ಬೀದಿಗೆ ಬಂತು ಕುವೆಂಪು ವಿಶ್ವ ವಿದ್ಯಾಲಯ ಮುಖ್ಯಸ್ಥರ ಒಳಜಗಳ
Team Udayavani, May 14, 2021, 9:57 PM IST
ಶಿವಮೊಗ್ಗ: ವಿಶ್ವಮಾನವ ಸಂದೇಶ ಸಾರಿದ ಕುವೆಂಪು ಅವರ ಆಶಯದಂತೆ ನಡೆಯುತ್ತಿರುವ ಕುವೆಂಪು ವಿವಿ ಜಾತಿ, ಒಳಜಾತಿ, ಸ್ವಜನ ಪಕ್ಷಪಾತ, ಗುಂಪುಗಾರಿಕೆ, ಭ್ರಷ್ಟಾಚಾರದ ಕಾರಣಕ್ಕೆ ಮತ್ತೂಮ್ಮೆ ಸುದ್ದಿಯಲ್ಲಿದೆ.
ರಾಜ್ಯದ ಪ್ರತಿಷ್ಠಿತ ವಿವಿಗಳಲ್ಲಿ ಒಂದಾದ ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ|ಬಿ.ಪಿ.ವೀರಭದ್ರಪ್ಪ ಹಾಗೂ ಆಡಳಿತ ಕುಲಸಚಿವರ ಪ್ರೊ.ಪಾಟೀಲ್ ನಡುವೆ ಶೀತಲ ಸಮರ ಆರಂಭವಾಗಿದ್ದು. ಇದರ ಪರಿಣಾಮ ಇಬ್ಬರೂ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ನೀಡಿದ್ದಾರೆ. ಈ ಮೂಲಕ ಉನ್ನತ ಹುದ್ದೆಯಲ್ಲಿರುವವರ ನಡುವಿನ ಆಂತರಿಕ ಕಚ್ಚಾಟ ಹಾಗೂ ವಿಶ್ವವಿದ್ಯಾಲಯದ ಘನತೆ ಬೀದಿಗೆ ಬಂದಂತಾಗಿದೆ.
ಏನಿದು ಗಲಾಟೆ?: ಕುವೆಂಪು ವಿಶ್ವವಿದ್ಯಾಲಯದ ಆಡಳಿತ ಕುಲಸಚಿವರಾಗಿದ್ದ ಪ್ರೊ|ಎಸ್.ಎಸ್. ಪಾಟೀಲ್ ಅವರ ಜಾಗಕ್ಕೆ ಕೆಎಎಸ್ ಅ ಧಿಕಾರಿ ಶ್ರೀಧರ್ ಅವರನ್ನು ನೇಮಕ ಮಾಡಿ ರಾಜ್ಯ ಸರಕಾರ ಮೇ 10 ರಂದು ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಶ್ರೀಧರ್ ಅವರು ಮೇ 11ರಂದು ಅ ಧಿಕಾರ ಸ್ವೀಕರಿಸಿದ್ದಾರೆ.
ಆದರೆ ಅವರ ನೇಮಕವನ್ನು ಸರಕಾರ ರದ್ದು ಮಾಡಿ ಅವರನ್ನು ಕೌಶಾಲ್ಯಾಭಿವೃದ್ಧಿ ನಿಗಮದ ಶಿವಮೊಗ್ಗ ಕಚೇರಿಗೆ ವರ್ಗಾವಣೆ ಮಾಡಿ ಆದೇಶ ನೀಡಿದೆ. ಈ ನಡುವೆ ಕುಲಪತಿ ಪ್ರೊ| ಬಿ.ಪಿ.ವೀರಭದ್ರಪ್ಪ ಅವರು ಪ್ರೊ|ಪಾಟೀಲ್ ಅವರನ್ನು ಹುದ್ದೆಯಿಂದ ಬಿಡುಗಡೆಗೊಳಿಸಿ ಅವರನ್ನು ಮಾತೃ ಇಲಾಖೆಗೆ ಮರಳಿಸಿದ್ದಲ್ಲದೇ ಕಚೇರಿಗೆ ಬೀಗ ಕೂಡ ಹಾಕಿಸಿದ್ದರು.
ಬುಧವಾರ ವಿವಿಗೆ ಆಗಮಿಸಿದ ಪ್ರೊ| ಪಾಟೀಲ್ ಬೀಗ ಒಡೆದು ಒಳಪ್ರವೇಶಿಸಿದ್ದಾರೆ. ಇದನ್ನು ಪ್ರಶ್ನಿಸಿ ಪ್ರೊ|ಬಿ.ಪಿ.ವೀರಭದ್ರಪ್ಪ ಬುಧವಾರ ಪಾಟೀಲ್ ವಿರುದ್ಧ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ ಪ್ರೊ| ಪಾಟೀಲ್ ಸಹ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಶ್ರೀಧರ್ ನೇಮಕ ಮರುದಿನವೇ ರದ್ದಾಗಿದೆ. ಇದು ಕುಲಸಚಿವರಿಗೂ ಗೊತ್ತಿದೆ. ಆದರೂ ಶ್ರೀಧರ್ ಅವರಿಗೆ ಅಧಿಕಾರ ವಹಿಸಿಕೊಳ್ಳಲು ಅವಕಾಶ ನೀಡಿದ್ದಾರೆ. ನನ್ನನ್ನು ವಜಾ ಮಾಡಲು ವಿಸಿಗೆ ಅಧಿಕಾರ ಇಲ್ಲ. ಅದನ್ನು ಸರಕಾರ ಮಾಡಬೇಕು. ನಾನು ಇಲ್ಲದ ವೇಳೆ ಕಚೇರಿಗೆ ಬೀಗ ಹಾಕಿಸಿದ್ದಾರೆ.
ಇದಕ್ಕೆ ವಿವಿ ಅಧಿ ಕಾರಿಗಳಾದ ನೀಲಗುಂದ್, ಕಣ್ಣನ್, ಯೋಗೇಂದ್ರ ಇತರರ ಕುಮ್ಮಕ್ಕು ಇದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ವರೆಗೆ ಎಫ್‌ಐಆರ್ ಆಗಿಲ್ಲ. ಈ ಎಲ್ಲ ಘಟನೆ ಕುರಿತು ಕುಲಪತಿ ಪ್ರೊ| ಬಿ.ಪಿ.ವೀರಭದ್ರಪ್ಪ ಸರಕಾರಕ್ಕೆ ವರದಿ ಸಲ್ಲಿಸಿದ್ದು ಆದೇಶಕ್ಕೆ ಕಾಯುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Infectious Disease: ರಾಜ್ಯಕ್ಕೂ ಬೇಕಿದೆ “ವಿಷಾಣು ಯುದ್ಧ ಅಭ್ಯಾಸ್”
Sagara: ಭೀಕರ ಅಪಘಾತ… ರಿಕ್ಷಾ ಚಾಲಕ ಸೇರಿ ಇಬ್ಬರು ಮೃತ್ಯು, ಮೂವರಿಗೆ ಗಾಯ
Anandapura: ಬಟ್ಟೆ ತೊಳೆಯಲು ಹೋದ ಮಹಿಳೆ ಕೆರೆಗೆ ಬಿದ್ದು ಮೃತ್ಯು
Hosanagara: ಬಿಸಿ ಟೀ ಮೈ ಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದ ಎರಡು ವರ್ಷದ ಮಗು ಸಾವು
Anandapura: ಚಾಲಕನ ನಿಯಂತ್ರಣ ತಪ್ಪಿದ ಬಸ್; ಹಲವರಿಗೆ ಗಾಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.