ಹೋಂ ಕ್ವಾರಂಟೈನ್ ಉಲ್ಲಂಘಿಸಿದರೆ ಕ್ರಮ: ಡಿಸಿ
Team Udayavani, Jun 25, 2020, 6:23 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಶಿವಮೊಗ್ಗ: ಗೃಹ ದಿಗ್ಬಂಧನ(ಹೋಂ ಕ್ವಾರಂಟೈನ್) ನಿಯಮ ಉಲ್ಲಂಘನೆ ಯಿಂದ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವುದು ಕಂಡುಬರುತ್ತಿದ್ದು, ಈ ಕುರಿತು ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳು ಹೊರಡಿಸಿರುವ ಆದೇಶ ಹಾಗೂ ಕೋವಿಡ್ ರೋಗಗಳನ್ನು ತಡೆಗಟ್ಟುವ ಸಲುವಾಗಿ ಹೊರಡಿಸಲಾಗಿರುವ ಇತರೆ ನಿರ್ದೇಶನಗಳನ್ನು ಪಾಲಿಸದೇ ಇದ್ದವರ ಮೇಲೆ ಪೊಲೀಸ್ ಠಾಣೆಗಳಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಶಿವಮೊಗ್ಗ ಜಿಲ್ಲೆಗೆ ಮಹಾರಾಷ್ಟ್ರ ಮತ್ತು ಇತರೆ ರಾಜ್ಯಗಳಿಂದ ಆಗಮಿಸುವವರನ್ನು ಸರ್ಕಾರದ ನಿರ್ದೇಶನದಂತೆ 14 ದಿನಗಳ ಗೃಹ ದಿಗ್ಬಂಧನದಲ್ಲಿ ಇರಿಸಿ ಅವರ ಮನೆಗಳನ್ನು ಸೀಲ್‌ಡೌನ್ ಮಾಡಲಾಗುತ್ತಿದೆ. ಗೃಹ ದಿಗ್ಬಂಧನದಲ್ಲಿ ಇರಿಸಿದ ವ್ಯಕ್ತಿ ಗಳು ಯಾವುದೇ ಕಾರಣಕ್ಕೂ ದಿಗ್ಬಂಧನ ನಿಯಮ ಉಲ್ಲಂಘಿಸಿದರೆ ಸೋಂಕು ಸಮುದಾಯಕ್ಕೆ ಹರಡುವ ಸಾಧ್ಯತೆ ಗಳು ಹೆಚ್ಚಿರುತ್ತದೆ. ಮೊದಲ ಬಾರಿ ಎಚ್ಚರಿಕೆ ನೀಡಲಾಗುವುದು. 2ನೇ ಬಾರಿ ಉಲ್ಲಂಘನೆಗೆ ಕೇಸ್ ದಾಖಲಿಸಿ ಸಾಂಸ್ಥಿಕ ದಿಗ್ಬಂಧನಕ್ಕೆ ವರ್ಗಾಯಿಸಲಾಗುವುದೆಂದು ಎಚ್ಚರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thirthahalli: ಹಣಗೆರೆಕಟ್ಟೆ ದೇವಸ್ಥಾನದ ಹಣ ಏರು ಪೇರು ಆಗಿದ್ದು ನಿಜವೇ?
ಹಿಂದೂ ಅತ್ಯಂತ ಪುರಾತನವಾದ ಧರ್ಮ: ಡಾ.ನಿರ್ಮಲಾ ನಂದನಾಥ ಸ್ವಾಮೀಜಿ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ
Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ
MUST WATCH
ಹೊಸ ಸೇರ್ಪಡೆ
Bellary; ವಕ್ಫ್ ಹೆಸರಲ್ಲಿ ದೇವಸ್ಥಾನ, ಮಠಗಳನ್ನು ಕಬಳಿಸಲು ಸರ್ಕಾರ ಮುಂದಾಗಿದೆ: ಜೋಶಿ
Kushtagi: ದ್ಯಾಮವ್ವ ದೇವಿ ಗುಡಿಗೆ ಭಕ್ತರಂತೆ ಹೋಗಿ ದರ್ಶನ ಪಡೆದ ವಾನರ
Thirthahalli: ಹಣಗೆರೆಕಟ್ಟೆ ದೇವಸ್ಥಾನದ ಹಣ ಏರು ಪೇರು ಆಗಿದ್ದು ನಿಜವೇ?
Promotion: ಕೊಡಗಿನ ಮಧು ಮೊಣ್ಣಪ್ಪ ಸುಬೇದಾರ್ ಮೇಜರ್
Niveus Mangalore Marathon 2024: ನ.10: ನೀವಿಯಸ್ ಮಂಗಳೂರು ಮ್ಯಾರಥಾನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.