ಮಲೆನಾಡಲ್ಲಿ ಸೋಂಕು-ಸಾವು ಏರುಗತಿ
Team Udayavani, May 17, 2021, 10:51 PM IST
ಶರತ್ ಭದ್ರಾವತಿ
ಶಿವಮೊಗ್ಗ: ಕೊರೊನಾ ಎರಡನೇ ಅಲೆಯ ಹೊಡೆತಕ್ಕೆ ಮಲೆನಾಡು ಶಿವಮೊಗ್ಗ ಜಿಲ್ಲೆ ನಲುಗುತ್ತಿದೆ. ಬೆಡ್, ಆಕ್ಸಿಜನ್, ವೆಂಟಿಲೇಟರ್ ಲಭ್ಯವಿದ್ದರೂ ಸಾವಿನ ಪ್ರಮಾಣದಲ್ಲಿ ಶಿವಮೊಗ್ಗ ಎರಡನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಮೇ 1ರಿಂದ 15 ರವರೆಗೆ 192 ಮಂದಿ ಮೃತಪಟ್ಟಿದ್ದಾರೆ.
ಪಾಸಿಟಿವ್ ಪ್ರಕರಣಗಳ ಸಂಖ್ಯೆಗೆ ಹೋಲಿಸಿದರೆ ಮರಣ ಪ್ರಮಾಣ ಶೇ. 2.2ರಷ್ಟಿದೆ. ಕೊರೊನಾ ಎರಡನೇ ಅಲೆ ಆರಂಭವಾದಾಗಿನಿಂದ ಮೇ 3ರವರೆಗೆ ಶಿವಮೊಗ್ಗದಲ್ಲಿ 56 ಜನ ಮೃತಪಟ್ಟಿದ್ದರು. ಮೇ 3ರಿಂದ 16ರವರೆಗೆ 167 ಮಂದಿ ಮೃತಪಟ್ಟಿದ್ದಾರೆ. 15 ದಿನಗಳ ಅವಧಿಯಲ್ಲಿ ಸೋಂಕು-ಸಾವು ಎರಡೂ ತೀವ್ರಗತಿಯಲ್ಲಿ ಏರಿಕೆ ಕಂಡಿದೆ.
ಆದರೆ ಈವರೆಗೆ ಮೃತಪಟ್ಟಿರುವ 572 ಮಂದಿಯಲ್ಲಿ ಹೊರ ಜಿಲ್ಲೆಯವರ ಪ್ರಮಾಣ ಶೇ.30ರಷ್ಟಿದೆ. ಸಾವಿರ ಬೆಡ್‌ಗಳ ಬೃಹತ್ ಆಸ್ಪತ್ರೆಯಾಗಿರುವ ಮೆಗ್ಗಾನ್‌ಗೆ ಚಿಕ್ಕಮಗಳೂರು, ಉತ್ತರ ಕನ್ನಡ, ಚಿತ್ರದುರ್ಗ, ಕೊಪ್ಪಳ, ದಾವಣಗೆರೆ ಜಿಲ್ಲೆಗಳಿಂದ ಹೆಚ್ಚಿನ ಜನ ಬರುತ್ತಾರೆ. ಬೆಂಗಳೂರಿನಲ್ಲಿ ಬೆಡ್ ಸಮಸ್ಯೆ ಆದಾಗ ಸೋಂಕಿತರು ಇಲ್ಲಿಗೆ ಬಂದು ದಾಖಲಾದ ಉದಾಹರಣೆಗಳಿವೆ.
ಒಟ್ಟಾರೆ ಮರಣ ಪ್ರಮಾಣ ಹೆಚ್ಚಲು ಸೋಂಕಿತರಲ್ಲಿ ಬೇರೆ ಕಾಯಿಲೆಗಳ ಉಲ್ಬಣ, ಕಾಯಿಲೆ ಗಂಭೀರ ಸ್ವರೂಪ ಪಡೆದ ನಂತರ ಆಸ್ಪತ್ರೆಗೆ ದಾಖಲಾಗಿದ್ದು, ರೋಗ ನಿರೋಧಕ ಶಕ್ತಿ ಕುಂಠಿತಗೊಂಡಿದ್ದು ಇವೆಲ್ಲ ಕಾರಣ ಎಂಬುದು ತಜ್ಞರು ಅಭಿಪ್ರಾಯ. ಇನ್ನು ಮೃತಪಟ್ಟವರಲ್ಲಿ 50 ವರ್ಷ ಒಳಗಿನವರ ಪ್ರಮಾಣ ಶೇ.30ರಷ್ಟಿದೆ. ಕಳೆದ ಬಾರಿ 50 ವರ್ಷ ಮೇಲ್ಪಟ್ಟವರ ಸಾವಿನ ಪ್ರಮಾಣ ಶೇ.30ರಷ್ಟಿತ್ತು. ಈ ಎಲ್ಲ ಸಾವಿನ ಪ್ರಕರಣಗಳನ್ನು ತಜ್ಞರು ಅಧ್ಯಯನ ಮಾಡಿ ಕೊರೊನಾ ಅಥವಾ ಬೇರೆ ಕಾಯಿಲೆಯಿಂದ ಮೃತಪಟ್ಟಿದ್ದಾರೆಯೇ ಎಂಬುದರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
40 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು: ಜಿಲ್ಲೆಯಲ್ಲಿ ಇಲ್ಲಿವರೆಗೆ 40558 ಮಂದಿ ಸೋಂಕಿಗೆ ಗುರಿಯಾಗಿದ್ದಾರೆ. ಶಿವಮೊಗ್ಗ ನಗರ ಹಾಗೂ ತಾಲ್ಲೂಕಿನಲ್ಲಿ 16295, ಭದ್ರಾವತಿ 6670, ಶಿಕಾರಿಪುರ 4736, ತೀರ್ಥಹಳ್ಳಿ 2829, ಸೊರಬ 2682, ಹೊಸನಗರ 1958, ಸಾಗರ 3321, ಇತರೆ ಜಿಲ್ಲೆಗಳ 1467 ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಇದರಲ್ಲಿ ಈವರೆಗೆ 32668 ಮಂದಿ ಗುಣಮುಖರಾಗಿದ್ದಾರೆ. 572 ಮಂದಿ ಮƒತಪಟ್ಟಿದ್ದಾರೆ. ಪ್ರಸ್ತುತ 7318 ಸಕ್ರಿಯ ಪ್ರಕರಣಗಳಿವೆ.
ಹೊರ ಜಿಲ್ಲೆಗಳ ಹೊರೆ: ಕೊರೊನಾ ಹೆಚ್ಚುತ್ತಿದ್ದಂತೆ ರಾಜ್ಯದಲ್ಲೇ ಉತ್ತಮ ಹೆಸರು ಗಳಿಸಿರುವ ಮೆಗ್ಗಾನ್ ಆಸ್ಪತ್ರೆ ಮೇಲೆ ಸುತ್ತಮುತ್ತಲ ಜಿಲ್ಲೆಯ ರೋಗಿಗಳ ಹೊರೆ ಹೆಚ್ಚಾಗಿದೆ. ಇದರಿಂದ ಶಿವಮೊಗ್ಗ ಜಿಲ್ಲೆಯ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲು ಸ್ವಲ್ಪ ತೊಂದರೆಯಾಗುತ್ತಿದೆ. ಬೇರೆ ಜಿಲ್ಲೆಯಿಂದ ಇಲ್ಲಿಗೆ ಕರೆತರಲಾಗುವ ಬಹುತೇಕ ಪ್ರಕರಣಗಳು ಗಂಭೀರ ಪರಿಸ್ಥಿತಿಯದಾಗಿದ್ದು, ಚೇತರಿಕೆ ಪ್ರಮಾಣವೂ ಕಡಿಮೆ ಇದೆ.
ಇದನ್ನು ತಪ್ಪಿಸಲು ಮೆಗ್ಗಾನ್‌ನಲ್ಲಿ ಕೆಲ ದಿನ ಬೆಡ್ ಇಲ್ಲ ಎಂದು ಬೋರ್ಡ್ ಕೂಡ ಹಾಕಲಾಗಿತ್ತು. ಆದರೆ ಇದು ಸ್ಥಳೀಯರಲ್ಲಿ ಆತಂಕ ಮೂಡಿಸಿದ ಪರಿಣಾಮ ತೆರವುಗೊಳಿಸಲಾಯಿತು. ಈಗಲೂ ಆಕ್ಸಿಜನ್ ಬೆಡ್ ಬೇಕು ಎಂದು ಕರೆ ಮಾಡಿದವರಿಗೆ ಇಲ್ಲ ಎಂಬ ಉತ್ತರ ಸಿಗುತ್ತಿದೆ. 1100 ಬೆಡ್‌ಗಳ ಆಸ್ಪತ್ರೆ ಇದಾಗಿದ್ದು, 220 ಬೆಡ್‌ಗಳನ್ನು ಹೆರಿಗೆ ವಿಭಾಗಕ್ಕೆ ಮೀಸಲಿಡಲಾಗಿದೆ. 600 ಬೆಡ್‌ಗಳಲ್ಲಿ ಕೋವಿಡ್ ರೋಗಿಗಳಿದ್ದು, ಇನ್ನೂ 100 ಬೆಡ್‌ಗಳನ್ನು ಹೆಚ್ಚಿಸಲು ತೀರ್ಮಾನಿಸಲಾಗಿದೆ.
ದಿಸ್ಚಾರ್ಜ್ ಮಾಡಿದರೂ ಹೋಗುತ್ತಿಲ್ಲ: ಆಸ್ಪತ್ರೆಯಿಂದ ಕಳುಹಿಸಿದರೆ ಸಾಕು ಎಂದು ಕಾಯುತ್ತಿರುವ ಈಗಿನ ಪರಿಸ್ಥಿತಿಯಲ್ಲಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಡಿಸಾcರ್ಜ್ ಮಾಡಿದರೂ ಅನೇಕ ಮಂದಿ ಮನೆಗೆ ಹೋಗುತ್ತಿಲ್ಲ. ಇಲ್ಲ ನಾವು ಇನ್ನೂ ಚೇತರಿಸಿಕೊಳ್ಳಬೇಕು ಎಂದು ಹೇಳುತ್ತಿದ್ದು, 67 ಮಂದಿ ಮೆಗ್ಗಾನ್ ಆಸ್ಪತ್ರೆಯಲ್ಲೇ ಉಳಿದಿದ್ದಾರೆ. ಇದರಿಂದ ಇತರೆ ರೋಗಿಗಳಿಗೂ ತೊಂದರೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.