ಮುಚ್ಚಿ ಹೋದ ಕೆರೆಗೆ ಮರುಜೀವ ನೀಡುವ ಕಾರ್ಯಕ್ಕೆ ಚಾಲನೆ
Team Udayavani, May 2, 2021, 7:01 PM IST
ಶಿವಮೊಗ್ಗ: ಮುಚ್ಚಿಹೋಗಿದ್ದ ಕೆರೆಯನ್ನು ಮತ್ತೆ ಪುನರ್‌ಜೀವ ನೀಡುವ ಮಹತ್ತರ ಕೆಲಸವನ್ನು ಇಲ್ಲಿನ ಪರಿಸರಾಸಕ್ತರು ಆರಂಭಿಸಿದ್ದು, ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಮಲ್ಲಿಗೇನಹಳ್ಳಿ ವಾಜಪೇಯಿ ಬಡಾವಣೆಯ ಸರ್ವೇ ನಂ.52ರ ಕ್ಯಾದಿಗೆಕಟ್ಟೆ ಕೆರೆ ಸಂಪೂರ್ಣ ಹೂಳು ತುಂಬಿಕೊಂಡಿದ್ದು, ಸುಮಾರು 8 ಎಕರೆ ವಿಸ್ತೀರ್ಣದ ಕೆರೆ ಇದಾಗಿದ್ದು, ಈಗ 2 ಎಕರೆ ಪ್ರದೇಶದಲ್ಲಿ ಕೆರೆ ಹೂಳೆತ್ತುವ ಕೆಲಸಕ್ಕೆ ಪರಿಸರಾಸಕ್ತರು ನಿರ್ಧರಿಸಿದ್ದು, ರಾಜ್ಯದಲ್ಲಿಯೇ ಒಂದು ಮಾದರಿ ಕೆರೆಯನ್ನಾಗಿ ರೂಪಿಸುವ ಮಹತ್ವಾಕಾಂಕ್ಷಿ ಯೋಜನೆ ರೂಪಿಸಿದ್ದಾರೆ.
ಕೆರೆಯ ಹೂಳು ಎತ್ತಿ ನೀರು ಸಂಗ್ರಹಣೆಗೆ ಅವಕಾಶ ನೀಡಿ ಕೆರೆಯ ಸುತ್ತಮುತ್ತ ಗಿಡ ಮರಗಳನ್ನು ಬೆಳೆಸುವ ಉದ್ದೇಶ ಹೊಂದಿದ್ದು, ಸಾರ್ವಜನಿಕರ ವಾಯು ವಿಹಾರಕ್ಕೂ ಕೂಡ ಅನುಕೂಲಕರ ವಾತಾವರಣವನ್ನು ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಈಗಾಗಲೇ ಕೆಲವು ಪರಿಸರ ತಜ್ಞರ ಜೊತೆ ಸೇರಿಕೊಂಡು ನೀಲನಕ್ಷೆ ತಯಾರಿಸಲಾಗಿದೆ. ಮುಂದಿನ ದಿನಗಳಲ್ಲಿ ವಾಜಪೇಯಿ ಬಡಾವಣೆಯಲ್ಲಿ ನಿರ್ಮಾಣವಾಗುವ ಎಲ್ಲಾ ಮನೆಗಳ ಮೇಲ್ಚಾವಣಿಯ ಮಳೆ ನೀರು ಪೈಪುಗಳ ಮೂಲಕ ನೇರವಾಗಿ ಈ ಕೆರೆಯನ್ನು ಸೇರುವಂತೆ ಮಾಡಲಾಗುವ ಮಳೆ ಕೊಯ್ಲು ಯೋಜನೆ ಕೂಡ ಇದರ ಭಾಗವಾಗಿದೆ ಎಂದು ಪರಿಸರಾಸಕ್ತರ ತಂಡ ತಿಳಿಸಿದೆ.
ಯೋಜನೆಯ ತಜ್ಞ ಯೇಸು ಪ್ರಕಾಶ್ ಮಾತನಾಡಿ, ಕೆರೆಗೆ ಜೀವಕೊಡುವುದು ಮಾತ್ರವಲ್ಲ. ದೇಶದಲ್ಲಿಯೇ ಮಾದರಿ ಕೆರೆಯನ್ನಾಗಿ ರೂಪಿಸುವುದು ಇದರ ಉದ್ದೇಶ. ಈಗಾಗಲೇ ನಾವು ಸುಮಾರು 6 ಕೆರೆಗಳನ್ನು ಈ ರೀತಿ ಜೀರ್ಣೋದ್ದಾರ ಮಾಡಿದ್ದೇವೆ ಎಂದರು. ಪರಿಸರಾಸಕ್ತರ ತಂಡದ ಸದಸ್ಯ ಸತೀಶ್ ಮಾತನಾಡಿ, ಕೆರೆಯ ಸುತ್ತಮುತ್ತ ಸ್ಥಳೀಯ ಸಸ್ಯ ಪ್ರಭೇದಗಳನ್ನೇ ಬೆಳೆಸಲಾಗುವುದು. ಅತ್ಯಂತ ಕಡಿಮೆ ಜಾಗದಲ್ಲಿ ಹೆಚ್ಚು ಸಸಿ ಬೆಳೆಸುವುದು ಮತ್ತು ಪರಿಸರವನ್ನು ಉತ್ತಮವಾಗಿಸುವ ಸಸ್ಯಗಳನ್ನು ಆಯ್ಕೆ ಮಾಡಿಕೊಳ್ಳುವುದು ನಮ್ಮ ಉದ್ದೇಶವಾಗಿದೆ ಎಂದರು. ಪ್ರೊ| ಬಿ.ಎಂ.ಕುಮಾರಸ್ವಾಮಿ, ಪ್ರೊ| ಚಂದ್ರಶೇಖರ್, ಕಾಟನ್ ಜಗದೀಶ್, ಶ್ರೀಧರ್, ಬಾಲಕೃಷ್ಣ ನಾಯ್ಡು, ಸತೀಶ್ ಕುಮಾರ್, ತ್ಯಾಗರಾಜ್, ಪ್ರಕಾಶ್, ಮೋಹನ್, ಉಮೇಶ್ ಮೊದಲಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು
Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ
Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ
Shimoga: ತ್ಯಾವರೆಕೊಪ್ಪ ಧಾಮದಲ್ಲಿ ಮೃತಪಟ್ಟ ಹೆಣ್ಣು ಹುಲಿ ಅಂಜನಿ
Shimoga; ಮನೆಯಂಗಳದಿಂದ ನಾಯಿ ಹೊತ್ತೊಯ್ದ ಚಿರತೆ; ಸಿಸಿಕ್ಯಾಮರಾದಲ್ಲಿ ದೃಶ್ಯ ಸೆರೆ
MUST WATCH
ಹೊಸ ಸೇರ್ಪಡೆ
Divorce: ಚಾಹಲ್ ಬಳಿಕ ಇದೀಗ ಮನೀಶ್ ಪಾಂಡೆ ವಿಚ್ಛೇದನ? ಏನಿದು ವರದಿ
ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ
ಅರಾಟೆ ಸೇತುವೆ: ಅಪಘಾತ ವಲಯ! ಬೆಳಕಿಲ್ಲ, ಸಿಗ್ನಲ್ ಲೈಟ್ ಉರಿಯುತ್ತಿಲ್ಲ!
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.