ಸಮಾಜಕ್ಕೆ ಸೇವಾಲಾಲ ಕೊಡುಗೆ ಅಪಾರ: ಆಯನೂರು
ಲಂಬಾಣಿ ಸಮುದಾಯದವರು ಸ್ವಾಭಿಮಾನಿಗಳು
Team Udayavani, Feb 16, 2020, 12:50 PM IST
ಶಿವಮೊಗ್ಗ: ಬಾಲಬ್ರಹ್ಮಚಾರಿಯಾಗಿ ಧ್ಯಾನ, ತಪಸ್ಸು ಭಕ್ತಿ ಮೂಲಕ ಆಧ್ಯಾತ್ಮವನ್ನು ಅಪ್ಪಿಕೊಂಡು ದೇವರನ್ನು ಒಲಿಸಿಕೊಂಡು ತಮ್ಮ ಜನಾಂಗದ ಸೇವೆ ಮಾಡಿದ ಮಹಾನ್ ಚಿಂತಕರು ಶ್ರೀ ಸೇವಾಲಾಲರು ಎಂದು ವಿಧಾನ ಪರಿಷತ್ ಶಾಸಕ ಆಯನೂರು ಮಂಜುನಾಥ್
ಹೇಳಿದರು.
ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ, ಜಿಲ್ಲಾ ಬಂಜಾರ ಸಂಘದ ವತಿಯಿಂದ ಸಂತ ಶ್ರೀ ಸೇವಾಲಾಲ್ ರ 281ನೇ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು. ಬಾಲ್ಯದಿಂದಲೂ ತಾಂಡಾಗಳ ಒಡನಾಟದಲ್ಲಿ ನಾನು ಬೆಳೆದಿದ್ದು ಭಿಕ್ಷೆ ಬೇಡದೆ ಇರುವ ಏಕೈಕ ಸಮುದಾಯ ಅಂದರೆ ಅದು ಲಂಬಾಣಿ ಸಮುದಾಯ. ಕೆಲ ವ್ಯಕ್ತಿಗಳು ಹುಟ್ಟಿದ ನಂತರ ಕವಿಗಳಾಗುತ್ತಾರೆ. ಆದರೆ ಕವಿಗಳನ್ನೇ ತನ್ನ ಸಮುದಾಯದಲ್ಲಿ ಹುಟ್ಟು ಹಾಕುವ ಏಕೈಕ ಸಮಾಜ ಅದು ಲಂಬಾಣಿ ಸಮಾಜ ಎಂದರು.
ಸೇವಾಲಾಲರ ಪೂರ್ವಜರು ಉತ್ತರ ಭಾರತದಿಂದ ವಲಸೆ ಬಂದವರು. ರಾಣಾ ಪ್ರತಾಪನ ಮರಣಾ ನಂತರ ಕಾಡುವಾಸಿಗಳಾಗಿದ್ದ ಬಣಜಾರರು ಮೊಘಲರ ಸೈನ್ಯಗಳೊಂದಿಗೆ ದಕ್ಷಿಣಕ್ಕೆ ಬಂದರು. ಕಾಲಗತಿಯಲ್ಲಿ ಹತ್ತಾರು ವರ್ಷದವರೆಗೆ ಮರಿಯಮ್ಮನ ಸೇವೆಗೆ ತೊಡಗಿಸಿಕೊಂಡು ಸೇವಾಲಾಲರು ಮಹಾನ್ ಸಾಧಕರಾಗಿ ಮೆರೆದರು. ಇಂದು ಸಂತ ಸೇವಾಲಾಲ್ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಜನನವಾಗಿದ್ದು ಇವತ್ತಿಗೂ ಲಕ್ಷಾಂತರ ಭಕ್ತರು ಸೇರುವ ಮೂಲಕ ಬಣಜಾರ್ ಸಂಸ್ಕೃತಿ ಕಲೆ ಸಾಹಿತ್ಯದಲ್ಲಿ ಎಲ್ಲರಿಗಿಂತ ವಿಭಿನ್ನವಾಗಿ ಗುರುತಿಸಿಕೊಂಡಿದೆ ಎಂದು ತೀರ್ಥಹಳ್ಳಿ ತಾಲೂಕಿನ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ವಿಶೇಷ ಉಪನ್ಯಾಸದಲ್ಲಿ ಹೇಳಿದರು.
ಜಿಲ್ಲೆಯ ವಿವಿಧೆಡೆಯಿಂದ ಅನೇಕ ಲಂಬಾಣಿ ಕಲಾತಂಡಗಳು ಆಗಮಿಸಿ ಲಂಬಾಣಿ ಸಂಸ್ಕೃತಿಯ ನೃತ್ಯ, ಗಾಯನಗಳನ್ನ ಬಿಂಬಿಸಿದವು. ಇದೇ ವೇಳೆ ಸಾಧಕರಾದ ಅಭಿಷೇಕ್ ಕೆ.ಎ.ಎಸ್, ಉಪ ವಿಭಾಗ ಅಧಿ ಕಾರಿ, ದ್ವಾರಿಕಾ ಕೆ. ನಾಯ್ಕ ಕೆ.ಎ.ಎಸ್, ಡಿ.ವೈ.ಎಸ್.ಪಿ. ಚೈತ್ರ ಟಿ. ನಾಯ್ಕ, ತಹಶೀಲ್ದಾರ್ ಮೋತಿನಾಯ್ಕ ಅಂತಾರಾಷ್ಟ್ರೀಯ ಈಜು ಸ್ಪರ್ಧೆ, ಪತ್ರಕರ್ತ ನಾಗೇಶ ನಾಯಕ್ , ನಾಗರಾಜ ನಾಯ್ಕ ಪಿ.ಎಚ್.ಡಿ ಪದವಿಧರ, ಜಗದೀಶ ಮಲವಗೊಪ್ಪ ಅವರನ್ನು ಸನ್ಮಾನಿಸಲಾಯಿತು. ತಿರುಮಲೇಶ್ ಎಲ್. ಅವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು. ಜಿಪಂ ಉಪಾಧ್ಯಕ್ಷೆ ವೇದ ವಿಜಯ್‌ಕುಮಾರ್, ಉಪ ಮಹಾಪೌರರಾದ ಸುರೇಖಾ
ಮುರಳೀಧರ್, ಜಿಲ್ಲಾ ಬಣಜಾರ್ ಸಂಘದ ಅಧ್ಯಕ್ಷ ಕುಮಾರ್‌ನಾಯ್ಕ, ಜಿಲ್ಲಾ ಬಣಜಾರ ಸಂಘದ ಕಾರ್ಯದರ್ಶಿ ಜಗದೀಶ್ ಆರ್., ಅಪರ ಜಿಲ್ಲಾ ಧಿಕಾರಿ ಅನುರಾಧಾ, ಸರ್ಧಾರ್ ಸೇವಾಲಾಲ್ ಸ್ವಾಮೀಜಿ ಚಿತ್ರದುರ್ಗ ಮಠ, ಸನ ಭಗತ್ ಸಾಲೂರು ಮಠ, ಜಿಲ್ಲಾ ಸಹಾಯಕ ವರಿಷ್ಠಾಧಿಕಾರಿ ಶೇಖರ್ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Shimoga: ಮಲೆನಾಡಿನಲ್ಲಿ ಮುಂದುವರಿದ ಕಾಡಾನೆ ಕಾಟ; ಇಲಾಖೆ ವಿರುದ್ದ ರೈತರ ಆಕ್ರೋಶ
MUST WATCH
ಹೊಸ ಸೇರ್ಪಡೆ
Bengaluru Crime: ಕತ್ತು ಬಿಗಿದು ಇಬ್ಬರು ಮಕ್ಕಳನ್ನು ಕೊಂದ ಅಮ್ಮ!
IRACON:ಸಂಧಿವಾತ ಸಮಸ್ಯೆ ಬಗ್ಗೆ ಸಾರ್ವಜನಿಕರು ಮುಂಜಾಗ್ರತೆ ವಹಿಸಬೇಕು: ಡಾ.ಶರಣಪ್ರಕಾಶ ಪಾಟೀಲ
Jharkhand Polls: ಬುಡಕಟ್ಟು ರಾಜ್ಯದಲ್ಲಿ ಅಧಿಕಾರದತ್ತ ಇಂಡಿಯಾ ಒಕ್ಕೂಟ; ಬಿಜೆಪಿಗೆ ಹಿನ್ನಡೆ
Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್ ಅಘಾಡಿಗೆ ಮುಖಭಂಗ
Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.