾಗಿದೆ. ಪಿಲ್ಲರ್ ಸುತ್ತಲೂ ಕಬ್ಬಿಣದ ಮೆಶ್ ರಚಿಸಿ ಅದಕ್ಕೆ ಮೈಕ್ರೋ ಕಾಂಕ್ರೀಟ್ ಹಾಕಿ ಕವರ್ ಮಾಡಲಾಗುತ್ತಿದೆ.
ಅದೇ ರೀತಿ ಸೇತುವೆ ತಡೆಗೋಡೆಗಳು ಸಹ ಶಿಥಿಲಗೊಂಡಿವೆ. ಸೇತುವೆ ಮೇಲೆ ಗಿಡಗಂಟೆಗಳು ಬೆಳೆದು ಇಟ್ಟಿಗೆಗಳು ಶಕ್ತಿ ಳೆದುಕೊಂಡಿವೆ. ಇದನ್ನು ಬಲಪಡಿಸಲು ಗ್ರೌಟಿಂಗ್ ತಂತ್ರಜ್ಞಾನ ಬಳಸಿ ಸಂದಿ, ಮೂಲೆಗಳಲ್ಲಿ ಕೆಮಿಕಲ್ ಮಿಶ್ರಣ ಸೇರಿಸಲಾಗುತ್ತಿದೆ. ಈ ಮಿಶ್ರಣವು ಸಣ್ಣ ಬಿರುಕುಗಳನ್ನು ಮುಚ್ಚುವುದಲ್ಲದೇ ಅಲ್ಲೇ ಗಟ್ಟಿಕೊಳ್ಳುತ್ತದೆ.
ಏಪ್ರಿಲ್ ಒಳಗೆ ಕಾಮಗಾರಿ ಮುಕ್ತಾಯ: ಈ ಸೇತುವೆಯಲ್ಲಿರುವ ಕಮಾನುಗಳಲ್ಲಿ ಕೆಲವೊಂದು ತುಂಬಾ ಹಾನಿಗೊಳಗಾಗಿವೆ. ಇವುಗಳನ್ನು ತೆಗೆದು ಹೊಸದಾಗಿ ಹಾಕುವುದು. ಸೇತುವೆಯಲ್ಲಿ ಆಳೆತ್ತರಕ್ಕೆ ಬೆಳೆದಿರುವುದರಿಂದ ಅವುಗಳ ಬೇರುಗಳು ಆಳವಾಗಿ ನೆಲೆಯೂರಿರುವುದರಿಂದ ಪಕ್ಕದ ಸ್ಲ್ಯಾಬ್‌ಗಳು ಕುಸಿಯು ಹಂತ ತಲುಪಿವೆ. ಹೀಗಾಗಿ ಗಿಡಗಳನ್ನು ಬುಡ ಸಮೇತ ತೆಗೆದು ಹಾಕಿ, ಆಸಿಡ್ ಮಾದರಿ ಕೆಮುಕಲ್ ಹಾಕಿ ಮತ್ತೆ ಗಿಡ ಬೆಳೆಯದಂತೆ
ನೋಡಿಕೊಳ್ಳಲಾಗುತ್ತಿದೆ.
ಕುಂದಾಪುರದ ಫಿಲಿಪ್ ಡಿಕೋಸ್ಟಾ ಅಂಡ್ ಕಂಪನಿಯವರಿಗೆ ಕಾಮಗಾರಿ ಟೆಂಡರ್ ನೀಡಲಾಗಿದೆ. ಕಳೆದ 15 ದಿನಗಳಿಂದ ಕಾಮಗಾರಿ ನಡೆಯುತ್ತಿದೆ. ನಿತ್ಯ 70ಕ್ಕೂ ಅ ಧಿಕ ಮಂದಿ ಕೆಲಸವನ್ನು ಮಾಡುತ್ತಿದ್ದಾರೆ. ಏಪ್ರಿಲ್ ಒಳಗೆ ಕಾಮಗಾರಿ ಮುಗಿಸಲಾಗುವುದು ಎನ್ನುತ್ತಾರೆ ಎಂಜಿನಿಯರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.