ರಸ್ತೆ- ರೈಲ್ವೇ- ವಿಮಾನ ಮಾರ್ಗ ಅಭಿವೃದ್ಧಿಗೆ ಕ್ರಮ
ದೇಶದ ಪ್ರಮುಖ ನಗರಗಳೊಂದಿಗೆ ರೈಲ್ವೆ ಸಂಪರ್ಕಕ್ಕೆ ಯತ್ನ: ಸಂಸದ ಬಿ.ವೈ. ರಾಘವೇಂದ್ರ ಭರವಸೆ
Team Udayavani, Jan 8, 2020, 4:16 PM IST
ಶಿವಮೊಗ್ಗ: ಬರುವ ದಿನಗಳಲ್ಲಿ ರಸ್ತೆ, ರೈಲ್ವೆ ಮತ್ತು ವಿಮಾನ ಮಾರ್ಗಗಳು ಅಭಿವೃದ್ಧಿಯಾಗಲಿವೆ. ಇದರಿಂದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಮಂಗಳವಾರ ನಗರದ ಪ್ರವಾಸಿ ಮಂದಿರದಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಹತ್ತು ವರ್ಷಗಳಲ್ಲಿ ರಾಜ್ಯ ಹಾಗೂ ನೆರೆ ರಾಜ್ಯಗಳೊಂದಿಗೆ ಸಂಪರ್ಕ ಕಲ್ಪಿಸುವ ರೈಲ್ವೆ ಜಾಲವನ್ನು ವಿಸ್ತರಿಸಲಾಗಿದೆ. ಇತ್ತೀಚೆಗೆ ರಕ್ಕೊಮ್ಮೆಚೆನ್ನೈ-ತಿರುಪತಿ ನಡುವೆ ಸಂಚರಿಸುತ್ತಿದ್ದ ತತ್ಕಾಲ್ ಎಕ್ಸ್‌ಪ್ರೆಸ್ ರೈಲನ್ನು ವಾರಕ್ಕೆ 2 ಬಾರಿ ಸಂಚರಿಸುವಂತೆ ವಿಸ್ತರಿಸಲಾಗಿದೆ. ಜ.9ರಿಂದ ಈ ರೈಲು ಸಂಚರಿಸಲಿದೆಎಂದರು.
ಈಗಾಗಲೇ ಶಿವಮೊಗ್ಗದಿಂದ ವಿವಿಧ ಮಾರ್ಗಗಳಲ್ಲಿ ಸಂಚರಿಸುತ್ತಿರುವ ರೈಲುಗಳ ವೇಳಾಪಟ್ಟಿ, ನಿಲುಗಡೆ ಸ್ಥಳಗಳನ್ನು ಜನಸಾಮಾನ್ಯರಿಗೆ ಅನುಕೂಲವಾಗುವ ದೃಷ್ಟಿಯಿಂದ ಪುನರ್ ಪರಿಶೀಲಿಸಿ ಸಮಯ ನಿಗ ಪಡಿಸಲು ಉದ್ದೇಶಿಸಲಾಗಿದೆ ಎಂದ ಅವರು, ರೈಲು ಮಾರ್ಗ ವಿಸ್ತರಿಸಲು ಇರುವ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.
ಶಿವಮೊಗ್ಗ- ಶಿಕಾರಿಪುರ- ರಾಣೆಬೆನ್ನೂರು ರೈಲು ಸಂಚಾರ ಕಲ್ಪಿಸಲು ಕೇಂದ್ರ ಸರ್ಕಾರ ಪ್ರಸಕ್ತ ಬಜೆಟ್‌ನಲ್ಲಿ ರೂ. 994 ಕೋಟಿ. ಅನುದಾನಕಾಯ್ದಿರಿಸಿದೆ. ಅಲ್ಲದೆ ರಾಜ್ಯ ಸರ್ಕಾರವೂ ಕೂಡ ತನ್ನ
ಪಾಲಿನ ಅನುದಾನ ಬಿಡುಗಡೆ ಮಾಡಲು ಒಪ್ಪಿಗೆ ಸೂಚಿಸಿದೆ ಎಂದ ಅವರು, ಶಿವಮೊಗ್ಗ- ಹರಿಹರ ರೈಲ್ವೇ ಮಾರ್ಗವೂ ಸಹ ಮಂಜೂರಾಗಿದ್ದು, ಈ ಪ್ರದೇಶದ ವ್ಯಾಪ್ತಿಗೊಳಪಡುವ ದಾವಣಗೆರೆ ಮತ್ತು ಹಾವೇರಿ ಜಿಲ್ಲೆಯ 49 ಹಳ್ಳಿಗಳ 1365ಎಕರೆ ಭೂಮಿ ಭೂಸ್ವಾಧೀನ ಮಾಡಿಕೊಳ್ಳುವ ಕಾರ್ಯವನ್ನು ಕೆ.ಐ.ಎ.ಡಿ.ಬಿ.ಗೆ ವಹಿಸಲಾಗಿದೆ. ಮುಂದಿನ 3-4 ತಿಂಗಳುಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳುವ ವಿಶ್ವಾಸವಿದೆ. ಇದರಿಂದಾಗಿ ಶಿವಮೊಗ್ಗದಿಂದ ಪುಣೆವರೆಗಿನ ಸಂಚಾರಕ್ಕೆ ಅನುಕೂಲವಾಗಲಿದೆ ಮಾತ್ರವಲ್ಲ ಮುಂಬಯಿ, ಪುಣೆ, ಅಹ್ಮದಾಬಾದ್, ಜೈಪುರ, ದೆಹಲಿ, ಚಂಢೀಘಡ ಸೇರಿದಂತೆ ದೇಶದ ಪ್ರಮುಖ ನಗರಗಳ ಸಂಪ
ಸಾಧ್ಯವಾಗಲಿದೆ ಎಂದರು.
ಶಿವಮೊಗ್ಗ ಜಿಲ್ಲಾಧಿಕಾರಿಗಳು ಹಾಗೂ ರೈಲ್ವೆ ಅಧಿಕಾರಿಗಳು ಸೇರಿದಂತೆ ತಜ್ಞರ ತಂಡವು ಶಿವಮೊಗ್ಗದ ಕೋಟೆಗಂಗೂರು ಹಾಗೂ ಸಾಗರದ ತಾಳಗುಪ್ಪದಲ್ಲಿ ರೈಲ್ವೆ ಟರ್ಮಿನಲ್ ಸ್ಥಾಪಿಸಲು ಸ್ಥಳ ಪರಿಶೀಲನೆ ನಡೆಸಿ, ಕೋಟೆಗಂಗೂರು ಪ್ರಶಸ್ತ ಸ್ಥಳವೆಂದು ಗುರುತಿಸಿದೆ. ಇಲ್ಲಿ ಈಗಾಗಲೇ 16ಎಕರೆ ಭೂಮಿ ಇದ್ದು, ಇನ್ನೂ ಬೇಕಾಗುವ ಹಾಗೂ ಈಗಿರುವ ಭೂಮಿಗೆ ಹೊಂದಿಕೊಂಡಂತಿರುವ ಹತ್ತು ಎಕರೆ ಭೂಮಿಯನ್ನು ನಿಯಮಾನುಸಾರ ಭೂಸ್ವಾಧೀನ ಮಾಡಿಕೊಳ್ಳಲಾಗುವುದು. ಇದರಿಂದಾಗಿ ಈಭಾಗದ ಅನೇಕ ಕುಟುಂಬಗಳಿಗೆ ಉದ್ಯೋಗಾವಕಾಶಗಳು ದೊರೆಯಲಿವೆ. 62ಕೋಟಿ
ರೂ.ವೆಚ್ಚದಲ್ಲಿ ಟರ್ಮಿನಲ್ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದರು. ತಾಳಗುಪ್ಪ- ಸಿದ್ದಾಪುರ-
ಸಿರಸಿ-ಮುಂಡಗೋಡು-ಹುಬ್ಬಳ್ಳಿ ಮಾರ್ಗವಾಗಿ 158 ಕಿ.ಮೀ. ರೈಲು ಸಂಚಾರ ಆರಂಭಿಸಲು ಪೂರಕವಾಗಿ ಕೇಂದ್ರ ಸರ್ಕಾರವು ರ್ವೇ ಕಾರ್ಯ ಕೈಗೊಳ್ಳಲು 79 ಕೋಟಿ ರೂ. ಅನುದಾನ ಮೀಸಲಿರಿಸಿದೆ.
ತಜ್ಞರ ವರದಿ ಪಡೆದು ಈ ಮಾರ್ಗದ ರೈಲು ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಶಿವಮೊಗ್ಗ- ಶೃಂಗೇರಿ ಮಾರ್ಗವಾಗಿ ಮಂಗಳೂರು ರೈಲು ಸಂಚಾರ ಆರಂಭಿಸಲು ಯತ್ನಿಸಲಾಗುವುದು ಎಂದರು.
ಶಿವಮೊಗ್ಗದಲ್ಲಿ 2ಲಿಫ್ಟ್ ಮತ್ತು ನೂತನ ಫುಟ್‌ಓವರ್ ಬ್ರಿಡ್ಜ್ ಹಾಗೂ ಜಿಲ್ಲೆಯ ಇತರೆ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಸೌಲಭ್ಯಗಳನ್ನು ಒದಗಿಸುವ ಕಾಮಗಾರಿಗಳು ಪ್ರಗತಿಯಲ್ಲಿವೆ. ಶೀಘ್ರದಲ್ಲಿ ಸಾರ್ವಜನಿಕ ಸೇವೆಗೆ ಮುಕ್ತವಾಗಲಿವೆ. ನಗರದ ಕಾಶೀಪುರದ ಲೆವೆಲ್ ಕ್ರಾಸಿಂಗ್ ನಂ.62, ಸವಳಂಗ ಎಲ್.ಸಿ.ಗೇಟ್ ನಂ.49 ಮತ್ತು ಭದ್ರಾವತಿ ಬಳಿಯ ಎಲ್.ಸಿ.ಗೇಟ್ ನಂ.34ರ ಬದಲಿಗೆ ರೈಲ್ವೆ ಹಾಗೂ ರಾಜ್ಯ ಸರ್ಕಾರದ ಸಹಯೋಗದೊಂದಿಗೆ
ಮೇಲ್ಸೇತುವೆಗಳನ್ನು ನಿರ್ಮಿಸಲು ಮಂಜೂರಾತಿ ದೊರೆತಿದೆ.
ಅಲ್ಲದೇ ಶಿವಮೊಗ್ಗ ವಿದ್ಯಾನಗರದ ಬಳಿ ಎಲ್.ಸಿ.ಗೇಟ್ ನಂ.46ರ ಬದಲಿನ ಮೇಲ್ಸೇತುವೆಯು ನ್ಯಾಶನಲ್ ಹೈವೇ ಯೋಜನೆಯಡಿ ಮಂಜೂರಾಗಾಗಿದ್ದು, ಶೀಘ್ರವೇ ಕಾರ್ಯಾರಂಭವಾಗಲಿದೆ ಎಂದರು.
ಲವಾರು ವರ್ಷಗಳಿಂದ ಶಿವಮೊಗ್ಗ ನೂರಡಿ ವರ್ತುಲ ರಸ್ತೆ ನೆನೆಗುದಿಗೆ ಬಿದ್ದಿದ್ದು, ಶಿವಮೊಗ್ಗ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿರುವ ಎರಡು ಎಕರೆ ರೈಲ್ವೆ ಭೂಮಿಯ ಅಗತ್ಯ ಇದ್ದುದರಿಂದ ಪೂರ್ಣಗೊಳಿಸಲು, ರೈಲ್ವೆಯವರು ಮಾತುಕತೆ ನಡೆಸಿದ ಫಲವಾಗಿ ಎರಡು ಎಕರೆ ರೈಲ್ವೆ ಭೂಮಿಯನ್ನು ಈ ಕಾಮಗಾರಿಗಾಗಿ ವರ್ಗಾಯಿಸಲು ರೈಲ್ವೆ ಇಲಾಖೆಯವರು ಸಮ್ಮತಿಸಿದ್ದಾರೆ. ಆ ಪ್ರದೇಶದಲ್ಲಿ ಇದ್ದಂತಹ ಹಳೆಯ ಕಟ್ಟಡಗಳನ್ನು ರೈಲ್ವೆಯವರು ನೆಲಸಮಗೊಳಿಸಿದ್ದಾರೆ.
ಈಗ ಜಮೀನು ಹಸ್ತಾಂತರಿಸುವ ಪ್ರಕ್ರಿಯೆಯು ಶೀಘ್ರದಲ್ಲಿಯೇ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದರು. ನಗರದ ರೈಲ್ವೆ ಕಾಂಪೌಂಡ್‌ನಿಂದ ಹೊಸಪೇಟೆ- ಶಿವಮೊಗ್ಗ ರಸ್ತೆಗೆ ಅಭಿವೃದ್ಧಿಗೆ 20.00ಕೋಟಿ, ಮಳೆಹಾನಿ ದುರಸ್ತಿ ಕಾಮಗಾರಿಗಳಿಗೆ 12.25 ಕೋಟಿ, ತೀರ್ಥಹಳ್ಳಿ ತಾಲೂಕಿನಲ್ಲಿ 20 ಕಾಮಗಾರಿಗಳನ್ನು 9.74ಕೋಟಿ ವೆಚ್ಚದಲ್ಲಿ ಹಾಗೂ ಭದ್ರಾವತಿ ತಾಲೂಕಿನಲ್ಲಿ 21ಕಾಮಗಾರಿಗಳು 10.36ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಒಟ್ಟು 75ಕಾಮಗಾರಿಗಳಿಗಾಗಿ 32.35ಕೋಟಿ ಅನುದಾನ ಮಂಜೂರಾಗಿದೆ ಎಂದರು.
ಶಿವಮೊಗ್ಗ ನಗರದ ಸುತ್ತಮುತ್ತಲ 18.06ಕಿ.ಮೀ. ಉದ್ದದ 350ಕೋಟಿ ರೂ. ವೆಚ್ಚದಲ್ಲಿ ರಿಂಗ್ ರೋಡ್ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರದಲ್ಲಿ ಮಂಜೂರಾತಿ ದೊರೆಯಲಿದೆ ಎಂದವರು ನುಡಿದರು.
ಪತ್ರಿಕಾಗೋಷ್ಠಿಯಲ್ಲಿ ಜ್ಯೋತಿ ಪ್ರಕಾಶ್, ರೈಲ್ವೆ ಅಧಿಕಾರಿ ಶ್ರೀಧರಮೂರ್ತಿ, ರೈಲ್ವೇ ಸಲಹಾ ಸಮಿತಿ ಸದಸ್ಯ ಮಾಲತೇಶ್ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್
Anandapura: ನಿಂತಿದ್ದ ಕಾರಿಗೆ ಇನ್ನೊಂದು ಕಾರು ಡಿಕ್ಕಿ ಹೊಡೆದು ಕಾರು ಪಲ್ಟಿ
Sagara: ವಿದ್ಯುತ್ ಟ್ರಾನ್ಸ್ ಫಾರ್ಮರ್‌ಗೆ ನೇಣು ಬಿಗಿದು ಯುವಕ ಆತ್ಮಹತ್ಯೆ
Sagara: ಮಿಡಿ ಮಾವು, ವಿಶ್ವವಿದ್ಯಾಲಯದ ನಡೆದಾಡುವ ವಿಶ್ವಕೋಶ ಬಿ.ವಿ.ಸುಬ್ಬರಾವ್ ಇನ್ನಿಲ್ಲ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Maharashtra: ದಿಢೀರನೆ ಊರಿಗೆ ತೆರಳಿದ ಶಿಂಧೆ; ಮತ್ತೆ ಮುಂದುವರಿದ ʼಮಹಾ ಸಿಎಂʼ ಕಗ್ಗಂಟು
Bengaluru: ಶಾಲೆ ಮುಖ್ಯಸ್ಥನ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ
Bengaluru: ಬೈಕ್ ಡಿಕ್ಕಿ: ರಾತ್ರಿಯಿಡೀ ರಸೇಲಿ ನರಳಿ ವ್ಯಕ್ತಿ ಸಾವು
Bengaluru: ಪಾದಚಾರಿ ಮಾರ್ಗದಲ್ಲಿ ಕಾರು ಚಾಲನೆ: ಕೇಸ್ ದಾಖಲು
Champions Trophy: ಮೋದಿ ಪಾಕ್ ಗೆ ಹೋಗಿದ್ದು ಸರಿಯಾದರೆ ಟೀಂ ಇಂಡಿಯಾವೂ ಹೋಗಲಿ: ತೇಜಸ್ವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.