ಲಂಬಾಣಿ ಸಮಾಜ ಒಕ್ಕಲೆಬ್ಬಿಸಲು ಬಿಡಲ್ಲ
Team Udayavani, Jul 16, 2021, 11:11 PM IST
ಶಿಕಾರಿಪುರ: ಲಂಬಾಣಿ ಸಮಾಜದವರನ್ನು ಒಕ್ಕಲೆಬ್ಬಿಸಲು ಕಾಂಗ್ರೆಸ್ ಬಿಡುವುದಿಲ್ಲ. ನಿಮ್ಮೊಂದಿಗೆ ನಾವಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು. ತಾಲೂಕಿನ ಬೇಗೂರು ತಾಂಡಾದಲ್ಲಿ ಗುರುವಾರ ಲಂಬಾಣಿ ಜನರೊಂದಿಗೆ ಕುಂದುಕೊರತೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಲಂಬಾಣಿ ಜನತೆಗೆ ಮೂಲ ಸೌಕರ್ಯಗಳನ್ನು ಒದಗಿಸಿ ಅವರ ುಂದುಕೊರೆತೆಗಳನ್ನು ಸರಿಪಡಿಸುವ ಪ್ರಯತ್ನ ಮಾಡುತ್ತೇನೆ. ಒಕ್ಕಲೆಬ್ಬಿಸಲು ಯಾವುದೇ ಕಾರಣಕ್ಕೂ ನಮ್ಮ ಪಕ್ಷ ಬಿಡುವುದಿಲ್ಲ. ನಿಮ್ಮೊಂದಿಗೆ ನಾವು ಇದ್ದೇವೆ ಎಂದರು.
ಬಗರ್‌ಹುಕುಂ ಭೂ ಮಂಜೂರಾತಿ ಬಗ್ಗೆ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡುತ್ತೇವೆ. ಕಾಗೋಡು ತಿಮ್ಮಪ್ಪ ಅರಣ್ಯ ಭೂಮಿಯನ್ನು ಕಂದಾಯ ಭೂಮಿಯಾಗಿ ಮಾಡಿ ಗೇಣಿದಾರರಿಗೆ ಒದಗಿಸಲು ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ. ಹೆಣ್ಣುಮಕ್ಕಳ ವಿದ್ಯಾಭ್ಯಾಸ, ಉದ್ಯೋಗ ಸೃಷ್ಟಿ ಪ್ರಯತ್ನ ಮಾಡುತ್ತೇನೆ. ನಿಮ್ಮ ಸಮಾಜದೊಂದಿಗೆ ನನ್ನ ಬಾಲ್ಯವನ್ನು ಕಳೆದಿದ್ದೇನೆ. ನಿಮ್ಮ ಆಚಾರ- ವಿಚಾರ, ಸಂಕಷ್ಟದ ಅರಿವಿದೆ ಎಂದರು. ಕಾಂಗ್ರೆಸ್-ಬಿಜೆಪಿ- ದಳ ಎಂದು ರಾಜಕೀಯ ಬೇಡ. ನಿಮ್ಮ ಧ್ವನಿಯಾಗಿ ನಾನು ಇರುತ್ತೇನೆ. ಮಲೆನಾಡಿನ ಮಳೆ, ವಾತಾವರಣ , ಜೀವನ ಶೈಲಿ, ಸಂಸ್ಕೃತಿ- ಸಂಪತ್ತು ಉತ್ತಮವಾಗಿದೆ ಎಂದರು.
ಇದಕ್ಕೂ ಮೊದಲು ಸಂವಾದ ಕಾರ್ಯಕ್ರಮ ನಡೆಸಿ ಜನ ಅಹವಾಲುಗಳನ್ನು ಆಲಿಸಿದರು. ತರಲಘಟ್ಟ ಗ್ರಾಪಂ ಸದಸ್ಯ ಮಂಜುನಾಯ್ಕ, ಬೇಗೂರು ಗ್ರಾಪಂ ಸದಸ್ಯ ಮಂಜುನಾಯ್ಕ, ಸ್ಥಳೀಯ ಕುಮಾರ್ ನಾಯ್ಕ, ಹೊಸುರು ಚಂದ್ರು, ಅಪ್ಪಿನಕಟ್ಟೆ ರಘು ನಾಯ್ಕ ಮಾರವಳ್ಳಿ ಉಮೇಶ್ ಮಾತನಾಡಿ ತಮ್ಮ ಸಮುದಾಯದವರು ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸುಂದರೇಶ್, ಮಾಜಿ ಶಾಸಕ ಪ್ರಸನ್ನಕುಮಾರ್, ಎಂಎಲ್ ಸಿ ಪ್ರಸನ್ನಕುಮಾರ್, ತೀ.ನ. ಶ್ರೀನಿವಾಸ್, ಮಾಜಿ ಶಾಸಕ ಪ್ರಕಾಶ್ ರಾಥೋಡ್, ತಾಲೂಕು ಅಧ್ಯಕ್ಷ ಗೋಣಿ ಮಾಲತೇಶ್ ಮತ್ತಿತ್ತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.