ಬಿಜೆಪಿಯಿಂದ ದೇಶ ಮತ್ತೆ ಗುಲಾಮಗಿರಿಯತ್ತ: ಸುಂದರೇಶ್
ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಗಾಂಧಿ ಪುಣ್ಯಸ್ಮರಣೆ ಆಚರಿಸಲಾಯಿತು
Team Udayavani, Jan 31, 2021, 6:12 PM IST
ಶಿವಮೊಗ್ಗ: ಇಲ್ಲಿನ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಜಿಯವರ 73ನೇ ಪುಣ್ಯಸ್ಮರಣೆಯನ್ನು ಗಾಂ ಧೀಜಿಯವರ ಭಾವಚಿತ್ರಕ್ಕೆ ಪುಷ್ಪನಮನ ಅರ್ಪಿಸುವ ಮೂಲಕ ಆಚರಿಸಲಾಯಿತು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಮಾತನಾಡಿ, ಮಹಾತ್ಮ ಗಾಂಧಿಜಿ ಬ್ರಿಟೀಷರ ವಿರುದ್ಧ ಅಹಿಂಸೆಯಿಂದಲೇ ಹೋರಾಡಿದವರು. ಅಂದು ಬ್ರಿಟೀಷರ ಏಜೆಂಟರಂತೆ ಕೆಲಸಮಾಡುತ್ತಿದ್ದ ವರ್ಗವೇ ಇಂದು ದೇಶವನ್ನು ಆಳುತ್ತಿದೆ. ಮತ್ತೆ ನಾವು ಸ್ವಾತಂತ್ರ ಪೂರ್ವಕ್ಕೆ ಹೋಗುತ್ತಿದ್ದೇವೆ. ಬಿಜೆಪಿ ಈ ದೇಶವನ್ನು ಮತ್ತೆ ಗುಲಾಮಗಿರಿಗೆ ತಳ್ಳುತ್ತಿದೆ
ಎಂದರು.
ಬಿಜೆಪಿ ಆಡಳಿತದಲ್ಲಿ ಗಾಂಧಿಧೀಜಿಯವರ ಆದರ್ಶಗಳೇ ಮಾಯವಾಗುತ್ತಿವೆ. ಅರಾಜಕತೆ ತಾಂಡವವಾಡುತ್ತಿದೆ. ಯುವ ಸಮೂಹ ದಾರಿ ತಪ್ಪುತ್ತಿದೆ. ಕಾರ್ಪೊರೇಟ್ ಕಂಪನಿಗಳು ವಿಜೃಂಭಿಸುತ್ತಿವೆ. ಈ ದೇಶಕ್ಕೆ ಸ್ವಾತಂತ್ರದ ಕೊಡುಗೆ ನೀಡಿದ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ನಮ್ಮ ಕಾರ್ಯಕರ್ತರು ಮನೆ ಮನೆಗೆ ತಲುಪಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗಿದೆ ಎಂದರು.
ಕಾಂಗ್ರೆಸ್ ಭಾರತ ಸೇವಾದಳದ ಜಿಲ್ಲಾಧ್ಯಕ್ಷ ವೈ.ಎಚ್. ನಾಗರಾಜ್ ಮಾತನಾಡಿ ಗಾಂಧಿಜಿಯವರು ಕೇವಲ ವ್ಯಕ್ತಿಯಾಗಿರಲಿಲ್ಲ ಅವರೊಂದು ಶಕ್ತಿಯಾಗಿದ್ದರು. ಗಾಂಧೀಜಿಯವರ ನಡೆ-ನುಡಿ ಆದರ್ಶ ಇವೆಲ್ಲವನ್ನು ಎಲ್ಲರೂ ಪಾಲಿಸಬೇಕಾಗಿದೆ. ಕೋಮು ಸೌಹಾರ್ದತೆಗಾಗಿ ತಮ್ಮ ಜೀವವನ್ನೇ ಬಲಿ ಕೊಟ್ಟವರು ಅವರು. ಆದರೆ ಇಂದು ಆ ಸೌಹಾರ್ದತೆಯೇ ಇಲ್ಲವಾಗಿದೆ ಎಂದರು.
ಮಾಜಿ ಶಾಸಕ ಎಚ್.ಎಂ. ಚಂದ್ರಶೇಖರಪ್ಪ, ಕಾಂಗ್ರೆಸ್ ವಕ್ತಾರೆ ಪಲ್ಲವಿ, ಹಿರಿಯ ಮುಖಂಡ ರಾಮೇಗೌಡ, ಮಹಾನಗರ ಪಾಲಿಕೆ ಸದಸ್ಯೆ ಯಮುನಾ ರಂಗೇಗೌಡ ಸೇರಿದಂತೆ ಹಲವರು ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಭೂಪಾಲ್, ಮಹಾಬಲೇಶ್ವರ ಇದ್ದರು.
ಓದಿ : ಸಿಲಿಂಡರ್ ಪೈಪ್‌ಗೆ ಬೆಂಕಿ: ತಪಿದ ಅನಾಹುತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anandapura: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ; ತಪ್ಪಿದ ಅನಾಹುತ
ಸಾಗರಕ್ಕೆ ಆಗಮಿಸಿದ ಡಾ.ನಾ.ಡಿಸೋಜಾ ಪಾರ್ಥಿವ ಶರೀರ; ಗಣ್ಯರು, ಅಧಿಕಾರಿಗಳಿಂದ ಅಂತಿಮ ದರ್ಶನ
Hosanagar: ಪ್ರಪಾತಕ್ಕೆ ಉರುಳಿದ ಬಸ್; ಸಣ್ಣ ಪುಟ್ಟ ಗಾಯಗಳಿಂದ ಪ್ರಯಾಣಿಕರು ಪಾರು
Sarji sweet box case: ಲವ್ ಫೈಲ್ಯೂರ್ ಆಗಿದ್ದಕ್ಕೆ ಸೇಡಿಗಾಗಿ ಕೃತ್ಯ ಮಾಡಿದ್ದ ಲಾಯರ್!
ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.