ಕೋಟೆ ಮಾರಿಕಾಂಬಾ ಜಾತ್ರೆಗೆ ಭರದ ಸಿದ್ಧತೆ
ದೇವಿಯನ್ನು ತವರು ಮನೆಗೆ ಕರೆದೊಯ್ಯುವುದರಿಂದ ಜಾತ್ರೆ ಆರಂಭ: ಎಸ್.ಕೆ. ಮರಿಯಪ್ಪ
Team Udayavani, Feb 24, 2020, 1:16 PM IST
ಶಿವಮೊಗ್ಗ: ಕೋಟೆ ಶ್ರೀ ಮಾರಿಕಾಂಬಾ ಜಾತ್ರೆ ಫೆ.25 ರಂದು ಆರಂಭಗೊಳ್ಳುತ್ತಿದ್ದು ಸಿದ್ಧತೆ ಭರದಿಂದ ಸಾಗಿದೆ ಎಂದು ಎಂದು ಕೋಟೆ ಶ್ರೀ ಮಾರಿಕಾಂಬಾ ಸೇವಾ ಸಮಿತಿ ಅಧ್ಯಕ್ಷ ಎಸ್.ಕೆ. ಮರಿಯಪ್ಪ ತಿಳಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೆ.25ರಂದು ಬೆಳಗ್ಗೆ ದೇವಿಯನ್ನು ಗಾಂಧಿ ಬಜಾರ್‌ನಲ್ಲಿರುವ ತವರು ಮನೆಗೆ ಕರೆದೊಯ್ಯಲಾಗುವುದು. ಅಲ್ಲಿಂದ ಜಾತ್ರೆಗೆ ಮೆರುಗು ಬರಲಿದೆ. ಅಲ್ಲಿ ದ್ವಾರ ಬಾಗಿಲು ಕಟ್ಟುವ ಕೆಲಸ ಪೂರ್ಣಗೊಂಡಿದೆ. ದೇವಿಯನ್ನು ಕರೆದುಕೊಂಡು ಹೋಗುವಾಗ ಮತ್ತು ಬರುವಾಗ ಬೆಂಗಳೂರಿನ ಅಣ್ಣಮ್ಮ ದೇವಿಯ ಚಂಡೆ ಬಡಿಯುವವರ ತಂಡವು ಬರಲಿದೆ. ಇದರ ಜವಾಬ್ದಾರಿಯನ್ನು ಜೆಡಿಎಸ್ ಮುಖಂಡ ಶ್ರೀಕಾಂತ್ ವಹಿಸಿಕೊಂಡಿದ್ದಾರೆ. ಅದರ ಜತೆಗೆ ಉಡುಪಿ, ಮಂಗಳೂರಿನ ಕಲಾತಂಡಗಳು ಬರಲಿವೆ ಎಂದರು.
ಕುಸ್ತಿಗೆ ಆಹ್ವಾನ: ಪ್ರತಿ ವರ್ಷ ರಾಜ್ಯ, ರಾಷ್ಟ್ರಮಟ್ಟದ ಕುಸ್ತಿಪಟುಗಳನ್ನು ಆಹ್ವಾನಿಸಲಾಗುತ್ತಿದೆ. ಈ ಬಾರಿ ಪೂನಾವರೆಗೂ ಹೋಗಿ ಗರಡಿ ಮನೆಗಳನ್ನು ಭೇಟಿ ಮಾಡಿ ಆಹ್ವಾನ ನೀಡಲಾಗಿದೆ. ಕಳೆದ 350 ಜನ ಕುಸ್ತಿಪಟುಗಳು ಭಾಗವಹಿಸಿದ್ದರು. ಈ ಬಾರಿ ಅದಕ್ಕಿಂತ ಹೆಚ್ಚಿನ ಜನ ಭಾಗವಹಿಸುವ ನಿರೀಕ್ಷೆ ಇದೆ. ಹಾವೇರಿ, ಗದಗ, ಹುಬ್ಬಳ್ಳಿಯಿಂದ ಸಹ ಆಗಮಿಸಲಿದ್ದಾರೆ. ಅಲ್ಲದೆ ಶಿವಮೊಗ್ಗದ ಪ್ರತಿಭೆಗಳು ಸಹ ಭಾಗವಹಿಸಲಿದ್ದಾರೆ. ಇಲ್ಲಿನ ಕೆಇಬಿ ನೌಕರ ನಾಗರಾಜ್ ಅವರ ಪುತ್ರ ಉತ್ತಮ ಕುಸ್ತಿಪಟುವಾಗಿದ್ದು, ಸಾಗರ ಮಾರಿಜಾತ್ರೆಯಲ್ಲೂ ಬಹುಮಾನ ಗೆದ್ದಿದ್ದಾರೆ. ಇಂತವರಿಗೆ ಇನ್ನಷ್ಟು ಪ್ರೋತ್ಸಾಹದ ಅಗತ್ಯವಿದೆ ಎಂದು ತಿಳಿಸಿದರು.
ಕುಸ್ತಿಗಾಗಿ ಬೆಂಗಳೂರಿನಿಂದ 1 ಕೆ.ಜಿ 50 ಗ್ರಾಂ ತೂಕದ ಬೆಳ್ಳಿಗದೆಯನ್ನು ತರಿಸಲಾಗಿದೆ. ಕುಸ್ತಿ ಪಂದ್ಯಾವಳಿಯಲ್ಲಿ 400 ಜನರನ್ನ ಕರೆಸಲಾಗಿದೆ. ಫೈನಲ್ ಪಂದ್ಯಾವಳಿಯಲ್ಲಿ ಗೆದ್ದ ಪಟುವಿಗೆ ಬೆಳ್ಳಿ ಗದೆ ಹಾಗೂ 25 ಸಾವಿರ ನಗದು ಬಹುಮಾನ ನೀಡಲಾಗುತ್ತಿದೆ ಎಂದರು.
ಫ್ಲೆಕ್ಸ್‌ಗೆ ತೊಂದರೆ ಇಲ್ಲ: ಜಾತ್ರೆ ಸಂಬಂಧ ಎಲ್ಲೆಡೆ ಕಟೌಟ್, ಫ್ಲೆಕ್ಸ್ ಹಾಕಲಾಗುತ್ತಿದೆ. ಪಾಲಿಕೆ ಸಹ ಇದಕ್ಕೆ ಅನುಮತಿ ಕೊಡಬೇಕೆಂದು ಮನವಿ ಮಾಡಲಾಗಿದೆ. ಹಾಗಾಗಿ ಯಾರಾದರೂ ಹಬ್ಬದ ಪ್ರಯುಕ್ತ ಫ್ಲೆಕ್ಸ್ ಹಾಕಬಹುದಾಗಿದೆ. ಇದು ಜಾತ್ರೆಗೆ ಮಾತ್ರ ಸೀಮಿತ ಎಂದರು.
ಜಾತ್ರೆ ವೇಳೆ ಕಸ ವಿಲೇವಾರಿ, ಭಕ್ತರಿಗೆ ಪಾನಕ, ಮಜ್ಜಿಗೆಯ ವ್ಯವಸ್ಥೆಯನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಕೆಲ ಸಂಘಟನೆಗಳು ಇದರ ಜವಾಬ್ದಾರಿ ವಹಿಸಿಕೊಂಡಿದ್ದಾರೆ ಎಂದರು. ನಂತರ ಮಾತನಾಡಿದ ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್, ಜಾತ್ರೆ ಮದುವೆಯ ರೀತಿಯಲ್ಲಿ ನಡೆಯಲಿದ್ದು ನಾಡಿಗ್ ಅವರ ಮನೆಗೆ ಹೋಗಿ ಮದುವೆಗೆ ಆಹ್ವಾನಿಸಲಾಗುವುದು. ದೇವಿಗೆ ಬಾಸಿಂಗ ಕಟ್ಟಿದ ನಂತರ ದೇವಿ ದರ್ಶನಕ್ಕೆ ಅನುವು ಮಾಡಿಕೊಡಲಾಗುವುದು. ವಿಶ್ವಕರ್ಮ ಸಮಾಜದಿಂದ ಗಂಗೆ ಪೂಜೆ ನಡೆಯಲಿದೆ. ಈ ಜಾತ್ರೆ ಕೇವಲ ಹಿಂದುಳಿದ ಸಮಾಜದ ಜಾತ್ರೆ ಎನಿಸಿಕೊಂಡಿತ್ತು. ಆದರೆ ಈಗ ಆ ರೀತಿ ಕರೆಯಲಾಗುತ್ತಿಲ್ಲ. ವಿವಿಧತೆಯಲ್ಲಿ ಏಕತೆಯನ್ನು ಸಾರುವ ರೀತಿಯಲ್ಲಿ ಎಲ್ಲ ಸಮಾಜ
ದವರಿಂದ ಅಮ್ಮನವರ ಪೂಜಾ ಕೈಂಕರ್ಯ ನಡೆಯಲಿದೆ ಎಂದರು.
ನಗರದ ಕಾರ್ಪೊರೇಟರ್‌ಗಳು ತಮ್ಮ ತಮ್ಮ ಬಡಾವಣೆಯ ದೀಪಾಲಂಕಾರ ತಾವೇ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ. ಗದ್ದುಗೆಯಲ್ಲಿ ಯಾವ ಪ್ರಾಣಿ ಬಲಿಗೆ ಅವಕಾಶವಿಲ್ಲವೆಂದರು. ಗಾಂಧಿ ಬಜಾರ್ ಮತ್ತು ಗದ್ದುಗೆ ಬಳಿ ಹಿರಿಯರಿಗೆ ಹಾಗೂ ವಿಕಲಚೇತನರಿಗೆ ವಿಶೇಷ ದರ್ಶನವನ್ನ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 8 ರಿಂದ 12 ರ ವರೆಗೆ ವಿಕಲಚೇತನರಿಗೆ ಮತ್ತು ನಾಗರಿಕರಿಗೆ ವಿಶೇಷ ದರ್ಶನ ಐದು ದಿನ ನಡೆಯಲಿದೆ. ಪ್ರತಿ ನಿತ್ಯ ಬೆಳಗ್ಗೆ ತಿಂಡಿ, ಮದ್ಯಾಹ್ನ ಊಟ ಸಂಜೆ ಸ್ನಾಕ್ಸ್ ಹಾಗೂ ರಾತ್ರಿ ಊಟ ನಡೆಯಲಿದೆ ಎಂದರು.
ಗೋಷ್ಠಿಯಲ್ಲಿ ಕೆ.ಎನ್. ಶ್ರೀನಿವಾಸ್, ಎನ್. ಉಮಾಪತಿ, ಎಂ.ಕೆ. ಸುರೇಶ್ ಕುಮಾರ್, ಎಚ್.ವಿ. ತಿಮ್ಮಪ್ಪ, ಎಸ್. ಹನುಮಂತಪ್ಪ, ಡಿ.ಎಂ. ರಾಮಯ್ಯ, ಎನ್.ಸಿ. ಲೋಕೇಶ್, ಖೀಲ್ಲೆದಾರ್ ಸೀತಾರಾಮ್ ನಾಯಕ್, ಎಚ್.ಎ. ಸುನಿಲ್ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಾಗರಕ್ಕೆ ಆಗಮಿಸಿದ ಡಾ.ನಾ.ಡಿಸೋಜಾ ಪಾರ್ಥಿವ ಶರೀರ; ಗಣ್ಯರು, ಅಧಿಕಾರಿಗಳಿಂದ ಅಂತಿಮ ದರ್ಶನ
Hosanagar: ಪ್ರಪಾತಕ್ಕೆ ಉರುಳಿದ ಬಸ್; ಸಣ್ಣ ಪುಟ್ಟ ಗಾಯಗಳಿಂದ ಪ್ರಯಾಣಿಕರು ಪಾರು
Sarji sweet box case: ಲವ್ ಫೈಲ್ಯೂರ್ ಆಗಿದ್ದಕ್ಕೆ ಸೇಡಿಗಾಗಿ ಕೃತ್ಯ ಮಾಡಿದ್ದ ಲಾಯರ್!
ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…
ಸಾಹಿತ್ಯದಾಚೆಗೂ ಬೆಳೆದು ನಿಂತ ಸಾಗರದ ನಾ.ಡಿ’ಸೋಜಾ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Karinja: ಅಪಾಯಕಾರಿ ವಿದ್ಯುತ್ ಕಂಬ; ತುಕ್ಕು ಹಿಡಿದ, ಶಕ್ತಿ ಕಳೆದು ಬಾಗಿರುವ ಕಂಬ
ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಸಾವಿನ ಸಂಖ್ಯೆ 53ಕ್ಕೆ ಏರಿಕೆ, 60ಕ್ಕೂ ಹೆಚ್ಚು ಮಂದಿ ಗಾಯ
Updated: ಕೆನಡಾ ಮುಂದಿನ ಪ್ರಧಾನಿ ರೇಸ್ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!
UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ
Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.