ಲಾಕ್‌ಡೌನ್ ಮಧ್ಯೆ ಪಶುವೈದ್ಯರಿಂದ ಹಸುವಿಗೆ ಶಸ್ತ್ರಚಿಕಿತ್ಸೆ
Team Udayavani, Apr 15, 2020, 4:59 PM IST
ಶಿವಮೊಗ್ಗ: ಮೂಕಪ್ರಾಣಿಗೆ ಪಶುವೈದ್ಯರು ಚಿಕಿತ್ಸೆ ನೀಡಿದರು.
ಶಿವಮೊಗ್ಗ: ಸಂಪೂರ್ಣ ಲಾಕಡೌನ್ ಇದ್ದರೂ ನಗರದ ಪಶುವೈದ್ಯರ ತಂಡವೊಂದು ಅನಾಥ ಹಸುವಿಗೆ ತುರ್ತು ಶಸ್ತ್ರಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದು ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗಿದೆ.
ನಗರದ ವಿನೋಬನಗರದಲ್ಲಿ ಅನಾಥ ಹಸುವೊಂದು ಕಾಲು ಮುರಿದುಕೊಂಡು ಆದ ಗಾಯ ಮಾಯದೆ ಕೊಳೆತ ಸ್ಥಿತಿಗೆ ತಲುಪಿದ್ದನ್ನು ಸ್ಥಳೀಯ ನಾಗರಿಕರಿಂದ ಅರಿತ ಪಶುವೈದ್ಯರ ತಂಡ, ಕೂಡಲೇ ಕಾರ್ಯ ಪ್ರವೃತ್ತರಾಗಿ ಹಸುವನ್ನು ನಗರದ ಮಹಾವೀರ ಗೋಶಾಲೆಗೆ ಸೇರಿಸಿ ಕೊಳೆತ ಸ್ಥಿತಿಯಲ್ಲಿದ್ದ ಮುರಿದ ಕಾಲನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದು ಹಾಕಿದ್ದಾರೆ.
ಮತ್ತೂರು ಪಶುಚಿಕಿತ್ಸಾಲಯದ ಪಶುವೈದ್ಯಾಧಿಕಾರಿಗಳಾದ ಡಾ|ಕಮಲೇಶ್‌ಕುಮಾರ್‌ಕೆ.ಎಸ್, ಮುಖ್ಯ ಪಶುವೈದ್ಯಾ ಧಿಕಾರಿಗಳಾದ ಡಾ|ಸಿದ್ದೇಶ್ ಸೇರಿದಂತೆ ಪಶುಸಂಗೋಪನಾ ಇಲಾಖೆಯ ಸಿಬ್ಬಂದಿ ಶಸ್ತ್ರಚಿಕಿತ್ಸೆ ನೆರವೇರಿಸಿದರು. ಮೂಕ ಪ್ರಾಣಿಗಳು ಆರೋಗ್ಯವಾಗಿದ್ದಾಗ ಸಾಕುವವರು ಅದು ಅನಾರೋಗ್ಯಗೊಂಡಾಗ ಈ ರೀತಿರಸ್ತೆಯಲ್ಲಿ ಬಿಡುವುದು ಯೋಗ್ಯವಲ್ಲ, ಈ ರೀತಿಯ ಹಸುಗಳು ಕಂಡುಬಂದಲ್ಲಿ ತಕ್ಷಣವೇ ಹತ್ತಿರದ ಪಶುವೈದ್ಯರನ್ನು ಭೇಟಿ ಮಾಡಿ ಅವುಗಳಿಗೆ ಸೂಕ್ತ ಚಿಕಿತ್ಸೆಯನ್ನು ಮಾಡಿಸಿ ಎಂದು ಡಾ| ಕಮಲೇಶ್‌ಕುಮಾರ್ ಕೆ.ಎಸ್. ಮನವಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hosanagar: ನಾಪತ್ತೆಯಾದ 78 ದಿನದ ಬಳಿಕ ವ್ಯಕ್ತಿಯ ಮೃತದೇಹ ಪತ್ತೆ, ತನಿಖೆಗೆ ಪತ್ನಿಯ ಆಗ್ರಹ
Ripponpet ಬೀದಿ ನಾಯಿ ಕೊಂದು ಆಟೋಗೆ ಕಟ್ಟಿಕೊಂಡು ಎಳೆದೊಯ್ದ ಕ್ರೂರಿ
Shimoga: ಬೀದಿ ನಾಯಿಯನ್ನು ಕ್ರೂರವಾಗಿ ಕೊಂದು ಆಟೋದಲ್ಲಿ ಎಳೆದೊಯ್ದ ವ್ಯಕ್ತಿ
ಅಡಿಕೆ ಬೆಳೆಗಾರರು ಆತಂಕವಿಲ್ಲದೆ ಕೃಷಿಯಲ್ಲಿ ತೊಡಗಿಕೊಳ್ಳಿ: ಶಿವರಾಜ್ ಸಿಂಗ್ ಚೌಹಾಣ್
Sagara: ಜ. 22ರಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಡಾಕ್ಟರೇಟ್ ಪ್ರದಾನ