ಗ್ರಾಹಕರ ಮನೆಗೇ ತಾಜಾ ಹಣ್ಣು ಸರಬರಾಜು!
Team Udayavani, May 7, 2020, 6:21 PM IST
ಸಾಂದರ್ಭಿಕ ಚಿತ್ರ
ಶಿವಮೊಗ್ಗ: ಲಾಕ್‌ಡೌನ್ ಹಿನ್ನಲೆಯಲ್ಲಿ ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡಲಾಗದೆ ಸಂಕಷ್ಟದಲ್ಲಿದ್ದ ರೈತರಿಂದಲೇ ತಾವು ಬೆಳೆದ ತಾಜಾ ಹಣ್ಣುಗಳನ್ನು ನೇರವಾಗಿ ಖರೀದಿಸಿ ಶಿವಮೊಗ್ಗ ಹಾಗೂ ಬೆಂಗಳೂರಿನ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವಂತಹ ವಿನೂತನ ಪ್ರಯತ್ನವನ್ನು ಜರ್ಮನಿಯ ರೂಡ್ಸ್ ಗೂಡ್ಸ್ ಕಂಪನಿ ಪ್ರಾರಂಭಿಸಿದೆ.
ಈ ಕಂಪನಿಯು ಕೋವಿಡ್-19 ಅಗ್ರಿ ವಾರ್ ರೂಮ್‌ನ ಸಕ್ರಿಯ ಭಾಗವಾಗಿದ್ದು ಆತಂಕದಲ್ಲಿರುವ ರೈತರಿಗಾಗಿ ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್ತು ಹಾಗೂ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗ ವತಿಯಿಂದ ರಾಜ್ಯದ ಇತರೆ ಭಾಗಗಳ ರೈತರಿಂದ ನೇರವಾಗಿ ತರಕಾರಿ ಹಣ್ಣುಗಳನ್ನು ಖರೀದಿಸಿ ಶಿವಮೊಗ್ಗ ಹಾಗೂ ಬೆಂಗಳೂರು ನಗರದ ಜನರ ಮನೆ ಬಾಗಿಲಿಗೆ ಉತ್ತಮ ಬೆಲೆಗೆ ಅನಾನಸ್, ಕಲ್ಲಂಗಡಿ, ದ್ರಾಕ್ಷಿಹಣ್ಣುಗಳನ್ನು ಮಾರಾಟ ಮಾಡಲಾಗುತ್ತಿದೆ. ಈ ಮೂಲಕ ರೈತರು ಹಾಗೂ ಗ್ರಾಹಕರ ನಡುವೆ ಕೊಂಡಿಯಾಗಿ ರೂಟ್ಸ್ ಗೂಡ್ಸ್ ಕಂಪನಿಯ ಯುವಕರು ಕಾರ್ಯ ನಿರ್ವಹಿಸುತ್ತಿದ್ದು ಶಿವಮೊಗ್ಗ ಜನರ ಮೆಚ್ಚುಗೆಗೆ ಪ್ರಾತ್ರರಾಗಿದ್ದಾರೆ.
ಶಿವಮೊಗ್ಗದ ಸಚಿನ್ ಹೆಗ್ಡೆಕುಡ್ಗಿ ಅವರು ಪ್ರಾರಂಭಿಸಿದ ರೂಟ್ಸ್ ಗೂಡ್ಸ್ ಕಂಪನಿಯು ಒಂದು ಸಂವಾದಾತ್ಮಕ, ಅತ್ಯಾಧುನಿಕ ತಂತ್ರಜ್ಞಾನ ಸ್ವಾಮ್ಯದ ಸಾಫ್ಟವೇರ್ ಮತ್ತು ಹಾರ್ಡವೇರ್ ಪರಿಕರಗಳನ್ನು ಹೊಂದಿದ ವೇದಿಕೆಯಾಗಿದ್ದು, ರೈತರು ತಮ್ಮ ಸರಕುಗಳನ್ನು ಸಾಕಣಿಕೆ ಕೇಂದ್ರಗಳಿಂದ ನೇರವಾಗಿ ಸಗಟು ಖರೀದಿದಾರರ ವಿಳಾಸಕ್ಕೆ ತಲುಪಿಸಲು, ಉತ್ತಮ ಬೆಲೆಗೆ ಮಾರಾಟ ಮಾಡಲು ರೂಟ್ಸ್ ಗೂಡ್ಸ್
ಕಂಪನಿಯು ಪೂರಕವಾಗಿ ನಿಲ್ಲಲಿದೆ. ಈ ಮೂಲಕ ಪಾರದರ್ಶಕ ಮತ್ತು ಅಗತ್ಯ ಮಾಹಿತಿಯೊಂದಿಗೆ ಕೃಷಿ ಸಮುದಾಯದವನ್ನು ಬಲಪಡಿಸಲು, ರೈತರು ಮತ್ತು ಖರೀದಿದಾರರಿಗೆ ಉತ್ತಮ ಬೆಲೆಯೊಂದಿಗೆ ವಹಿವಾಟು ನಡೆಸಲು, ಹವಾಮಾನ ಹಾಗೂ ಮಣ್ಣಿನ ನಿರ್ವಹಣೆಯ ಉಚಿತ ಸೇವೆಗಳನ್ನು ಕೃಷಿಕರ ಒದಗಿಸುವ ಕಾರ್ಯವನ್ನು ಈ ಕಂಪನಿಯ ಯುವಕರು ಮಾಡುತ್ತಿದ್ದಾರೆ. ಭಾರತದಲ್ಲಿ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಜೊತೆಗೆ ಒಡಂಬಡಿಕೆ ಮಾಡಿಕೊಂಡಿದ್ದು ವಿಶ್ವವಿದ್ಯಾಲಯದ ಆವರಣದಲ್ಲಿ ಹಾಗೂ ಶಿವಮೊಗ್ಗದ ಜೆ.ಎನ್.ಎನ್ .ಸಿ. ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಕಂಪನಿಯ ಕಚೇರಿಯನ್ನು ತೆರೆಯಲಾಗಿದೆ. ರೈತ ಸಂಘದ ಮುಖಂಡರು ಈ ಕಂಪನಿಯ ಗೌರವ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದಾರೆ. ಇಂತಹ ಮೂಲ ಆಶಯದೊಂದಿಗೆ ರೂಪಗೊಂಡ ರೂಟ್ಸ್ ಗೂಡ್ಸ್ ಕಂಪನಿಯು ಶಿವಮೊಗ್ಗ ನಗರದ ಗ್ರಾಹಕರಿಗೆ ಅಗತ್ಯ ತಾಜಾ ಹಣ್ಣುಗಳನ್ನು ಸರಬರಾಜು ಮಾಡುತ್ತಿದ್ದು ಆಸಕ್ತ ಗ್ರಾಹಕರು ಮೊ: 94830049626 ಸಂಪರ್ಕಿಸಬಹುದಾಗಿದೆ ಎಂದು ರೂಟ್ಸ್ ಗೂಡ್ಸ್ ಕಂಪನಿಯ ನಿರ್ದೇಶಕರಾದ ಸಚಿನ್ ಹೆಗ್ಡೆಕುಡ್ಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Holehonnur: ಎರಡು ಪ್ರತ್ಯೇಕ ರಸ್ತೆ ಅಪಘಾತ
Shivamogga: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಓ ಈಶ್ವರಪ್ಪ
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jasprit Bumrah ಬೌಲಿಂಗ್ ಶೈಲಿಯನ್ನೇ ಶಂಕಿಸಿದ ಆಸೀಸ್ ಮಾಧ್ಯಮಗಳು!
Mangaluru: ಎರಡು ಸೈಬರ್ ವಂಚನೆ ಪ್ರಕರಣ: ಸೆನ್ ಪೊಲೀಸರಿಂದ ಇಬ್ಬರ ಬಂಧನ
High Court: ಕಬ್ಬಿಣದ ಅದಿರಿಗೆ ದರ ನಿಗದಿ: ಕೇಂದ್ರ, ರಾಜ್ಯಕ್ಕೆ ನೋಟಿಸ್
Valmiki Nigama Scam: ಪ್ರಕರಣ ರದ್ದು ಕೋರಿ ಮಾಜಿ ಸಚಿವ ನಾಗೇಂದ್ರ ಹೈಕೋರ್ಟ್‌ಗೆ
Govt. Employees Association: ನನ್ನ ಸೋಲಿಸಲು ರಾಜಕೀಯ ಷಡ್ಯಂತ್ರ: ಸಿ.ಎಸ್.ಷಡಾಕ್ಷರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.