ಶಿವಮೊಗ್ಗ: ಗ್ರಾ.ಪಂ. ಆವರಣದಲ್ಲೇ ಗುಂಡಿ ತೆಗೆದು ಶವ ಸಂಸ್ಕಾರಕ್ಕೆ ಸಿದ್ದತೆ!
Team Udayavani, Aug 11, 2022, 6:53 PM IST
ಶಿವಮೊಗ್ಗ: ಊರಿನಲ್ಲಿ ಸ್ಮಶಾನವಿಲ್ಲದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಗ್ರಾಮ ಪಂಚಾಯತ್ ಆವರಣದಲ್ಲೇ ಶವ ಸಂಸ್ಕಾರಕ್ಕೆ ಸಿದ್ದತೆ ನಡೆಸಿದ ಘಟನೆ ಸಂತೆ ಕಡೂರು ಗ್ರಾಮದಲ್ಲಿ ನಡೆದಿದೆ.
ಈ ಹಿಂದೆ ಸಂತೆ ಕಡೂರು ಗ್ರಾಮದ ಸ್ಮಶಾನಕ್ಕೆ ಮಂಜೂರಾಗಿದ್ದ ಮೂರು ಎಕರೆ ಜಾಗದಲ್ಲಿ ಕೆಲವರು ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ. ಕಳೆದ ವಾರ ಉಳಿದ ಜಾಗವನ್ನು ಸರ್ವೇ ಮಾಡಲು ಹೋದ ಅಧಿಕಾರಿಗಳ ಎದುರು ಮನೆಗಳನ್ನು ನಿರ್ಮಾಣ ಮಾಡಿಕೊಂಡಿದ್ದವರು ಪ್ರತಿಭಟನೆ ನಡೆಸಿ ವಾಪಸ್ ಕಳುಹಿಸಿದ್ದರು.
ಗುರುವಾರ ಸಂತೆಕಡೂರು ಎಕೆ ಕಾಲನಿಯಲ್ಲಿ ವೃದ್ಧೆ ರಂಗಮ್ಮ ಎನ್ನುವವರು ಮೃತಪಟ್ಟಿದ್ದು, ಅವರ ಶವ ಸಂಸ್ಕಾರಕ್ಕೆಂದು ಸರ್ಕಾರದಿಂದ ಮಂಜೂರಾದ ಸ್ಮಶಾನ ಜಾಗಕ್ಕೆ ಕೊಂಡೊಯ್ದಾಗ ಅಂತಿಮ ಸಂಸ್ಕಾರಕ್ಕೆ ಕೆಲವರು ಅವಕಾಶ ನೀಡಲಿಲ್ಲ. ಇದರಿಂದ ಆಕ್ರೋಶಗೊಂಡು ಗ್ರಾಮಪಂಚಾಯತ್ ಕಾಂಪೌಂಡ್ ಒಳಗೆ ಗುಂಡಿ ತೆಗೆದು ಶವ ಸಂಸ್ಕಾರಕ್ಕೆ ಸಿದ್ಧತೆ ನಡೆಸಲಾಗಿದೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ದೌಡಾಯಿಸಿ ವಿವಾದ ಬಗೆಹರಿಸಿ ಶವ ಸಂಸ್ಕಾರ ಬೇರೆಡೆ ನಡೆಸುವಂತೆ ಮನವೊಲಿಸುವಲ್ಲಿ ನಿರತರಾಗಿದ್ದಾರೆ. ಊರಿನ ಸ್ಮಶಾನದ ಜಾಗ ವಿವಾದದ ಕೇಂದ್ರ ಬಿಂದುವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga: ಮಲೆನಾಡಿನಲ್ಲಿ ಮುಂದುವರಿದ ಕಾಡಾನೆ ಕಾಟ; ಇಲಾಖೆ ವಿರುದ್ದ ರೈತರ ಆಕ್ರೋಶ
B. Y. Raghavendra: 10 ವರ್ಷದಲ್ಲಿ ವಕ್ಫ್ ಆಸ್ತಿ ಶೇ.135 ಹೆಚ್ಚಳ
Thirthahalli: ಪಾದರಕ್ಷೆ, ಮೊಬೈಲ್ ನದಿ ದಡದಲ್ಲಿಟ್ಟು ವ್ಯಕ್ತಿ ನಾಪತ್ತೆ ಪ್ರಕರಣ; ಶವ ಪತ್ತೆ
ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುವ ಯತ್ನಕ್ಕೆ ಹಿನ್ನಡೆ?
Naxal: ವಿಕ್ರಂ ವಿರುದ್ಧ ಆಗುಂಬೆ, ತೀರ್ಥಹಳ್ಳಿ, ಚಿಕ್ಕಮಗಳೂರು ಠಾಣೆಗಳಲ್ಲಿ ಹಲವು ಪ್ರಕರಣ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.