ಕುಕ್ಕುಟೋದ್ಯಮಕ್ಕೆಮತ್ತೆ ಕೊರೊನಾ ಕಂಟಕ
ಕೋಳಿ ಮಾಂಸ ಮಾರಾಟ ಶೇ.60ರಷ್ಟು ಕುಸಿತ
Team Udayavani, Jun 4, 2021, 11:09 PM IST
ಶರತ್ ಭದ್ರಾವತಿ
ಶಿವಮೊಗ್ಗ: ಕೊರೊನಾ ಒಂದನೇ ಅಲೆಯ ಲಾಕ್‌ಡೌನ್ ಆಘಾತದಿಂದ ಚೇತರಿಸಿಕೊಳ್ಳುತ್ತಿದ್ದ ಕುಕ್ಕುಟೋದ್ಯಮ ಈಗ ಕೊರೊನಾ ಎರಡನೇ ಅಲೆಯ ಕಠಿಣ ಕರ್ಫ್ಯೂನಿಂದ ನಲುಗಿ ಹೋಗಿದೆ. ಖರೀದಿ ಅವ ಧಿ ಸೀಮಿತವಾಗಿರುವುದರಿಂದ ವ್ಯಾಪಾರವೂ ಇಲ್ಲದೇ ಮಾರಾಟವೂ ಇಲ್ಲದೇ ದಿನಕ್ಕೆ ಲಕ್ಷಾಂತರ ರೂ. ನಷ್ಟ ಉಂಟಾಗುತ್ತಿದೆ. 2020ರ ಮಾರ್ಚ್‌ನಲ್ಲಿ ಏಕಾಏಕಿ ಲಾಕ್‌ಡೌನ್ ಘೋಷಣೆ ಮಾಡಲಾಯಿತು.
ಈ ವೇಳೆ ಚಿಕನ್ ಕುರಿತು ಹಬ್ಬಿದ ವದಂತಿ, ಹಕ್ಕಿಜ್ವರ ಭೀತಿ, ಮಾರಾಟಕ್ಕೆ ಅವಕಾಶವೇ ಇಲ್ಲದ ಕಾರಣ ಕೋಳಿ ಸಾಕಣೆದಾರರು ಲಕ್ಷಾಂತರ ಕೋಳಿಗಳನ್ನು ಜೀವಂತ ಹೂತು ಕೋಟಿ ಕೋಟಿ ನಷ್ಟ ಮಾಡಿಕೊಂಡರು. ಇದರಿಂದ ಹೇಗೋ ಚೇತರಿಸಿಕೊಳ್ಳುವ ಮುನ್ನವೇ ಮತ್ತೆ ಕೊರೊನಾ ಎರಡನೇ ಅಲೆ ಕಾಡುತ್ತಿದೆ. ಕೊರೊನಾ ತಡೆಗಾಗಿ ಕಠಿಣ ಕರ್ಫ್ಯೂ ಹೇರಲಾಗಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬೆಳಗ್ಗೆ 10 ಗಂಟೆವರೆಗೂ ಚಿಕನ್ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಸಂಪೂರ್ಣ ಲಾಕ್‌ಡೌನ್ ಇರುವ ಕಡೆ ಅದೂ ಇಲ್ಲ.
ಅಲ್ಲದೆ ಈ ಅವ ಧಿಯಲ್ಲಿ ಸರದಿ ಸಾಲಿನಲ್ಲಿ ನಿಂತು ಖರೀದಿ ಮಾಡುವ ಹಾಗೂ ಕಷ್ಟದ ಸಮಯದಲ್ಲಿ ಹಣ ಖರ್ಚು ಮಾಡಲೂ ಜನ ಯೋಚನೆ ಮಾಡುತ್ತಿದ್ದಾರೆ. ಇದರಿಂದ ಒಟ್ಟಾರೆ ಕೋಳಿ ಮಾರಾಟ ಹಾಗೂ ಚಿಕನ್ ಸೇವನೆಯಲ್ಲಿ ಶೇ.60ರಷ್ಟು ಕುಸಿತ ಕಂಡಿದೆ. ರಾಜ್ಯದಲ್ಲಿ ಪ್ರತಿದಿನ 8ರಿಂದ 10 ಲಕ್ಷ ಕೋಳಿ ಮಾರಾಟವಾಗುತ್ತಿತ್ತು. ಭಾನುವಾರ ಈ ಪ್ರಮಾಣ ಡಬಲ್ ಇರುತ್ತಿತ್ತು. ಈಗ ಪ್ರತಿದಿನ 4ರಿಂದ 5 ಲಕ್ಷ ಕೋಳಿಗಳು ಮಾರಾಟವಾಗುವುದೂ ಕಷ್ಟವಿದೆ. ಬರೀ ಬೆಂಗಳೂರು ಒಂದರಲ್ಲೇ ಪ್ರತಿದಿನ ಅಂದಾಜು 16 ಲಕ್ಷ ಕೆಜಿ ಚಿಕನ್ ಮಾರಾಟವಾಗುತ್ತಿತ್ತು.
ಈಗ ಆ ಪ್ರಮಾಣ ಅರ್ಧದಷ್ಟು ಕುಸಿದಿದೆ. ಕೋಳಿ ಸಾಕಾಣಿಕೆದಾರರು ಹಾಗೂ ಚಿಕನ್ ಅಂಗಡಿ ಮಾಲಿಕರ ಮೇಲೆ ಇದರ ನೇರ ಪರಿಣಾಮ ಉಂಟಾಗುತ್ತಿದೆ.
ಫಾರಂನಲ್ಲೇ ಕೋಳಿಗಳು
ಒಂದು ಕೆಜಿ ಕೋಳಿ ಉತ್ಪಾದನೆಗೆ (40ರಿಂದ 45 ದಿನ) ಮರಿ, ಆಹಾರ, ಸಿಬ್ಬಂದಿ ಖರ್ಚು ಸೇರಿ 90 ರೂ. ಆಗುತ್ತದೆ. ಪ್ರಸ್ತುತ ಹೋಲ್‌ಸೇಲ್ ಬೆಲೆ ಪ್ರತಿ ಕೆಜಿಗೆ 40ರಿಂದ 45 ರೂ. ಇದೆ. ಆದರೆ ಇದರ ಲಾಭ ಗ್ರಾಹಕರಿಗೆ ಸಿಗುತ್ತಿಲ್ಲ. ಚಿಕನ್ ಶಾಪ್‌ಗ್ಳಲ್ಲಿ ಕೆಜಿಗೆ 180, 200 ರೂ.ವರೆಗೂ ಇದೆ. ಮಾಂಸಕ್ಕಾಗಿ ಕೊಯ್ಯುವ ಕೋಳಿಯನ್ನು ಹೆಚ್ಚೆಂದರೆ ಒಂದು ವಾರ ಇಟ್ಟುಕೊಳ್ಳಬಹುದು. ಆಮೇಲೆ ಅದು ಆಹಾರವನ್ನು ದುಪ್ಪಟ್ಟು ಸೇವಿಸುತ್ತದೆ. ತೂಕ ಕೂಡ ಹೆಚ್ಚಾಗುವುದಿಲ್ಲ. ಇದೇ ಕಾರಣಕ್ಕೆ ಕೇಳಿದ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಮಾರಾಟ ಪ್ರಮಾಣ ಕುಸಿದಿರುವುದರಿಂದ ಲಕ್ಷ ಲಕ್ಷ ಕೋಳಿಗಳು ಫಾರಂನಲ್ಲೇ ಉಳಿದಿವೆ. ಇದೇ ಪರಿಸ್ಥಿತಿ ಮುಂದುವರಿದರೆ ಕೋಳಿಯನ್ನು ಮತ್ತೆ ಜೀವಂತ ಹೂಳುವುದು ಅನಿವಾರ್ಯವಾಗಲಿದೆ.
ಮಾರಾಟ ಸಮಯ ಹೆಚ್ಚಿಸಿ
ಈಗಿರುವ ಮೂರು ಗಂಟೆ ಮಾರಾಟ ಅವ ಧಿಯಲ್ಲಿ ಹೆಚ್ಚು ಕೋಳಿಗಳು ಸೇಲ್ ಆಗುತ್ತಿಲ್ಲ. ಹೆಚ್ಚು ಜನ ಸೇರುವ ಭಯದಿಂದ ಗ್ರಾಹಕರು ಅಂಗಡಿಗಳತ್ತ ಸುಳಿಯುತ್ತಿಲ್ಲ. ಹೀಗಾಗಿ ಈಗಿರುವ ಮಾರಾಟ ಅವ ಧಿಯನ್ನು ಮಧ್ಯಾಹ್ನ ಎರಡು ಗಂಟೆವರೆಗೂ ವಿಸ್ತರಿಸಿದರೆ ಮಾರಾಟ ಪ್ರಮಾಣ ಶೇ.70ಕ್ಕೆ ಹೆಚ್ಚಾಗಬಹುದು. ಇದರಿಂದ ಕೋಳಿ ಸಾಕಣೆದಾರರು ಹಾಗೂ ಚಿಕನ್ ಶಾಪ್‌ಗ್ಳಿಗೂ ಲಾಸ್ ಆಗುವುದಿಲ್ಲ ಎನ್ನುತ್ತಾರೆ ನಂದೀಶ್ ಫೌಲಿó ಮಾಲೀಕ ದಿನೇಶ ಪಟೇಲ್. ಸರ್ಕಾರಕ್ಕೆ ಫಾರ್ಮಸ್ ಆಸೋಸಿಯೇಷನ್‌ನಿಂದ ಸಮಯ ವಿಸ್ತರಣೆಗೆ ಮನವಿ ಮಾಡಲಾಗಿದೆ. ಸರ್ಕಾರ ಆದಷ್ಟು ಬೇಗ ಮನವಿ ಪರಿಗಣಿಸುವಂತೆ ಸಾಕಣೆದಾರರು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Holehonnuru: ಕಿರು ಅರಣ್ಯ ಪ್ರದೇಶದಲ್ಲಿ ಕಡವೆ ಬೇಟೆ; ಆರೋಪಿ ಬಂಧನ
Hosanagara: ಚಾಲಕನ ನಿಯಂತ್ರಣ ತಪ್ಪಿ ಕ್ಯಾಂಟರ್ ಪಲ್ಟಿ; ದೇಗುಲಕ್ಕೆ ಹಾನಿ
Shimoga: ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮಗುಚಿ ನಾಪತ್ತೆಯಾಗಿದ್ದ ಮೂವರ ಶವ ಪತ್ತೆ
K. S. Eshwarappa: ಮುಸ್ಲಿಮರಿಗೆ ಮೀಸಲು ನೀಡಿದರೆ ಸಂತರ ನೇತೃತ್ವದಲ್ಲಿ ದಂಗೆ
Shivamogga: ತೆಪ್ಪ ಮಗುಚಿ ಶರಾವತಿ ಹಿನ್ನೀರಿನಲ್ಲಿ ಮೂವರು ಯುವಕರು ನಾಪತ್ತೆ
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.