![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Oct 24, 2023, 8:09 AM IST
ಶಿವಮೊಗ್ಗ: ಈ ಬಾರಿಯ ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ತಾಲೀಮು ನಡೆಸಿದ್ದ 28 ವರ್ಷದ ನೇತ್ರಾವತಿ ಆನೆಯು ಸೋಮವಾರ ರಾತ್ರಿ ಹೆಣ್ಣು ಮರಿಗೆ ಜನ್ಮನೀಡಿದೆ.
ಕೆಲವು ವರ್ಷಗಳಿಂದ ಶಿವಮೊಗ್ಗ ದಸರಾದಲ್ಲಿ ಬೆಳ್ಳಿ ಅಂಬಾರಿ ಹೊರಲು ಮೂರು ಆನೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ಈ ಬಾರಿಯು ಅಂಬಾರಿ ಹೊರುವ ಸಾಗರನ ಜತೆ ಯಾವ ಆನೆಗಳನ್ನು ಕಳುಹಿಸಬೇಕು ಎಂದು ಗೊಂದಲ ಮೂಡಿತ್ತು. ಕುಂತಿ ಈಚೆಗೆ ಮರಿ ಹಾಕಿತ್ತು. ಭಾನುಮತಿ ತುಂಬು ಗರ್ಭಿಣಿಯಾಗಿತ್ತು. ಹಾಗಾಗಿ ಸಾಗರ ಆನೆ ಜತೆ ನೇತ್ರಾವತಿ, ಹೇಮಾವತಿ ಆನೆಗಳನ್ನು ಕಳುಹಿಸಲಾಗಿತ್ತು. ಕಳೆದ 15 ದಿನಗಳಿಂದ ಸಕ್ರೆಬೈಲು ಆನೆ ಬಿಡಾರದಲ್ಲಿ ತಾಲೀಮು ಸಹ ನಡೆದಿತ್ತು. ಮೂರು ದಿನದ ಹಿಂದೆ ಶಿವಮೊಗ್ಗ ನಗರಕ್ಕೆ ಕರೆತಂದು ಮೆರವಣಿಗೆ ಮಾರ್ಗದಲ್ಲಿ ಬೆಳಗ್ಗೆ ಸಂಜೆ ತಾಲೀಮು ನಡೆಸಲಾಗುತಿತ್ತು. ನಿನ್ನೆ ಸಂಜೆ ಕೂಡ ತಾಲೀಮು ಮುಗಿಸಿ ವಾಸವಿ ಶಾಲೆ ಆವರಣದಲ್ಲಿ ಬೀಡು ಬಿಟ್ಟಿದ್ದವು. ರಾತ್ರಿ 10 ಗಂಟೆ ಸುಮಾರಿಗೆ ನೇತ್ರಾವತಿ ಮರಿಗೆ ಜನ್ಮ ನೀಡಿದ್ದಾಳೆ.
ಗರ್ಭಿಣಿ ಆನೆ ಕರೆತಂದಿದ್ದಕ್ಕೆ ಒಂದೆಡೆ ಟೀಕೆಗಳು ವ್ಯಕ್ತವಾಗುತ್ತಿದ್ದರೆ ಇನ್ನೊಂದೆಡೆ ನೇತ್ರಾವತಿ ಗರ್ಭ ಧರಿಸಿರುವ ಬಗ್ಗೆ ಯಾವುದೇ ಲಕ್ಷಣಗಳನ್ನು ಬಿಟ್ಟು ಕೊಡದಿರುವ ಬಗ್ಗೆ ಸಕ್ರೆಬೈಲು ಆನೆ ಬಿಡಾರದ ಸಿಬ್ಬಂದಿ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ತಿಂಗಳು ಪ್ರೆಗ್ನೆನ್ಸಿ ಟೆಸ್ಟ್ ನಲ್ಲೂ ಸಹ ನೆಗೆಟಿವ್ ಬಂದಿತ್ತು.
ಕಳೆದ ವರ್ಷ ಮೈಸೂರು ದಸರಾದಲ್ಲೂ ಇದೇ ರೀತಿ ಘಟನೆ ನಡೆದಿತ್ತು.
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Thirthahalli: ಖಾಸಗಿ ಬಾರ್ ಕ್ಯಾಶಿಯರ್ ಬೈಕ್ ಅಪಘಾತದಲ್ಲಿ ನಿಧನ!
Shivamogga: ಹೆರಿಗೆ ಬಳಿಕ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಯಲ್ಲಿ ಬಾಣಂತಿ ಸಾವು
Kuppalli: ಅದ್ದೂರಿ ಮಂತ್ರ ಮಾಂಗಲ್ಯ; ಕುವೆಂಪು ಪ್ರತಿಷ್ಠಾನ ಸಮಕಾರ್ಯದರ್ಶಿ ರಾಜೀನಾಮೆ ?
Shimoga: ಅಧಿಕಾರಿ ವಿರುದ್ದ ದರ್ಪ ತೋರಿದ ಶಾಸಕರ ಪುತ್ರನ ವಿರುದ್ದ ನಿಖಿಲ್ ಗರಂ
You seem to have an Ad Blocker on.
To continue reading, please turn it off or whitelist Udayavani.