ಉಸಿರೇ ನಿಂತ ವಿಐಎಸ್‌ಎಲ್‌ನಿಂದ ಸೋಂಕಿತರಿಗೆ ಉಸಿರು!
Team Udayavani, May 9, 2021, 10:49 PM IST
ಕೆ.ಎಸ್. ಸುಧೀಂದ್ರ ಭದ್ರಾವತಿ
ಭದ್ರಾವತಿ: ಒಂದು ಕಾಲದಲ್ಲಿ ಭದ್ರಾವತಿ ಕ್ಷೇತ್ರದ ಅಸಂಖ್ಯಾತ ಜನರಿಗೆ ಉದ್ಯೋಗ ಒದಗಿಸಿ, ಸಾವಿರಾರು ಕುಟುಂಬಗಳಿಗೆ ಬದುಕು ನೀಡಿ, ಅನ್ನದಾತ ಸಂಸ್ಥೆಯಾಗಿದ್ದ ಸರ್.ಎಂ.ವಿ. ಸಂಸ್ಥಾಪಿತ ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಇಂದು ತನ್ನ ಗತಕಾಲದ ವೈಭವವನ್ನು ಕಳೆದುಕೊಂಡಿದೆ.
ತನ್ನ ಅಸ್ತಿತ್ವ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೆಣಗಾಡುತ್ತಾ ನೋವಿನ ಸ್ಥಿತಿಯಲ್ಲಿದ್ದರೂ ಸಹ ಕೊರೊನಾ ಸಂಕಷ್ಟದಿಂದ ಸಾವು- ಬದುಕಿನ ನಡುವೆ ಹೋರಾಡುತ್ತಿರುವ ಜನರ ಪ್ರಾಣ ಉಳಿಸುವ ಸಲುವಾಗಿ ತನ್ನ ಪ್ರಾಂಗಣದಲ್ಲಿರುವ ಆಮ್ಲಜನಕ ಉತ್ಪಾದನಾ ಘಟಕದಿಂದ ಆಸ್ಪತ್ರೆಗೆ ಆಕ್ಸಿಜನ್ ಸರಬರಾಜು ಮಾಡುವ ಸೇವಾ ಕಾರ್ಯಕ್ಕೆ ಹೆಗಲು ನೀಡಿ ನಿಜವಾದ ಅರ್ಥದಲ್ಲಿ ಕೋವಿಡ್ ವಾರಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದೆ.
ಕಾರ್ಖಾನೆಯ ಅಂಗಳದಲ್ಲಿ ಹಲವು ದಶಕಗಳ ಹಿಂದೆ ಉತ್ತರ ಭಾರತ ಮೂಲದ ಬಾಲ್‌ದೋಟ್ ಮಾಲೀಕತ್ವದ ಎಂಎಸ್‌ಪಿಎಲ್ ಕಂಪನಿಯ ಸಹಯೋಗದಲ್ಲಿ ಆಕ್ಸಿಜನ್ ಉತ್ಪಾದನಾ ಘಟಕವನ್ನು ಸ್ಥಾಪಿಸಿ, ಕಾರ್ಖಾನೆಗೆ ಅಗತ್ಯವಾದ ಪ್ರಮಾಣದ ಆಕ್ಸಿಜನ್ ಉತ್ಪಾದನೆ ಮಾಡಲಾಗುತ್ತಿತ್ತು. ಆಕ್ಸಿಜನ್ ಉತ್ಪಾದನೆ ಮತ್ತು ಅವುಗಳನ್ನು ಜಂಬೋ ಸಿಲಿಂಡರ್‌ಗಳಲ್ಲಿ ತುಂಬಲು ಅಂದಿನ ಕಾಲದಲ್ಲಿಯೇ ಲಕ್ಷಾಂತರ ರೂ. ಖರ್ಚು ಆಗುತ್ತಿತ್ತು. ಕಾರ್ಖಾನೆ ಲಾಭದಾಯಕವಾಗಿ ನಡೆಯುತ್ತಿದ್ದದ್ದರಿಂದ ಆ ವೆಚ್ಚ ಕಷ್ಟ ಎನಿಸುತ್ತಿರಲಿಲ್ಲ. ಆದರೆ ಕಾಲಕ್ರಮೇಣ ವಿಐಎಸ್‌ಎಲ್ ನಷ್ಟದ ಹಾದಿಯಲ್ಲಿ ಸಾಗಿದ ಪರಿಣಾಮ ಕಾರ್ಖಾನೆಯಲ್ಲಿ ವರ್ಷದಿಂದ ವರ್ಷಕ್ಕೆ ಕಾರ್ಮಿಕರ ಸಂಖ್ಯೆ, ಉತ್ಪಾದನೆ, ಮಾರಾಟ ಎಲ್ಲವೂ ಕುಸಿದ ಪರಿಣಾಮ ಕಾರ್ಖಾನೆಯ ಹಲವು ಘಟಕಗಳು ಮುಚ್ಚುತ್ತಾ ಬಂದವು. ಅದರಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಈ ಆಕ್ಸಿಜನ್ ಘಟಕವನ್ನೂ ಸಹ ಎಂಎಸ್‌ಪಿಎಲ್ ಉತ್ಪಾದನೆ ಸ್ಥಗಿತಗೊಳಿಸಿ ಮುಚ್ಚಲ್ಪಟ್ಟಿತು.
ಕೊರೊನಾದಿಂದ ಮತ್ತೆ ಯಂತ್ರಗಳ ಸದ್ದು: ಹೊರ ಜಗತ್ತಿನ ಬಹುತೇಕರಿಗೆ ಈ ಕಾರ್ಖಾನೆಯಲ್ಲಿ ಪಳೆಯುಳಿಕೆಯಾಗಿ ಉಳಿದ ಆಕ್ಸಿಜನ್ ಘಟಕದ ಬಗ್ಗೆ ಮರೆತೇ ಹೋಗಿತ್ತು. ಆದರೆ ಕೊರೊನಾ ಎರಡನೆ ಅಲೆ ಸೃಷ್ಟಿಸಿರುವ ಆಕ್ಸಿಜನ್ ಕೊರತೆಯ ಅವಾಂತರ ಮತ್ತೆ ಈಘಟಕವನ್ನು ನೆನಪಿಸಿದೆ. ಕೊರೊನಾ ಸೋಂಕಿತರಿಗೆ ಅಗತ್ಯವಾದ ಆಮ್ಲಜನಕ ಪೂರೈಕೆಯ ಕೊರತೆಯಾಗಿ ಆಸ್ಪತ್ರೆಗಳಲ್ಲಿ ಹಾಹಾಕಾರ ಉಲ್ಬಣಗೊಳ್ಳುತ್ತಿದ್ದಂತೆ, ಆಕ್ಸಿಜನ್ ಉತ್ಪಾದನೆಗಾಗಿ ಈ ಘಟಕದ ಪುನಾರಂಭದ ಮಾತುಗಳು ಕೇಳಿ ಬಂದವು.
ವಿಐಎಸ್‌ಎಲ್ ಕಾರ್ಖಾನೆಯಲ್ಲಿ ಸ್ಥಗಿತಗೊಂಡಿರುವ ಆಕ್ಸಿಜನ್ ಘಟಕದತ್ತ ರಾಜ್ಯ ಸರ್ಕಾರದ ಚಿತ್ತ ಹರಿದು ಕಾರ್ಖಾನೆಯ ಆಡಳಿತದ ಜೊತೆ ಮತ್ತು ಎಂಎಸ್ ಪಿಎಲ್ ಕಂಪೆನಿ ಜೊತೆ ಮಾತುಕತೆ ನಡೆಸಿದ ಪರಿಣಾಮ ವಿಐಎಸ್‌ಎಲ್ ಕಾರ್ಖಾನೆಯ ಆಕ್ಸಿಜನ್ ಘಟಕದಲ್ಲಿ ಆಕ್ಸಿಜನ್ ಉತ್ಪಾದನೆಗೆ ಮರು ಚಾಲನೆ ದೊರಕಿದೆ. ವಿಐಎಸ್‌ಎಲ್ ಕಂಪೆನಿಯಲ್ಲಿ ಲಭ್ಯವಿರುವ 1 ಕಂಪ್ರೈಸರ್ ನೆರವಿನಿಂದ 150 ಜಂಬೋ ಸಿಲೆಂಡರ್‌ಗಳಿಗೆ ಆಕ್ಸಿಜನ್ ತುಂಬುವ ಕಾರ್ಯಕ್ಕೆ ಚಾಲನೆ ದೊರತಿದೆ.
ಅವುಗಳನ್ನು ಈಗಾಗಲೇ ಸರ್ಕಾರ ಅಗತ್ಯವಿರುವ ಕೋವಿಡ್ ರೋಗಿಗಳಿಗೆ ಆಕ್ಸಿಜನ್ ಪೂರೈಸುವುದಕ್ಕೆ ವ್ಯವಸ್ಥೆ ಮಾಡಿದೆ. ಈ ನಿಟ್ಟಿನಲ್ಲಿ ಉತ್ಪಾದನೆಗೊಳ್ಳುವ ಆಕ್ಸಿಜನ್‌ನ್ನು ಜಂಬೋ ಸಿಲಿಂಡರ್‌ಗಳಿಗೆ ತುಂಬಲು ದಿನವೊಂದಕ್ಕೆ 2 ಲಕ್ಷ ರೂ. ವಿದ್ಯುತ್ ವೆಚ್ಚ ವಾಗುವುದರ ಜೊತೆಗೆ ಆಕ್ಸಿಜನ್ ತಯಾರಿಕೆಗೆ ಹತ್ತು ಲಕ್ಷ ರೂ.ಗೂ ಅಧಿ ಕ ವೆಚ್ಚವಾಗುತ್ತದೆ. ಇದನ್ನು ರಾಜ್ಯ ಸರ್ಕಾರವೇ ಭರಿಸಲು ಮುಂದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು
Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ
Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ
Shimoga: ತ್ಯಾವರೆಕೊಪ್ಪ ಧಾಮದಲ್ಲಿ ಮೃತಪಟ್ಟ ಹೆಣ್ಣು ಹುಲಿ ಅಂಜನಿ
Shimoga; ಮನೆಯಂಗಳದಿಂದ ನಾಯಿ ಹೊತ್ತೊಯ್ದ ಚಿರತೆ; ಸಿಸಿಕ್ಯಾಮರಾದಲ್ಲಿ ದೃಶ್ಯ ಸೆರೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.