ಪಿಯುಸಿ ಪಠ್ಯದಲ್ಲಿ ಬ್ರಾಹ್ಮಣರ ನಿಂದನೆಗೆ ಪ್ರತಿಭಟನೆ


Team Udayavani, Jul 13, 2021, 10:46 PM IST

13-22

ಸಾಗರ: ದ್ವಿತೀಯ ಪಿಯುಸಿ ಇತಿಹಾಸ ಪಠ್ಯಪುಸ್ತಕದಲ್ಲಿ ಬ್ರಾಹ್ಮಣ ನಿಂದನೆಯನ್ನು ಬಲವಂತವಾಗಿ ತುರುಕಿರುವ ಕ್ರಮವನ್ನು ಖಂಡಿಸಿ ಬ್ರಾಹ್ಮಣ ನಿಂದನೆ ಮಾಡಿರುವ ಪಠ್ಯದ ಭಾಗವನ್ನು ತಕ್ಷಣ ತೆಗೆಯುವಂತೆ ಒತ್ತಾಯಿಸಿ ಸೋಮವಾರ ಅಖೀಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಹಾಗೂ ವಿವಿಧ ವಿಪ್ರ ಸಂಘಟನೆಗಳ ಆಶ್ರಯದಲ್ಲಿ ಉಪ ವಿಭಾಗಾ ಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತ ನಾಡಿದ ಮಹಾಸಭಾದ ಪ್ರಧಾನ ವಕ್ತಾರ ಮ. ಸ. ನಂಜುಂಡಸ್ವಾಮಿ, ಇತ್ತೀಚಿನ ವರ್ಷಗಳಲ್ಲಿ ಬ್ರಾಹ್ಮಣರು ಮತ್ತು ಪುರೋಹಿತರ ಬಗ್ಗೆ ಸಮಾಜದ ಕೆಲವು ಅಯೋಗ್ಯರು ಇಲ್ಲಸಲ್ಲದ ಮಾತುಗಳನ್ನು ಆಡುವ ಮೂಲಕ ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಬ್ರಾಹ್ಮಣರನ್ನು ಅವಹೇಳನಕಾರಿಯಾಗಿ ಚಿತ್ರಿಸುವ ಕ್ರಮವನ್ನು ಮಹಾಸಭಾ ಮತ್ತಿತರ ವಿಪ್ರ ಸಂಘಟನೆಗಳು ತೀವ್ರವಾಗಿ ಖಂಡಿಸುತ್ತವೆ. ಪಠ್ಯಪುಸ್ತಕದಲ್ಲಿ ಬ್ರಾಹ್ಮಣರು, ಪುರೋಹಿತರ ಬಗ್ಗೆ ಅತ್ಯಂತ ಅವಹೇಳನಕಾರಿಯಾಗಿ ಚಿತ್ರಿಸಿರುವುದು ವಿಷಾದನೀಯ. ತಕ್ಷಣ ಪಠ್ಯಪುಸ್ತಕದಲ್ಲಿ ಬರೆದಿರುವುದನ್ನು ವಾಪಸ್‌ ಪಡೆಯಬೇಕು.

ಪುಸ್ತಕವನ್ನು ಮರುಮುದ್ರಣ ಮಾಡಬಾರದು. ಬ್ರಾಹ್ಮಣರ ಸಹನೆಯನ್ನು ದುರುಪಯೋಗಪಡಿಸಿ ಕೊಳ್ಳುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು. ವಿಪ್ರ ವೈದಿಕ ಪರಿಷತ್‌ ಅಧ್ಯಕ್ಷ ನವೀನ್‌ ಜೋಯ್ಸ ಮಾತನಾಡಿ, ಶಿಕ್ಷಣ ಎನ್ನುವುದು ದೊಡ್ಡ ಅಭಿಯಾನ. ಜ್ಞಾನಧಾರೆಯನ್ನು ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಕೊಂಡೊಯ್ಯುವ ಪಠ್ಯಪುಸ್ತಕದಲ್ಲಿ ಬ್ರಾಹ್ಮಣ ಸಮುದಾಯವನ್ನು ಅವಹೇಳನಕಾರಿಯಾಗಿ ಚಿತ್ರಿಸುವ ಪರಿಪಾಠ ಅತ್ಯಂತ ಹೇಯವಾದದ್ದು.

ಪಠ್ಯಪುಸ್ತಕಗಳು ಸಾಮರಸ್ಯ ಬಿತ್ತುವ ಬದಲು ಸಂಘರ್ಷ ಸೃಷ್ಟಿಸುವ ಕೆಲಸ ಮಾಡಬಾರದು. ಪುರದ ಹಿತ ಕಾಪಾಡುವ ಪುರೋಹಿತರು, ಬ್ರಾಹ್ಮಣರ ಬಗ್ಗೆ ಅವಹೇಳನಕಾರಿಯಾಗಿ ಚಿತ್ರಿಸಿದರೆ ಸಂಘರ್ಷ ಸೃಷ್ಟಿಯಾಗುತ್ತದೆ. ದ್ವಿತೀಯ ಪಿಯುಸಿ ಪಠ್ಯದಲ್ಲಿನ ಭಾರತದ ಹೊಸ ಧರ್ಮದ ಉದಯ ಪಠ್ಯ ಭಾಗವನ್ನು ತೆಗೆದುಹಾಕಬೇಕು ಎಂದು ಒತ್ತಾಯಿಸಿದರು. ಸ್ನೇಹಸಾಗರ ಮಹಿಳಾ ಮಂಡಳಿ ಅಧ್ಯಕ್ಷೆ ಚೂಡಾಮಣಿ ರಾಮಚಂದ್ರ ಮಾತನಾಡಿ, ಒಂದು ಧರ್ಮ ಇನ್ನೊಂದು ಧರ್ಮವನ್ನು ಅವಹೇಳನಕಾರಿಯಾಗಿ ಚಿತ್ರಿಸುವುದೇ ಅತ್ಯಂತ ಕೆಟ್ಟ ಸಂಸ್ಕೃತಿ.

ಅಂತಹದ್ದರಲ್ಲಿ ಲಾಗಾಯ್ತಿನಿಂದ ಸಮಾಜದ ಹಿತ ಕಾಯುವ ಕೆಲಸ ಮಾಡುತ್ತಿರುವ ಬ್ರಾಹ್ಮಣ ಸಮುದಾಯದ ಬಗ್ಗೆ ಕೆಟ್ಟದ್ದಾಗಿ ಚಿತ್ರಿಸಿದರೆ ಮುಂದಿನ ಪೀಳಿಗೆ ಸಮುದಾಯವನ್ನು ನೋಡುವ ದೃಷ್ಟಿಯೇ ಬದಲಾಗುವ ಸಾಧ್ಯತೆ ಇದೆ ಎಂದರು. ವೈ. ಮೋಹನ್‌, ರಾಘವೇಂದ್ರ ಭಟ್‌, ಕೆ.ಎನ್‌. ಶ್ರೀಧರ್‌, ಹು.ಭಾ. ಅಶೋಕ್‌, ಮುರಳೀಧರ ಹತ್ವಾರ್‌, ಶರಾವತಿ ಸಿ. ರಾವ್‌, ಜ್ಯೋತಿ ನಂಜುಂಡಸ್ವಾಮಿ, ಬದರಿನಾಥ್‌, ವಿನಾಯಕ ಜೋಯ್ಸ, ಪ್ರಭಾವತಿ ಎಸ್‌.ಕೆ., ವಿ.ಗಣೇಶ್‌ ಇನ್ನಿತರರು ಇದ್ದರು.

ಟಾಪ್ ನ್ಯೂಸ್

Gangolli; ಮಹಾಂಕಾಳಿ ದೇಗುಲದ ಚಿನ್ನಾಭರಣ ಕಳವು; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕದ್ದ ಅರ್ಚಕ

Gangolli; ಮಹಾಂಕಾಳಿ ದೇಗುಲದ ಚಿನ್ನಾಭರಣ ಕಳವು; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕದ್ದ ಅರ್ಚಕ

Development of 2-dose vaccine for HIV prevention: MIT

HIV vaccine; ಎಚ್‌ಐವಿ ತಡೆಗೆ 2 ಡೋಸ್‌ ಲಸಿಕೆ ಅಭಿವೃದ್ಧಿ: ಎಂಐಟಿ

India’s first bullet train to be made in Bangalore?

Bullet Train; ಬೆಂಗಳೂರಿನಲ್ಲೇ ತಯಾರಾಗಲಿದೆ ದೇಶದ ಮೊದಲ ಬುಲೆಟ್‌ ರೈಲು?

Ma’nene; ಪ್ರತಿ ವರ್ಷ ಶ*ವಗಳಿಗೆ ವಿಶಿಷ್ಟ ಗೌರವ!: ಅಚ್ಚರಿಗೊಳಪಡಿಸುವ ಸಂಪ್ರದಾಯ

Ma’nene;ಸ್ಮಶಾನದಲ್ಲಿದ್ದ ಶವ ಮನೆಗೆ ತಂದು ಸಂಭ್ರಮಿಸ್ತಾರೆ! ಇದು ವಿಚಿತ್ರ ಅಚ್ಚರಿ ಸಂಪ್ರದಾಯ

ಮುಂಜಾನೆ ಮನೆಗೆ ನುಗ್ಗಿ ಪುಣೆ ಉದ್ಯಮಿಯ ಹತ್ಯೆ ; ಪತ್ನಿಗೂ ಗಂಭೀರ ಗಾಯ

Karwar: ಮುಂಜಾನೆ ಮನೆಗೆ ನುಗ್ಗಿ ಉದ್ಯಮಿಯ ಹತ್ಯೆ ; ಪತ್ನಿಗೂ ಗಂಭೀರ ಗಾಯ

Duleep trophy

Duleep trophy: ಇಂಡಿಯಾ ಸಿ, ಬಿ ಮಧ್ಯೆ ಪ್ರಶಸ್ತಿಗೆ ಪೈಪೋಟಿ; ಯಾರಿಗೆ ಸಿಗಲಿದೆ ಟ್ರೋಫಿ? 

We are not against anyone…: PM Modi at Quad Summit

Quad Summit; ನಾವು ಯಾರ ವಿರುದ್ದವೂ ಅಲ್ಲ…: ಕ್ವಾಡ್ ಸಭೆಯಲ್ಲಿ ಪ್ರಧಾನಿ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BY-Vijayendra

Government Failure: ಹಿಂದೂಗಳ ಮೇಲೆ ಕಾಂಗ್ರೆಸ್‌ ಸರಕಾರ ದಬ್ಬಾಳಿಕೆ: ಬಿಜೆಪಿ

Theetrhalli–Sunil

Theerthahalli: ಶೋಕಿ ಜೀವನಕ್ಕಾಗಿ ಗ್ರಾಹಕರ ಹಣ ವಂಚಿಸಿದ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ! 

ಕುಡಿದು ಆ್ಯಂಬ್ಯುಲೆನ್ಸ್‌ ಚಲಾಯಿಸಿ ಟ್ಯಾಂಕರ್‌ ಗೆ ಡಿಕ್ಕಿ; ಸ್ವಲ್ಪದರಲ್ಲಿ ತಪ್ಪಿದ ಅನಾಹುತ

ಕುಡಿದು ಆ್ಯಂಬ್ಯುಲೆನ್ಸ್‌ ಚಲಾಯಿಸಿ ಟ್ಯಾಂಕರ್‌ ಗೆ ಡಿಕ್ಕಿ; ಸ್ವಲ್ಪದರಲ್ಲಿ ತಪ್ಪಿದ ಅನಾಹುತ

Harassment of Hindu sentiment is going on: Vijayendra

Shimoga; ಹಿಂದೂ ಭಾವನೆ ಮೇಲೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ: ವಿಜಯೇಂದ್ರ ಆಕ್ರೋಶ

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Dengue fever: ನಗರದಲ್ಲಿ ಡೆಂಘೀ ಹತೋಟಿಗೆ ತಂದ ಬಿಬಿಎಂಪಿ

Dengue fever: ನಗರದಲ್ಲಿ ಡೆಂಘೀ ಹತೋಟಿಗೆ ತಂದ ಬಿಬಿಎಂಪಿ

2

Crime: ಪ್ರೇಯಸಿ ಜತೆ ಸುತ್ತಾಡಿದ್ದಕ್ಕೆ ಹತ್ಯೆಗೈದ ಪ್ರಿಯಕರ!

Gangolli; ಮಹಾಂಕಾಳಿ ದೇಗುಲದ ಚಿನ್ನಾಭರಣ ಕಳವು; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕದ್ದ ಅರ್ಚಕ

Gangolli; ಮಹಾಂಕಾಳಿ ದೇಗುಲದ ಚಿನ್ನಾಭರಣ ಕಳವು; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕದ್ದ ಅರ್ಚಕ

Arrested: ಐಪಿಎಸ್‌ ಅಧಿಕಾರಿ ಪುತ್ರನ ಮೇಲೆ ಹಲ್ಲೆ; ಇಬ್ಬರ ಬಂಧನ

Arrested: ಐಪಿಎಸ್‌ ಅಧಿಕಾರಿ ಪುತ್ರನ ಮೇಲೆ ಹಲ್ಲೆ; ಇಬ್ಬರ ಬಂಧನ

Development of 2-dose vaccine for HIV prevention: MIT

HIV vaccine; ಎಚ್‌ಐವಿ ತಡೆಗೆ 2 ಡೋಸ್‌ ಲಸಿಕೆ ಅಭಿವೃದ್ಧಿ: ಎಂಐಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.