ಯುವಕರಿಂದ ದೇಶ ಬಲಿಷ್ಠ
ಯುವಶಕ್ತಿ ನಿಂತ ನೀರಾಗದಿರಲಿ: ಮೇಯರ್ ಸುವರ್ಣ ಶಂಕರ್ ಕರೆ
Team Udayavani, Feb 10, 2020, 6:01 PM IST
ಶಿವಮೊಗ್ಗ: ಯಾವುದೇ ದೇಶದ ಸಂಪತ್ತನ್ನು ದೃಢಪಡಿಸುವುದು ಹಣವಲ್ಲ. ಅದು ಮಾನವ ಸಂಪನ್ಮೂಲ. ಇಂತಹ ಮಾನವ ಸಂಪನ್ಮೂಲ ಸರಿದಾರಿಯಲ್ಲಿ ನಡೆದರೆ ದೇಶದ ಪ್ರಗತಿ ಸಾಧ್ಯ. ಯಾವುದೇ ಒಂದು ದೇಶ ಬಲಿಷ್ಠವಾಗಲು ಅಲ್ಲಿನ ಯುವಜನತೆಯ ಪಾತ್ರ ಬಹುಮುಖ್ಯವಾಗಿರುತ್ತದೆ ಎಂದು ಮೇಯರ್ ಸುವರ್ಣ ಶಂಕರ್ ಹೇಳಿದರು.
ನಗರದ ನೆಹರು ಕ್ರೀಡಾಂಗದಲ್ಲಿ ಜಿಲ್ಲಾ ಆಡಳಿತ, ಜಿಪಂ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರದಲ್ಲಿ 2019-20 ನೇ ಸಾಲಿನ ಬೆಂಗಳೂರು ವಿಭಾಗ ಮಟ್ಟದ ಯುವಜನ ಮೇಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯುವಶಕ್ತಿ ನಿಂತ ನೀರಾಗಬಾರದು. ಅದು ಸದಾ ಜಾಗ್ರತೆ ವಹಿಸಿ ಸಂಚಲನತೆಯಿಂದ ಕೂಡುವ ಮೂಲಕ ಉತ್ತಮ ಬದುಕು ರೂಪಿಸಿಕೊಳ್ಳಬೇಕು. ಮಳೆಗಾಲದಲ್ಲಿ ಮಳೆ ನೀರನ್ನು ಸಂಗ್ರಹಿಸಿ ಉಪಯೋಗಿಸಿಕೊಳ್ಳುವಂತೆ ಯುವಶಕ್ತಿ ತಮ್ಮ ವಯಸ್ಸಿನಲ್ಲಿ ಹಿರಿಯರ ಮಾಗದರ್ಶನ ಪಡೆದು ಉತ್ತಮ ದೇಶ ಕಟ್ಟುವ ಸತ್ಪ್ರಜೆಗಳಾಗಬೇಕು ಎಂದು ಹೇಳಿದರು.
ಉಪ ಮಹಾ ಪೌರರಾದ ಸುರೇಖಾ ಮುರುಳಿಧರ್ ಮಾತನಾಡಿ, ಯುವಜನತೆಯಲ್ಲಿರುವ ಸುಪ್ತ ಕಲೆ ಪ್ರದರ್ಶನಕ್ಕೆ ಮೇಳ ಉತ್ತಮ ವೇದಿಕೆಯಾಗಿದೆ. ಈ ಮೂಲಕ ನಿರೀಕ್ಷಿತ ಯಶಸ್ಸು ಗಳಿಸಬಹುದು. ಕಲೆ ಮತ್ತು ಶಿಕ್ಷಣವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಿ ಎಂದರು.
ಗ್ರಾಮೀಣ ಜಾನಪದ ಕಲೆಗಳನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಯುವಜನ ಮೇಳಗಳು ಸಹಕಾರಿಯಾಗಲಿವೆ. ಯುವ ಜನರು ಜಾನಪದ ಕಲೆಗಳನ್ನು ಉಳಿಸಿ ಎಂದು ಸಲಹೆ ನೀಡಿದರು. ಮಹದೇಂದ್ರ, ದೇವಿಕಾ, ಕ್ರೀಡಾ ಇಲಾಖೆಯ ದೀಪಕ್, ಯುವ ಸಬಲೀಕರಣ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಎಂ. ಟಿ. ಮಂಜುನಾಥಸ್ವಾಮಿ ಮತ್ತು ಉಪ ನಿರ್ದೇಶಕ ಎಂ. ಎಸ್. ರಮೇಶ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಕ್ತ ಕೆ. ಶ್ರೀನಿವಾಸ್ ಸೇರಿದಂತೆ 9 ಜಿಲ್ಲೆಯ ಕಲಾವಿದರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hosanagar: ನಾಪತ್ತೆಯಾದ 78 ದಿನದ ಬಳಿಕ ವ್ಯಕ್ತಿಯ ಮೃತದೇಹ ಪತ್ತೆ, ತನಿಖೆಗೆ ಪತ್ನಿಯ ಆಗ್ರಹ
Ripponpet ಬೀದಿ ನಾಯಿ ಕೊಂದು ಆಟೋಗೆ ಕಟ್ಟಿಕೊಂಡು ಎಳೆದೊಯ್ದ ಕ್ರೂರಿ
Shimoga: ಬೀದಿ ನಾಯಿಯನ್ನು ಕ್ರೂರವಾಗಿ ಕೊಂದು ಆಟೋದಲ್ಲಿ ಎಳೆದೊಯ್ದ ವ್ಯಕ್ತಿ
ಅಡಿಕೆ ಬೆಳೆಗಾರರು ಆತಂಕವಿಲ್ಲದೆ ಕೃಷಿಯಲ್ಲಿ ತೊಡಗಿಕೊಳ್ಳಿ: ಶಿವರಾಜ್ ಸಿಂಗ್ ಚೌಹಾಣ್
Sagara: ಜ. 22ರಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಡಾಕ್ಟರೇಟ್ ಪ್ರದಾನ