“ಸಪ್ತಪದಿ’ಗೆ ಕೊರೊನಾ ಗ್ರಹಣ!
Team Udayavani, Apr 25, 2021, 6:52 PM IST
ಶರತ್ ಭದ್ರಾವತಿ
ಶಿವಮೊಗ್ಗ: ಬಡವ ಹಾಗೂ ಮಧ್ಯಮ ವರ್ಗದ ಮದುವೆಗೆ ಆಸರೆಯಾಗಿದ್ದ “ಸಪ್ತಪದಿ’ ಯೋಜನೆಗೆ ಕೊರೊನಾ ಗ್ರಹಣ ಆವರಿಸಿದೆ. ಡಿಸೆಂಬರ್‌ನಿಂದ ಫೆಬ್ರವರಿವರೆಗೆ 195 ಜೋಡಿ ವಿವಾಹವಾಗಿದ್ದು, ಏಪ್ರಿಲ್‌ನಲ್ಲಿ ಬೆರಳೆಣಿಕೆಯಷ್ಟು ಮಂದಿ ನೋಂದಣಿ ಮಾಡಿಸಿದ್ದಾರೆ. ಸರಳ ವಿವಾಹ ಪ್ರೋತ್ಸಾಹಿಸುವ ಸಲುವಾಗಿ ಸರ್ಕಾರ ಕಳೆದ ವರ್ಷ “ಸಪ್ತಪದಿ’ ಯೋಜನೆ ಘೋಷಣೆ ಮಾಡಿತ್ತು.
ಕೋವಿಡ್ ಕಾರಣದಿಂದ ಡಿಸೆಂಬರ್ ನಿಂದ ಆರಂಭವಾದ ಈ ಯೋಜನೆಗೆ ಸ್ವಲ್ಪಮಟ್ಟಿನ ಉತ್ಸಾಹ ಕಂಡು ಬಂದಿತ್ತು. ಏಪ್ರಿಲ್‌ನಲ್ಲಿ ತೀರಾ ನಿರಾಶದಾಯಕವಾಗಿದೆ. ಮಕ್ಕಳ ಮದುವೆಗೆ ಬಂಗಾರ, ಕಲ್ಯಾಣ ಮಂಟಪ, ಊಟೋಪಚಾರಗಳಿಗೆ ಹಣ ಹೊಂದಿಸಲಾಗದೆ ಬಡವರು, ಮಧ್ಯಮ ವರ್ಗದ ಜನ ಸಾಲ ಮಾಡಿದ್ದು, ಅದನ್ನು ತೀರಿಸಲಾಗದೆ ಜೀವನ ಪರ್ಯಂತ ಹೆಣಗಾಡಬೇಕಿತ್ತು. ಕೆಲವರು ಸಾಲದಿಂದಲೇ ಪ್ರಾಣ ಕಳೆದುಕೊಂಡ ಉದಾಹರಣೆಗಳಿವೆ. ಇವೆಲ್ಲವನ್ನು ಗಮನದಲ್ಲಿ ಇಟ್ಟುಕೊಂಡು ಸಪ್ತಪದಿ ಯೋಜನೆ ಜಾರಿಗೆ ತಂದು ಸರಳ ವಿವಾಹಕ್ಕೆ ಬೇಕಾದಷ್ಟು ವಸ್ತ್ರ, ತಾಳಿ, ಊಟದ ವ್ಯವಸ್ಥೆಯನ್ನು ಸರ್ಕಾರವೇ ಮಾಡುತ್ತಿದೆ. ಪ್ರತಿ ಜೋಡಿಗೆ 55 ಸಾವಿರ ಖರ್ಚು ಮಾಡುತ್ತಿದೆ. ಕೊರೊನಾ ಪ್ರಕರಣಗಳ ಏರಿಕೆ, ಜನಸಂದಣಿಗೆ ನಿರ್ಬಂಧ ಹೇರಿರುವುದರಿಂದ ಏಪ್ರಿಲ್‌ನಲ್ಲಿ ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ.
ಪ್ರತಿ ಜೋಡಿಗೆ 55 ಸಾವಿರ ವೆಚ್ಚ: ವರನಿಗೆ ಹೂವಿನ ಹಾರ, ಪಂಚೆ, ಶರ್ಟ್, ಶಲ್ಯಕ್ಕಾಗಿ 5 ಸಾವಿರ, ವಧುವಿಗೆ ಹೂವಿನ ಹಾರ, ಧಾರೆ ಸೀರೆ, ರವಿಕೆ ಕಣಕ್ಕಾಗಿ 10 ಸಾವಿರ, ವಧುವಿಗೆ ಚಿನ್ನದ ತಾಳಿ, ಎರಡು ಚಿನ್ನದ ಗುಂಡು (ಅಂದಾಜು 8 ಗ್ರಾಂ ತೂಕ, ಅಂದಾಜು 40 ಸಾವಿರ) ಒಟ್ಟು 55 ಸಾವಿರ ರೂ.ಗಳನ್ನು ಸರ್ಕಾರ ವೆಚ್ಚ ಮಾಡುತ್ತಿದೆ. ಅಲ್ಲದೇ ಮದುವೆ ಬಂಧುಗಳಿಗೆ, ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಕೂಡ ಮಾಡುತ್ತಿದೆ. ಈ ಹಣವನ್ನು ದೇವಾಲಯ ನಿ ಧಿಯಿಂದ ಬಳಸಲಾಗುತ್ತಿದೆ.
ಜನರಿಂದ ಬೇಕಿದೆ ಪ್ರತಿಕ್ರಿಯೆ
ಸರ್ಕಾರ ಉತ್ತಮ ಸೌಲಭ್ಯ ಒದಗಿಸಿದರೂ ಈ ಮಹತ್ವಾಕಾಂಕ್ಷೆ ಯೋಜನೆಗೆ ಸಾರ್ವಜನಿಕರ ಪ್ರತಿಕ್ರಿಯೆ ಉತ್ತಮವಾಗಿಲ್ಲ. ಸರಳ ವಿವಾಹಕ್ಕೆ ಮಾದರಿಯಾದ ಶಿವಮೊಗ್ಗ ಜಿಲ್ಲೆಯಲ್ಲಿ (ಮಂತ್ರ ಮಾಂಗಲ್ಯ) ನಾಲ್ಕು ತಿಂಗಳಲ್ಲಿ ಒಂದೇ ಒಂದು ವಿವಾಹವೂ ನಡೆದಿಲ್ಲ. ಜಿಲ್ಲೆಯಲ್ಲಿ ಮೂರು ದೇವಸ್ಥಾನಗಳಲ್ಲಿ ಅವಕಾಶ ನೀಡಲಾಗಿದೆ. ಏಪ್ರಿಲ್ ತಿಂಗಳಲ್ಲಿ ಮೂರು ಅರ್ಜಿಗಳು ಬಂದಿವೆ. ವಿವಾಹ ನಡೆಯುವುದೋ ತಿಳಿದಿಲ್ಲ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇದೇ ಪರಿಸ್ಥಿತಿ ಇದೆ. ಪ್ರಖ್ಯಾತ ದೇವಸ್ಥಾನಗಳಿಗೆ ಹೆಚ್ಚಿನ ಬೇಡಿಕೆ ಇದೆ.
ಈವರೆಗೆ 1.07 ಕೋಟಿ ರೂ. ವೆಚ್ಚ ಡಿಸೆಂಬರ್‌ನಿಂದ ಮಾರ್ಚ್‌ವರೆಗೆ ಒಟ್ಟು 195 ಜೋಡಿಗಳು ವಿವಾಹವಾಗಿದ್ದು ದೇವಸ್ಥಾನದ ನಿ ಧಿಯಿಂದ ಒಟ್ಟು 1.07 ಕೋಟಿ ರೂ. ಖರ್ಚಾಗಿದೆ. ರಾಜ್ಯದ ಕೆಲವು ಪ್ರಖ್ಯಾತ ದೇವಸ್ಥಾನಗಳಿಗೆ ಬೇಡಿಕೆಯಿದ್ದು, ಅಲ್ಲಿ ವಿವಾಹವಾಗುವರ ಸಂಖ್ಯೆ ಹೆಚ್ಚಿದೆ. ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಮಣ್ಯ, ಮೈಸೂರಿನ ಚಾಮುಂಡಿ ಬೆಟ್ಟ, ಕೊಪ್ಪಳದ ಕನಕಾಚಲಪತಿ ದೇವಸ್ಥಾನ, ಹುಲಿಗೆಮ್ಮ ದೇವಸ್ಥಾನ, ಕುಣಿಗಲ್ ತಾಲೂಕಿನ ಎಡೆಯೂರು ಸಿದ್ದಲಿಂಗೇಶ್ವರ, ಉಡುಪಿಯ ಕೊಲ್ಲೂರು ಮೂಕಾಂಬಿಕಾ, ಬ್ರಹ್ಮಾವರ ತಾಲೂಕಿನ ಮಂದಾರ್ತಿ ದುರ್ಗಾಪರಮೇಶ್ವರಿ, ಅಮೃತೇಶ್ವರ ದೇವಾಲಯಕ್ಕೆ ಹೆಚ್ಚಿನ ಬೇಡಿಕೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Holehonnur: ಎರಡು ಪ್ರತ್ಯೇಕ ರಸ್ತೆ ಅಪಘಾತ
Shivamogga: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಓ ಈಶ್ವರಪ್ಪ
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ
Bantwal: ತುಂಬೆ ಜಂಕ್ಷನ್; ಸರಣಿ ಅಪಘಾತ
Kasaragod ಅಪರಾಧ ಸುದ್ದಿಗಳು: ವಿದ್ಯಾರ್ಥಿನಿಯರಿಗೆ ಕಿರುಕುಳ; ಕೇಸು ದಾಖಲು
Brahmavar: ಆರೂರು; ಬೆಂಕಿ ತಗಲಿ ಗಾಯಗೊಂಡಿದ್ದ ಮಹಿಳೆ ಸಾವು
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.