ಲಾಕ್‌ಡೌನ್‌ನಲ್ಲೂ ನರೇಗಾ ಆಶಾವಾದ
ಕೆರೆ ಹೂಳೆತ್ತುವ ಕಾಮಗಾರಿಗೆ ಬೇಡಿಕೆ18734 ಜನರಿಗೆ ಉದ್ಯೋಗ1.55 ಕೋಟಿ ರೂ. ವೇತನ ಪಾವತಿ
Team Udayavani, Apr 23, 2020, 7:20 PM IST
ಶಿವಮೊಗ್ಗ: ನರೇಗಾ ಕಾಮಗಾರಿ ಸ್ಥಳಕ್ಕೆ ಸಚಿವ ಕೆ.ಎಸ್. ಈಶ್ವರಪ್ಪ ಭೇಟಿ ನೀಡಿದರು.
ಶಿವಮೊಗ್ಗ: ಕೋವಿಡ್ ಲಾಕ್‌ಡೌನ್ ಇದ್ದರೂ ದುಡಿಯುವ ಕೈಗಳಿಗೆ ಕೆಲಸ ಕೊಡಲು ಸರಕಾರ ಯಶಸ್ವಿಯಾಗಿದೆ. ಕೆಲಸ ಮಾಡಲು ಆಕಸ್ತಿಯುಳ್ಳ ಎಲ್ಲರಿಗೂ ನರೇಗಾ ಮೂಲಕ ಕೆಲಸ ಕೊಡಲಾಗಿದೆ. ನಿರೀಕ್ಷಿತ ಗುರಿ ತಲುಪದಿದ್ದರೂ ಆಶಾದಾಯಕವಾಗಿದೆ.
ಜಿಲ್ಲೆಯಲ್ಲಿ 2,14,996 ಜಾಬ್ ಕಾರ್ಡ್ಗಳಿದ್ದು ಇದರಲ್ಲಿ 486434 ಮಂದಿ ಸದಸ್ಯರಿದ್ದಾರೆ. ಇದರಲ್ಲಿ 1,30 ಲಕ್ಷ ಜಾಬ್ ಕಾರ್ಡ್‌ಗಳು ಸಕ್ರಿಯವಾಗಿದ್ದು 2.39 ಲಕ್ಷ
ಮಂದಿ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಜಿಲ್ಲೆಯಲ್ಲಿ 18734 ಜನರು ಉದ್ಯೋಗಕ್ಕೆ ಬೇಡಿಕೆ ಸಲ್ಲಿಸಿದ್ದು ಎಲ್ಲರಿಗೂ ಕೆಲಸ ಕೊಡಲಾಗಿದೆ.
18 ಸಾವಿರ ಮಂದಿ: ಏ.1ರಿಂದ ಏ.22ರವರೆಗೆ ಜಿಲ್ಲೆಯಲ್ಲಿ 18734 ಮಂದಿ ಉದ್ಯೋಗ ಬೇಕೆಂದು ಬೇಡಿಕೆ ಸಲ್ಲಿಸಿದ್ದು ಎಲ್ಲರೂ ಕೆರೆ ಹೂಳೆತ್ತುವ, ವೈಯಕ್ತಿಕ ಕಾಮಗಾರಿಗಳಲ್ಲಿ ತೊಡಗಿಕೊಂಡಿದ್ದಾರೆ. ಪ್ರತಿ ವರ್ಷ ಕೆರೆ ಹೂಳೆತ್ತುವ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುತಿತ್ತು. ಈ ಬಾರಿ ಹೆಚ್ಚಿನ ಬೇಡಿಕೆ ಬಂದಿಲ್ಲ. ಮಾರ್ಚ್ ತಿಂಗಳಲ್ಲಿ ಒಂದಿಷ್ಟು ಕೆಲಸ ಚುರುಕಾಗಿತ್ತು. ಏಪ್ರಿಲ್ ನಂತರ ಅಷ್ಟೇನು ಬೇಡಿಕೆ ಬಂದಿಲ್ಲ. ಆದರೂ ಕೇಳಿದವರಿಗೆಲ್ಲ ಕೆಲಸ ಸಿಕ್ಕಿದೆ. ಜತೆಗೆ 1.55 ಕೋಟಿ ರೂ. ವೇತನ ಪಾವತಿ ಮಾಡಲಾಗಿದೆ.
ಗುರಿ ಹೆಚ್ಚಳ: ನರೇಗಾ ಅನುಷ್ಠಾನದಲ್ಲಿ ಶಿವಮೊಗ್ಗ ಜಿಲ್ಲೆ 2019-20ನೇ ಸಾಲಿನಲ್ಲಿ ಉತ್ತಮ ಸಾಧನೆ ಮಾಡಿತ್ತು. ಇದನ್ನು ಪರಿಗಣಿಸಿ ಈ ಬಾರಿ ಗುರಿಯನ್ನು 45 ಲಕ್ಷ ಮಾನವ ದಿನಗಳಿಗೆ ಏರಿಕೆ ಮಾಡಲಾಗಿದೆ. 2018-19ನೇ ಸಾಲಿನಲ್ಲಿ ಸತತ ಚುನಾವಣೆಗಳಿದ್ದ ಕಾರಣ ಗುರಿ ಮುಟ್ಟಿರಲಿಲ್ಲ. 2019-20ರಲ್ಲಿ ಗುರಿ ತಲುಪಿತ್ತು. 2020-21ನೇ ಆರ್ಥಿ ವರ್ಷಕ್ಕೆ ಗುರಿ ಹೆಚ್ಚಿಸಲಾಗಿದೆ. ಬೇಸಿಗೆ ಸಮಯದಲ್ಲಿ ಕೆರೆ ಹೂಳೆತ್ತುವ ಕಾಮಗಾರಿಗಳಿಗೆ ಬೇಡಿಕೆ ಬರುತ್ತದೆ. ಕೊರೊನಾ ಕಾರಣ ಜನರು ಮನೆಯಿಂದ ಹೊರಬರದ ಕಾರಣ ಏಪ್ರಿಲ್ ತಿಂಗಳಲ್ಲಿ ಹಿನ್ನಡೆಯಾಗಿದೆ.
ಸಾಮಾಜಿಕ ಅಂತರ
ಕೆಲಸದ ಪ್ರದೇಶದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪ್ರತಿ ಕೆಲಸಗಾರರಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಗಿದೆ. ಪ್ರತಿಯೊಬ್ಬರಿಗೂ ಗ್ರಾಪಂ ವತಿಯಿಂದ ಮಾಸ್ಕ್, ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ. ಕೆರೆ ಹೂಳೆತ್ತುವ ಕಾಮಗಾರಿಗಳಲ್ಲಿ ಸಾಮಾಜಿಕ ಅಂತರಕ್ಕೆ ಆದ್ಯತೆ ನೀಡಲಾಗಿದ್ದು, 5 ಜನರ ಒಂದು ಗುಂಪು ಮಾಡಲಾಗಿದೆ. ಪ್ರತಿಯೊಬ್ಬರಿಗೂ 1 ಕ್ಯೂಬಿಕ್ ಮೀಟರ್ ಕೆಲಸದ ಸ್ಥಳ ನಿಗದಿ ಮಾಡಿದ್ದು ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಸೂಚಿಸಲಾಗಿದೆ ಎನ್ನುತ್ತಾರೆ ಜಿಪಂ ಯೋಜನಾ ನಿರ್ದೇಶಕ ಕೆ.ಬಿ. ವೀರಾಪುರ.
ಹೂಳೆತ್ತುವ ಕಾಮಗಾರಿ
ಕೆರೆ ಹೂಳೆತ್ತುವ ಕಾಮಗಾರಿಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಜತೆಗೆ ವೈಯಕ್ತಿಕ ಕಾಮಗಾರಿಗಳಾದ ಕೊಟ್ಟಿಗೆ, ಮನೆ, ಅಡಕೆ ತೋಟ ನಿರ್ಮಾಣ ಕಾಮಗಾರಿಗಳನ್ನು ನೀಡಲಾಗಿದೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಶರತ್ ಭದ್ರಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Shimoga: ಮಲೆನಾಡಿನಲ್ಲಿ ಮುಂದುವರಿದ ಕಾಡಾನೆ ಕಾಟ; ಇಲಾಖೆ ವಿರುದ್ದ ರೈತರ ಆಕ್ರೋಶ
MUST WATCH
ಹೊಸ ಸೇರ್ಪಡೆ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.